You cannot copy content of this page.
. . .

Day: January 20, 2020

ಕ್ಯಾನ್ಸರ್ ನಿಂದ ಬಳಲುತ್ತಿರುವ ಮುತ್ತಪ್ಪ ರೈ ಹೇಳಿದ್ದೇನು..?

   ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಮಾರಕ ಕ್ಯಾನ್ಸರ್‍ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ವಿಚಾರವನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ನನ್ನನ್ನು ಸಾವಿನ ದವಡೆಗೆ ನೂಕಿರುವುದು‌‌ ನಿಜ. ಪವಾಡ ಸದೃಶ ರೀತಿಯಲ್ಲಿ ಬದುಕುತ್ತಿದ್ದೇನೆ ಎಂದಿದ್ದಾರೆ.  ಒಂದು ವರ್ಷದ ಹಿಂದೆ ಕುಕ್ಕೆಗೆ ಹೋಗುವ ಸಂದರ್ಭದಲ್ಲಿ ಬೆನ್ನು ನೋವು‌ ಕಾಣಿಸಿಕೊಂಡಿತ್ತು. ನಂತರದಲ್ಲಿ ಪರೀಕ್ಷೆ ಮಾಡಲಾಗಿ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ದೆಹಲಿಯ ಮ್ಯಾಕ್ಸ್, ಚೆನ್ನೈನ ಅಪೋಲೊ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ […]

ಬಾಂಬ್‍ ಸ್ಫೋಟಿಸಿದ ಪೊಲೀಸರು..; ಜನರು ನಿರಾಳ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್‍ ನ್ನು  ಬೆಂಗಳೂರಿನಿಂದ ಬಂದ ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿ ಯಶಸ್ವಿಯಾಗಿ ಸ್ಫೋಟಿಸಿದ್ದಾರೆ. ಆದರೆ ಅಂದುಕೊಂಡಂತೆ ದೊಡ್ಡ ಮಟ್ಟದಲ್ಲಿ ಅದು ಸ್ಫೋಟಿಸಿಲ್ಲ.   ಬೆಳಗ್ಗೆ ವಿಮಾನ ನಿಲ್ದಾಣದ ಪ್ರಯಾಣಿಕರು ವಿಶ್ರಾಂತಿ ಪಡೆಯುವ ಸ್ಥಳದಲ್ಲಿ ಲ್ಯಾಪ್​ಟಾಪ್​ ಬ್ಯಾಗ್​ನಲ್ಲಿ ಒಂದು ಸಜೀವ ಬಾಂಬ್​ ಪತ್ತೆಯಾಗಿದ್ದರೆ, ಮಧ್ಯಾಹ್ನದ ವೇಳೆಗೆ ಹೈದರಾಬಾದ್​ಗೆ ತೆರಳಲು ಸಿದ್ಧವಾಗಿದ್ದ ವಿಮಾನದಲ್ಲಿ ಮತ್ತೊಂದು ಬಾಂಬ್ ಪತ್ತೆಯಾಗಿತ್ತು. ವಿಮಾನ ನಿಲ್ದಾಣದಲ್ಲಿ ಇನ್ನೊಂದು ಕಡೆಯೂ ಬಾಂಬ್ ಇಡಲಾಗಿದ್ದು ಅದರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಈ […]

ಕೆಂಜಾರು ಮೈದಾನದಲ್ಲಿ ಬಾಂಬ್‍ ಬ್ಲಾಸ್ಟ್..

  ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್‍ ನ್ನು  ಬೆಂಗಳೂರಿನಿಂದ ಬಂದ ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿ ​ಸ್ಪೋಟಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಸಿದ್ಧತೆಗಳು ಆರಂಭವಾಗಿವೆ.   ಬೆಳಗ್ಗೆ ವಿಮಾನ ನಿಲ್ದಾಣದ ಪ್ರಯಾಣಿಕರು ವಿಶ್ರಾಂತಿ ಪಡೆಯುವ ಸ್ಥಳದಲ್ಲಿ ಲ್ಯಾಪ್​ಟಾಪ್​ ಬ್ಯಾಗ್​ನಲ್ಲಿ ಒಂದು ಸಜೀವ ಬಾಂಬ್​ ಪತ್ತೆಯಾಗಿದ್ದರೆ, ಮಧ್ಯಾಹ್ನದ ವೇಳೆಗೆ ಹೈದರಾಬಾದ್​ಗೆ ತೆರಳಲು ಸಿದ್ಧವಾಗಿದ್ದ ವಿಮಾನದಲ್ಲಿ ಮತ್ತೊಂದು ಬಾಂಬ್ ಪತ್ತೆಯಾಗಿತ್ತು. ವಿಮಾನ ನಿಲ್ದಾಣದಲ್ಲಿ ಇನ್ನೊಂದು ಕಡೆಯೂ ಬಾಂಬ್ ಇಡಲಾಗಿದ್ದು ಅದರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಈ ಸ್ಪೋಟಕವನ್ನು ಆರ್​ಡಿಎಕ್​ […]

ಬಾಂಬ್‍ ಇಟ್ಟ ಶಂಕಿತನ ರೇಖಾಚಿತ್ರ ಬಿಡುಗಡೆ

 ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್‍ ಇರುವ ಬ್ಯಾಗ್‍ ಇಟ್ಟುಹೋಗಿದ್ದ ಶಂಕಿತ ವ್ಯಕ್ತಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.   ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅಧಿಕೃತವಾಗಿ ಆಟೊ ರಿಕ್ಷಾ ಮತ್ತು ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಶಂಕಿತ ವ್ಯಕ್ತಿ ಆಟೊದಲ್ಲಿ ಬಂದು ಬ್ಯಾಗ್‌ ಇಟ್ಟು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ರೇಖಾಚಿತ್ರ ರಚಿಸಲಾಗಿದೆ. ಆರೋಪಿಗಾಗಿ ಪೊಲೀಸರು ಜಾಲಾಡುತ್ತಿದ್ದಾರೆ.

ಫ್ರೀ ಕಾಶ್ಮೀರ ಫಲಕ ವಿವಾದ; ವಿಚಾರಣೆ ಜನವರಿ 24ಕ್ಕೆ ಮುಂದೂಡಿಕೆ

  ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಸತ್ರ ನ್ಯಾಯಾಲಯ ಜನವರಿ 24ಕ್ಕೆ ಮುಂದೂಡಿದೆ. ಸರ್ಕಾರಿ ವಕೀಲರು ಕಾಲಾವಕಾಶ ಕೇಳಿದ್ದರಿಂದಾಗಿ ವಿಚಾರಣೆಯನ್ನೂ ಮುಂದೂಡಲಾಗಿದೆ.   ಈ ಬಗ್ಗೆ ಮಾಹಿತಿ ನೀಡಿದ ನಳಿನಿ ಪರ ವಕೀಲ ಅನಿಸ್ ಪಾಷ, ನಾವು ನಮ್ಮ ವಾದ ಮಂಡನೆ ಮಾಡಿದ್ದೇವೆ. ನಳಿನಿ ಫ್ರೀ ಕಾಶ್ಮೀರ ನಾಮಫಲಕ ಹಿಡಿದಿದ್ದ ವೇಳೆ ಸ್ಥಳದಲ್ಲಿದ್ದ ಇಬ್ಬರು ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ‌. ಅವರ ಮೇಲೆ ಕಾನೂನು ಕ್ರಮ ಆಗುವ ಸಾಧ್ಯತೆ ಇದೆ. […]

ವಿಮಾನದಲ್ಲಿ ಮತ್ತೊಂದು ಅನುಮಾನಾಸ್ಪದ ಬ್ಯಾಗ್‍ ಪತ್ತೆ

   ಮಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೊಂದು ಅನುಮಾನಾಸ್ಪದ ಬ್ಯಾಗ್‍ ಪತ್ತೆಯಾಗಿದೆ. ಮಂಗಳೂರಿನಿಂದ ಹೈದರಾಬಾದ್‍ ಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಅನುಮಾನಾಸ್ಪದ ಬ್ಯಾಗ್‍ ಸಿಕ್ಕಿದ್ದು ಪರಿಶೀಲನೆ ನಡೆಸಲಾಗುತ್ತಿದೆ.   ವಿಮಾನದಲ್ಲಿ 126 ಪ್ರಯಾಣಿಕರಿದ್ದರು. ಇನ್ನೇನು ವಿಮಾನ ಟೇಕಾಫ್‍ ಆಗಬೇಕಿತ್ತು. ಅಷ್ಟರಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆ ಕಚೇರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಬಾಂಬ್‍ ಇಡಲಾಗಿದೆ ಎಂದು ಹೇಳಿದ್ದ. ಹೀಗಾಗಿ ವಿಮಾನವನ್ನು ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ವಿಮಾನದಲ್ಲಿ ಅನುಮಾನಾಸ್ಪದ ಬ್ಯಾಗ್‍ ಪತ್ತೆಯಾಗಿದೆ.   ಇನ್ನೊಂದೆಡೆ ಇದೇ ವಿಮಾನ ನಿಲ್ದಾಣದಲ್ಲಿ ಇಂದು […]

ಮಂಗಳೂರಲ್ಲಿ ಸಿಕ್ಕ ಬಾಂಬ್‍ 10 ಕೆಜಿ ತೂಕವಿತ್ತಾ..?

  ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕ ಬಾಂಬ್‍ ಬರೋಬ್ಬರಿ 10 ಕೆಜಿ ತೂಕವಿತ್ತಾ..?. ಬ್ಯಾಗ್‍ ಗಾತ್ರ ನೋಡಿದರೆ ಬೃಹತ್‍ ಬಾಂಬ್‍ ಅದಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ 10 ಕೆಜಿ ತೂಕದ ಬಾಂಬ್ ಸ್ಫೋಟವಾಗಿದ್ರೆ ಸುಮಾರು 500 ಮೀಟರ್ ಸುತ್ತಲಿನ ವ್ಯಾಪ್ತಿಯಲ್ಲಿ ಹಾನಿಯಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.   ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದವಾಗಿ ಲ್ಯಾಪ್‍ಟಾಪ್ ಬ್ಯಾಗ್ ಪತ್ತೆಯಾಗಿತ್ತು. ಸಂಶಯದ ಮೇಲೆ ಬ್ಯಾಗ್ ಪರಿಶೀಲನೆ ನಡೆಸಿದಾಗ ಜೀವಂತ […]

ಮಂಡ್ಯದ ಗೋಶಾಲೆಗೆ ಜೋಡೆತ್ತುಗಳ ನೆರವು

 ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ದೊಡ್ಡ ಬ್ಯಾಡರಹಳ್ಳಿ ಗ್ರಾಮದಲ್ಲಿರುವ ಚೈತ್ರ ಗೋಶಾಲಾಗೆ ನಟ ದರ್ಶನ್ ಟ್ರ್ಯಾಕ್ಟರ್ ಗಟ್ಟಲೆ ಮೇವನ್ನು ನೀಡಿದ್ದಾರೆ. ಚೈತ್ರ ಗೋಶಾಲೆಗೆ ಮೇವು ಸಾಗಿಸುತ್ತಿರುವ ವಿಡಿಯೋವನ್ನು ಅಭಿಮಾನಿಗಳು ತಮ್ಮ ಟ್ಟಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ವಿಡಿಯೋದಲ್ಲಿ ಸಾಲು ಸಾಲು ಆಗಿ ಸುಮಾರು 15 ರಿಂದ 20 ಟ್ರ್ಯಾಕ್ಟರ್ ಹುಲ್ಲನ್ನು ಗೋಶಾಲೆಗೆ ಸಾಗಿಸುತ್ತಿರುವ ದೃಶ್ಯವಿದೆ. ಅಷ್ಟೇ ಅಲ್ಲದೇ ಸ್ವತಃ ದರ್ಶನ್ ಅವರು ಗೋಶಾಲೆಗೆ ಹೋಗಿ ಹಸುಗಳನ್ನು ನೋಡಿ ಖುಷಿ ಪಟ್ಟಿದ್ದಾರೆ. ಗೋವುಗಳ ಜೊತೆ ಕೆಲ ಕಾಲ ಕೆಳೆದು ಖುಷಿಪಟ್ಟಿದ್ದಾರೆ. […]

ಕಳ್ಳನಿಗೆ ಥಳಿಸಿದ್ದಕ್ಕೆ ಸಾವು: ಅಪಘಾತವೆಂದು ಬಿಂಬಿಸುತ್ತಿದ್ದಾರಾ..?

  ಮೈಸೂರಿನಲ್ಲಿ ಮೇಕೆ ಕಳ್ಳನೋರ್ವನನ್ನು ಸಾರ್ವಜನಿಕರೇ ಥಳಿಸಿ ಹತ್ಯೆ ಮಾಡಿದ್ದಾರೆಂದು ಹೇಳಲಾಗುತ್ತಿದ್ದು, ಈ ಘಟನೆ ಮೇಟಗಳ್ಳಿ ಠಾಣೆ ವ್ಯಾಪ್ತಿಯ ಮೊಗರಳ್ಳಿ ಮಂಟಿಯಲ್ಲಿ ನಡೆದಿದೆ. ಇದೀಗ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆಂದು ಬಿಂಬಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.   ಕೇರಳ ನೋಂದಾಯಿತ ರಿಕ್ಷಾವೊಂದರಲ್ಲಿ ನಾಯ್ಡುನಗರದ ಜಹೀರ್ ಎಂಬಾತ ಮೇಕೆಯನ್ನು ಕದ್ದು ಕೊಂಡೊಯ್ಯುತ್ತಿದ್ದ. ಇದನ್ನು ನೋಡಿದ ಸಾರ್ವಜನಿಕರು ಈತನ ರಿಕ್ಷಾವನ್ನು ಅಡ್ಡಗಟ್ಟಿ ಚೆನ್ನಾಗಿ ಥಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಆತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಭಾಗದಲ್ಲಿ ಹಲವಾರು ಭಾರಿ ಮೇಕೆ ಕಳ್ಳತನಗಳು ನಡೆದಿದ್ದು, […]

ಫ್ರೀ ಕಾಶ್ಮೀರ ವಿವಾದ: ನಿರ್ಧಾರಕ್ಕೆ ಬದ್ಧ ಎಂದ ಮೈಸೂರು ವಕೀಲರು

 ನಳಿನಿ ಪರ ವಕಾಲತ್ತು ವಹಿಸದಿರಲು ನಿರ್ಧರಿಸಿದ್ದ ಮೈಸೂರು ವಕೀಲರ ಸಂಘ ಅದೇ ನಿರ್ಧಾರವನ್ನು ಮುಂದುವರೆಸಲು ತೀರ್ಮಾನಿಸಿದೆ. ಈ ಸಂಬಂಧ ಇಂದು ಸಭೆ ನಡೆಯಿತು. ಈ ಸಭೆಯಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾದವಾದರೂ, ಅಂತಿಮವಾಗಿ ವಕಾಲತ್ತು ವಹಿಸದಿರಲು ಮೈಸೂರು ವಕೀಲರ ಸಂಘ ತೀರ್ಮಾನ ಮಾಡಿದೆ.   ಈ ಬಗ್ಗೆ ಹೇಳಿಕೆ ನೀಡಿರುವ ಮೈಸೂರು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಶಿವಣ್ಣ, ಮೈಸೂರು ವಕೀಲ ಸಂಘ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. ಸಂಘದ ನಿರ್ಧಾರವನ್ನು ಉಲ್ಲಂಘಿಸಿದರೆ, ಅವರನ್ನು ದೇಶದ್ರೋಹಿಗಳಿಗೆ ನೆರವಾದವರು ಎಂದು ಪರಿಗಣಿಸಿ […]