You cannot copy content of this page.
. . .

Day: January 22, 2020

ನಗರಪಾಲಿಕೆ ಉಪಚುನಾವಣೆ; ಶಸ್ತ್ರಾಸ್ತ್ರ, ಸ್ಪೋಟಕ ವಸ್ತುಗಳ ಬಳಕೆ ನಿಷೇಧ

 ಮೈಸೂರು: ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ.೧೮ರ ಉಪಚುನಾವಣೆ ಸಂಬಂಧ ಆಯುಧಗಳನ್ನು ಸಂಬಂಧ ಪಟ್ಟ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಲು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಸೂಚಿಸಿದ್ದಾರೆ.  ಚುನಾವಣಾ ಆಯೋಗದ ಆದೇಶದಂತೆ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ.೧೮ರ ಸದಸ್ಯ ಸ್ಥಾನಕ್ಕೆ ಚುನಾವಣೆಯು ಫೆ.೯ ರಂದು ನಡೆಯಲಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆಯು ಫೆ.೧೧ ರವರೆಗೆ ಜಾರಿಯಲ್ಲಿರುತ್ತದೆ.  ಪಾಲಿಕೆ ವಾರ್ಡ್ ನಂ.೧೮ ವ್ಯಾಪ್ತಿಯಲ್ಲಿ ಬರುವ ವಿ.ವಿ. ಪುರಂ ಪೊಲೀಸ್ ಠಾಣೆ ಹಾಗೂ ಮಂಡಿ ಪೊಲೀಸ್ ಠಾಣಾ […]

ಬೈಕ್ ಕಳ್ಳನ ಬಂಧನ

 ಮೈಸೂರು: ಬೈಕ್ ಕಳ್ಳನನ್ನು ಬಂಧಿಸಿರುವ ಉದಯಗಿರಿ ಪೊಲೀಸರು, 2.67 ಲಕ್ಷ ರೂ. ಮೌಲ್ಯದ 5 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.  ಕ್ಯಾತಮಾರನಹಳ್ಳಿ ಬಸವನಗುಡಿ ರಸ್ತೆಯ ನಿವಾಸಿ ಕಿರಣ್ (25) ಬಂಧಿತ ಆರೋಪಿ. ತನ್ನ ಗೆಳೆಯನೊಬ್ಬನ ಬೈಕ್ ಅನ್ನು ವಾಪಸ್ಸು ತಂದು ಕೊಡುವುದಾಗಿ ತೆಗೆದುಕೊಂಡು ಹೋಗಿದ್ದ ಕಿರಣ್, ಆ ಬೈಕನ್ನು ಗೆಳೆಯನಿಗೆ ಮರಳಿಸಿರಲಿಲ್ಲ. ಈ ಕಾರಣ ಆತನ ಗೆಳೆಯ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ಕಿರಣ್ ಅನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಿರಣ್ ಬೈಕ್ ಅನ್ನು ಗಿರಿವಿಯಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. […]

facebookನಲ್ಲಿ ಅಶ್ಲೀಲ ವಿಡಿಯೊ ಅಪ್ಲೋಡ್ ಮಾಡಿದ್ದ ವ್ಯಕ್ತಿ ಬಂಧನ

 ಮೈಸೂರು: ಫೇಸ್‌ಬುಕ್ ಖಾತೆಯಲ್ಲಿ ಬಾಲಕನ ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡಿದ್ದ ವ್ಯಕ್ತಿಯನ್ನು ಮೈಸೂರು ನಗರದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಜೆ.ಸಿ.ನಗರ ನಿವಾಸಿ ಎಸ್.ದಿಲೀಪ್‌ಕುಮಾರ್ ಅಲಿಯಾಸ್ ತೇಜಸ್ (37) ಬಂಧಿತ ಆರೋಪಿ. ಮೈಸೂರು ನಗರ ಸೈಬರ್ ಪೊಲೀಸ್ ಠಾಣೆಗೆ ಬಂದಂತಹ  ಸೈಬರ್ ಟಿಪ್‌ಲೈನ್ ದೂರಿನ ಹಿನ್ನೆಲೆಯಲ್ಲಿ ಫೇಸ್‌ಬುಕ್ ಖಾತೆಯಲ್ಲಿ ಅಪ್ರಾಪ್ತ ಬಾಲಕನ ಅಶ್ಲೀಲ ವಿಡಿಯೊ ಮತ್ತು ಪುರುಷರ ನಡುವಿನ ಲೈಂಗಿಕ ಚಟುವಟಿಕೆ ವಿಡಿಯೊ ಅಪ್‌ಲೋಡ್ ಮಾಡಿದ್ದ ದಿಲೀಪ್‌ಕುಮಾರ್‌ನನ್ನು ಸೈಬರ್ ಠಾಣೆಯ ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.  ಮಹಿಳೆಯರು, […]

ಅಟ್ಲಾಸ್‍ ಸೈಕಲ್‍ ಕಂಪನಿ ಮಾಲೀಕನ ಪತ್ನಿ ಆತ್ಮಹತ್ಯೆ

  ಪ್ರಸಿದ್ಧ ಅಟ್ಲಾಸ್ ಸೈಕಲ್ ಕಂಪೆನಿಯ ಮಾಲೀಕರ ಪತ್ನಿ ಇಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ದೆಹಲಿಯ ಔರಂಗಾಜೇಬ್ ಲೇನ್ ನಲ್ಲಿರುವ ತಮ್ಮ ಮನೆಯಲ್ಲಿ ನತಾಶಾ ಕಪೂರ್‍ ನೇಣಿಗೆ ಕೊರಳೊಡ್ಡಿದ್ದಾರೆ.  ನೇಣು ಬಿಗಿದುಕೊಂಡು ಸಾವಿಗೀಡಾಗಿರುವ ನತಾಶಾ ಕಪೂರ್ ಅವರು ಅಟ್ಲಾಸ್ ಸೈಕಲ್ ಕಂಪೆನಿಯ ಮಾಲೀಕ ಸಂಜಯ್ ಕಪೂರ್ ಅವರ ಪತ್ನಿ. ಗಂಗಾ ರಾಮ್ ಆಸ್ಪತ್ರೆಯಲ್ಲಿ ನತಾಶಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಶವವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.   ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ನತಾಶಾ […]

ಕೆಎಸ್ಒಯು ಕುಲಸಚಿವರಾಗಿ ಪ್ರೊ.ಲಿಂಗರಾಜಗಾಂಧಿ ಅಧಿಕಾರ ಸ್ವೀಕಾರ

 ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಕುಲಸಚಿವರಾಗಿ ಪ್ರೊ.ಲಿಂಗರಾಜಗಾಂಧಿ ಬುಧವಾರ ಅಧಿಕಾರ ಸ್ವೀಕರಿಸಿದರು.  ನಿರ್ಗಮಿತ ಕುಲಸಚಿವ ರಮೇಶ್, ನೂತನ ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ಕೆಎಸ್‌ಒಯು ಕುಲಪತಿ ಪ್ರೊ. ವಿದ್ಯಾಶಂಕರ್ ಹೂಗುಚ್ಛ ನೀಡಿ ಅಭಿನಂದಿಸಿದರು.  ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ.ಲಿಂಗರಾಜಗಾಂಧಿ, ಮೈಸೂರು ವಿವಿ ಕುಲಸಚಿವರಾಗಿ(ಆಡಳಿತ) ಮತ್ತು ಬೆಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವರಾಗಿ, ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಅನುಭವ […]

ಮೌಢ್ಯ ಪ್ರತಿಬಂಧಕ ಕಾಯ್ದೆ ಅನುಷ್ಠಾನಕ್ಕೆ ರಾಜ್ಯಪಾಲರಿಂದ ಅಂಕಿತ

 ಮೌಢ್ಯ ಪ್ರತಿಬಂಧಕ ಕಾಯ್ದೆ ಅನುಷ್ಠಾನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ. ಜ.4ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲಾಗಿದೆ.  ದೇವರು, ಧರ್ಮದ ಹೆಸರಿನಲ್ಲಿ ಮನುಷ್ಯನನ್ನು ಅವಮಾನಿಸುವ ಹಾಗೂ ಸುಲಿಗೆ ಮಾಡುವ ದೊಡ್ಡ ದಲ್ಲಾಳಿ ಜಾಲವೇ ಇದೆ. ಇಂತಹ ವ್ಯವಸ್ಥೆಯನ್ನು ನಿರ್ಬಂಧಿಸಲು ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿ ಅಗತ್ಯ ಎಂಬ ಅಭಿಪ್ರಾಯ ಕೇಳಿಬರುತ್ತಿತ್ತು.  ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಕಾಯ್ದೆ ಅನುಮೋದನೆಗೊಂಡಿತ್ತು. ಕಾಯ್ದೆ ಜಾರಿಯಿಂದ ಮಾಟ-ಮಂತ್ರ, ವಾಮಾಚಾರ, ದೆವ್ವ ಬಿಡಿಸುವುದು, ಬರೆ ಹಾಕುವುದು, ಮೆಣಸಿನಕಾಯಿ ಹೊಗೆ ಹಾಕುವುದು, ಋತುಮತಿಯಾದ ಮಹಿಳೆಯನ್ನು […]

ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವುದರಿಂದ ಲಾಭವಿಲ್ಲ; ಸಂತೋಷ್ ಹೆಗ್ಡೆ

  ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿಷಯ ಸುಪ್ರೀಂಕೋರ್ಟ್‌ನಲ್ಲಿದೆ. ಅದರ ಕುರಿತು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದ್ದು ಬೇಸರ ತರಿಸಿದೆ. ಆದರೆ, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗುವುದರಿಂದ ಯಾವುದೇ ಲಾಭವಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ವಿವಿಯೊಳಗೆ ಬಗೆಹರಿಸಿಕೊಳ್ಳಿ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಸಲಹೆ ನೀಡಿದರು.  ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ‘ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಅದರ ಪರಿಣಾಮ’  ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಯಾರ ಪ್ರೇರೆಣೆಗೂ ಒಳಗಾಗದೇ […]

ಪಿಯು ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆ

  ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮಂಡ್ಯ ತಾಲ್ಲೂಕಿನ ಹುಲಿವಾನ ಗ್ರಾಮದ ಯುವಕ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಆರು ದಿನವಾದರೂ ಮಗ ಮನೆಗೆ ಹಿಂತಿರುಗದ ಪರಿಣಾಮ ಪೋಷಕರು ಕಂಗಾಲಾಗಿದ್ದಾರೆ.   ತಾಲ್ಲೂಕಿನ ಹುಲಿವಾನ ಗ್ರಾಮದ ರೈತ ವಿಜಯ್‍ ಕುಮಾರ್ ಅವರ ಪುತ್ರ ಎಚ್.ಎಸ್.ಚೇತನ್ ಕಾಣೆಯಾದ ಯುವಕ. ಈತ ಮಂಡ್ಯ ತಾಲ್ಲೂಕಿನ ಯಲಿಯೂರು ವೃತ್ತದ ಬಳಯಿರುವ ಅನಿಕೇತನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿಕೊಂಡು ವಸತಿ ನಿಲಯದಲ್ಲಿದ್ದ. ರಜೆಗೆಂದು ಮನೆಗೆ ಬಂದು ಒಂದುವಾರ ಉಳಿದುಕೊಂಡಿದ್ದ ಚೇತನ್ ಕಳೆದ 17ರಂದು ಕಾಲೇಜಿಗೆ ಹೋಗುವುದಾಗಿ […]

ಟೆಂಪೊ-ಲಾರಿ ನಡುವೆ ಡಿಕ್ಕಿ; ಓರ್ವ ಸಾವು

 ಕಿಕ್ಕೇರಿ: ಸಮೀಪದ ತೇಗನಹಳ್ಳಿ ಗೇಟಿನ ಬಳಿ ಬೆಳ್ಳಂಬೆಳಿಗ್ಗೆ ಟೆಂಪೋ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ರಾಣೆಬೆನ್ನೂರಿನ ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ ಮಲ್ಲಿಕಾರ್ಜುನಪ್ಪ ಬಸಪ್ಪ ಸಂಧ್ಯಾಳ (63) ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಕೆ.ಆರ್.ಪೇಟೆ ಸಿಪಿಐ ಕೆ.ಎನ್.ಸುಧಾಕರ್ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಅಪಘಾತ ನಡೆಸಿ ತಲೆಮರೆಸಿಕೊಂಡಿರುವ ಟೆಂಪೋ ಚಾಲಕನ ಪತ್ತೆಗೆ ಬಲೆ […]

ಪೌರತ್ವ ಕಾಯ್ದೆ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

 ವಿವಾದಾಸ್ಪದ ಪೌರತ್ವ (ತಿದ್ದುಪಡಿ) ಕಾಯ್ದೆ ತಡೆ ವಿಧಿಸಲು ಬುಧವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.  ಸುಪ್ರೀಂ ಕೋರ್ಟ್‍ ಮುಖ್ಯ ನ್ಯಾಯಮೂರ್ತಿ ಎಸ್‍.ಎ.ಬೋಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ಸಂವಿಧಾನ ಪೀಠವು ಕಾಯ್ದೆ ವಿರುದ್ಧ ಸಲ್ಲಿಕೆಯಾಗಿದ್ದ 143 ಅರ್ಜಿಗಳನ್ನು ವಿಚಾರಣೆ ನಡೆಸಿತು. ಸಲ್ಲಿಕೆಯಾಗಿರುವ ಅರ್ಜಿಗಳಿಗೆ 4 ವಾರದಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ.  ಈಗ ಸಲ್ಲಿಕೆಯಾಗಿರುವ ಅರ್ಜಿಗಳು ಬಗೆಹರಿಯದ ಹೊರತು ಸಿಎಎ ಮೇಲಿನ ಅರ್ಜಿಗಳ ವಿಚಾರಣೆ ನಡೆಸದಂತೆ ಎಲ್ಲಾ ಹೈಕೋರ್ಟ್‌ಗಳಿಗೂ ಕೋರ್ಟ್ ನಿರ್ಬಂಧ ಹೇರಿದೆ.  ಅಸ್ಸಾಂ ಮತ್ತು […]