You cannot copy content of this page.
. . .

Day: January 19, 2020

ಮೈಸೂರು ಜಿಲ್ಲೆಯಲ್ಲಿ ಮೊದಲ ದಿನವೇ ಶೇ. 95 ಮಕ್ಕಳಿಗೆ ಪೊಲಿಯೊ ಲಸಿಕೆ

 ಮೈಸೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಭಾನುವಾರ ಚಾಲನೆ ನೀಡಿದ ಪಲ್ಸ್ ಪೊಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ಮೊದಲ ದಿನವೇ 2,31,994 ಮಕ್ಕಳಿಗೆ ಪೊಲಿಯೊ ಲಸಿಕೆ ಹಾಕಲಾಗಿದೆ. ನಗರದಲ್ಲಿ ಮಾಜಿ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಎಸ್‍.ಎ.ರಾಮದಾಸ್‍ ಮಕ್ಕಳಿಗೆ ಲಸಿಕೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಜಿಲ್ಲೆಯಲ್ಲಿ 5 ವರ್ಷದೊಳಗಿನ 2,43,641 ಮಕ್ಕಳನ್ನು ಗುರುತಿಸಿದ್ದು, ಮೊದಲ ದಿನದಂದೆ ಶೇ.95.10 ರಷ್ಟು ಮಕ್ಕಳಿಗೆ ಲಸಿಕೆ ಹಾಕವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿದೆ. ಪೊಲಿಯೊ ಲಸಿಕೆ ಕಾರ್ಯಕ್ರಮಕ್ಕೆಂದೆ ಜಿಲ್ಲೆಯ ಸಾರ್ವಜನಿಕ ಪ್ರದೇಶಗಳು, ಬಸ್ ನಿಲ್ದಾಣ, ರೈಲ್ವೆ […]

ಮೈಸೂರು ವಿ.ವಿ. ‘ಫ್ರೀ ಕಾಶ್ಮೀರ’ ಪ್ರಕರಣ; ನಾಳೆ ನಳಿನಿ ಪರ ವಕಾಲತ್ತು ವಹಿಸಲಿದೆ ಜಗದೀಶ್‍ ನೇತೃತ್ವದ ವಕೀಲರ ತಂಡ

 ಜೆಎನ್‍ಯು ದಾಂದಲೆ ಖಂಡಿಸಿ ಮೈಸೂರು ವಿ.ವಿ. ಮಾನಸಗಂಗೋತ್ರಿ ಆವರಣದಲ್ಲಿ ಈಚೆಗೆ ನಡೆದಿದ್ದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಪ್ಲೆಕಾರ್ಡ್‍ ಪ್ರದರ್ಶಿಸಿ ವಿವಾದಕ್ಕೆ ಕಾರಣವಾಗಿದ್ದ ಯುವತಿ ನಳಿನಿ ಪರವಾಗಿ ವಕಾಲತ್ತು ವಹಿಸಲು ಬೆಂಗಳೂರು ವಕೀಲರ ತಂಡ ನಾಳೆ (ಸೋಮವಾರ) ಮೈಸೂರಿಗೆ ಬರಲಿದೆ.  ಈ ವಿಚಾರವಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲರೂ ಆದ ಸಿ.ಎಸ್.ದ್ವಾರಕನಾಥ್‍ ಅವರು ತಮ್ಮ ಫೇಸ್‍ಬುಕ್‍ ಪೇಜ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ‘ಮೈಸೂರಿನ ಜನಪರ ಸಂಗಾತಿಗಳೇ, ನಾಳೆ 20ರಂದು ನಮ್ಮ ಬೆಂಗಳೂರು ವಕೀಲರ […]

ರಾಜಶೇಖರ ಕೋಟಿ ಸ್ಮರಣೆ; ಮೈವಿವಿ ನೌಕರರ ವೇದಿಕೆಯಿಂದ ದಿನದರ್ಶಿಕೆ ಬಿಡುಗಡೆ

 ಮೈಸೂರು: ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯಿಂದ ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕ ದಿ.ರಾಜಶೇಖರ ಕೋಟಿ ಅವರ ಸ್ಮರಣಾರ್ಥ 2020ನೇ ದಿನದರ್ಶಿಕೆಯನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.  ಅಗ್ರಹಾರದ ರಮಾನುಜ ರಸ್ತೆಯಲ್ಲಿರುವ ಪತ್ರಿಕೆಯ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ ದಿನದರ್ಶಿಕೆ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಜನಪರ ಚಟುವಟಿಕೆಗಳ ಮೂಲಕ ರೂಪುಗೊಂಡ ‘ಆಂದೋಲನ’ ದಿನಪತ್ರಿಕೆ ನೋವುಳ್ಳವರ, ಹಿಂದುಳಿದವರ, ದನಿ ಇಲ್ಲದವರ ದನಿಯಾಗಿ ನಿಂತಿದ್ದನ್ನು ನಾವಿಂದು ಸ್ಮರಿಸಬಹುದಾಗಿದೆ ಎಂದರು.  ಶಾಸಕ ಎಲ್.ನಾಗೇಂದ್ರ ಮಾತನಾಡಿ, ‘ಆಂದೋಲನ’ ದಿನಪತ್ರಿಕೆ […]

ದೆಹಲಿ ಜನರಿಗೆ 10 ಭರವಸೆಯ ‘ಗ್ಯಾರಂಟಿ ಕಾರ್ಡ್’ ನೀಡಿದ ಸಿಎಂ ಕೇಜ್ರಿವಾಲ್

 ದಿನದ 24 ಗಂಟೆಯೂ ಉಚಿತ ಕರೆಂಟ್‍, ಉಚಿತ ಆರೋಗ್ಯ ಸೌಲಭ್ಯ, ಯಮುನಾ ನದಿ ಸ್ವಚ್ಛತೆ, ಮುಂದಿನ ಐದು ವರ್ಷದಲ್ಲಿ ದೆಹಲಿ ವಾಯು ಮಾಲಿನ್ಯ ಕಡಿಮೆಗೊಳಿಸುವುದು ಸೇರಿದಂತೆ 10 ಭರವಸೆಗಳುಳ್ಳ ‘ಗ್ಯಾರಂಟಿ ಕಾರ್ಡ್‍ನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‍ ಬಿಡುಗಡೆ ಮಾಡಿದ್ದಾರೆ.  ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಜನರಿಗೆ ಭರವಸೆ ರೂಪದಲ್ಲಿ ವಿಶೇಷ ಎಂಬಂತೆ ಈ ಕಾರ್ಡ್‍ನ್ನು ನೀಡಿದ್ದಾರೆ. ಮುಂದಿನ ಐದು ವರ್ಷದಲ್ಲಿ ಪ್ರತಿ ಮನೆಗೂ ದಿನದ 24 ಗಂಟೆ ನೀರು ಸರಬರಾಜು, ವಿದ್ಯಾರ್ಥಿಗಳಿಗೆ ಉಚಿತ ಬಸ್ ಸವಾರಿ, ನಗರದ […]

‘ಭಜರಂಗಿ-2’ಗೆ ‘3’ ವಿಘ್ನ!

 ಹ್ಯಾಟ್ರಿಕ್‍ ಹೀರೊ ಶಿವರಾಜ್‍ ಕುಮಾರ್ ಅಭಿನಯದ, ಬಹುನಿರೀಕ್ಷಿತ ‘ಭಜರಂಗಿ-2’ ಸಿನಿಮಾ ಚಿತ್ರೀಕರಣದ ವೇಳೆ ಮತ್ತೊಂದು ಅವಘಡ ಸಂಭವಿಸಿದೆ. ಬೆಂಗಳೂರಿನ ನೆಲಮಂಗಲದಲ್ಲಿ ಇಂದು ಚಿತ್ರೀಕರಣದ ವೇಳೆ ಅಗ್ನಿ ಅವಘಡ ಉಂಟಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಒಂದಾದ ಮೇಲೊಂದು ವಿಘ್ನ ಎದುರಾಗುತ್ತಿದೆ.  ಎ.ಹರ್ಷ ನಿರ್ದೇಶನದ ಈ ಸಿನಿಮಾದ ಬಹುಪಾಲು ಚಿತ್ರೀಕರಣ ಸೆಟ್‍ನಲ್ಲೇ ನಡೆಯುತ್ತಿದೆ. ಜ.16ರಂದು ಸಿನಿಮಾ ಚಿತ್ರೀಕರಣಕ್ಕೆ ಬೆಂಗಳೂರಿನ ಮೋಹನ್ ಬಿ.ಕೆರೆ ಸ್ಟುಡಿಯೊದಲ್ಲಿ ನಿರ್ಮಿಸಲಾಗಿದ್ದ ಗುಹೆಯ ಸೆಟ್‍ಗೆ ಶಾರ್ಟ್ ಸರ್ಕ್ಯೂಟ್‍ನಿಂದ ಅವಘಡ ಉಂಟಾಗಿತ್ತು. ಸಧ್ಯಕ್ಕೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ‘ಆಂಜನೇಯ ನಮ್ಮನ್ನು […]

ಕೆ.ಎಸ್.ಈಶ್ವರಪ್ಪ, ಎಚ್‍.ಡಿ.ಕುಮಾರಸ್ವಾಮಿ ಟ್ವೀಟ್ ಸಮರ

 ಸಂಸದ ತೇಜಸ್ವಿ ಸೂರ್ಯ ಹಾಗೂ ಯುವಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ ಅವರ ಹತ್ಯೆಗೆ ಸಂಚು ನಡೆದಿತ್ತು ಎಂಬ ಸುದ್ದಿ ಹೆಚ್ಚು ಸದ್ದು ಮಾಡಿತ್ತು. ಈ ಕುರಿತು ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ‘ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಯುಗಪುರುಷರೇ?’ ಎಂದು ಲೇವಡಿ ಮಾಡಿದ್ದು ಪರ-ವಿರೋಧದ ಚರ್ಚೆಗೆ ಕಾರಣವಾಯಿತು. ಇದೇ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಎಚ್‍.ಡಿ.ಕುಮಾರಸ್ವಾಮಿ ಅವರ ನಡುವೆ ಟ್ಟೀಟ್ ಸಮರ ಏರ್ಪಟ್ಟಿದೆ.  ಎಚ್​ಡಿಕೆ ಹೇಳಿಕೆಗೆ ಟ್ವೀಟರ್​ನಲ್ಲಿ ಕಿಡಿಕಾರಿದ್ದ ಸಚಿವ ಕೆ.ಎಸ್.ಈಶ್ವರಪ್ಪ, ‘ಅಂದು ತಿನ್ನಲು ಗತಿ ಇಲ್ಲದವರು ಮಾತ್ರ ಸೈನ್ಯಕ್ಕೆ […]

ನಾನು ಈಶ್ವರಪ್ಪ ವೆಜ್ಜು, ಸಿದ್ದರಾಮಯ್ಯ ಮಾತ್ರ ನಾನ್‌ವೆಜ್; ಅಡಗೂರು ಎಚ್.ವಿಶ್ವನಾಥ್

 ನಾನು ಹಾಗೂ ಈಶ್ವರಪ್ಪ ಭಾಷಣ ಮುಗಿಸಿ ವೆಜ್ ಊಟಕ್ಕೆ ಹೋಗುತ್ತೇವೆ. ಸಿದ್ದರಾಮಯ್ಯ ಈಗಲೂ ನಾನ್ ವೆಜಿಟೇರಿಯನ್ ಇದ್ದಾರೆ. ನಾನು ಈಶ್ವರಪ್ಪ ಅವರ ಸಹವಾಸ ಮಾಡಿ ಬಾಡು, ಬಳ್ಳೆ ಬಿಟ್ಟಿದ್ದೇನೆ. ಸಿದ್ದರಾಮಯ್ಯ ಈಗಲೂ ಬಾಡು, ಬಳ್ಳೆ ಅಭ್ಯಾಸ ಇಟ್ಟುಕೊಂಡಿದ್ದಾರೆ ಎಂದು ಅಡಗೂರು ಎಚ್‍.ವಿಶ್ವನಾಥ್‍ ತಮ್ಮ ಭೋಜನಾಪ್ರಿಯತೆ ಬಗ್ಗೆ ಗುಟ್ಟು ಬಿಚ್ಚಿಟ್ಟರು.  ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗಾಗಿ ಕಾಂಗ್ರೆಸ್ ನಾಯಕಿ ಐಶ್ವರ್ಯ ಹಾವುಬತ್ತಿ ಮೀನು ಊಟ ಮಾಡಿಸಿದ್ದಾರೆ. […]

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮೂರು ಟಗರು!

 ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದ ವೇದಿಕೆಯಲ್ಲಿ ಟಗರು ಎಂದೇ ಚಿರಪರಿಚಿತರಾದ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್‍ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿಸಿ ಮೂಡಿಸಿದರು.  ಸಿದ್ದರಾಮಯ್ಯ ಹಾಗೂ ಕೆ.ಎಸ್.ಈಶ್ವರಪ್ಪ ಒಂದೇ ಕಾರಿನಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ರಾಜಕೀಯ ವೈರತ್ವ ಮರೆತು ನಾಯಕರು ಪರಸ್ಪರ ವೇದಿಕೆ ಹಂಚಿಕೊಂಡರು. ಬಹುದಿನಗಳ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಬೆಂಬಲಿಗರಲ್ಲಿ ಒಂದೆಡೆ ಅಚ್ಚರಿ ಮತ್ತೊಂದೆಡೆ ಸಂತಸಕ್ಕೆ […]

ಸಿದ್ಧಗಂಗೆಯಲ್ಲಿ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

 ತುಮಕೂರು: ಸಿದ್ಧಗಂಗಾ ಮಠದಲ್ಲಿ ಇಂದು (ಭಾನುವಾರ)ಶಿವಕುಮಾರ ಸ್ವಾಮೀಜಿ ಮೊದಲ ವರ್ಷದ ಪುಣ್ಯಸ್ಮರಣೆ ನಡೆಯಿತು. ನಾಡಿನ ನಾನಾ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿ ಶ್ರೀಗಳ ಪುಣ್ಯ ಸಂಸ್ಮರಣೋತ್ಸವಕ್ಕೆ ಸಾಕ್ಷಿಯಾದರು.  ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವರಾದ ಸಿ.ಟಿ.ರವಿ, ವಿ.ಸೋಮಣ್ಣ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಸೇರಿದಂತೆ ನಾನಾ ಮಠಾಧೀಶರು ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು.  ರಾಜ್ಯದ ದೂರದ ಜಿಲ್ಲೆಗಳ ಭಕ್ತರು ಶನಿವಾರವೇ ಮಠಕ್ಕೆ ಆಗಮಿಸಿದ್ದರು. ಭಕ್ತರಿಂದ ಗಿಜಿಗುಡುತ್ತಿರುವ ಮಠದ ಪ್ರಾಂಗಣದಲ್ಲಿ ಭಾನುವಾರ […]

ಕೆಪಿಸಿಸಿಗೆ 4 ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಗೆ ಚಿಂತನೆ ನಡೆದಿದೆ; ಸತೀಶ್‍ ಜಾರಕಿಹೊಳಿ

ಕೆಪಿಸಿಸಿಗೆ ನಾಲ್ಕು ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಗೆ ಚಿಂತನೆ ನಡೆದಿದೆ. ಜಾತಿ ಮತ್ತು ಪ್ರದೇಶವಾರು ಸಮತೋಲನ ಮಾಡುವುದಕ್ಕಾಗಿ ಈ ಚಿಂತನೆ ನಡೆದಿದೆ ಎಂದು ಮಾಜಿ ಸಚಿವ ಸತೀಶ್‍ ಜಾರಕಿಹೊಳಿ ಹೇಳಿದರು.  ಇನ್ನು ಒಂದು ವಾರದಲ್ಲಿ ಎಲ್ಲವೂ ಸರಿಯಾಗಲಿದೆ. ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ವಿಳಂಬ ಆಗಿದೆ ಅಷ್ಟೇ. ಕಾಂಗ್ರೆಸ್‌ನಲ್ಲಿ ಮೂಲ ವಲಸಿಗ ಎಂಬ ಪ್ರಶ್ನೆಯೇ ಇಲ್ಲ. ನಾವು ಪಕ್ಷ ಸೇರಿ 10 ವರ್ಷವಾಗಿದೆ‌. ಈಗ ಆ ವಿಚಾರವೂ ಚರ್ಚೆಗೆ ಅನಗತ್ಯ. ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ಅಧ್ಯಕ್ಷ ಒಂದೇ ಇರಲಿ […]