You cannot copy content of this page.
. . .

Day: January 24, 2020

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಾರದಲ್ಲಿ ತೀರ್ಮಾನ; ದಿನೇಶ್ ಗುಂಡೂರಾವ್

 ಮೈಸೂರು: ರಾಜ್ಯದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ನೇಮಕಾತಿ ಕುರಿತು ವರಿಷ್ಠರೊಂದಿಗೆ ಚರ್ಚೆ ಮಾಡಿದ್ದೇನೆ. ಒಂದು ವಾರದಲ್ಲಿ ಇತ್ಯರ್ಥವಾಗಲಿದೆ ಎಂಬ ವಿಶ್ವಾಸವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ವ್ಯಕ್ತಪಡಿಸಿದರು.  ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪರ ವಿರೋಧಗಳು ಸಹಜ, ಎಲ್ಲಾ ವಿಚಾರಗಳು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯಾಗಿ ಆನಂತರ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದ್ದು, ಅದನ್ನು ಎಲ್ಲ ನಾಯಕರೂ ಒಪ್ಪಿಕೊಳ್ಳಲೇಬೇಕು ಎಂದರು.  ಕೆಪಿಸಿಸಿ ಅಧ್ಯಕ್ಷರ ನೇಮಕ […]

ಸೋತವರಿಗೂ ಸಚಿವ ಸ್ಥಾನ ಕೊಡಲೇಬೇಕು; ಎಚ್‍.ವಿಶ್ವನಾಥ್

 ಸೋತವರಿಗೂ ಸಚಿವ ಸ್ಥಾನ ಕೊಡಬೇಕು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಅಡಗೂರು ಎಚ್.ವಿಶ್ವನಾಥ್‍ ಆಗ್ರಹಿಸಿದ್ದಾರೆ.  ದಾವೋಸ್‍ ಪ್ರವಾಸ ಮುಗಿಸಿ ಬೆಂಗಳೂರಿಗೆ ಶುಕ್ರವಾರ ಆಗಮಿಸಿದ ಸಿಎಂ ಯಡಿಯೂರಪ್ಪ, ಸೋತವರಿಗೆ ಮಂತ್ರಿ ಸ್ಥಾನ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಸಂಬಂಧ ಮೈಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಚ್.ವಿಶ್ವನಾಥ್‍, ಸೋತವರಿಗೂ ಮಂತ್ರಿಗಿರಿ ನೀಡಬೇಕು. ಈ ಹಿಂದೆ ಸಿಎಂ ಯಡಿಯೂರಪ್ಪ ಅವರು ಏನು ಮಾತು ಕೊಟ್ಟಿದ್ದರು ಎಂಬುದನ್ನು ನೆನಪಿಸುತ್ತೇವೆ. ಶೀಘ್ರದಲ್ಲೇ ಸಿಎಂ ಭೇಟಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಭಗವಾನ್‍, ಮಹೇಶ್ಚಂದ್ರ ಗುರು ಸೇರಿ 15 ಮಂದಿಯ ಹತ್ಯೆ ಬೆದರಿಕೆ

ಸಾಹಿತಿ ಕೆ.ಎಸ್‍.ಭಗವಾನ್‍, ಪ್ರೊ. ಮಹೇಶ್ಚಂದ್ರ ಗುರು, ಜ್ಞಾನ ಪ್ರಕಾಶ ಸ್ವಾಮೀಜಿ ಸೇರಿ 15 ಮಂದಿಯ ಹತ್ಯೆ ಮಾಡುವುದಾಗಿ ಅನಾಮಿಕನೊಬ್ಬ ಪತ್ರ ಬರೆದಿದ್ದಾನೆ. ಬೆಳಗಾವಿ ಜಿಲ್ಲೆಯ ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿಗೆ ಅನಾಮಿಕನೊಬ್ಬ ಪತ್ರ ಬರೆದಿದ್ದು, ಅದರಲ್ಲಿ ಸ್ವಾಮೀಜಿ ಸೇರಿ 15 ಮಂದಿಯನ್ನು ಇದೇ ತಿಂಗಳ 29 ರಂದು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.   ನಿಜಗುಣಾನಂದ ಸ್ವಾಮೀಜಿ ಅವರಲ್ಲದೇ, ಬಜರಂಗದಳದ ಮಾಜಿ ನಾಯಕ ಮಹೇಂದ್ರಕುಮಾರ್‌, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಚಿತ್ರನಟ ಪ್ರಕಾಶ್‌ ರಾಜ್‌, ನಟ […]

‘ಫ್ರೀ ಕಾಶ್ಮೀರ’ ಪ್ರಕರಣ; ಜ.27ಕ್ಕೆ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್

 ಮೈಸೂರು ವಿ.ವಿ. ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಪ್ಲೇಕಾರ್ಡ್ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಜ.27ಕ್ಕೆ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್‍ನಲ್ಲಿ ಇಂದು (ಶುಕ್ರವಾರ) ಸತತ ಎರಡು ಗಂಟೆಗಳ ಕಾಲ ವಿಚಾರಣೆ ನಡೆಯಿತು. ನಳಿನಿ ಪರ ಹಿರಿಯ ವಕೀಲರು ವಾದ ಮಂಡಿಸಿದರು. ನಂತರ ಕೋರ್ಟ್ ಜ.27ಕ್ಕೆ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದೆ.

ಕೌಟುಂಬಿಕ ಕಲಹ; ತಾಯಿ, ಇಬ್ಬರು ಮಕ್ಕಳು ಆತ್ಮಹತ್ಯೆ

  ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲ್ಲೂಕಿನ ತಿಬ್ಬನಹಳ್ಳಿ ಬಳಿ ನಡೆದಿದೆ. ಹುಳ್ಳೇನಹಳ್ಳಿ ಗ್ರಾಮದ ಜ್ಯೊತಿ (33), ನಿಸರ್ಗ (7), ಪವನ್‍ (4) ಮೃತ ದುರ್ದೈವಿಗಳು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಜ್ಯೋತಿ ತನ್ನ ಇಬ್ಬರು ಮಕ್ಕಳನ್ನು ನೀರಿಗೆಸೆದು ತಾನೂ ನೀರಿಗೆ ಜಿಗಿದಿದ್ದಾಳೆಂದು ತಿಳಿದುಬಂದಿದೆ.   ಜ್ಯೋತಿ ನೀರಿಗೆ ಹಾರಿದ್ದನ್ನು ನೋಡಿ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದರು. ಆದರೂ ಆಕೆ ಬದುಕುಳಿಯಲಿಲ್ಲ. ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿದ್ದು, ಮೃತದೇಹಗಳಿಗಾಗಿ […]

ನೃತ್ಯ ಮಾಡುತ್ತಲೇ ಕುಸಿದುಬಿದ್ದು ವಿದ್ಯಾರ್ಥಿನಿ ಸಾವು

 ನೃತ್ಯಾಭ್ಯಾಸ ಮಾಡುತ್ತಿದ್ದ ವೇಳೆ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಆ ವಿದ್ಯಾರ್ಥಿನಿ ಬಿದ್ದಿದ್ದನ್ನು ಕಂಡರೂ ಶಿಕ್ಷಕ ನಿರ್ಲಕ್ಷ್ಯ ವಹಿಸಿದ್ದಾನೆ. ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.   ಕೋಲಾರ ಜಿಲ್ಲೆಯ ಬೇತಮಂಗಲ ಹೋಬಳಿಯ ಟಿ ಗೊಲ್ಲಹಳ್ಳಿ ಗ್ರಾಮದ ಬಳಿಯಿರುವ ವಿಮಲಾ ಹೃದಯ ಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಪೂಜಿತಾ ಸಾವನ್ನಪ್ಪಿದ ವಿದ್ಯಾರ್ಥಿನಿ. ಶಾಲಾ ವಾರ್ಷಿಕೋತ್ಸವದ ಸಲುವಾಗಿ ನೃತ್ಯಾಭ್ಯಾಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ನಾಳೆ ವಿಮಲ ಹೃದಯ ಸಂಸ್ಥೆಯಲ್ಲಿ ಶಾಲಾ […]

ಸೋತವರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆಯೇ ಇಲ್ಲ; ಬಿಎಸ್‍ವೈ

 ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಸೋತವರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.  ದಾವೋಸ್‍ ಪ್ರವಾಸ ಮುಗಿಸಿ ಇಂದು ಸಂಜೆ ಬೆಂಗಳೂರಿಗೆ ಮರಳಿದ ಬಿ.ಎಸ್.ಯಡಿಯೂರಪ್ಪ ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಕುರಿತು ಗೃಹ ಮಂತ್ರಿ ಅಮಿತ್‍ ಶಾ ಅವರೊಂದಿಗೆ ಚರ್ಚೆಸುತ್ತೇನೆ. ಗೆದ್ದವರ ಬಗ್ಗೆ ಮಾತ್ರ ಚರ್ಚಿಸುತ್ತೇನೆ. ಸೋತವರ ಬಗ್ಗೆ ಚರ್ಚಿಸುವುದಿಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸರಗಳ್ಳನ ಬಂಧನ

 ಸರಗಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಉದಯಗಿರಿ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 20 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಗೌಸಿಯಾನಗರದ ನಿವಾಸಿ ಫಯಾಜ್ ಪಾಷ ಬಂಧಿತ ಆರೋಪಿ.  ನಿನ್ನೆ ಸಂಜೆ ಉದಯಗಿರಿ ಪೊಲೀಸರು ಗಸ್ತಿನಲ್ಲಿದ್ದಾಗ ಈತ ಸರಸ್ವತಿ ಬ್ಯಾಂಕರ್ಸ್ ಗಿರವಿ ಅಂಗಡಿಯಲ್ಲಿ ಚಿನ್ನದ ಸರ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ. ಈ ವೇಳೆ ಅನುಮಾನಗೊಂಡ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಕಳ್ಳತನದ ವಿಚಾರ ಬಯಲಾಗಿದೆ.   ಜನವರಿ 22ರಂದು ಕೆ.ಎಂ.ಹಳ್ಳಿ ಸಮುದಾಯ ಭವನದ […]

ಸಾಮೂಹಿಕ ನಕಲಿನಿಂದ SSLCಯಲ್ಲಿ ಹಾಸನಕ್ಕೆ ಪ್ರಥಮ ಸ್ಥಾನ.?; ರಹಸ್ಯ ಬಯಲು..!

  ಕಳೆದ ಬಾರಿ SSLC ಪರೀಕ್ಷೆಯಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಇದರ ಹಿಂದಿನ ಗುಟ್ಟನ್ನು ನೊಂದ ಶಿಕ್ಷಕರೊಬ್ಬರು ಬಯಲು ಮಾಡಿದ್ದಾರೆ.  2019ರಲ್ಲಿ SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಹಾಸನ ಜಿಲ್ಲೆ ದಾಖಲೆ ಸೃಷ್ಟಿಸಿತ್ತು. ಜಿಲ್ಲೆಯ ಈ ಸಾಧನೆಯಲ್ಲಿ ತಮ್ಮ ಪತ್ನಿ ಭವಾನಿ ಶ್ರಮ ದೊಡ್ಡದು ಎಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರೇವಣ್ಣ ಕೊಂಡಾಡಿದ್ದರು. ಅಚ್ಚರಿಯೆಂಬಂತೆ ಫಲಿತಾಂಶ ನೀಡಿದ್ದ ಜಿಲ್ಲೆಯ ಈ ಸಾಧನೆಯ ರಹಸ್ಯ ಈಗ ಬಯಲಾಗಿದೆ. ಸಾಮೂಹಿಕ ನಕಲಿಗೆ […]

ಮರೆತುಬಿಟ್ಟರಾ ಉಮೇಶ್‍ ರೆಡ್ಡಿಯನ್ನ..? ವಿಕೃತ ಕಾಮಿಗೆ ಗಲ್ಲು ಯಾವಾಗ..?

  ಫೆಬ್ರವರಿ 1ನೇ ತಾರೀಖು ನಿರ್ಭಯಾ ಪ್ರಕರಣದ ನಾಲ್ವರು ದೋಷಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲಿದೆ.. ಇದಕ್ಕಾಗಿ ತಿಹಾರ್‍ ಜೈಲಿನಲ್ಲಿ ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ.. ಗಜ್ಜು ಜಾರಿಗೆ ಮೊದಲು ಕಾನೂನು ಪ್ರಕಾರ ಏನೆಲ್ಲಾ ವಿಧಾನಗಳನ್ನು ಅನುಸರಿಸಬೇಕೋ ಅದನ್ನು ಜೈಲಿನ ಅಧಿಕಾರಿಗಳು ಮಾಡುತ್ತಿದ್ದಾರೆ. ಫೆಬ್ರವರಿ 1ರಂದು ಅಪರಾಧಿಗಳಿಗೆ ನೇಣುಕುಣಿಕೆ ಬಿಗಿಯಾಗೋದು ಗ್ಯಾರೆಂಟಿ. ಆದರೆ, 2006ರಲ್ಲೇ ಗಲ್ಲು ಶಿಕ್ಷೆಗೊಳಗಾಗಿದ್ದ ಸೈಕೋ ಕಾಮಿ ಉಮೇಶ್‍ ರೆಡ್ಡಿಗೆ ಗಲ್ಲು ಯಾವಾಗ ಜಾರಿಯಾಗುತ್ತೆ ಎಂಬ ಪ್ರಶ್ನೆ ಎದ್ದಿದೆ.   1997ರಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಆಸಾಮಿ ಉಮೇಶ್‍ […]