You cannot copy content of this page.
. . .

Day: January 11, 2020

ಪ್ರಧಾನಿಯಿಂದ ಸಂವಿಧಾನಕ್ಕೆ ಗುಂಡು ಹಾರಿಸುವ ಕೆಲಸ: ದೇಮ

  ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಂವಿಧಾನಕ್ಕೆ ನಮಸ್ಕರಿಸಿದ್ದ ಪ್ರಧಾನಿಯವರು ಈಗ ಅದೇ ಸಂವಿಧಾನಕ್ಕೆ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಹಿತಿ ದೇವನೂರ ಮಹಾದೇವ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಪ್ರಗತಿಪರ ಜನಾಂದೋಲನಾ ಸಮಿತಿಯಿಂದ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ಕಾಲಿಗೆ ನಮಸ್ಕರಿಸಿದ್ದ ಗೋಡ್ಸೆ, ನಂತರ ಅವರ ಎದೆಗೇ ಗುಂಡು ಹಾರಿಸಿದ್ದ. ಅದೇ ರೀತಿ ಪ್ರಧಾನಿಯೂ ಅತ್ತ ನಮಸ್ಕರಿಸಿ ಇತ್ತ ಗುಂಡು ಹಾರಿಸುತ್ತಿದ್ದಾರೆ ಎಂದು ಹೇಳಿದರು.   ಸ್ವಾತಂತ್ರ್ಯನಂತರದ […]

ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಪಡೆಯಲು ಸಿದ್ಧ: ಸೇನಾ ಮುಖ್ಯಸ್ಥ

  ಕೇಂದ್ರ ಸರ್ಕಾರ ಆದೇಶ ನೀಡಿದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯಲು ನಾವು ಸಿದ್ಧವಿದ್ದೇವೆ ಎಂದು ಸೇನಾ ಮುಖ್ಯಸ್ಥ ಮುಕುಂದ್ ನರವಾಣೆ ತಿಳಿಸಿದ್ದಾರೆ. ಪಿಒಕೆಯನ್ನು ವಶಪಡಿಸಿಕೊಳ್ಳಲು ಭಾರತೀಯ ಸೇನೆ ಸಿದ್ಧವಿದೆ. ಸಂಸತ್ ಅದನ್ನು ಬಯಸಿದರೆ ಪಿಒಕೆಯೂ ನಮಗೆ ಸೇರಬೇಕು. ಈ ನಿಟ್ಟಿನಲ್ಲಿ ಆದೇಶ ಬಂದರೆ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.   ರಕ್ಷಣಾ ಪಡೆ ಮುಖ್ಯಸ್ಥರ ಹುದ್ದೆ ರಚನೆ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಗಳನ್ನು ಸ್ಥಾಪಿಸಿರುವುದು ಭಾರತೀಯ ಸೇನೆಯೊಳಗೆ ಸಮನ್ವಯತೆ ವಿಚಾರದಲ್ಲಿ ಬಹಳ ದೊಡ್ಡ […]

ವಿಶ್ವನಾಥ್ ಅಳಿಯನ ಎತ್ತಂಗಡಿ: ಶಾಕ್ ಕೊಟ್ಟ ಸರ್ಕಾರ

ಹುಣಸೂರಿನ ಪರಾಜಿತ  ಬಿಜೆಪಿ ಅಭ್ಯರ್ಥಿ ಎಚ್‍.ವಿಶ್ವನಾಥ್‍ ಅಳಿಯನನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ್‍ ಶಾಕ್‍ ನೀಡಿದೆ. ವಿಶ್ವನಾಥ್‍ ಅವರು ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಅವರ ಅಳಿಯ ಎಚ್‌.ಸಿ.ರಮೇಂದ್ರ ಅವರಿಗೆ ಲೋಕೋಪಯೋಗಿ ಬೆಂಗಳೂರು ದಕ್ಷಿಣ ವಲಯ ಸಂಪರ್ಕ ಮತ್ತು ಕಟ್ಟಡ ವಿಭಾಗದ ಮುಖ್ಯ ಎಂಜಿನಿಯರ್‍ ಹುದ್ದೆ ನೀಡಿತ್ತು.   ಆದರೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ವಿಶ್ವನಾಥ್‍ ಅಳಿಯನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ. ಚುನಾವಣೆಯಲ್ಲಿ ಸೋತರೂ ವಿಶ್ವನಾಥ್‍ ಅವರು ಸಂಪುಟ ಸೇರಲು ಸರ್ಕಸ್‍ ನಡೆಸಿದ್ದರು. ಈ ಬೆನ್ನಲ್ಲೇ ಸರ್ಕಾರ ಅವರ ಅಳಿಯನನ್ನು […]

ಜೋರಾಗಿ ಉಸಿರಾಡಬಾರದೆಂದು ಬೋರ್ಡ್ ಹಾಕಿ: ಎನ್.ಮಹೇಶ್

 ಗಂಗೋತ್ರಿ ಆವರಣದಲ್ಲಿ ಜೋರಾಗಿ ಉಸಿರಾಡಬಾರದು ಅಂತ ಎಲ್ಲ ಕಡೆ ಬೋರ್ಡ್ ಹಾಕಿಕೊಳ್ಳಲು ಮೈಸೂರು ವಿವಿ ಕುಲಪತಿ, ಕುಲಸಚಿವರಿಗೆ ಹೇಳಿ ಎಂದು ಮಾಜಿ ಸಚಿವ ಎನ್.ಮಹೇಶ್ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.   ಬಹುಜನ ವಿದ್ಯಾರ್ಥಿ ಸಂಘದವರು ‘ಭಾರತಕ್ಕೆ ಬೇಕಿರುವುದು EEE ಮಾತ್ರ, ಸಿಎಎ ಅಲ್ಲ’ ಎಂಬ ವಿಷಯವಾಗಿ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ವಿಚಾರ ಸಂಕಿರಣ ಆಯೋಜಿಸಿದ್ದರು. ಆದರೆ ವಿವಿ ಆಡಳಿತ ಮಂಡಳಿ ಈ ವಿಷಯಕ್ಕೆ ಹಸ್ತಕ್ಷೇಪ ವ್ಯಕ್ತಪಡಿಸಿ ಸಿಎಎ ಪದವನ್ನು ತೆಗೆಸಿ ಹಾಕಿದೆ. ವಿವಿಗೆ ತೆರಿಗೆ ಕಟ್ಟುವವರು ನಾವು. […]

‘ಫ್ರೀ ಕಾಶ್ಮೀರ’ ನಳಿನಿ ಘೋಷಣೆ; ಇತರ ಹೋರಾಟಗಾರರ ಸ್ಪಷ್ಟನೆ

 ಫ್ರೀ ಕಾಶ್ಮೀರ ಎಂಬ ಘೋಷ ವಾಕ್ಯ ಹೊಂದಿದ್ದ ಭಿತ್ತಿಪತ್ರಕ್ಕೂ ನಮಗೂ ಸಂಬಂಧವಿಲ್ಲ. ಅದು ನಳಿನಿಗೆ ಮಾತ್ರ ಸಂಬಂಧಿಸಿದ್ದು ಎಂದು ಪೊಲೀಸರ ಮುಂದೆ ಇತರ ಹೋರಾಟಗಾರರು ಸ್ಪಷ್ಟನೆ ನೀಡಿದ್ದಾರೆ. ಜವಹರ ಲಾಲ್‍ ನೆಹರೂ ವಿವಿಯಲ್ಲಿ ನಡೆದ ದಾಂದಲೆ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದೆವು. ಇದರಲ್ಲಿ ನಳಿನಿ ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದರು. ಆದರೆ ಅವರು ಯಾರೆಂಬುದೇ ನಮಗೆ ಗೊತ್ತಿರಲೂ ಇಲ್ಲ. ಅವರು ಹಿಡಿದ ಪೋಸ್ಟ್‍ ನಮ್ಮ ಅಭಿಪ್ರಾಯವಲ್ಲ ಎಂದು ವಿಚಾರಣೆಗೆ ಹಾಜರಾಗಿದ್ದ ಐವರು ಹೋರಾಟಗಾರರು ಪೊಲೀಸರ ಮುಂದೆ ಸ್ಪಷ್ಟನೆ ಕೊಟ್ಟಿದ್ದಾರೆ. […]

ಮರದಿಂದ ಬಿದ್ದು ಗಾಯಗೊಂಡಿದ್ದ ಗೂಬೆ ರಕ್ಷಣೆ

 ಮೈಸೂರು ನಗರದ ಟಿ.ಕೆ. ಲೇಔಟ್ ನಲ್ಲಿ ಮರದಿಂದ ಬಿದ್ದು ಗಾಯಗೊಂಡಿದ್ದ ಗೂಬೆಯೊಂದನ್ನು ವನ್ಯಜೀವಿ ಛಾಯಾಗ್ರಾಹಕರ ಗುಂಪೊಂದು ರಕ್ಷಿಸಿದೆ.  ಶುಕ್ರವಾರ ಸಂಜೆ ಸುಮಾರು 7:30ಕ್ಕೆ ನಗರದ ಟಿ.ಕೆ.ಲೇಔಟ್ ಸಮೀಪ ಮರದಿಂದ ಬಿದ್ದು ಬಾರ್ನ್ ಔಲ್ ಜಾತಿಯ ಗೂಬೆ ಗಾಯಗೊಂಡಿತ್ತು. ಇದನ್ನು ನೋಡಿದ ವನ್ಯಜೀವಿ ಛಾಯಾಗ್ರಾಹಕರಾದ ಜೀವನ್ ಚಂದ್ರಶೇಖರ್, ಚಿರಾಗ್ ರಾಜ್ ಮತ್ತು ಶ್ರೇಯಸ್ ದೇವನೂರು ಕೂಡಲೇ ಅದನ್ನು ರಕ್ಷಿಸಿ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆ ವಶಕ್ಕೆ ನೀಡಿದ್ದಾರೆ.

ಗ್ರಾಪಂ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿಲ್ಲ: ಹರಿದಾಡುತ್ತಿರುವುದು ಸುಳ್ಳು ಸುದ್ದಿ

 ಗ್ರಾಮ ಪಂಚಾಯಿತಿ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರ ಜೊತೆಗೆ ಕರ್ನಾಟಕ ರಾಜ್ಯ ಪತ್ರದ ಪ್ರತಿಯೂ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಎಂಬುದನ್ನು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ.   ಗ್ರಾಮ ಪಂಚಾಯಿತಿ ಚುನಾವಣೆಗೆ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಚುನಾವಣೆ ಸಮಯ ಸಮೀಪಿಸಿರುವ ಕಾರಣ ಹೀಗೊಂದು ಸುಳ್ಳು ಸುದ್ದಿ ಹರಿದಾಡುತ್ತಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾಗಿರುವ ದಿನಾಂಕ ಸೆಪ್ಟೆಂಬರ್‍ 2019 ಎಂದು ಇದೆ. ಹಳೇ […]

ಬೈಕ್ ಹಾಗೂ ಬಸ್ ಡಿಕ್ಕಿ: ಇಬ್ಬರ ದುರ್ಮರಣ

  ಬೈಕ್ ಹಾಗೂ ಬಸ್ಸಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಮಡಿಕೇರಿ ಹೊರವಲಯದ ಕೊಯನಾಡು ದೇವರಕೊಲ್ಲಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಇಂದು ಬೆಳಿಗ್ಗೆ 8.30 ಗಂಟೆಗೆ ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್‌ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬೈಕ್ ನಲ್ಲಿದ್ದ ಇಬ್ಬರು ಪ್ರವಾಸಿಗರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.   ಮೃತರ ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಿಲ್ಲ. ಸ್ಥಳಕ್ಕೆ ಕೊಡಗು ಎಸ್ಪಿ, ಸುಮನ್‌ ಪನ್ನೇಕರ್ ಭೇಟಿ ನೀಡಿದ್ದರು. ಮಡಿಕೇರಿ‌ ಗ್ರಾಮಾಂತರ ಪೊಲೀಸರು […]

ಮಾರ್ಚ್ ನಿಂದ ಶಾಲಾ ಮಕ್ಕಳು, ಶಿಕ್ಷಕರಿಗಾಗಿ ಸಹಾಯವಾಣಿ

   ಮಾರ್ಚ್‍ ನಿಂದ ಶಾಲಾ ಮಕ್ಕಳು ಹಾಗೂ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಾಯವಾಣಿ ತೆರೆಯಲಾಗುವುದೆಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್‍ ಹೇಳಿದ್ದಾರೆ.   ಮೈಸೂರಿನ ಕೌಟಿಲ್ಯ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಶಾಲಾ ಮಕ್ಕಳು ಹಾಗೂ ಶಿಕ್ಷಕರು ಸಹಾಯವಾಣಿಗೆ ಕರೆ ಮಾಡಿ ತಮ್ಮ ದೂರುಗಳನ್ನು ಸಲ್ಲಿಸಬಹುದು. ಅದಕ್ಕೆ ಅತ್ಯಂತ ಶೀಘ್ರಗತಿಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.   ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ವಾರಕ್ಕೊಮ್ಮೆ […]

ಬಸ್-ಟ್ರಕ್‍ ಡಿಕ್ಕಿ ; 20 ಪ್ರಯಾಣಿಕರು ಸಜೀವದಹನ

 ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಲಾರಿ ಮತ್ತು ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವಾಹನಗಳು ಹೊತ್ತಿ ಉರಿದಿದ್ದು, 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ.   ಶುಕ್ರವಾರ ರಾತ್ರಿ 9:30 ರ ವೇಳೆಗೆ ಈ ದುರಂತ ನಡೆದಿದೆ. ಬಸ್ ನಲ್ಲಿ ಸುಮಾರು 46 ಪ್ರಯಾಣಿಕರು ಇದ್ದರು. ಘಟನೆ ನಡೆದ ವೇಳೆ 21 ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಜೈಪುರಕ್ಕೆ ತೆರಳುತ್ತಿದ್ದ ಟ್ರಕ್ ಮತ್ತು ಖಾಸಗಿ ಸ್ಲೀಪರ್ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ […]