You cannot copy content of this page.
. . .

Day: January 17, 2020

ಮೈಸೂರು ವಿ.ವಿ. ‘ಫ್ರೀ ಕಾಶ್ಮೀರ’ ಪ್ರಕರಣ; ಮರಿದೇವಯ್ಯಗೆ ನಿರೀಕ್ಷಣಾ ಜಾಮೀನು

 ಮೈಸೂರು ವಿ.ವಿ.ಯಲ್ಲಿ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ ಆರೋಪದಡಿ ರಾಷ್ಟ್ರದ್ರೋಹ ಪ್ರಕರಣ ಎದುರಿಸುತ್ತಿದ್ದ ವಿ.ವಿ.ಯ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಅವರು ನಿರೀಕ್ಷಣಾ ಜಾಮೀನು ಪಡೆದು ವಿಚಾರಣೆಗೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.  ಇನ್ನು ‘ಫ್ರೀ ಕಾಶ್ಮೀರ’ ಫೋಸ್ಟರ್ ಹಿಡಿದ ಯುವತಿ ನಳಿನಿ ಪರವಾಗಿ ವಕಾಲತ್ತು ವಹಿಸಿಲು ರಾಜ್ಯ ಹಿಂದುಳಿದ ವರ್ಗದ ಆಯೋಗದ ಮಾಜಿ ಅಧ್ಯಕ್ಷ ಮತ್ತು ಹಿರಿಯ ವಕೀಲ ಸಿ.ಎಸ್.ದ್ವಾರಕನಾಥ್ ನೇತೃತ್ವದ ತಂಡವೊಂದು ಬದ್ಧವಾಗಿದೆ ಎಂದು ವಕೀಲರ ತಂಡವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. […]

ಮಹಾತ್ಮ ಗಾಂಧೀಜಿಗೆ ಭಾರತ ರತ್ನ; ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

 ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ‘ಭಾರತ ರತ್ನ’ ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‍ ತಿರಸ್ಕರಿಸಿದೆ.  ಮುಖ್ಯ ನ್ಯಾಯಮೂರ್ತಿ ಸಿ.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಸೂರ್ಯಕಾಂತ್‍ ಅವರಿದ್ದ ಪೀಠ, ‘ಎಲ್ಲ ಔಪಚಾರಿಕ ಬಿರುದುಗಳನ್ನು ಮೀರಿದ ಉನ್ನತ ವ್ಯಕ್ತಿತ್ವ ಮಹಾತ್ಮ ಗಾಂಧೀಜಿ ಅವರದು. ಅವರಿಗೆ ಭಾರತ ರತ್ನ ನೀಡುವಂತೆ ಸರ್ಕಾರಕ್ಕೆ ಕೋರ್ಟ್‍ ನಿರ್ದೇಶನ ನೀಡುವುದು ಸಮರ್ಥನೀಯವಲ್ಲ. ಆದರೂ, ಅರ್ಜಿದಾರರ ಭಾವನೆಗೆ ಮನ್ನಣೆ ನೀಡಿ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಪೀಠ ತಿಳಿಸಿದೆ.

ಜನವರಿ 21ರಿಂದ ಸುತ್ತೂರು ಜಾತ್ರೆ

 ಮೈಸೂರು: ಧಾರ್ಮಿಕ, ಸಾಂಸ್ಕೃತಿಕ ಉತ್ಸವ ವೈಭವದ ಪ್ರತೀಕವಾದ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ ಜ.21ರಿಂದ 26ರವರೆಗೆ ಜರುಗಲಿದೆ.  ಜಾತ್ರೆಯು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಜಾತ್ರೆ ಅಂಗವಾಗಿ ವಸ್ತು ಪ್ರದರ್ಶನ,ಕೃಷಿ ಮೇಳ, ಸಾಂಸ್ಕೃತಿಕ ಮೇಳ, ದೋಣಿ ವಿಹಾರ, ಸೋಬಾನೆ ಪದ ಸ್ಪರ್ಧೆ,ಕ್ಯಾನ್ಸರ್ ತಪಾಸಣೆ ಶಿಬಿರ, ಸಾಮೂಹಿಕ ವಿವಾಹ, ರಾಜ್ಯಮಟ್ಟದ ಭಜನಾ ಮೇಳ, ಜನಗಳ ಜಾತ್ರೆ, ಗಾಳಿಪಟ ಸ್ಪರ್ಧೆ, ಕುಸ್ತಿ ಪಂದ್ಯವಳಿ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. […]

ನಿರ್ಭಯಾ ಪ್ರಕರಣ: ಫೆಬ್ರವರಿ 1ಕ್ಕೆ ಗಲ್ಲು ಫಿಕ್ಸ್

  ರಾಷ್ಟ್ರಪತಿ ರಾಮನಾಥ್‍ ಕೋವಿಂದ್‍ ಅವರು ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಫಿಕ್ಸ್‍ ಆಗಿದೆ. ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ಜಾರಿ ಮಾಡುವಂತೆ ದೆಹಲಿ ಪಟಿಯಾಲ ಕೋರ್ಟ್‍ ಹೊಸ ಡೆತ್‍ ವಾರಂಟ್‍ ಹೊರಡಿಸಿದೆ.   ಈ ಹಿಂದೆ ತೀರ್ಪು ನೀಡಿದ್ದ ಕೋರ್ಟ್‍ ಜನವರಿ 22 ರಂದು ಗಲ್ಲು ಶಿಕ್ಷೆ ಜಾರಿ ಮಾಡುವಂತೆ ಡೆತ್‍ ವಾರಂಟ್‍ ಜಾರಿ ಮಾಡಿತ್ತು. ಆದರೆ ನಾಲ್ವರು ಅಪರಾಧಿಗಳಲ್ಲೊಬ್ಬ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ […]

ಪ್ರಜ್ವಲ್ ರೇವಣ್ಣಗೆ ರಿಲೀಫ್ ನೀಡಿದ ಹೈಕೋರ್ಟ್

  ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ. ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಸೋತಿದ್ದ ಬಿಜೆಪಿಯ ಎ.ಮಂಜು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್‍, ಎ. ಮಂಜು ಅರ್ಜಿ ಸಲ್ಲಿಸುವಾಗ ಪ್ರಮಾಣ ಪತ್ರವನ್ನು ಸಲ್ಲಿಸಿರಲಿಲ್ಲ ಎಂದು ಹೇಳಿದೆ.   ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೇತೃತ್ವದ ಏಕ ಸದಸ್ಯ ಪೀಠ ಎ. ಮಂಜು ಸಲ್ಲಿಸಿದ್ದ ಅರ್ಜಿಯನ್ನು ತಾಂತ್ರಿಕ […]

ಮದ್ದೂರು ಬಳಿ ಭಾರೀ ಶಬ್ದ; ಭೂಕಂಪನದ ಅನುಭವ

ಮಂಡ್ಯ ಜಿಲ್ಲೆಯ ಕೆಲವೆಡೆ ಸಣ್ಣದಾಗಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮದ್ದೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾರಿ ಶಬ್ದ ಕೇಳಿಬಂದಿದ್ದು, ಭೂಮಿ ಕಂಪಿಸಿದಂತೆ ಭಾಸವಾಗಿದೆ. ಇದರಿಂದ ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವೆಡೆ ಮನೆಯಲ್ಲಿದ್ದ ಪಾತ್ರೆಗಳು ಮತ್ತಿತರ ವಸ್ತುಗಳು ಕೆಳಗೆ ಉರುಳಿವೆ. ಇದು ಭೂಕಂಪವೋ ಅಥವಾ ಯಾವುದಾದರೂ ಸ್ಫೋಟವೋ ಎಂಬುದು ಖಚಿತವಾಗಿಲ್ಲ.

ಕೃಷಿ ಜಂಟಿ ನಿರ್ದೇಶಕರ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು; ಜಿಪಂ ಸಭೆಯಲ್ಲಿ ನಿರ್ಣಯ

 ಮೈಸೂರು: ಜಿಪಂ ಸದಸ್ಯರಿಗೆ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡದ ಕೃಷಿ ಜಂಟಿ ನಿರ್ದೇಶಕ ಮಹಾಂತೇಶಪ್ಪ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.  ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಸಭೆಯ ನಿರ್ಣಯವನ್ನು ತಿಳಿಸಿದರು. ಸದಸ್ಯರ ಅನುಮತಿ ಮೇರೆಗೆ ಮೇಲಿನ ನಿರ್ಣಯ ಕೈಗೊಂಡರು.  ಇದಕ್ಕೂ ಮುನ್ನ ಮಾತನಾಡಿದ ಜಿಪಂ ಸದಸ್ಯ ಶ್ರೀಕೃಷ್ಣ, ಇಲಾಖೆ ಮಾಹಿತಿ ಕೇಳಿ ವರ್ಷವೇ ಕಳೆದಿದೆ. ಈ ಬಗ್ಗೆ […]

‘ಇದು ಲಿರಿಕ್ಸಾ, ಕಿರಿಕ್ಸಾ?’ ಕನ್ನಡ ಸಿನಿಮಾ ಹಾಡುಗಳನ್ನು ಟೀಕಿಸಿದ ಪ್ರೊ.ಬರಗೂರು ರಾಮಚಂದ್ರಪ್ಪ

 ಮೈಸೂರು: ಹೊಸಬರಲ್ಲೂ ಒಳ್ಳೆಯದನ್ನು ಬರೆಯುತ್ತಿದ್ದಾರೆ. ‘ಎಣ್ಣೆ ನಿಮ್ದು, ಊಟ ನಮ್ದು’ ಥರದ ಹಾಡುಗಳು ಪ್ರಚಾರಕ್ಕಾಗಿ ಬರುತ್ತಿವೆ. ‘ಖಾಲಿ ಬಾಟಲಿ’ ಹಾಡನ್ನು ಖಾಲಿ ತಲೆಗಳು ಮಾತ್ರ ಬರೆಯುತ್ತವೆ. ಎಷ್ಟೋ ಸಲ ಇವು ಲಿರಿಕ್ಸಾ? ಕಿರಿಕ್ಸಾ? ಎನಿಸುತ್ತದೆ. ಲಿರಿಕ್ಸ್ ಜಾಗದಲ್ಲಿ ಕಿರಿಕ್ಸ್‌ಗೆ ಪ್ರಚಾರ ದೊರಕುತ್ತಿದೆ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.  ಎಂಎಂಕೆ ಮತ್ತು ಎಸ್‌ಡಿಎಂ ಮಹಾವಿದ್ಯಾಲಯ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಸಾಹಿತ್ಯ […]

ಬ್ರಹ್ಮ ರಥೋತ್ಸವ; ಜೆಡಿಎಸ್ ತಾಪಂ ಸದಸ್ಯ, ಬಿಜೆಪಿ ಶಾಸಕನ ಬೆಂಬಲಿಗರ ನಡುವೆ ಗಲಾಟೆ

 ಮಂಡ್ಯ ಜಿಲ್ಲೆಯ ಬಿಲ್ಲೇನಹಳ್ಳಿ ಗ್ರಾಮದಲ್ಲಿರುವ ಗವಿರಂಗಪ್ಪ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ನಡೆಯುತ್ತಿದ್ದ ವೇಳೆ ತಾಲ್ಲೂಕು ಪಂಚಾಯಿತಿ ಜೆಡಿಎಸ್‍ ಸದಸ್ಯ ದಿನೇಶ್‍ ಹಾಗೂ ಕೆ.ಆರ್‍.ಪೇಟೆ ಕ್ಷೇತ್ರದ ಬಿಜೆಪಿ ಶಾಸಕ ನಾರಾಯಣಗೌಡ ಬೆಂಬಲಿಗರ ನಡುವೆ ಗಲಾಟೆಯಾಗಿದೆ.  ರಥೋತ್ಸವದ ವೇಳೆ ಮೊದಲು ಪೂಜೆ ಮಾಡುವುದಕ್ಕೆ ತಾಪಂ ಸದಸ್ಯ ದಿನೇಶ್‍ ಮುಂದಾದರು. ಅದಕ್ಕೆ ಶಾಸಕ ನಾರಾಯಣಗೌಡ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ಈ ನಡುವೆ ಪರಸ್ಪರರಲ್ಲಿ ಗಲಾಟೆಯಾಗಿ ಹೊಡೆದಾಟದ ಹಂತಕ್ಕೆ ತಲುಪಿತ್ತು. ತಕ್ಷಣ ಸ್ಥಳದಲ್ಲೇ ಇದ್ದ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ನಿರ್ಭಯಾ ಪ್ರಕರಣ: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

 ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್‍ ಕೋವಿಂದ್ ತಿರಸ್ಕರಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿತ್ತು. ರಾಷ್ಟ್ರಪತಿಗಳು ಕೇಂದ್ರದ ಶಿಫಾರಸನ್ನು ಪುರಸ್ಕರಿಸಿದ್ದಾರೆ. ಹೀಗಾಗಿ ನಿರ್ಭಯಾ ಹಂತಕರಿಗೆ ಇದೇ 22 ರಂದು ಗಲ್ಲು ಶಿಕ್ಷೆ ಜಾರಿಯೋಗೋದು ಬಹುತೇಕ ಖಚಿತವಾಗಿದೆ.‌ ಅಪರಾಧಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರ ಗುರುವಾರ ತಿರಸ್ಕರಿಸಿತ್ತು. ಬಳಿಕ ಅರ್ಜಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅರ್ಜಿ ತಿರಸ್ಕರಿಸುವಂತೆ ದೆಹಲಿ ರಾಜ್ಯಪಾಲರು ಮಾಡಿದ್ದ […]