You cannot copy content of this page.
. . .

Day: January 14, 2020

ಕಳ್ಳತನ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿ ನೇಣಿಗೆ ಶರಣು

 ಮೈಸೂರು: ನ್ಯಾಯಾಲಯದಲ್ಲಿ ಕಳ್ಳತನ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.  ರಾಮನಗರ ಜಿಲ್ಲೆಯ ತಿಬ್ಬೇಗೌಡನದೊಡ್ಡಿಯ ನಿವಾಸಿ ನಾರಾಯಣ ನಾಯಕ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಈಚೆಗೆ ಮೈಸೂರಿಗೆ ಆಗಮಿಸಿ ಗಾಯತ್ರಿಪುರಂನಲ್ಲಿ ಬಾಡಿಗೆ ಮನೆಯಲ್ಲಿ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಇವರ ಮೇಲೆ ಬಿಡದಿ, ರಾಮನಗರ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿ, ಜೈಲಿಗೆ ಹೋಗಿ ಬಂದಿದ್ದರು. ವಿಚಾರಣೆಗಾಗಿ ನ್ಯಾಯಾಲಯಕ್ಕೆ ಅಲೆದು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ […]

ನಿರ್ಭಯಾ ಪ್ರಕರಣ; ಕ್ಷಮಾದಾನ ಕೋರಿ ಅಪರಾಧಿಯಿಂದ ಅರ್ಜಿ

 ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಪೈಕಿ ಒಬ್ಬರಾದ ಮುಖೇಶ್‍ ಸಿಂಗ್‍ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಹಾರ್ ಜೈಲ್‍ನ ಮೂಲಗಳು ತಿಳಿಸಿವೆ.  ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ದೆಹಲಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 14 ದಿನಗಳಲ್ಲಿ ಕಾನೂನು ಪರಿಹಾರ ಕಂಡುಕೊಳ್ಳಬಹುದು ಎಂದು ಕೋರ್ಟ್‍ ತಿಳಿಸಿತ್ತು. ನಾಲ್ವರು ಅಪರಾಧಿಗಳಲ್ಲಿ ಇಬ್ಬರು ಅಪರಾಧಿಗಳು (ಮುಖೇಶ್‍, ವಿನಯ್‍) ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿ (ಕ್ಯುರೇಟಿವ್‍ ಅರ್ಜಿ)ಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದ ನಾಲ್ವರು ಅಪರಾಧಿಗಳಿಗೆ […]

ಕಾಡಾನೆ ದಾಳಿಗೆ ಹಸು ಬಲಿ

 ಹುಣಸೂರು: ಕಾಡಾನೆ ದಾಳಿಯಿಂದ ಹಸುವೊಂದು ಸಾವನ್ನಪ್ಪಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹನಗೋಡು ಬಳಿಯ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.  ಹೆಬ್ಬಾಳ ಗ್ರಾಮದ ವೆಂಕಟೇಶ್‌ಶೆಟ್ಟಿ ಅವರಿಗೆ ಸೇರಿದ ಹಸು ಕಾಡಾನೆ ದಾಳಿಗೆ ಬಲಿಯಾಗಿದೆ. ಹಸುವನ್ನು ಮನೆ ಮುಂದೆ ಕಟ್ಟಿದ್ದ ಸಂದರ್ಭದಲ್ಲಿ ಕಿಕ್ಕೇರಿ ಕಟ್ಟೆ ಭಾಗದ ಕಲ್ಲುಮುಂಟಿ ಭಾಗದಿಂದ ಬಂದಿದ್ದ ಕಾಡಾನೆ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿದೆ.  ಸ್ಥಳಕ್ಕೆ  ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಆರ್‌ಎಫ್‌ಒ ಹನುಮಂತರಾಜು ಅವರು ಹಸುವಿನ ಮಾಲೀಕರಾದ ವೆಂಕಟೇಶ್ ಶೆಟ್ಟಿ ಅವರಿಗೆ […]

ಹಾಲು ಉತ್ಪಾದಕರಿಗೆ ಸಂಕ್ರಾಂತಿ ಬಂಪರ್: 2.50 ರೂ. ಏರಿಕೆ

   ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 2.50 ರೂಪಾಯಿ ಹೆಚ್ಚುವರಿಯಾಗಿ ನೀಡಲು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ತೀರ್ಮಾನಿಸಿದೆ.ಮಂಗಳವಾರ ನಡೆದ ಮೈಮುಲ್ ನ ಆಡಳಿತ ಮಂಡಳಿ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.   ಹೆಚ್ಚಳದ ನಂತರ ರೈತರಿಗೆ ಪ್ರತಿ ಲೀಟರ್‍ ಹಾಲಿಗೆ 28 ರೂಪಾಯಿ ನೀಡಲಾಗುತ್ತದೆ. ಆದರೆ ಗ್ರಾಹಕರಿಗೆ ನೀಡುವ ಹಾಲಿ ದರದ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಮಾತನಾಡಿರುವ ಮೈಮುಲ್ ಅಧ್ಯಕ್ಷ ಎಸ್.ಸಿದ್ದೇಗೌಡ, ರೈತರು […]

ಸರ್ಕಾರಿ ಶಾಲೆಯ ಕೊಠಡಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು; ಸುಟ್ಟು ಕರಕಲಾದ ದಾಖಲಾತಿಗಳು

 ನಂಜನಗೂಡು: ಮೂಲಭೂತ ಸೌಲಭ್ಯಗಳಿಲ್ಲದೆ ಹೆಣಗಾಡುತ್ತಿರುವ ಸರ್ಕಾರಿ ಶಾಲೆಯ ಕೊಠಡಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.  ಇಲ್ಲಿನ ರಾಷ್ಟ್ರಪತಿ ರಸ್ತೆಯಲ್ಲಿರುವ ಮುರಿದು ಬೀಳುವ ಸ್ಥಿತಿಯಲ್ಲಿರುವ ನಗರದ ಬಾಲಕರ ಪ್ರೌಢಶಾಲೆ ಕೊಠಡಿಗೆ ರಾತ್ರಿ ಬೆಂಕಿ ಹಚ್ಚಿದ್ದಾರೆ. ಒಂದಿಷ್ಟು ಕಸ-ಕಡ್ಡಿಗಳನ್ನು ಕಿಟಕಿಯ ಮುಖಾಂತರ ಒಳತೂರಿದ ದುಷ್ಕರ್ಮಿಗಳು ನಂತರ ಅದಕ್ಕೆ ಕಡ್ಡಿ ಗೀರಿರಬಹುದು ಎಂದು ಶಂಕಿಸಲಾಗಿದೆ.  ನಗರದ ಹೃದಯ ಭಾಗದಲ್ಲಿರುವ ವೃತ್ತ ನಿರೀಕ್ಷಕರ ಕಾರ್ಯಾಲಯ ಹಾಗೂ ಪಟ್ಟಣ ಠಾಣೆಗೆ ಹೊಂದಿಕೊಂಡಂತೆ ಇರುವ, ೭೭ ವರ್ಷಗಳ ಹಿಂದಿನ ಸರ್ಕಾರಿ ಬಾಲಕರ ಈ […]

ಜಾರಿ ನಿರ್ದೇಶನಾಲಯ ನೋಟಿಸ್: ಕೆ.ಜೆ.ಜಾರ್ಜ್‍ ಗೆ ಬಂಧನದ ಭೀತಿ

  ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕೆ.ಜೆ.ಜಾರ್ಜ್‌ ಹಾಗೂ ಅವರ ಕುಟುಂಬ ಸದಸ್ಯರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಜನವರಿ 16 ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.   ಡಿ.ಕೆ.ಶಿವಕುಮಾರ್ ಬಳಿಕ ಮತ್ತೊಬ್ಬ ಕಾಂಗ್ರೆಸ್ ಪ್ರಭಾವಿ ನಾಯಕರಿಗೆ ಇಡಿ ಸಂಕಷ್ಟ ಎದುರಾಗಿದೆ. ನವೆಂಬರ್‌ನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಜಾರಿ ನಿರ್ದೇಶನಾಲಯಕ್ಕೆ ಕೆ.ಜೆ.ಜಾರ್ಜ್ ಮತ್ತು ಕುಟುಂಬ ಸದಸ್ಯರ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅನ್ವಯ ಇಡಿ ಪ್ರಕರಣ ದಾಖಲು […]

ಕೌಟಿಲ್ಯ ವಿದ್ಯಾಲಯದಲ್ಲಿ ‘ಸಂಕ್ರಾಂತಿ’ ಸಂಭ್ರಮ

 ಮೈಸೂರು: ಕಬ್ಬಿನ ಜಲ್ಲೆ ಅಲಂಕಾರ, ಮಾವಿನ ತೋರಣ, ಗರಿಗರಿ ಸೀರೆಯನ್ನುಟ್ಟು ಪುಟ್ಟ ಮಕ್ಕಳು ಎಳ್ಳು-ಬೆಲ್ಲ ಹಂಚಿದರೆ. ಗಂಡುಮಕ್ಕಳು ಪೈಜಾಮು, ಪಂಚೆ ತೊಟ್ಟು ಹಸುಗಳಿಗೆ ತಿನ್ನಿಸಲು ಹುಲ್ಲು ತಂದರು… ಹೀಗೆ ಕೌಟಿಲ್ಯ ವಿದ್ಯಾಲಯದಲ್ಲಿ ಸಂಕ್ರಾಂತಿ ಸಡಗರ ಮನೆ ಮಾಡಿತ್ತು. ಇಲ್ಲಿ ಮಕ್ಕಳೇ ಹಬ್ಬ ಆಚರಿಸಿ ಸಂಭ್ರಮಿಸಿದರು.  ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಚಿಣ್ಣರು ಹಳ್ಳಿ ಸೊಗಡನ್ನು ಜೀವಂತಗೊಳಿಸಿದರು. ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ಸಂದೇಶ ಸಾರುವ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಿದರು.  ಸಂಕ್ರಾಂತಿ ದಿನದಂದೇ […]

ಎಂ.ಬಿ.ಪಾಟೀಲ್‍ ಪರ ಸಿದ್ದರಾಮಯ್ಯ ಲಾಬಿ

  ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರವಾಗಿ ದೆಹಲಿಯಲ್ಲಿ ಭಾರೀ ಕಸರತ್ತು ನಡೆಯುತ್ತಿದೆ. ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಅವರು, ಎಂ.ಬಿ.ಪಾಟೀಲ್‍ ಪರ ಲಾಬಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.   ಇಂದು ಬೆಳಗ್ಗೆ ರಾಜ್ಯ ಕಾಂಗ್ರೆಸ್‍ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ, ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ಅನಂತರ ಅಹಮದ್‍ ಪಟೇಲ್‍ ರನ್ನು ಭೇಟಿಯಾಗಿ ಎಂ.ಪಿ.ಪಾಟೀಲ್‍ ಗೆ ಕೆಪಿಸಿಸಿ ಪಟ್ಟ ಕಟ್ಟುವಂತೆ ಮನವಿ ಮಾಡಿದರು ಎಂದು ಹೇಳಲಾಗುತ್ತಿದೆ. ಇದೀಗ ಸಿದ್ದರಾಮಯ್ಯ ಅವರು ಸೋನಿಯಾ […]

ರೈತರಿಂದ ಟ್ರ್ಯಾಕ್ಟರ್ ಜಪ್ತಿ ಮಾಡುವುದನ್ನು ನಿಲ್ಲಿಸಿ; ಬಡಗಲಪುರ ನಾಗೇಂದ್ರ

 ಮೈಸೂರು: ಪಿಎಲ್‌ಡಿ ಬ್ಯಾಂಕ್‌ಗಳು ರೈತರಿಂದ ಬಲವಂತವಾಗಿ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡುತ್ತಿರುವುದು ಖಂಡನೀಯ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಕೇಂದ್ರಗಳ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋರಾಟ ನಡೆಸಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಹಾಗೂ ಜಲಪ್ರಳಯದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಈ ಸಂದಿಗ್ಧತೆಯಲ್ಲೂ ಬಲವಂತವಾಗಿ ರೈತರಿಂದ ಸಾಲ ವಸೂಲಿ ಮಾಡಬಾರದು ಎಂದು ಈ ಹಿಂದಿನ […]

ಕೋರ್ಟ್‍ ಆವರಣದಲ್ಲಿ ನಳಿನಿ ಕೂಗಾಟ; ಮನೆಗೆ ಎಳೆದೊಯ್ದ ತಾಯಿ

 ವಕಾಲತ್ತು ಹಾಕದಿರಲು ಮೈಸೂರು ವಕೀಲರ ಸಂಘ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಫ್ರೀ ಕಾಶ್ಮೀರ ಭಿತ್ತಿಪತ್ರ ಹಿಡಿದು ಸುದ್ದಿಯಾಗಿದ್ದ ನಳಿನಿ ಕೋರ್ಟ್‍ ಮುಂದೆ ಹೈಡ್ರಾಮಾ ಮಾಡಿದ್ದಾರೆ. ನೋ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದ ನಳಿನಿ, ಈ ವೇಳೆ ತನ್ನ ಪರ ವಕಾಲತ್ತು ವಹಿಸದಿರಲು ವಕೀಲರು ತೀರ್ಮಾನಿಸಿರುವ ವಿಚಾರ ತಿಳಿದು, ನೋ ಹ್ಯೂಮಾನಿಟಿ ಎಂದು ಕೂಗಾಡಿದ್ದಾರೆ.   ನಂತರ ಮಾಧ್ಯಮಗಳ ಜತೆ ನಳಿನಿ ಮಾತನಾಡಲು ಮುಂದಾದರು. ಆದರೆ ಇದಕ್ಕೆ ನಳಿನಿ ತಾಯಿ ಅವಕಾಶ ನೀಡಲಿಲ್ಲ. ನಳಿನಿಯವರನ್ನು ಬಲವಂತವಾಗಿ ಅವರ ತಾಯಿ ಮನೆಗೆ […]