You cannot copy content of this page.
. . .

Day: January 13, 2020

ಮಹಿಳೆ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿ

 ಮೈಸೂರು: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ ೧ ಲಕ್ಷ ರೂ. ಮೌಲ್ಯದ ೪೦ ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.  ನಗರದ ರಾಮಕೃಷ್ಣನಗರ ನಿವಾಸಿ ಪಾರ್ವತಿ ಎಂಬವರೇ ದುಷ್ಕರ್ಮಿಗಳ ದಾಳಿಗೊಳಗಾಗಿ ಚಿನ್ನದ ಸರ ಕಳೆದುಕೊಂಡವರು. ಅವರು ಶುಕ್ರವಾರ ಸಂಜೆ ೪ ಗಂಟೆ ವೇಳೆಯಲ್ಲಿ ಮನೆಗೆ ತೆರಳುವ ಸಲುವಾಗಿ ರಾಮಕೃಷ್ಣನಗರದ ರೂಬಿ ಬೇಕರಿಯ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅಪರಿಚಿತ ಬೈಕ್ ಸವಾರನೊಬ್ಬ ಎದುರಾಗಿದ್ದಾನೆ. ಕೂಡಲೇ […]

ಮುಷರಫ್ ಮರಣದಂಡನೆ ಶಿಕ್ಷೆ ರದ್ದುಗೊಳಿಸಿದ ಕೋರ್ಟ್

   ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷಾರಫ್ ಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಪಾಕ್ ನ್ಯಾಯಾಲಯ ರದ್ದುಗೊಳಿಸಿದೆ. ಮುಷರಫ್ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ರಚಿಸಲಾಗಿದ್ದ ವಿಶೇಷ ನ್ಯಾಯಮಂಡಳಿಯೇ ಅಸಂವಿಧಾನಿಕ ಎಂದು ಲಾಹೋರ್ ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಶಿಕ್ಷೆಯನ್ನೇ ರದ್ದುಗೊಳಿಸಿ ಆದೇಶ ಹೊರಡಿಸಿದೆ. ನ್ಯಾ. ಸಯದ್ ಮಜಹರ್ ಅಲಿ ಅಕ್ಬರ್ ನಖ್ವಿ, ನ್ಯಾ. ಮೊಹಮ್ಮದ್ ಅಮೀರ್ ಭಟ್ಟಿ ಮತ್ತು ನ್ಯಾ. ಚೌಧರಿ ಮಸೂದ್ ಜಹಾಂಗೀರ್ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು ಈ ಮಹತ್ವದ ತೀರ್ಪು ನೀಡಿದೆ.   ಪಾಕಿಸ್ತಾನದಿಂದ […]

ಕೆಪಿಸಿಸಿ ಸಾರಥಿ ನಾಳೆ ಅಂತಿಮ?

 ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‍ ಜೊತೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಿದ್ದಾರೆ.  ನಾಳೆ (ಮಂಗಳವಾರ) ಇದೇ ವಿಚಾರವಾಗಿ ಹೈಕಮಾಂಡ್‍ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬ ವಿಚಾರ ನಾಳೆಗೆ ಅಂತಿಮವಾಗುವ ಸಾಧ್ಯತೆ ಇದೆ.  ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅನರ್ಹ ಶಾಸಕರ ಸ್ಥಾನಗಳಿಗೆ ಈಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‍ ಮತ್ತು ಜೆಡಿಎಸ್‍ಗೆ ತೀವ್ರ ಮುಖಭಂಗವಾಗಿಯಿತು. ತಮ್ಮ ಪಕ್ಷದ ಸೋಲಿನ ನೈತಿಕ ಹೊಣೆ […]

ಚಿಲ್ಲರೆ ಹಣದುಬ್ಬರ 7.35ಕ್ಕೆ ಏರಿಕೆ: ದೇಶದ ಆರ್ಥಿಕತೆ ಗಂಭೀರ

  ಕೇಂದ್ರೀಯ ಸಾಂಖ್ಯಿಕ ಕಚೇರಿ ಇಂದು ದೇಶದ ಆರ್ಥಿಕತೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಚಿಲ್ಲರೆ ಹಣದುಬ್ಬರ 2019ರ ಡಿಸೆಂಬರ್‌ನಲ್ಲಿ ಶೇ.7.35ಕ್ಕೆ ಏರಿಕೆಯಾಗಿದೆ. ಇದು ಕಳೆದ 6 ವರ್ಷಗಳಲ್ಲೇ ಅತಿ ಹೆಚ್ಚು ಎಂದು ತಿಳಿದುಬಂದಿದೆ.   ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಚಿಲ್ಲರೆ ಹಣದುಬ್ಬರ 6 ವರ್ಷಗಳಲ್ಲಿ ಗರಿಷ್ಟ ಮಟ್ಟ ತಲುಪಿದೆ. ಈ ಹಿಂದೆ 2016ರ ಜುಲೈನಲ್ಲಿ ಶೇ.6.07 ರಷ್ಟು ದಾಖಲಾಗಿತ್ತು. 2019ರ ನವೆಂಬರ್‌ನಲ್ಲಿ ಶೇ.5.54ರಷ್ಟಿತ್ತು. ಆದರೆ 2019ರ ಡಿಸೆಂಬರ್‍ ತಿಂಗಳಲ್ಲಿ ಅದು […]

ಇನ್ಮುಂದೆ ಯಾವುದೇ ಎಟಿಎಂನಲ್ಲೂ ಹಣ ಜಮೆ ಮಾಡಬಹುದು..!

   ಈಗ ನಮ್ಮ ಬ್ಯಾಂಕ್‍ ಖಾತೆಗೆ ನಗದು ಜಮೆ ಮಾಡಬೇಕೆಂದರೆ ಯಾವ ಬ್ಯಾಂಕ್‍ ನಲ್ಲಿ ಖಾತೆ ಹೊಂದಿದ್ದೇವೆಯೋ ಅದೇ ಬ್ಯಾಂಕ್‍ ಗೆ ಸೇರಿದ ಹಣ ಪಾವತಿ ಯಂತ್ರವನ್ನು ಹುಡುಕಿಕೊಂಡು ಹೋಗಬೇಕು. ಆದರೆ ಇನ್ಮುಂದೆ ಆ ಸಂಕಷ್ಟ ಇರುವುದಿಲ್ಲ. ಯಾವುದೇ ಬ್ಯಾಂಕಿನ ಹಣ ಜಮೆ ಮಾಡುವ ಯಂತ್ರದಲ್ಲೂ ಹಣ ಜಮೆ ಮಾಡೋದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಸಮೀಪದ ಯಾವುದೇ ಬ್ಯಾಂಕ್‌ ಶಾಖೆಗಳು ಅಥವಾ ಎಟಿಎಂಗಳಲ್ಲಿರುವ ಹಣ ಜಮೆ ಮಾಡುವ ಯಂತ್ರಗಳಲ್ಲಿ ಯಾವುದೇ ಬ್ಯಾಂಕಿನ ಗ್ರಾಹಕರಾದರೂ ಹಣ ಕಟ್ಟುವ ಅವಕಾಶ ಇದು. […]

ಪೊಲೀಸ್ ಭದ್ರತೆ ಇಲ್ಲದೆ ಯುವಜನತೆ ಮುಂದೆ ಹೋಗಿ ಮೋದಿ ಮಾತನಾಡಲಿ; ರಾಹುಲ್ ಗಾಂಧಿ ಸವಾಲು

 ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯವಿದ್ದರೆ ಯಾವುದೇ ಪೊಲೀಸ್‍ ಭದ್ರತೆ ಇಲ್ಲದೇ ‘ನಾನು ಈ ದೇಶಕ್ಕಾಗಿ ಏನು ಮಾಡುತ್ತಿದ್ದೇನೆ’ ಎಂಬ ವಿಚಾರವನ್ನು ವಿದ್ಯಾರ್ಥಿಗಳ ಹಾಗೂ ಜನರ ಮುಂದೆ ಹೋಗಿ ಹೇಳಲಿ ಎಂದು ಕಾಂಗ್ರೆಸ್‍ ನಾಯಕ ರಾಹುಲ್‍ ಗಾಂಧಿ ಸವಾಲು ಹಾಕಿದರು.  ವಿರೋಧ ಪಕ್ಷಗಳೊಂದಿಗೆ ಸಿಎಎ, ಎನ್‍ಆರ್‍ಸಿ ಸಂಬಂಧ ಚರ್ಚೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕೆ ಭಾರತದ ಆರ್ಥಿಕತೆ ಸಂಕಷ್ಟದಲ್ಲಿದೆ ಎಂಬ ವಿಚಾರವನ್ನು ಮೋದಿ ಅವರು ವಿದ್ಯಾರ್ಥಿಗಳಿಗೆ ಹೇಳುವ ಧೈರ್ಯ ಮಾಡಬೇಕು. ವಿದ್ಯಾರ್ಥಿಗಳ ಮುಂದೆ ನಿಲ್ಲುವ […]

ಸಚಿವ ಸ್ಥಾನಕ್ಕಾಗಿ ಕಾದು ನೋಡುತ್ತೇನೆ: ಎಚ್‍.ವಿಶ್ವನಾಥ್

  ಮುಖ್ಯಮಂತ್ರಿಗಳು ಏನೇ ಹೇಳಿದರೂ ಸಚಿವ ಸ್ಥಾನ ಕೇಳುವುದು ನಮ್ಮ ಕರ್ತವ್ಯ. ರಾಜೀನಾಮೆ ನೀಡಿದ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.   ದೇವದುರ್ಗ ತಾಲೂಕು ತಿಂಥಿಣಿಯ ಕನಕಗುರುಪೀಠದಲ್ಲಿ ಮಾತನಾಡಿದ ಅವರು, ಒಂದು ಸರ್ಕಾರ ಪತನವಾಗುವುದಕ್ಕೆ ಹಾಗೂ ಬಿಜೆಪಿ ಸರ್ಕಾರ ರಚನೆ ಆಗುವುದರ ಹಿಂದೆ 17 ಶಾಸಕರ ತ್ಯಾಗ ಇದೆ. ಅದಕ್ಕಾಗಿಯೇ ಆಗ್ರಹಪೂರ್ವಕ ವಿನಂತಿ ಮಾಡುತ್ತಿದ್ದೇವೆ. ಒಂದು ವೇಳೆ ಕೊಡದೇ ಇದ್ದರೆ ಮುಂದೆ ಕಾದು ನೋಡುತ್ತೇವೆ ಎಂದರು. […]

ಬಿಎಸ್‌ವೈ ಆದಷ್ಟು ಬೇಗ ಅವರನ್ನು ತೃಪ್ತಿ ಪಡಿಸಲಿ; ವಿಶ್ವನಾಥ್‌ಗೆ ಸಾರಾ ಟಾಂಗ್

 ಮೈಸೂರು: ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಿಂದ ತಮಗೆ ತೃಪ್ತಿ ಆಗುತ್ತಿಲ್ಲ ಎಂದು ಹೋಗಿದ್ದರು. ಈಗ ಬಿ.ಎಸ್.ಯಡಿಯೂರಪ್ಪ ಅವರು ಇವರನ್ನು ಎಷ್ಟು ತೃಪ್ತಿ ಪಡಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್‍ ಅವರಿಗೆ ಶಾಸಕ ಸಾ.ರಾ.ಮಹೇಶ್‍ ಪರೋಕ್ಷವಾಗಿ ಟಾಂಗ್ ನೀಡಿದರು.  ಆದಷ್ಟು ಬೇಗ ಬಿ.ಎಸ್.ಯಡಿಯೂರಪ್ಪ ಅವರು ಇವರನ್ನು ತೃಪ್ತಿಪಡಿಸಲಿ ಎಂದು ಕುಟುಕಿದರು.  ಅಡಗೂರು ಎಚ್.ವಿಶ್ವನಾಥ್‍ ಅವರು ಮೈತ್ರಿ ಸರ್ಕಾರ ತಮ್ಮನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಲಿಲ್ಲ. […]

ಮದುವೆಯಲ್ಲಿ DUSTBIN ಉಡುಗೊರೆ, ಇಲ್ಲಿ ಮಕ್ಕಳೇ ಸ್ವಚ್ಛತಾ ರಾಯಭಾರಿಗಳು..!

  ಇಲ್ಲಿ ಮಕ್ಕಳೇ ಸ್ವಚ್ಛತೆಯ ರಾಯಭಾರಿಗಳು. ಪ್ರತಿ ಮನೆಯಲ್ಲೂ ಹಸಿ ಕಸ, ಒಣ ಕಸ ಬೇರ್ಪಡಿಸಿ ಇಡಲಾಗುತ್ತದೆ. ಪ್ರತಿದಿನ ಕಸ ವಿಲೇವಾರಿ ನಡೆಯುತ್ತದೆ. ಮದುವೆಯಲ್ಲಿ ಡಸ್ಟ್ಬಿನ್‌ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ! ಇದು ಮಧ್ಯಪ್ರದೇಶದ ಇಂಧೋರ್‌ನ ಚಿತ್ರಣ. ಕಳೆದ ಮೂರು ಬಾರಿಯಿಂದ ಸತತವಾಗಿ ಸ್ವಚ್ಛ ನಗರಿ ಪಟ್ಟ ಪಡೆಯುತ್ತಾ ಬಂದಿರುವ ಮಧ್ಯಪ್ರದೇಶದ ಇಂಧೋರ್ ನಗರದಲ್ಲಿ ನಾವೂ ಊಹಿಸಲೂ ಆಗದ ಸರಳ ವಿಧಾನಗಳನ್ನು ಬಳಸಿಕೊಂಡು ಸ್ವಚ್ಛತೆ ಕಪಾಡಿಕೊಳ್ಳಲಾಗುತ್ತಿದೆ. ಅಲ್ಲಿನ ನಗರಪಾಲಿಕೆಯೊಂದಿಗೆ ಜನರು ಕೈಜೋಡಿಸಿ ತಮ್ಮ ನಗರವನ್ನು ಸ್ವಚ್ಛವಾಗಿರಿಸಿಕೊಂಡಿದ್ದಾರೆ. ಇಂಧೋರ್ ೧೯ -೨೦ […]

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ; ಜ.17ಕ್ಕೆ ವಕೀಲರ ಸಭೆ

 ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಎಲ್ಲಾ ವಕೀಲರು ಸಭೆ ನಡೆಸಿ ಚರ್ಚಿಸಿ ತೀರ್ಮಾನಕ್ಕೆ ಬರುವಂತೆ ಸುಪ್ರೀಂ ಕೋರ್ಟ್‍ ಹೇಳಿದೆ. ಅಲ್ಲದೆ ಹಿಂದಿನ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಎತ್ತಿರುವ 7 ಪ್ರಶ್ನೆಗಳನ್ನು ಪರಿಗಣಿಸಲಾಗುವುದು ಎಂದು ಕೂಡ ಹೇಳಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತ ಉಲ್ಲೇಖ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ  9 ನ್ಯಾಯಾಧೀಶರ ವಿಸ್ತ್ರೃತ ಪೀಠ ಇಂದು ವಿಚಾರಣೆ ನಡೆಸಿತು.   ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ 9 ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡು, […]