You cannot copy content of this page.
. . .

Day: January 23, 2020

SANDALWOODನಲ್ಲಿ ‘I Am ಕಲ್ಕಿ’ ಅಂತಿದ್ದಾನೆ ಬಾಂಬರ್ ಆದಿತ್ಯ ರಾವ್..!

   ನಿನ್ನೆಯಷ್ಟೇ ಪೊಲೀಸರಿಗೆ ಶರಣಾಗಿದ್ದ ಬಾಂಬರ್‍ ಆದಿತ್ಯರಾವ್‍ ಕೃತ್ಯ ಈಗ ಬೆಳ್ಳಿತೆರೆಯ ಮೇಲೆ ಹಣ ಮಾಡೋಕೆ ಹೊರಟಿದೆ. ಹೌದು, ಸ್ಯಾಂಡಲ್‌ವುಡ್‌ನಲ್ಲಿ ಸದ್ದಿಲ್ಲದೇ ಆದಿತ್ಯ ರಾವ್ ದುಷ್ಕತ್ಯವನ್ನು ತೆರೆಗೆ ತರುವ ಪ್ರಯತ್ನಗಳು ಆಗಲೇ ಆರಂಭವಾಗಿವೆ. ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್, ಮಂಗಳೂರು ಬಾಂಬ್‍ ಘಟನೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಜೋಗಿ ಪ್ರೇಮ್‌ ಈ ಸಿನಿಮಾದ ಹೀರೋ ಎಂಬ ಮಾತುಗಳು ಕೇಳಿಬರುತ್ತಿವೆ.          ಈ ಸಿನಿಮಾಕ್ಕೆ I Am ಕಲ್ಕಿ ಎಂದು ಹೆಸರಿಡಲಾಗಿದೆ. ಏಕಕಾಲದಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ […]

40 ಕೋಟಿ ಮುಸ್ಲಿಮರನ್ನು ಎಲ್ಲಿ ಕಳಿಸ್ತಾರೆ ನೋಡ್ತೀನಿ; ದೇವೇಗೌಡ

 ದೇಶದಲ್ಲಿ 40 ಕೋಟಿ ಮುಸ್ಲಿಮರಿದ್ದಾರೆ, ಅವರನ್ನು ಎಲ್ಲಿಗೆ ಕಳುಹಿಸುತ್ತಾರೆ ನಾನೂ ನೋಡ್ತೀನಿ.. ಹೀಗಂತ ಅಬ್ಬರಿಸಿದ್ದು ಮಾಜಿ ಪ್ರಧಾನಿ ಎಚ್‍.ಡಿ.ದೇವೇಗೌಡರು.   ಬೆಂಗಳೂರಿನಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಜನಸಂಘದ ಅಜೆಂಡಾ ಜಾರಿಗೊಳಿಸುತ್ತಿದ್ದಾರೆ. 70 ವರ್ಷಗಳ ಹಿಂದಿನ ಅಜೆಂಡಾ ಈಗ ಈಡೇರಿಸಿದ್ದಾರೆ ಎಂದು ಗುಡುಗಿದ್ದಾರೆ.   ನಾಡಗೀತೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯವನ್ನು ಉಲ್ಲೇಖಿಸಿದ್ದಾರೆ. ಆದರೆ ಇಂದು ದೇಶದಲ್ಲಿ ಏನಾಗುತ್ತಿದೆ. ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರ ಮಾಡಿಕೊಂಡ್ರು, ಆದರೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿದ್ದರೂ […]

ಬಾಂಬ್‍ ಎಂಜಿನಿಯರ್ ಗೆ 10 ದಿನ ಪೊಲೀಸ್‍ ಕಸ್ಟಡಿ

  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇಂದು ಮಂಗಳೂರಿನ ಪ್ರಥಮ ದರ್ಜೆ 6ನೇ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಪೊಲೀಸರು ಆರೋಪಿಯನ್ನು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕಿಶೋರ್ ಕುಮಾರ್  ಆರೋಪಿಯನ್ನು 10 ದಿನ ಪೊಲೀಸ್‍ ಕಸ್ಟಡಿಗೆ ಒಪ್ಪಿಸಿದರು.   ಆರೋಪಿ ಆದಿತ್ಯರಾವ್ ಸೋಮವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕವನ್ನಿರಿಸಿ ಪರಾರಿಯಾಗಿದ್ದ. ನಿನ್ನೆ ಬೆಂಗಳೂರಿಗೆ ಬಂದಿದ್ದ […]

ಅನುಮಾನಾಸ್ಪದ ರೀತಿಯಲ್ಲಿ ಕೊಡಗಿನ ಯೋಧ ಸಾವು..!

  ಕೊಡಗಿನ ಯೋಧ ಪುಣೆಯ ವಸತಿಗೃಹವೊಂದರಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವೀರಾಜಪೇಟೆ ತಾಲ್ಲೂಕಿನ ಮುಗುಟಗೇರಿ ನಿವಾಸಿ ರತನ್ ಬೋಪಣ್ಣ (22) ಮೃತ ಯೋಧ ಎಂದು ತಿಳಿದುಬಂದಿದೆ.   ಜಬಲ್ ಪುರದಲ್ಲಿ ಕರ್ತವ್ಯದಲ್ಲಿದ್ದ ಯೋಧನ ಮೃತ ದೇಹ ವಸತಿಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಲ್ಕು ದಿನದ ಹಿಂದೆ ಮೃತಪಟ್ಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ದೇಹ ವಾಸನೆ ಬಂದ ಮೇಲೆ ವಸತಿಗೃಹದ ಮಾಲೀಕರಿಗೆ ವಿಷಯ ಗೊತ್ತಾಗಿದೆ.   ಮುಗುಟಗೇರಿ ಗ್ರಾಮದ ಚೀರಂಡ ಚೋಮುಣಿ-ಭಾರತಿ ದಂಪತಿಯ ಪುತ್ರನಾದ […]

ಮಧ್ಯಪ್ರದೇಶದಲ್ಲಿ ಡಿ.ಕೆ.ಶಿವಕುಮಾರ್ ಹೋಮ ಹವನ

  ಏಸು ಪ್ರತಿಮೆ ವಿಚಾರದಲ್ಲಿ ಸುದ್ದಿಯಾಗಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‍, ಇದೀಗ ಮಧ್ಯಪ್ರದೇಶದಲ್ಲಿ ಹೋಮ ಹವನದಲ್ಲಿ ಪಾಲ್ಗೊಂಡು ಸುದ್ದಿಯಾಗಿದ್ದಾರೆ.     ಮಧ್ಯಪ್ರದೇಶದ ಪೀತಾಂಬರ ಪೀಠದ ಬಾಗಲ್ಮುಖಿ ಹಾಗೂ ದೂಮವತಿ ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ಇಂದು ಹೋಮದಲ್ಲಿ ಪಾಲ್ಗೊಂಡರು. ಬಳಿಕ ವಿಶೇಷ ಪೂಜೆಯನ್ನು ಸಲ್ಲಿಸಿದರು.   ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹೆಸರು ಹೆಚ್ಚು ಕೇಳಿಬರುತ್ತಿದೆ. ಕಾಂಗ್ರೆಸ್‍ ಹೈಕಮಾಂಡ್‍ ಡಿಕೆಶಿ ಹೆಸರನ್ನೇ ಅಂತಿಮ ಮಾಡಿದ್ದು ಅಧಿಕೃತ ಘೋಷಣೆ ಒಂದೇ ಬಾಕಿ ಇರೋದು. ಈ ಹಿನ್ನೆಲೆಯಲ್ಲಿ ಅವರು ದೇವಸ್ಥಾನಗಳಿಗೆ ಸುತ್ತುತ್ತಿದ್ದಾರೆ. […]

ಅಲ್ಪ ಸಂಖ್ಯಾತರಿಗೆ ವಿಶೇಷ ಸವಲತ್ತಿಲ್ಲ; ರೇಣುಕಾಚಾರ್ಯ ವಿವಾದಿತ ಹೇಳಿಕೆ

ಓಟ್ ಹಾಕೋದು ಬೇರೆಯವರಿಗೆ ಆದರೆ ಸವಲತ್ತುಗಳನ್ನು ಕೊಡಲು ನಾವು ಬೇಕಾ? ಎಂದು ಅಲ್ಪಸಂಖ್ಯಾತರಿಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ. ಸುತ್ತೂರು ಜಾತ್ರೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪ ಸಂಖ್ಯಾತರಿಗೆ ಯಾವುದೇ ಪ್ಯಾಕೇಜ್ ನೀಡುವುದಿಲ್ಲ ಎಂದು ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡರು.   ಅಲ್ಪ ಸಂಖ್ಯಾತರಿಗೆ ನೀರು, ವಿದ್ಯುತ್, ರಸ್ತೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ನೀಡುತ್ತೇವೆ. ಆದರೆ ಇತರೆ ಯಾವುದೇ ಪ್ಯಾಕೇಜ್ ಗಳನ್ನು ನೀಡುವುದಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು. ನಮಗೆ ಮತ ಹಾಕದಿದ್ದರೂ ನಾವು ಚುನಾವಣೆಯಲ್ಲಿ […]

ಆದಿತ್ಯ ರಾವ್‍ ಮಾನಸಿಕ ಅಸ್ವಸ್ಥ ಎಂದು ಹೇಳಿಲ್ಲ; ಬಸವರಾಜ ಬೊಮ್ಮಾಯಿ

  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಮಾನಸಿಕ ಅಸ್ವಸ್ಥ ಎಂದು ನಾನು ಹೇಳಿಲ್ಲ ಅಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.   ದಾವಣಗೆರೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಂಗಳೂರು ಕಮಿಷನರ್ ಡಾ. ಹರ್ಷ  ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅವರು ಎಲ್ಲಾ ವಿಚಾರಗಳನ್ನು ಹೇಳಿದ್ದಾರೆ. ಪೊಲೀಸರ ತನಿಖೆ ಮುಂದುವರಿದಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದು ಹೇಳಿದರು.    ಮುಂದುವರೆದು ಮಾತನಾಡುತ್ತಾ ರಾಜ್ಯದಲ್ಲಿ RSS ಮತ್ತು ಬಜರಂಗದಳ ಸಂಘಟನೆಗಳನ್ನು […]

ಉಗ್ರ ಚಟುವಟಿಕೆ ಹಿನ್ನೆಲೆ; ಕೊಡಗಿನಲ್ಲಿ ವಲಸಿಗರ ದಾಖಲೆ ಪರಿಶೀಲನೆ

   ರಾಜ್ಯದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರಿಂದ ಕೊಡಗಿನ ಕಾಫಿ ತೋಟಗಳಲ್ಲಿರುವ ವಲಸಿಗರ ಗುರುತು ಪರಿಶೀಲನಾ ಕಾರ್ಯ ನಡೆಸಲಾಗುತ್ತಿದೆ. ಕೊಡಗು ಜಿಲ್ಲಾ ಪೊಲೀಸರಿಂದ ಜಿಲ್ಲೆಯಲ್ಲಿ ನೆಲೆಸಿರುವ ವಲಸಿಗರ‌ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ.    ಕಾಫಿ ತೋಟಗಳಲ್ಲಿ ಅಸ್ಸಾಂ, ಬಾಂಗ್ಲಾದ ಅಕ್ರಮ ವಲಸಿಗರು ನೆಲೆಸಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಉಗ್ರ ಚಟುವಟಿಕೆ ಸುಳಿವು ಹಿನ್ನೆಲೆಯಲ್ಲಿಯೂ ಈ ಪರಿಶೀಲನೆ ನಡೆಸಲಾಗುತ್ತಿದೆ.     ಕೊಡಗು ಜಿಲ್ಲಾ […]

ಶಾಂತಿ ಕದಡುವವರಿಗೆ ಪಕ್ಷಗಳ ಬೆಂಬಲ; ಡಿ.ವಿ.ಸದಾನಂದ ಗೌಡ

 ಸಮಾಜದಲ್ಲಿ ಶಾಂತಿ ಕದಡುವ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವಂತಹ ಶಕ್ತಿಗಳಿಗೆ, ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿರುವ ರಾಜಕೀಯ ಪಕ್ಷಗಳು ಬೆಂಬಲ ನೀಡುತ್ತಿವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟೀಕಿಸಿದ್ದಾರೆ. ಸುತ್ತೂರು ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಸ್ತಿತ್ವ ಕಳೆದುಕೊಂಡ ಪಕ್ಷಗಳನ್ನು ಜನ ಈಗಾಗಲೇ ತಿರಸ್ಕರಿಸಿದ್ದಾರೆ. ಹೀಗಿದ್ದೂ ಈ ಪಕ್ಷಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಶಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಈ ಪಕ್ಷಗಳನ್ನು ಜನ ಮುಂದೆಂದೂ ಸ್ವೀಕರಿಸಲ್ಲ ಎಂದರು.  ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ವಿಪಕ್ಷಗಳಿಗೆ ಮಾತನಾಡಲು ಬೇರೆ […]

ಸಿದ್ದರಾಮಯ್ಯ ವಿರುದ್ಧ ವಕೀಲರ ಪ್ರತಿಭಟನೆ

ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಪ್ರಕರಣ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಮೈಸೂರಿನ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.   ನ್ಯಾಯಾಲಯದ ಎದುರು ಇಂದು ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಆರೋಪಿಗಳ ಪರ ವಕಾಲತ್ತು ವಹಿಸದಂತೆ ಮೈಸೂರು ಜಿಲ್ಲಾ ವಕೀಲರ ಸಂಘ ತೀರ್ಮಾನ ತೆಗೆದುಕೊಂಡಿತ್ತು. ಇದರ ವಿರುದ್ಧ ಸಿದ್ದರಾಮಯ್ಯ ಮಾತನಾಡಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ಬಹಿರಂಗ ಕ್ಷಮೆಯಾಚಿಸುವಂತೆ ವಕೀಲರು ಒತ್ತಾಯಿಸಿದ್ದಾರೆ. ಇನ್ನು ಇದೇ ವೇಳೆ ಮಂಜುಳಾ ಮಾನಸ ಅವರನ್ನು […]