You cannot copy content of this page.
. . .

Day: January 9, 2020

ಮಕ್ಕಳ ಕಲಿಕೆ ಗೇಲಿ; ಶಿಕ್ಷಕರ ‘ಪಕ್ಕೆಲುಬು’ಗೆ ಪೆಟ್ಟು ನೀಡಿದರಾ ಶಿಕ್ಷಣ ಸಚಿವರು!

 ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ‘ಪಕ್ಕೆಲುಬು’ ಎಂಬ ಪದವನ್ನು ಮಗು ಸರಿಯಾಗಿ ಉಚ್ಚರಿಸಲು ಬಾರದ ಸಂದರ್ಭವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದರ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್‍ ಹರಿಹಾಯ್ದಿದ್ದಾರೆ.  ಶಾಲೆಯೊಂದರಲ್ಲಿ ಮಗುವೊಂದು ಶಿಕ್ಷಕರೊಬ್ಬರು ಹೇಳಿಕೊಡುತ್ತಿದ್ದ ‘ಪಕ್ಕೆಲುಬು’ ಪದವನ್ನು ಸರಿಯಾಗಿ ಉಚ್ಚರಿಸುತ್ತಿರಲಿಲ್ಲ. ಇದನ್ನು ವ್ಯಂಗ್ಯ ಮಾಡಲು ವಿಡಿಯೊ ಮಾಡಿ ಶಿಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೊ ಕಳೆದೆರಡು ದಿನಗಳಿಂದ ವೈರಲ್‍ ಆಗಿದೆ. ಇದಕ್ಕೆ ಶಿಕ್ಷಣ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ‘ಮಕ್ಕಳು ತಪ್ಪು ಉಚ್ಚಾರ […]

ಮೈಸೂರು ವಿ.ವಿ.ಯಲ್ಲಿ ಪ್ರತಿಭಟನೆ; ಜಯಲಕ್ಷ್ಮಿಪುರಂ ಠಾಣೆಗೆ ದೂರು ದಾಖಲಿಸಿದ ಕುಲಸಚಿವರು

 ಮಾನಸಗಂಗೋತ್ರಿ ಆವರಣದಲ್ಲಿ ಕೆಲವು ವಿದ್ಯಾರ್ಥಿ ಸಂಘಟನೆಗಳು ಅನಧಿಕೃತವಾಗಿ ಜ.8ರಂದು ಪ್ರತಿಭಟನೆ ನಡೆಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಆರ್‍.ಶಿವಪ್ಪ ಅವರು ಜಯಲಕ್ಷ್ಮಿಪುರಂ ಪೊಲೀಸ್‍ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ‘ಜೆಎನ್‍ಯುನಲ್ಲಿ ನಡೆದ ಹಲ್ಲೆ ವಿಚಾರ ಖಂಡಿಸಿ ಪ್ರತಿಭಟನೆ ನಡೆಸಿರುವ ವಿಚಾರ ಗಮನಕ್ಕೆ ಬಂದಿದೆ. ಪ್ರತಿಭಟನೆಯ ಗುಂಪಿನಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಪ್ರಚೋದನಕಾರಿ ಘೋಷಣೆ ಕೂಗಿರುವುದು ತಿಳಿದುಬಂದಿದೆ. ಪ್ರತಿಭಟನೆ ನಡೆಸಲು ವಿ.ವಿ.ಯಿಂದ, ಪೊಲೀಸ್‍ ಇಲಾಖೆಯಿಂದ ಅನುಮತಿ ಪಡೆದಿರುವುದಿಲ್ಲ. ಈ ಘಟನೆಗಳಿಂದಾಗಿ […]

ರಾಷ್ಟ್ರಪತಿ ಭವನದೆಡೆಗೆ ಪ್ರತಿಭಟನಾ ಮೆರವಣಿಗೆ; ಜೆಎನ್‌ಯು ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

 ಜೆಎನ್‍ಯು ವಿದ್ಯಾರ್ಥಿಗಳ ನಡೆದ ಹಲ್ಲೆ ಖಂಡಿಸಿ ಹಾಗೂ ಜೆಎನ್‍ಯು ಉಪಕುಲಪತಿಯನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ರಾಷ್ಟ್ರಪತಿ ಭವನದತ್ತ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಮಾರ್ಗ ಮಧ್ಯೆ ತಡೆದು ವಶಕ್ಕೆ ಪಡೆದಿದ್ದಾರೆ.  ಜನವರಿ 5 ಭಾನುವಾರದಂದು ಜೆಎನ್‌ಯುನಲ್ಲಿ ಮುಸುಕುಧಾರಿಗಳಿಂದ ನಡೆದ ದಾಂದಲೆ ಖಂಡಿಸಿ ಮತ್ತು ಜೆಎನ್‌ಯು ಉಪಕುಲಪತಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ  ಮಾನವ ಸಂಪನ್ಮೂಲ ಇಲಾಖೆ ಸಚಿವಾಲಯಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ಈ ಮೆರವಣಿಗೆ ಕೈಗೊಳ್ಳಲಾಗಿತ್ತು.

ಒಂದೇ ಕಡೆ ಎರಡು ಕಣ್ಣು, ಮೂಗಿಲ್ಲ, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ; ಇದೇನು ವಿಚಿತ್ರ!

 ಒಂದೇ ಕಡೆ ಎರಡು ಕಣ್ಣುಗಳು, ಮೂಗಿಲ್ಲ, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ. ಇದ್ಯಾವುದೋ ವಿಚಿತ್ರ ಶಿಶು ಅಲ್ಲ. ಮೇಕೆ ಮರಿಯೊಂದರ ವಿಚಿತ್ರ ಆಕಾರವಾಗಿದೆ. ಈ ವಿಚಿತ್ರ ಮೇಕೆ ಮರಿ ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.  ಹೌದು, ಮಳವಳ್ಳಿ ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಪುಟ್ಟರಾಜು ಎಂಬವರಿಗೆ ಸೇರಿದ ಮೇಕೆ ವಿಚಿತ್ರ ಮರಿಗೆ ಜನ್ಮನೀಡಿದೆ. ಮೇಕೆಯು ಬುಧವಾರ ಬೆಳಿಗ್ಗೆ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಅದರಲ್ಲಿ ಒಂದು ಮರಿಗೆ ಮೂಗಿಲ್ಲ. ಒಂದೇ ಕಡೆ ಎರಡೂ ಕಣ್ಣುಗಳಿದ್ದು, ಬಾಯಿಯಲ್ಲಿ ನಾಲಿಗೆ ಮಾತ್ರ ಇದೆ.

ಮಡಿಕೇರಿಯಲ್ಲಿ 100 ರೂ.ಗೆ 500 ರೂ. ಕೊಡುವ ಎಟಿಎಂ..!

ಮಡಿಕೇರಿಯ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರವೊಂದರಲ್ಲಿ ಹಣ ತುಂಬುವವರು ಮಾಡಿದ ಎಡವಟ್ಟಿನಿಂದ ಗ್ರಾಹಕರು ಭರಪೂರ ಲಾಭ ಪಡೆದಿದ್ದಾರೆ. ಎಟಿಎಂ ಯಂತ್ರದಲ್ಲಿ 500 ರೂ. ನಮೂದು ಮಾಡಿದರೆ 2500 ರೂಪಾಯಿ ಬಂದಿದ್ದು ಗ್ರಾಹಕರನ್ನು ಅಚ್ಚರಿಗೊಳಿಸಿತ್ತು. ಈ ಎಡವಟ್ಟು ಬ್ಯಾಂಕ್‌ ಸಿಬಂದಿಗೆ ತಿಳಿಯುವಷ್ಟರಲ್ಲಿ 1.50 ಲಕ್ಷ ರೂ. ಸೋರಿಕೆ ಆಗಿತ್ತು.   ಹಣ ತುಂಬುವ ಸಿಬ್ಬಂದಿ 100 ರೂಪಾಯಿ ನೋಟುಗಳನ್ನು ತುಂಬುವ ಟ್ರೇನಲ್ಲಿ 500 ರೂಪಾಯಿ ನೋಟುಗಳನ್ನು ತುಂಬಿದ್ದರಿಂದ ಈ ಅವಾಂತರವಾಗಿತ್ತು. 2019ರ ಡಿಸೆಂಬರ್‍ 30 ರಂದು ಈ ಘಟನೆ ನಡೆದಿದ್ದು, […]

ಮೃಗಾಲಯದ ಗೋಡೆಗಳ ಮೇಲೆ ಸ್ವಚ್ಛತಾ ಜಾಗೃತಿ

  ಸ್ವಚ್ಛ ಸರ್ವೇಕ್ಷಣೆಯ ಅಂಗವಾಗಿ ಮೈಸೂರು ನಗರಪಾಲಿಕೆ ವತಿಯಿಂದ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಸಾಕಷ್ಟು ಅರಿವು ಕಾರ್ಯಕ್ರಮಗಳು ನಡೆಯುತ್ತಿವೆ. ಅದರ ಭಾಗವಾಗಿ ಮೈಸೂರು ಮಹಾನಗರ ಪಾಲಿಕೆ, ಡಿ.ಕೆ.ಕನ್ಸ್ಟ್ರಕ್ಷನ್ ಮತ್ತು ನಮ್ಮ ಮೈಸೂರು ಫೌಂಡೇಶನ್ ಸಹಯೋಗದೊಂದಿಗೆ `ಸ್ವಚ್ಛತಾ ಹೀರೋ/ಪೇಂಟಿಂಗ್ ಹೀರೋ’ ಎಂಬ ಶೀರ್ಷಿಕೆಯಡಿಯಲ್ಲಿ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.   ಇಂದು (ಗುರುವಾರ) ಬೆಳಿಗ್ಗೆ ನಡೆದ ಚಿತ್ರಕಲಾ ಸ್ಪರ್ಧೆಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಚಾಲನೆ ನೀಡಿದರು. ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವಾಗ […]

ಜೆಎನ್‌ಯು ಹಲ್ಲೆ ಖಂಡಿಸಿ ಪ್ರತಿಭಟನೆ

 ಮೈಸೂರು: ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.  ಗುರುವಾರ ಬೆಳಿಗ್ಗೆ ನಗರದ ಗಾಂಧಿ ವೃತ್ತದ ಬಳಿ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಹೊಸದಿಲ್ಲಿಯ ಜೆಎನ್‌ಯು ಹಾಸ್ಟೆಲ್‌ನಲ್ಲಿ ಅಮಾಯಕ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆ ಖಂಡನೀಯ. ಈ ಘಟನೆಯಿಂದ ದೇಶವೇ ತಲೆ ತಗ್ಗಿಸುವಂತಾಗಿದೆ. […]

‘ಫ್ರೀ ಕಾಶ್ಮೀರ’ ಭಿತ್ತಿಪತ್ರ ವಿಚಾರ; ವರದಿ ಕೇಳಿದ ರಾಜ್ಯಪಾಲರು

    ಜವಹರಲಾಲ್‍ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ನಿನ್ನೆ ಮೈಸೂರು ವಿವಿಯಲ್ಲಿ ನಡೆದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಎಂಬ ಭಿತ್ತಿಪತ್ರ ರಾರಾಜಿಸಿತ್ತು. ಈ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ವರದಿ ನೀಡುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಮೈಸೂರು ವಿವಿಯಿಂದ ವರದಿ ಕೇಳಿದ್ದಾರೆ.    ಫ್ರೀ ಕಾಶ್ಮೀರ ಭಿತ್ತಿಪತ್ರವನ್ನು ಪ್ರತಿಭಟನಾಕಾರರಲ್ಲೊಬ್ಬರು ಹಿಡಿದಿದ್ದರು. ಇದು ದೇಶದ್ರೋಹದ ಕೆಲಸ ಎಂಬ ಆರೋಪ ಕೇಳಿಬಂದಿತ್ತು. ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್‍ ಸದಸ್ಯರೊಬ್ಬರು ವಿವಿಯ ಕುಲಪತಿಗೆ ದೂರು […]

ಅಂಬೇಡ್ಕರ್-ವಿವೇಕಾನಂದರು ಒಂದೇ ಅಲ್ಲ; ವೇದಿಕೆಯಲ್ಲೇ ಬಿ.ವಿ.ವಸಂತ್‌ಕುಮಾರ್‌ ಹೇಳಿಕೆಗೆ ಚಾಟಿ ಬೀಸಿದ ಪ್ರಸಾದ್

 ಮೈಸೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೆಎಸ್‍ಒಯು ಸಹಯೋಗದಲ್ಲಿ ಆಯೋಜಿಸಿರುವ ‘ದಲಿತ ಕಲ್ಯಾಣ: ಸವಾಲು ಮತ್ತು ಅವಕಾಶಗಳು’ ಕಮ್ಮಟದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್‍ ಹೇಳಿಕೆಗೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವೇದಿಕೆಯಲ್ಲೇ ಚಾಟಿ ಬೀಸಿದ ಪ್ರಸಂಗ ನಡೆಯಿತು.  ಮೊದಲು ಪ್ರಸ್ತಾವಿಕವಾಗಿ ಮಾತನಾಡಿದ ಬಿ.ವಿ.ವಸಂತಕುಮಾರ್, ‘ಜ್ಯೋತಿಬಾ ಫುಲೆ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದ, ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾರತದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ನಿರ್ಮಾಣ ಮಾಡಿದ್ದಾರೆ. ಇವರು ಬದುಕನ್ನು ಕಟ್ಟಿದ ಕಾರಣಕ್ಕಾಗಿ ನಾವು-ನೀವು ಸುಖವಾಗಿದ್ದೇವೆ’ ಎಂದರು.  ಉದ್ಘಾಟನಾ ಭಾಷಣ […]

‘ದಲಿತ ಸಚಿವರೇ ದಲಿತರ ತಟ್ಟೆ, ಬೆಡ್ಶೀಟ್ ತಿಂದರು’

 ಮೈಸೂರು: ದಲಿತರ ಉದ್ಧಾರಕ್ಕೆಂದೇ ಸಮಾಜ ಕಲ್ಯಾಣ ಇಲಾಖೆ ಸ್ಥಾಪಿಸಲಾಗಿದೆ. ಈ ಇಲಾಖೆಯ ಸಚಿವರಾದ ದಲಿತರ ನಾಯಕರೇ ದಲಿತರ ಅಭಿವೃದ್ಧಿಗೆ ಶ್ರಮಿಸಲಿಲ್ಲ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಆರೋಪಿಸಿದರು.  ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಕೆಎಸ್‌ಒಯು ಕಾವೇರಿ ಸಭಾಂಗಣದಲ್ಲಿ ಆಯೋಜಿಸಿರುವ ‘ದಲಿತ ಕಲ್ಯಾಣ: ಸವಾಲು ಮತ್ತು ಅವಕಾಶಗಳು’ ಕುರಿತು ಐದು ದಿನಗಳ ಕಮ್ಮಟದ ಉದ್ಘಾಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ದಲಿತ ಸಚಿವರೇ ದಲಿತರ ರಗ್ಗು, ಬೆಡ್‌ಶೀಟ್ ತಿಂದರು. ಆದರೆ, ಯಾವುದೇ ಪ್ರತಿಭಟನೆ […]