You cannot copy content of this page.
. . .

Day: January 12, 2020

ಬಿಳಿಗಿರಿರಂಗನಬೆಟ್ಟದ ಕೆ.ಗುಡಿಯಲ್ಲಿ ವಾಸ್ತವ್ಯ ಹೂಡಿರುವ ನಿವೃತ್ತ ಸಿಜೆಐ ರಂಜನ್ ಗೊಗೊಯಿ

 ಚಾಮರಾಜನಗರ: ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭಾನುವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.  ನಗರದ ರಾಮಸಮುದ್ರದಲ್ಲಿನ ಹರಳುಕೋಟೆ ಆಂಜನೇಯ ದೇಗುಲಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ ರಂಜನ್ ಗೊಗೊಯಿ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ರಂಜನ್ ಗೊಗೊಯಿ ಅವರು ಭಾನುವಾರ ಸಂಜೆ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿ ಕೆ.ಗುಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆ ಸುತ್ತೂರು ಶ್ರೀಗಳಿಂದ ಆಶೀರ್ವಚನ ಪಡೆಯಲಿರುವ ನಿವೃತ್ತ ಸಿಜೆಐ […]

ವಿದ್ಯುತ್ ತಂತಿ ತುಳಿದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

 ಚಾಮರಾಜನಗರ: ಜಮೀನಿನಲ್ಲಿ ಕಳಚಿ ಬಿದ್ದಿದ್ದ ವಿದ್ಯುತ್ ಸಂಚಾರವುಳ್ಳ ತಂತಿಯನ್ನು ತುಳಿದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.  ಗ್ರಾಮದ ಪುಟ್ಟಬುದ್ಧಿ ಅವರ ಪುತ್ರ ಮಹೇಂದ್ರ ಅ.ಮದನ್ (೨೧) ಮೃತಪಟ್ಟಿದ್ದು, ನಾಗಮಂಗಲದ ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ರಜೆ ಇದ್ದುದರಿಂದ ಊರಿಗೆ ಬಂದಿದ್ದರು. ಮಧ್ಯಾಹ್ನ ಜಮೀನಿನಿಂದ ತೋಟದಲ್ಲಿರುವ ತಮ್ಮ ಮನೆಗೆ ಊಟ ಮಾಡಲು ಹೋಗುತ್ತಿದ್ದಾಗ ಮಾರ್ಗ ಮಧ್ಯದ ಜಮೀನಿನಲ್ಲಿ ಅಗೋಚರವಾಗಿ ಕಳಚಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. […]

ವಿದ್ಯುತ್ ಕಳ್ಳತನ; ಅಪರಾಧಕ್ಕೆ 2 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

 ವಿದ್ಯುತ್‍ ಲೈನ್‍ನಿಂದ ಅನಧಿಕೃತವಾಗಿ ವೈರ್ ನ್ನು ಎಳೆದುಕೊಂಡು ತಮ್ಮ ಜಮೀನಿನ ಪಂಪ್‍ಸೆಟ್‍ಗೆ ಸಂಪರ್ಕ ಕಲ್ಪಿಸಿಕೊಂಡು ವಿದ್ಯುತ್‍ ಕಳ್ಳತನ ಮಾಡುತ್ತಿದ್ದ ವ್ಯಕ್ತಿಗೆ ಹುಣಸೂರಿನ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ಲಕ್ಷ ರೂ. ದಂಡ ವಿಧಿಸಿದೆ.  ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಎಂ.ಕನ್ನೇನಹಳ್ಳಿ ನಿವಾಸಿಗಳಾದ ಚಿಕ್ಕಮಾದಯ್ಯ ಮತ್ತು ಅವರ ಮಗ ಬಸವರಾಜು (ಇಬ್ಬರಿಗೂ) ಅವರಿಗೆ ದಂಡ ವಿಧಿಸಲಾಗಿದೆ. ಇವರು ತಮ್ಮ ಜಮೀನಿನಲ್ಲಿ ಅನಧಿಕೃತವಾಗಿ ಇಟ್ಟಿಗೆ ತಯಾರಿಸುವ ಘಟಕ ಸ್ಥಾಪಿಸಿಕೊಂಡಿದ್ದರು. ಅದಕ್ಕೆ ಬೇಕಾದ ನೀರಿಗಾಗಿ ಬೋರ್‍ವೆಲ್‍ನಿಂದ ನೀರು […]

‘ಸಿಎಎ’ ಪರ ಜಾಗೃತಿ; ಮೈಸೂರಿನಲ್ಲಿ ಪೋಸ್ಟ್ ಕಾರ್ಡ್ ಅಭಿಯಾನ

 ಮೈಸೂರೂ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರವಾಗಿ ಮುಸ್ಲಿಮರಲ್ಲಿ ನೆಲೆಸಿರುವ ಆತಂಕ ಹೋಗಲಾಡಿಸುವ ಉದ್ದೇಶದಿಂದ ನಗರದ ವಿವೇಕಾನಂದ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು.  ಕೃಷ್ಣರಾಜ ಕ್ಷೇತ್ರದ 270 ಬೂತ್‌ಗಳಲ್ಲೂ ಪೋಸ್ಟ್ ಕಾರ್ಡ್ ಅಭಿಯಾನದಲ್ಲಿ ಸಿಎಎ ಬೆಂಬಲಿಸಿ ಸಾರ್ವಜನಿಕರಿಂದ 1 ಲಕ್ಷ ಅಂಚೆ ಪತ್ರಗಳನ್ನು ಸಲ್ಲಿಸಲಾಯಿತು. ನಂತರ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಂ ಬಂಧುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು. ಇದೇ ವೇಳೆ […]

ಚಾಮರಾಜನಗರದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

 ಕೇರಳ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಆಧಾರಿಸಿ ಚಾಮರಾಜನಗರದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.  ಚಾಮರಾಜನಗರ ಜಿಲ್ಲಾ ಪೊಲೀಸರು, ಆಂತರಿಕ ಭದ್ರತಾ ದಳ, ಭಯೋತ್ಪಾದಕ ನಿಗ್ರಹ ದಳದಿಂದ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಕೇರಳ ಉಗ್ರರೊಂದಿಗೆ ದೂರವಾಣಿ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಶಂಕಿತ ಉಗ್ರರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂದ ಗುಂಡ್ಲುಪೇಟೆ ಪೊಲೀಸ್‍ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.  ಇವರು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯದಲ್ಲಿ […]

ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡಿದ ಕಾಡಾನೆ ಓಡಿಸಲು ಹರಸಾಹಸಪಟ್ಟ ಗ್ರಾಮಸ್ಥರು

 ಮೈಸೂರು: ಇಲ್ಲಿನ ಸರಗೂರು ತಾಲ್ಲೂಕಿನ ಹೆಗ್ಗೂಡಿಲು ಗ್ರಾಮದಲ್ಲಿ ಜಮೀನೊಂದಕ್ಕೆ ನುಗ್ಗಿ ಬೆಳೆ ಹಾನಿ ಮಾಡಿದ ಕಾಡಾನೆಯನ್ನು ಓಡಿಸಲು ಗ್ರಾಮಸ್ಥರು ಹರಸಾಹಸಪಟ್ಟರು.  ನುಗು ಜಲಾಶಯದ ಹಿನ್ನೀರಿನ ಪ್ರದೇಶದಿಂದ ಬಂದ ಕಾಡಾನೆ, ಸಂಪಾಗಿ ಬೆಳೆದಿದ್ದ ರಾಗಿ ಬೆಳೆಯನ್ನು ತಿಂದು ನಂತರ ಫಸಲನ್ನು ತುಳಿದು ಹಾನಿ ಮಾಡಿ ಜಮೀನನಲ್ಲಿ ಗಂಟೆಗಂಟೆಲೆ ನಿಂತುಕೊಂಡಿದೆ. ಆನೆಯನ್ನು ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸ್ಥಳಕ್ಕೆ ಆಗಮಿಸಿದ ವಾಚರ್‍ ಆನೆ ಓಡಿಸಲು ಗನ್ ತೆಗೆದುಕೊಂಡ ಬಾರದೇ ಬರಿಗೈಯಲ್ಲಿ ಬಂದಿದ್ದರು. ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು.

‘ಫ್ರೀ ಕಾಶ್ಮೀರ’; ಯುವತಿ ವಿರುದ್ಧ ದಾಖಲಾಗಿರುವ ಪ್ರಕರಣ ಹಿಂಪಡೆಯಲು ದಸಂಸ ಆಗ್ರಹ

 ಮೈಸೂರು: ಮೈಸೂರು ವಿ.ವಿ ಮಾನಸಗಂಗೋತ್ರಿಯಲ್ಲಿ ಜೆಎನ್‍ಯು ದಾಂದಲೆ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ ಯುವತಿ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ದಲಿತ ಸಂಘರ್ಷ ಸಮಿತಿ ಮನವಿ ಮಾಡಿದೆ.    ಭಾನುವಾರ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಸಂಘ ಪರಿವಾರದ ಅಂಗ ಸಂಸ್ಥೆಯಾದ ಎಬಿವಿಪಿ ಗೂಂಡಾಗಳು ಜೆಎನ್‌ಯುನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯ ಹಲವಾರು ವಿದ್ಯಾರ್ಥಿ ಸಂಘಟನೆಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದವು. […]

ಮೂಗೂರು ಜಾತ್ರೆಯಲ್ಲಿ ಯುವಕರ ಮೇಲೆ ಹರಿದ ಗಾಡಿ ಚಕ್ರ..

 ಮೂಗೂರು ಜಾತ್ರೆಯಲ್ಲಿ ಬಂಡಿ ಹಿಡಿಯುವ ವೇಳೆ ಕೆಳಗೆ ಬಿದ್ದ ಇಬ್ಬರು ಯುವಕರ ಮೇಲೆ ಗಾಡಿ ಚಕ್ರ ಹರಿದು ಗಾಯಗೊಂಡಿದ್ದಾರೆ.  ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಮೂಗುರು ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ರವಿಕುಮಾರ್ (28), ಮಹೇಶ್ (27) ಗಾಯಗೊಂಡಿದ್ದಾರೆ. ಬಂಡಿ ಹಿಡಿಯಲು ಹೋಗಿ ಇಬ್ಬರೂ ಕೆಳಕ್ಕೆ ಬಿದ್ದು ಗಾಡಿ ಚಕ್ರಕ್ಕೆ ಸಿಲುಕಿದ ದೃಶ್ಯ ಮೊಬೈಲ್‌ನಲ್ಲಿ ಸೆರೆ. ಸ್ಥಳೀಯರು ತಕ್ಷಣ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

‘ಸ್ವಮತ ದುರಭಿಮಾನ, ಅನ್ಯಮತ ದ್ವೇಷದಿಂದ ಜಗತ್ತು ಕುರೂಪ’; ವಿವೇಕಾನಂದರ ಚಿಂತನೆ ಸ್ಮರಿಸಿದ ಸಿದ್ದರಾಮಯ್ಯ

 ‘ಸ್ವಮತ ದುರಾಭಿಮಾನ ಮತ್ತು ಅನ್ಯಮತದ್ವೇಷದಿಂದ ಹುಟ್ಟಿಕೊಂಡ ಧಾರ್ಮಿಕ ಸಂಘರ್ಷ ಈ ಸುಂದರ ಜಗತ್ತನ್ನು ಕುರೂಪಗೊಳಿಸಿದೆ. ಮನುಕುಲದ ಮುನ್ನಡೆಗೆ ಅಡ್ಡಿಯಾಗಿರುವ ಉಗ್ರ ಧರ್ಮಾಂಧತೆಯನ್ನು ತಿರಸ್ಕರಿಸೋಣ’ ಎಂಬ ಸ್ವಾಮಿ ವಿವೇಕಾನಂದರ ಚಿಂತನೆಯನ್ನು ಸ್ಮರಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‍ ಮಾಡಿದ್ದಾರೆ.  ಸ್ವಾಮಿ ವಿವೇಕಾನಂದ 157ನೇ ಜನ್ಮದಿನೋತ್ಸವ ಪ್ರಯುಕ್ತ ‘ರಾಷ್ಟ್ರೀಯ ಯುವದಿನದ’ ಶುಭಾಷಯ ಕೋರಿ ಟ್ವೀಟ್‍ ಮಾಡಿದ್ದಾರೆ. 

ಸಿಎಎ ಪೌರತ್ವ ಕೊಡುವ ಕಾಯ್ದೆಯೇ ಹೊರತು, ರದ್ದುಪಡಿಸುವ ಕಾಯ್ದೆಯಲ್ಲ; ನರೇಂದ್ರ ಮೋದಿ

 ಸಿಎಎ ಪೌರತ್ವ ಕೊಡುವ ಕಾಯ್ದೆಯೇ ಹೊರತು, ಹಿಂಪಡೆಯುವ ಕಾಯ್ದೆಯಲ್ಲ. ಪಾಕಿಸ್ತಾನದಲ್ಲಿ ತೊಂದರೆ ಅನುಭವಿಸುತ್ತಿರುವ ಅಲ್ಪಸಂಖ್ಯಾತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕಾಯ್ದೆ ಜಾರಿ ಮಾಡಿದ್ದೇವೆ. ಯಾರ ಪೌರತ್ವಕ್ಕೂ ಧಕ್ಕೆ ತರುವ ಉದ್ದೇಶ ಇಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ಬೇಲೂರು ಮಠದಲ್ಲಿ (ರಾಮಕೃಷ್ಣ ಮಿಷನ್) ಭಾನುವಾರ ಭಾಷಣ ಮಾಡಿದ ಅವರು, ಪೌರತ್ವ ಕಾಯ್ದೆ ವಿಚಾರದಲ್ಲಿ ಹಲವು ಯುವಜನರನ್ನು ದಾರಿ ತಪ್ಪಿಸಲಾಗಿದೆ. ಸಿಎಎ ಜಾರಿಗೆ ತರುವ ಅಗತ್ಯದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಬೇಕಾದ್ದು ನಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ. […]