You cannot copy content of this page.
. . .

Day: January 10, 2020

ಜೆಎನ್‍ಯು ದಾಂದಲೆ; ಆಯಿಷಿ ಘೋಷ್‍ ಸೇರಿ 8 ಶಂಕಿತರನ್ನು ಗುರುತಿಸಿದ ಪೊಲೀಸರು

 ಜೆಎನ್‍ಯುನಲ್ಲಿ ನಡೆದ ದಾಂದಲೆಗೆ ಸಂಬಂಧಿಸಿದಂತೆ ಜೆಎನ್‍ಯುಎಸ್‍ಯು ಅಧ್ಯಕ್ಷೆ ಆಯಿಷಿ ಘೋಷ್‍ ಸೇರಿದಂತೆ 8 ಮಂದಿ ಶಂಕಿತರನ್ನು ದೆಹಲಿ ಪೊಲೀಸರು ಗುರುತಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಪರಾಧ ತನಿಖೆ ದಳದ ಡಿಸಿಪಿ ಜಾಯ್‍ ಟಿರ್ಕಿ ಮಾತನಾಡಿ, ಚುಂಚನ್‍ ಕುಮಾರ್, ಪಂಕಜ್‍ ಮಿಶ್ರಾ, ವಾಸ್ಕರ್‍ ವಿಜಯ್, ಸುಚೇತ ತಲುಕ್‍ರಾಜ್‍, ಪ್ರಿಯಾ ರಂಜನ್, ದೋಲನ್ ಸಾವಂತ್‍, ಯೋಗೇಂದ್ರ ಭಾರದ್ವಾಜ್, ವಿಕಾಸ್‍ ಪಟೇಲ್ ಶಂಕಿತರು ಎಂದು ಹೆಸರಿಸಿದ್ದಾರೆ.  ಈ ವಿದ್ಯಾರ್ಥಿಗಳು ನಾಲ್ಕು ಎಡಪಂಥೀಯ ಸಂಘಟನೆಗಳಾದ ಎಸ್‍ಎಫ್‍ಐ, ಎಐಎಸ್‍ಎಫ್‍, ಎಐಎಸ್‍ಎ, ಡಿಎಸ್‍ಎಫ್‍ ನೊಂದಿಗೆ ಸೇರಿಕೊಂಡಿದ್ದರು ಎಂದು […]

ಆನೆ ದಂತ ಸಾಗಣೆ; ಇಬ್ಬರ ಬಂಧನ

 ಮಡಿಕೇರಿ: ಲಕ್ಷಾಂತರ ರೂ. ಮೌಲ್ಯದ ಆನೆ ದಂತಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ. ದಂತ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.  ಅಪ್ಪಂಗಳ ಹೆರವನಾಡು ನಿವಾಸಿ ಪಿ.ಕೆ.ದಿನೇಶ್. ಈತ ಸಕಲೇಶಪುರದ ಕುಮಾರ ಎಂಬಾತನಿಂದ ಅಂದಾಜು ೩೦ ಲಕ್ಷ ರೂ. ಮೌಲ್ಯದ ಎರಡು ಆನೆ ದಂತಗಳನ್ನು ಪಡೆದು, ಆತನೊಂದಿಗೆ ಧರ್ಮಸ್ಥಳದ ಕಡೆಗೆ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂದಿಸಿದ್ದಾರೆ. ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ […]

ಭೇರ್ಯದಲ್ಲಿ ಹೋಟೆಲ್ ಮಾಲೀಕನ ಕೊಲೆ

   ಕೆ.ಆರ್.ನಗರ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ  ಕ್ಷುಲ್ಲಕ ಕಾರಣಕ್ಕೆ ಹಂದಿ ಮಾಂಸದ ಹೋಟಲ್ ಮಾಲೀಕನ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಸಮೀಪದ ಕಂಚಿನಕೆರೆ ಗ್ರಾಮದ ಲೇಟ್ ಬೋರೇಗೌಡರ ಮಗ ಕುಮಾರ್ (೪೮) ಕೊಲೆಯಾದ ಹೋಟೆಲ್ ಮಾಲೀಕ.  ಕೊಲೆಯಾದ ಕುಮಾರ್ ಭೇರ್ಯ ಗ್ರಾಮದಲ್ಲಿ ಹಲವಾರು ತಿಂಗಳಿಂದ ಹಂದಿಮಾಂಸದ ಹೋಟೆಲ್‌ನ್ನು ನಡೆಸುತ್ತಿದ್ದ. ಆದರೆ ಕಳೆದ ರಾತ್ರಿ ಮನೆಗೆ ಬಂದಿಲ್ಲ ಎಂದು ಪತ್ನಿ ಗ್ರಾಮದ ಸಂಬಂಧಿಕರಿಗೆ ತಿಳಿಸಿದ್ದಾರೆ. ಗ್ರಾಮಸ್ಥರೊಬ್ಬರು ಹೋಟೆಲ್ ಬಳಿ ಬಂದು ಬಾಗಿಲು ತೆಗೆದು ನೋಡಿದಾಗ ಕುಮಾರ್ […]

6 ಮರಿಗಳಿಗೆ ಜನ್ಮ ನೀಡಿದ ಮೇಕೆ..!

  ಮೇಕೆ ಹೆಚ್ಚು ಎಂದರೆ ಮೂರು, ನಾಲ್ಕು ಮರಿಗಳಿಗೆ ಜನ್ಮ ನೀಡುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಮೇಕೆಯೊಂದು ಒಂದೇ ಬಾರಿ 6 ಮರಿಗಳಿಗೆ ಜನ್ಮ ನೀಡಿದೆ.  ಮೈಸೂರು ಜಿಲ್ಲೆ ಸರಗೂರು ತಾಲ್ಲೂಕು ಮುಳ್ಳೂರು ಗ್ರಾಮದ ಮರಿ ಚಿಕ್ಕಯ್ಯ ಅವರಿಗೆ ಸೇರಿದ ಮೇಕೆಯೊಂದು ೬ ಮರಿಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ. ಮೇಕೆ ಹಾಗೂ ಮರಿಗಳು ಆರೋಗ್ಯವಾಗಿವೆ ಎಂದು ತಿಳಿದುಬಂದಿದೆ. ಮೇಕೆ ಹಾಗೂ ಮರಿಗಳನ್ನು ನೋಡಲು ಪಕ್ಕದ ಊರಿನ ಜನರೂ ಬರುತ್ತಿದ್ದಾರೆ.

ಇಂದು ತೋಳ ಚಂದ್ರಗ್ರಹಣ; ತೋಳಕ್ಕೂ ಗ್ರಹಣಕ್ಕೂ ಏನು ಸಂಬಂಧ..?

   ಇಂದು ವರ್ಷದ ಮೊದಲ ಚಂದ್ರಗ್ರಹಣ. ಇದನ್ನ ತೋಳ ಚಂದ್ರಗ್ರಹಣ ಅಂತಾನೂ ಕರೆಯುತ್ತಾರೆ. ಈ ಗ್ರಹಣ ಇವತ್ತು ರಾತ್ರಿ 10-37ಕ್ಕೆ ಆರಂಭವಾಗುತ್ತದೆ. ರಾತ್ರಿ 12.40ಕ್ಕೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಲಿದೆ. ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲಿಯೂ ಗ್ರಹಣ ಗೋಚರಿಸಲಿದ್ದು, ಬೆಳಗಿನ ಜಾವ 2.42ಕ್ಕೆ ಗ್ರಹಣ ಮೋಕ್ಷವಾಗಲಿದೆ.   ಅಂದಹಾಗೆ ತೋಳ ಚಂದ್ರಗ್ರಹಣ ಅಂದರೆ ಏನು..? ತೋಳಕ್ಕೂ ಗ್ರಹಣಕ್ಕೂ ಸಂಬಂಧವೇನು..? ನಿಮಗೂ ಈ ಕುತೂಹಲ ಉಂಟಾಗಿರಬಹುದು. ದಂತ ಕಥೆಗಳ ಪ್ರಕಾರ ಹಾಗೂ ಪುರಾಣಗಳ ಪ್ರಕಾರ ಜನವರಿ ತಿಂಗಳ […]

ಮಹಾಪೌರರ ಆಯ್ಕೆಯಲ್ಲಿ ನಾನು ತಟಸ್ಥ: ಜಿಟಿಡಿ ಸ್ಪಷ್ಟನೆ

  ಮೈಸೂರು ಮಹಾನಗರ ಪಾಲಿಕೆಯ ಮೇಯರ್‍ ಆಯ್ಕೆಯಲ್ಲಿ ನಾನು ತಟಸ್ಥನಾಗಿರುತ್ತೇನೆ. ಆಯ್ಕೆ ವಿಚಾರದಲ್ಲಿ ನನ್ನ ಮಾತು ನಡೆಯುವುದಿಲ್ಲ ಎಂಬುದು ನನಗೆ ತಿಳಿದಿದೆ. ಶಾಸಕ ಸಾ.ರಾ.ಮಹೇಶ್ ಅವರೇ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.   ಮಹಾಪೌರರ ಆಯ್ಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡರು, ಮಹಾಪೌರರ ಚುನಾವಣೆಯಲ್ಲಿ ನಾನೂ ಕೂಡ ಭಾಗವಹಿಸುತ್ತೇನೆ. ಪಕ್ಷ ಸೂಚಿಸಿದ ಅಭ್ಯರ್ಥಿಗೆ ಮತ ನೀಡುತ್ತೇನೆ. ಈ ವಿಚಾರದಲ್ಲಿ ಯಾವುದೇ ಗೇಮ್‌ ಪ್ಲಾನ್‌ಗಳಿಲ್ಲ. ಹಿಂದೆ ಒಂದು, ಮುಂದೆ ಒಂದು ರೀತಿಯಲ್ಲಿ ನಡೆದುಕೊಳ್ಳುವ ಗೇಮ್ […]

ವಿದ್ಯುತ್‍ ಪ್ರವಹಿಸಿ ಕಾಡಾನೆ ಸಾವು

 ಚಾಮರಾಜನಗರ ಜಿಲ್ಲೆಯ ಕುಳೂರ್ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್‍ ಪ್ರವಹಿಸಿ ಕಾಡಾನೆ ಸಾವನ್ನಪ್ಪಿದೆ.  ಆನೆ ಸುಮಾರು 40 ರಿಂದ 45 ವರ್ಷವಯಸ್ಸಿನದ್ದಾಗಿರಬಹುದು ಎಂದು ಹೇಳಲಾಗಿದೆ. ಬೂದಿಪಡಗ ಅರಣ್ಯ ವಲಯದ ಕಾಡಾನೆ ಇದಾಗಿದ್ದು, ಕುಳೂರ್‍ ಗ್ರಾಮದ ಶಿವರುದ್ರ ಎಂಬವರ ಜಮೀನಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಾಡಾನೆ ಪತ್ತೆಯಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಿಜೆಪಿಗೂ ಕಾಂಗ್ರೆಸ್‍ ರೋಗ ಅಂಟಿದೆ: ಸಾಹಿತಿ ಎಸ್‍.ಎಲ್‍.ಭೈರಪ್ಪ

  ಹಿಂದೂ ಮುಸ್ಲಿಮರನ್ನು ವಿಭಜನೆ ಮಾಡಿ ರಾಜಕೀಯ ಮಾಡುವುದನ್ನು ಕಾಂಗ್ರೆಸ್ಸಿಗರು ಬ್ರಿಟೀಷರಿಂದ ಕಲಿತಿದ್ದರು. ಈಗ ಆ ರೋಗ ಬಿಜೆಪಿಗೂ ಅಂಟಿದೆ ಎಂದು ಹಿರಿಯ ಸಾಹಿತಿ ಎಸ್‍.ಎಲ್‍.ಭೈರಪ್ಪ ಹೇಳಿದ್ದಾರೆ.   ಸಿಎಎ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬ್ರಿಟೀಷರು ಯಾವ ತಂತ್ರ ಮಾಡಿದರೋ ಕಾಂಗ್ರೆಸ್‍ ಕೂಡಾ ಅದೇ ತಂತ್ರ ಮಾಡುತ್ತಿದೆ. ನೆಹರೂ ಆಡಳಿತದಲ್ಲಿ ಹಿಂದೂ ಜಾತಿಗಳನ್ನು ಒಡೆದಿದ್ದರು. ಮುಸ್ಲಿಂ ಸಮುದಾಯವನ್ನು ಓಟ್‍ ಬ್ಯಾಂಕ್‍ ಆಗಿ ಮಾಡಿಕೊಂಡಿದ್ದರು ಎಂದರು. ಆಗ ಪತ್ರಕರ್ತರೊಬ್ಬರು ಬಿಜೆಪಿ ಕೂಡಾ ಅದೇ ರೀತಿಯ ತಂತ್ರ […]

ಮಂಗಳೂರು ಗಲಭೆ ಪ್ರಕರಣ; ಸಂಚಲನ ಮೂಡಿಸಿದ ವಿಡಿಯೋ

  ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಇಂದು ಎರಡು ದೀರ್ಘ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಪೊಲೀಸರೇ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿರುವ ದೃಶ್ಯಗಳಿವೆ.    ವಿಡಿಯೋವೊಂದರಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವವರನ್ನು ಪೊಲೀಸರು ಹಿಗ್ಗಾ-ಮುಗ್ಗಾ ಥಳಿಸಿರುವ ದೃಶ್ಯ ಇದೆ. ಪೆಟ್ರೋಲ್ ಬಂಕ್‌ ನಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದವರ ಮೇಲೆ, ಬ್ಯಾಗ್ ಹಾಕಿಕೊಂಡು ಕಾಲೇಜುಗಳಿಗೆ ತೆರಳುತ್ತಿದ್ದ ಯುವಕರ ಮೇಲೂ ಪೊಲೀಸರು ಲಾಠಿ ಪ್ರಹಾರ ನಡೆಸಿರುವ ದೃಶ್ಯಗಳನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ನೋಡಬಹುದು.   ಪೊಲೀಸರೇ ಗುಂಪಿನ […]

ಮೈಸೂರು ವಿ.ವಿ.ಯಲ್ಲಿ ‘ಫ್ರೀ ಕಾಶ್ಮೀರ’ ಪ್ಲೇಕಾರ್ಡ್ ಪ್ರದರ್ಶನ; ಆಯೋಜಕರ ವಿರುದ್ಧ ಕ್ರಮಕ್ಕೆ ಎಬಿವಿಪಿ ಆಗ್ರಹ

 ಮೈಸೂರು ವಿ.ವಿ.ಯ ಮಾನಸಗಂಗೋತ್ರಿ ಆವರಣದಲ್ಲಿ ‘ಫ್ರೀ ಕಾಶ್ಮೀರ’ ಪ್ಲೇಕಾರ್ಡ್ ಹಿಡಿದು ಪ್ರತಿಭಟಿಸಿದವರ ವಿರುದ್ಧ ದೂರು ದಾಖಲಾಗಿದ್ದು, ತಪ್ಪಿತಸ್ಥರನ್ನು ಈ ಕೂಡಲೇ ವಿ.ವಿ.ಯಿಂದ ವಜಾಗೊಳಿಸಿ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ ಆಗ್ರಹಿಸಿದೆ.  ಮೈಸೂರಿನ ಗನ್‍ಹೌಸ್‍ ಬಳಿ ನೂರಾರು ಸಂಖ್ಯೆಯಲ್ಲಿ ಎಬಿವಿಪಿ ಸಂಘಟಕರು, ವಿದ್ಯಾರ್ಥಿಗಳು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಪ್ಲೇಕಾರ್ಡ್ ಹಿಡಿದವರನ್ನು ಕೂಡಲೇ ವಿ.ವಿ.ಯಿಂದ ವಜಾಗೊಳಿಸಬೇಕು. ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಗಳ ಮುಖಂಡರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.