You cannot copy content of this page.
. . .

Day: January 16, 2020

ಬೈಕ್‌ಗಳ ಮುಖಾಮುಖಿ ಡಿಕ್ಕಿ; ಓರ್ವ ಸಾವು

 ಎಚ್.ಡಿ.ಕೋಟೆ ತಾಲ್ಲೂಕಿನ ಹ್ಯಾಂಡ್ ಪೋಸ್ಟ್‌ನ ಬಳಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.  ಮೈಸೂರಿನ ಕುಂಬಾರಕೊಪ್ಪಲಿನ ರಾಜಶೆಟ್ಟಿ (70) ಮೃತಪಟ್ಟವರು. ಜೆಲ್ಲಿಕಲ್ಲು ಮತ್ತು ಎಂಸ್ಯಾಂಡ್ ವ್ಯವಹಾರ ಮಾಡುತ್ತಿದ್ದ  ರಾಜ ಶೆಟ್ಟಿ ಅವರು ವ್ಯವಹಾರ ದೃಷ್ಟಿಯಿಂದ ಬುಧವಾರ ಬೆಳಿಗ್ಗೆ ಎಚ್.ಡಿ.ಕೋಟೆಗೆ ಬಂದಿದ್ದರು. ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಬೈಕ್ ಸವಾರನಿಗೂ ಗಾಯಗಳಾಗಿದ್ದು, ಅವರನ್ನು ಎಚ್.ಡಿ.ಕೋಟೆ ಆಸ್ಪತ್ರೆಗೆ ದಾಖಲು ಮಾಡಿ, ನಂತರ ವೈದ್ಯರ […]

ನಟಿ ರಶ್ಮಿಕಾ ಮನೆಯಲ್ಲಿ ಐ.ಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು?

 ಸಾಲು ಸಾಲು ಹಿಟ್‍ ಸಿನಿಮಾಗಳನ್ನು ನೀಡಿದ ಕೊಡಗಿನ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ವಿರಾಜಪೇಟೆ ಸಮೀಪದ ನಿವಾಸದ ಮೇಲೆ ಐ.ಟಿ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದು, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.  ಅಭಿಮಾನಿಗಳ ಸೋಗಿನಲ್ಲಿ ಬಂದ ಐ.ಟಿ ಅಧಿಕಾರಿಗಳು ರಶ್ಮಿಕಾ ಅವರ ಕಕ್ಲೂರಿನ ಎರಡು ಅಂತಸ್ತಿನ ನಿವಾಸ, ಅವರ ತಂದೆಗೆ ಸೇರಿದ್ದ ಸೆರೆನಿಟಿ ಹಾಲ್‌ (ಮದುವೆ ಸಭಾಂಗಣ), ಬೃಹತ್‌ ವಾಣಿಜ್ಯ ಸಂಕೀರ್ಣದ ಮೇಲೆ ದಾಳಿ ನಡೆಸಿದ್ದಾರೆ. ಮೈತಾಡಿ ಗ್ರಾಮದಲ್ಲಿ ಕಾಫಿ ತೋಟ, ಬಿಟ್ಟಂಗಾಲದಲ್ಲಿ […]

ನಳಿನಿ ಪರ ವಕಾಲತ್ತು ವಹಿಸಲು ಪ್ರಗತಿಪರರ ಮನವಿ

 ವಿವಾದಿತ ಪೋಸ್ಟರ್ ಪದರ್ಶಿಸಿದ್ದ ಯುವತಿ ನಳಿನಿ ಪರ ವಕಾಲತ್ತು ವಹಿಸದಿರುವ ಮೈಸೂರು ವಕೀಲರ ತೀರ್ಮಾನವನ್ನು ಹಿಂಪಡೆಯುವಂತೆ ಪ್ರಗತಿಪರ ಮುಖಂಡರು ಮನವಿ ಮಾಡಿದ್ದಾರೆ.  ಪ್ರಗತಿಪರ ಚಿಂತಕರಾದ ಪ. ಮಲ್ಲೇಶ್, ಪ್ರೊಫೆಸರ್ ಮಹೇಶ್ ಚಂದ್ರಗುರು, ಕೆ.ಎಸ್.ಶಿವರಾಮು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪ್ರಮುಖರಿಂದ ಮೈಸೂರು ವಕೀಲರ ಸಂಘಕ್ಕೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಯುವತಿ ನಳಿನಿ ಹಾಗೂ ಇತರ ಆರೋಪಿಗಳ ಪರ ವಾದ ಮಾಡುವಂತೆ ಪ್ರಗತಿ ಪರರು ಮನವಿ ಮಾಡಿದ್ದಾರೆ.  ಮೈಸೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ […]

ಕೆಪಿಸಿಸಿ ಸಾರಥಿ ಹೆಸರು ಫೈನಲ್; ಲಕೋಟೆಯಲ್ಲಿರುವ ಹೆಸರು ಯಾರದು?

 ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ನೇಮಿಸಲು ಅಂತಿಮವಾಗಿ ಹೈಕಮಾಂಡ್‍ ನಿರ್ಧರಿಸಿದೆ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.  ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯರನ್ನು ಮುಂದುವರಿಸುವ ಬಗ್ಗೆಯೂ ನಿರ್ಧರಿಸಲಾಗಿದೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರ ಬಹುತೇಕ ಖಚಿತವಾಗಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಇದ್ದು, ಇಂದೇ ಘೋಷಣೆ ಮಾಡುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಅನರ್ಹ ಶಾಸಕರ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಸೋಲನುಭವಿಸಿದ ಕಾಂಗ್ರೆಸ್‍ ಪಕ್ಷದ ನೈತಿಕ ಹೊಣೆ ಹೊತ್ತು ವಿರೋಧ ಪಕ್ಷ ಸ್ಥಾನಕ್ಕೆ […]

ಯಾರು ಈ ‘ಶ್ವಾಸ’ಗುರು..?, ಪೀಠಾಧಿಪತಿಯಾಗುವ ‘ಯೋಗಾಯೋಗ’ ಬಂದಿದ್ಹೇಗೆ..?

    ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಟ್ರೆಂಡಿಂಗ್‍ ನಲ್ಲಿರುವ ಹೆಸರು ವಚನಾನಂದ ಸ್ವಾಮೀಜಿ.. ಇವರು ಸದ್ಯ ವೀರಶೈವ ಪಂಚಮಸಾಲಿ ಪೀಠಾಧ್ಯಕ್ಷರು..   ಹರಿಹರ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಮೊದಲ ಬಾರಿಗೆ ಹರ ಜಾತ್ರೆ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮುದಾಯದವರಿಗೆ ಸಚಿವ ಸ್ಥಾನ ನೀಡದಿದ್ದರೆ ನಮ್ಮ ಸಮಾಜ ನಿಮ್ಮನ್ನು ಕೈಬಿಡುತ್ತದೆ ಎಂದು ಹೇಳಿ ಯಡಿಯೂರಪ್ಪರ ಕೋಪಕ್ಕೆ ಕಾರಣವಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳು ರಾಜಕೀಯದಲ್ಲಿ ಮೂಗು ತೂರಿಸಬಹುದೇ ಎಂಬುದರ ಕುರಿತು ಚರ್ಚೆಗಳು ಆರಂಭವಾಗಿವೆ. […]

ಚಾಮುಂಡಿ ದರ್ಶನಕ್ಕೆ ವಸ್ತ್ರ ಸಂಹಿತೆ..?

  ಚಾಮುಂಡೇಶ್ವರಿ ದರ್ಶನ ಮಾಡಬೇಕೆಂದರೆ ಇನ್ನು ಮುಂದೆ ಸಂಪ್ರದಾಯಕ ವಸ್ತ್ರ ಧರಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಯಾಕಂದ್ರೆ ಸರ್ಕಾರ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.   ಇಂದು ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಕೆಲವರು ನನಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಚಿಂತನೆ […]

ಪ್ರಿಯಕರನ ಕಿರುಕುಳ ತಾಳದೆ ಯುವತಿ ಆತ್ಮಹತ್ಯೆ

 ಪ್ರಿಯಕರನ ಕಾಟ ತಾಳದೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬ್ಯಾಡಗೊಟ್ಟ ಗ್ರಾಮದ ನಿವಾಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಮೃತ ಯುವತಿ ಪೂಜಾ ಹಾಗೂ ಕೂಡ್ಲೂರು ಗ್ರಾಮದ ಯುವಕ ಪವನ್ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ಪೋಷಕರು, ಯುವತಿಯನ್ನು ಸುಳ್ಯದ ಖಾಸಗಿ ಕಾಲೇಜಿಗೆ ಸೇರಿಸಿದ್ದರು. ಆದರೆ, ಪವನ್‌ ಪದೇ ಪದೇ ಪೂಜಾಳಿಗೆ ಕರೆ ಮಾಡುತ್ತಿದ್ದ. ಈ ವಿಚಾರವನ್ನು ಯುವತಿ ತನ್ನ ಪೋಷಕರಿಗೆ ತಿಳಿಸಿದ್ದರು. ಹೀಗಾಗಿ ಪೋಷಕರು ಮಗಳನ್ನು ಕಾಲೇಜು ಬಿಡಿಸಿ ಮನೆಯಲ್ಲೇ ಇರಿಸಿದ್ದರು.   ಮಾನಸಿಕವಾಗಿ ನೊಂದಿದ್ದ […]

ಶೀಘ್ರದಲ್ಲೇ ಹಾಲಿನ ದರ ಏರಿಕೆ : ಖಚಿತಪಡಿಸಿದ ಕೆಎಂಎಫ್‍ ಅಧ್ಯಕ್ಷ

  ನಂದಿನಿ ಹಾಲಿನ ದರ ಲೀಟರ್‍ ಗೆ 2 ರಿಂದ 3 ರೂಪಾಯಿ ಏರಿಕೆಯಾಗುವುದು ಖಚಿತವಾಗಿದೆ. ಈ ವಿಷಯವನ್ನು ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೇ ದೃಢಪಡಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಹಲವು ದಿನಗಳಿಂದ ನಂದಿನಿ ಹಾಲಿನ ದರ ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವನೆ ಮಹಾಮಂಡಳದ ಮುಂದಿತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಲೀಟರ್‍ ಗೆ 2 ರಿಂದ 3 ರುಪಾಯಿ ಹೆಚ್ಚಳವಾಗಲಿದೆ ಎಂದು ಅವರು […]

ಆಶ್ರಯ, ವಸತಿ ಶಾಲೆಗಳಲ್ಲಿ ಅಶ್ಲೀಲ ವಿಡಿಯೊ ಪ್ರದರ್ಶಿಸಲಾಗುತ್ತಿದೆ; ಪರಶುರಾಮ್ ದೂರು

 ಮೈಸೂರು: ಜಿಲ್ಲೆಯ ಹಲವು ಆಶ್ರಮ ಮತ್ತು ವಸತಿ ಶಾಲೆಗಳಲ್ಲಿ ಅಧ್ಯಾಪಕರಿಲ್ಲದೆ, ಮಕ್ಕಳಿಗೆ ಅಶ್ಲೀಲ ವಿಡಿಯೊ ತೋರಿಸಲಾಗುತ್ತಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮೈಸೂರು ವಲಯದ ಸದಸ್ಯ ಎಂ.ಎಲ್.ಪರುಶುರಾಮ್ ದೂರಿದರು.  ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವಿಭಾಗ ಮಟ್ಟದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆಶ್ರಮ, ವಸತಿ ಶಾಲೆ ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳ ಹಕ್ಕು ಉಲ್ಲಂಘನೆಯಾಗುವ ಕುರಿತು ಆಯೋಗಕ್ಕೆ ಕ್ಷೀರಸಾಗರ ಅವರು ೪೦ ಪುಟಗಳ ವರದಿ ಸಲ್ಲಿಸಿದರು.  ವರದಿ […]

ಸಚಿವ ಸ್ಥಾನ ಆಕಾಂಕ್ಷಿಗಳು ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ತಪ್ಪೇನಿಲ್ಲ; ಎಸ್.ಎ.ರಾಮದಾಸ್

 ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಅಪೇಕ್ಷೆ ಹೊಂದಿರುವವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ತಪ್ಪೇನಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಎ.ರಾಮದಾಸ್‍ ಹೇಳಿದರು.  ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ರಚನೆಯಲ್ಲಿ ಯಾವುದೇ ಕಗ್ಗಂಟು ಇಲ್ಲ. ಇದೊಂದು ಸ್ಪರ್ಧೆ ಇರುವ ಜಾಗ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ. ಎಲ್ಲಿ ಸೈಲೆಂಟ್ ಆಗಿ ಕೆಲಸ ಮಾಡುತ್ತಾರೋ ಅಲ್ಲಿ ಸಾಮರಸ್ಯ ಕಾಣುತ್ತೇವೆ. ಸಂಪುಟದಲ್ಲಿ ಅಪೇಕ್ಷೆ ವ್ಯಕ್ತಪಡಿಸುವವರು ಹೇಳಿಕೆ ನೀಡೋದರಲ್ಲಿ ತಪ್ಪೇನಿಲ್ಲ. ಯಡಿಯೂರಪ್ಪ ಅವರು […]