You cannot copy content of this page.
. . .

Day: January 8, 2020

ನಿರ್ದೇಶಕನೊಂದಿಗೆ ಹೀರೋಯಿನ್ ಎಸ್ಕೇಪ್; ಮರ್ಯಾದೆಗೆ ಅಂಜಿ ವಿಷ ಸೇವಿಸಿದ ತಾಯಿ, ಅಜ್ಜಿ!

 ಸಿನಿಮಾ ನಿರ್ದೇಶಕನೊಂದಿಗೆ ಹೀರೋಯಿನ್ ಆದ ಕಾರಣ, ಹೀರೊಯಿನ್ ತಾಯಿ ಮತ್ತು ಅಜ್ಜಿ ಮರ್ಯಾದೆಗೆ ಅಂಜಿ ವಿಷ ಸೇವಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಅಜ್ಜಿ ಸಾವನ್ನಪ್ಪಿದರೆ, ತಾಯಿ ಸ್ಥಿತಿ ಗಂಭೀರವಾಗಿದೆ.  ಚನ್ನಪಟ್ಟಣದಲ್ಲಿ ಹೀಗೊಂದು ಮನಮಿಡಿಯುವ ಸಿನೆಮಾ ಲವ್ ಸ್ಟೋರಿ ಆಗಿದೆ. ಸಾವನ್ನಪ್ಪಿದ ಅಜ್ಜಿ ಮುಖ ನೋಡಲು ಕೂಡ ಮೊಮ್ಮಗಳು ಬಂದಿಲ್ಲ. ನಟಿ ಹೆಸರು ವಿಜಯಲಕ್ಷ್ಮಿ (ಅಲಿಯಾಸ್ ಲಕ್ಷ್ಮಿ) ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮೆಲ್ಲಹಳ್ಳಿಯವರು. ಈಕೆ ‘ತುಂಗಾಭದ್ರ’ ಸಿನಿಮಾ ನಿರ್ದೇಶಕ ಆಂಜನಪ್ಪ ಜೊತೆ ಪ್ರೀತಿಗೆ ಬಿದ್ದು ಈಗ ಎಸ್ಕೇಪ್‍ […]

ಲಾರಿ ಡಿಕ್ಕಿ; ಬೈಕ್ ಸವಾರ ಸಾವು

 ಎಚ್.ಡಿ.ಕೋಟೆ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿದ ಘಟನೆ ಪಟ್ಟಣದ ಹ್ಯಾಂಡ್‌ಪೋಸ್ಟ್ ಸಮೀಪ ನಡೆದಿದೆ. ತಾಲ್ಲೂಕಿನ ನೇರಳೆ ಗಣೇಶ್ ಗುಡಿ ಗ್ರಾಮದ ನಿಂಗರಾಜು (೪೮) ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ.  ಬುಧವಾರ ಮಧ್ಯಾಹ್ನ ತನ್ನ ಅಂಗಡಿಯ ವ್ಯಾಪಾರಕ್ಕೆ ಹ್ಯಾಂಡ್ ಪೋಸ್ಟಿನಲ್ಲಿ ದಿನಸಿ ಹಾಗೂ ಇನ್ನಿತರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹ್ಯಾಂಡ್‌ಪೋಸ್ಟ್ ಮತ್ತು ಕಬಿನಿ ರಸ್ತೆಯ ತಾರಕ ಸೇತುವೆ ಸಮೀಪ ಕಬ್ಬಿನ ಲಾರಿ  ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ನಿಂಗರಾಜು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಈ […]

ಕೇಂದ್ರ ಬಜೆಟ್‍ ಗೆ ಸಾರ್ವಜನಿಕರ ಸಲಹೆ ಕೇಳಿದ ಮೋದಿ

  ಇಷ್ಟು ವರ್ಷ ತಜ್ಞರ ಜೊತೆ ಚರ್ಚೆ ಮಾಡಿ ಸರ್ಕಾರಗಳು ಬಜೆಟ್‍ ಮಂಡನೆ ಮಾಡುತ್ತಿದ್ದವು. ಆದರೆ ಈಗ ಮೋದಿ ಸರ್ಕಾರ 130 ಕೋಟಿ ಭಾರತೀಯರ ಮೊರೆ ಹೋಗಿದೆ. ಈ ವರ್ಷದ ಬಜೆಟ್‍ ರೂಪಿಸಲು ಸಾರ್ವಜನಿಕರು ತಮ್ಮ ಸಲಹೆ ಸೂಚನೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.  ದೇಶದ ಜಿಡಿಪಿ ಪಾತಾಳಕ್ಕಿಳಿದಿದೆ. ಈ ಸಂದರ್ಭದಲ್ಲಿ ಮೋದಿ ನೇತೃತ್ವದ NDA-2 ಸರ್ಕಾರ 2ನೇ ಬಜೆಟ್‍ ಮಂಡನೆಗೆ ಸಿದ್ಧತೆ ನಡೆಸುತ್ತಿದೆ. ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಕೇಂದ್ರ ಬಜೆಟ್‍ […]

ವಿದೇಶದಲ್ಲಿ ಹೆಚ್ಚಿನ ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ಶಾಸಕ ತನ್ವೀರ್ ಸೇಠ್

 ಕೊಲೆ ಯತ್ನಕ್ಕೆ ಒಳಗಾಗಿದ್ದ ಶಾಸಕ ತನ್ವೀರ್‍ ಸೇಠ್‍ ದುಬೈನಲ್ಲಿ ಹೆಚ್ಚಿನ ಚಿಕಿತ್ಸೆ ಹಾಗೂ ವಿಶ್ರಾಂತಿ ಮುಗಿಸಿ ಭಾರತಕ್ಕೆ ವಾಪಸ್ಸಾದರು.  ನವೆಂಬರ್ 18ರಂದು ಶಾಸಕರ ಮೇಲೆ ಕೊಲೆ ಯತ್ನ ನಡೆದಿತ್ತು. ಕುತ್ತಿಗೆ ಭಾಗಕ್ಕೆ ಮಚ್ಚಿನ ಪೆಟ್ಟು ಬಿದ್ದಿತ್ತು. ಶಾಸಕರು ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ವೈದ್ಯರ ಸಲಹೆ ಮೇರೆಗೆ ವಿದೇಶದಲ್ಲೂ ಚಿಕಿತ್ಸೆ ಪಡೆಯಲು ತೆರಳಿದ್ದರು. ಚಿಕಿತ್ಸೆ ನಂತರ ದುಬೈನಲ್ಲೇ ವಿಶ್ರಾಂತಿ ಪಡೆದಿದ್ದರು. ಇಂದು ಸಂಜೆ ವೇಳೆ ಮೈಸೂರಿಗೆ ಆಗಮಿಸಿದರು.

ಜೆಎನ್‌ಯು ದಾಂದಲೆಗೆ ಖಂಡನೆ; ಮೈಸೂರಿನಲ್ಲಿ ವಿದ್ಯಾರ್ಥಿಗಳಿಂದ ಪಂಜಿನ ಮೆರವಣಿಗೆ

 ಮುಸುಕುಧಾರಿಗಳು ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಎಸ್ಎಫ್ಐ, ಎಐಡಿಎಸ್ಒ ಸೇರಿದಂತೆ ವಿವಿಧ ಸಂಘಟನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.  ವಿದ್ಯಾರ್ಥಿಗಳು ಪಂಜನ್ನು ಹಿಡಿದು ಮಾನಸಗಂಗೋತ್ರಿಯ ಕ್ಲಾಕ್ ಟವರ್‍ನಿಂದ ಪ್ರತಿಭಟನಾ ಮೆರವಣಿಗೆ ಹೊರಟು ಕುವೆಂಪು ಪುತ್ಥಳಿ ಮುಂದೆ ಜಮಾಯಿಸಿದರು. ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ವಿದ್ಯಾರ್ಥಿನಿಯೊಬ್ಬರು ‘ಫ್ರೀ ಕಾಶ್ಮೀರ’ ಎಂಬ ಫಲಕ ಹಿಡಿದು ಕಾಣಿಸಿಕೊಂಡರು. ದೆಹಲಿಯಲ್ಲಿ […]

ಇದು ಮಡಿಕೇರಿಯ ನವೋದಯ ವಿದ್ಯಾಲಯದ ದುಸ್ಥಿತಿ..!

 ಬಿರುಕು ಬಿಟ್ಟ ಗೋಡೆಗಳು.. ದುರ್ವಾಸನೆ ಬೀರುತ್ತಿರುವ ಶೌಚಾಲಯಗಳು.. ದನದ ಕೊಟ್ಟಿಗೆಯಂತಹ ಕೊಠಡಿಗಳು.. ಬಣ್ಣ ಕಂಡು ಎಷ್ಟು ವರ್ಷಗಳಾಗಿವೆಯೋ ಏನೋ.. ಇದು ಕೊಡಗಿನ ನವೋದಯ ವಿದ್ಯಾಲಯದ ದುಸ್ಥಿತಿ.   ಈ ವಿದ್ಯಾಲಯದಲ್ಲಿ 525 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಸೂಕ್ತ ಮೂಲ ಸೌಕರ್ಯಗಳೇ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಹಲವಾರು ಬಾರಿ ಸಂಬಂಧಪಟ್ಟವರು ದೂರು ನೀಡುತ್ತಲೇ ಬಂದಿದ್ದಾರೆ. ಆದರೆ ಯಾರೂ ಇದಕ್ಕೆ ಸ್ಪಂದಿಸಿಲ್ಲ.   ಕೊನೆಗೆ ಪೋಷಕರು ಸಂಸದ ಪ್ರತಾಪ ಸಿಂಹ ಅವರಿಗೆ ದೂರು ನೀಡಿದ್ದರು. ಇಂದು ಸ್ಥಳಕ್ಕೆ ಆಗಮಿಸಿದ್ದ […]

ಭರದಿಂದ ಸಾಗಿದ ರಸ್ತೆ ಕಾಮಗಾರಿ; ಗುಣಮಟ್ಟ ಪರೀಕ್ಷಿಸಿದ ಪ್ರತಾಪ ಸಿಂಹ

  ಸಂಸದ ಪ್ರತಾಪ ಸಿಂಹ ಅವರು ಹುಣಸೂರಿನ ಯಶೋಧರಪುರ ಹಾಗೂ ಕುಶಾಲನಗರ ಸೇತುವೆ ನಡುವಿನ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಿಸಿದರು. ನಿಯಮದಂತೆ 80 ಮಿಲಿಮೀಟರ್ ಪದರದ ಡಾಂಬರೀಕರಣ ಮಾಡಬೇಕು. ಅದಕ್ಕನುಗುಣವಾಗಿ ಡಾಂಬರೀಕರಣ ನಡೆಯುತ್ತಿದೆಯೇ ಇಲ್ಲವೇ ಎಂಬುದನ್ನು ಸಂಸದ ಪ್ರತಾಪ ಸಿಂಹ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಾಜರಿದ್ದರು.   ಭಾರೀ ಮಳೆಯಿಂದಾಗಿ ಹದಗೆಟ್ಟಿದ್ದ ಹುಣಸೂರಿನ ಯಶೋಧರಪುರ ಹಾಗೂ ಕುಶಾಲನಗರ ಸೇತುವೆ ನಡುವಿನ ರಸ್ತೆ ಡಾಂಬರೀಕರಣ ಕಾಮಗಾರಿ ಭರದಿಂದ ಸಾಗುತ್ತಿದೆ. 36 ಕಿಲೋ ಮೀಟರ್‍ […]

ಮೇಯರ್ ಸ್ಥಾನಕ್ಕೆ ಜಿ.ಟಿ.ದೇವೇಗೌಡರು ಆಯ್ಕೆ ಮಾಡುವ ವ್ಯಕ್ತಿಗೆ ನನ್ನ ಬೆಂಬಲವಿದೆ; ಸಾರಾ

 ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್‍ ಯಾರಾಗಬೇಕು ಎಂಬುದನ್ನು ಶಾಸಕರು ಹಾಗೂ ನಮ್ಮ ಪಕ್ಷದ ಮುಖಂಡರೂ ಆದ ಜಿ.ಟಿ.ದೇವೇಗೌಡ ಅವರೇ ನಿರ್ಧರಿಸಲಿ. ಅದಕ್ಕೆ ನಮ್ಮ ಸಂಪೂರ್ಣ ಸಮ್ಮತಿ ಇದೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.  ಬುಧವಾರ ತಮ್ಮ ಕಚೇರಿಯಲ್ಲಿ ಮೈತ್ರಿ ಮುಂದುವರಿಕೆ ಸಂಬಂಧ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಜಿ.ಟಿ.ದೇವೇಗೌಡರು ನಮ್ಮ ಪಕ್ಷದ ಮುಂಖಡರು. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ನಾನು ಹೇಳಿದವರೇ ಮಹಾಪೌರರಾಗುತ್ತಾರೆ ಎಂಬುದು ಸತ್ಯಕ್ಕೆ ದೂರವಾದುದ ಮಾತು ಎಂದು […]

10 ಸಾವಿರ ಒಂಟೆಗಳ ಮಾರಣಹೋಮಕ್ಕೆ ಆಸ್ಟ್ರೇಲಿಯಾ ನಿರ್ಧಾರ!

  ಆಸ್ಟ್ರೇಲಿಯಾ ವಿಶ್ವದಲ್ಲೇ ಅತಿ ಹೆಚ್ಚು ಒಂಟೆಗಳನ್ನು ಹೊಂದಿದ ರಾಷ್ಟ್ರವಾಗಿದೆ. ವಿಪರೀತ ನೀರನ್ನು ಕುಡಿಯುವ ಮೂಲಕ ಜನರಿಗೆ ನೀರಿನ ಅಭಾವ ಉಂಟುಮಾಡುತ್ತಿರುವ ದೇಶದಲ್ಲಿರುವ 10 ಸಾವಿರಕ್ಕೂ ಹೆಚ್ಚು ಒಂಟೆಗಳ ಮಾರಣ ಹೋಮಕ್ಕೆ ಐದು ದಿನಗಳ ಅಭಿಯಾನ ಕೈಗೊಳ್ಳಲು ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದೆ. ಒಂಟೆಗಳನ್ನು ಸಾಯಿಸಲು ಹೆಲಿಕಾಪ್ಟರ್‍ಗಳನ್ನು ಕಳುಹಿಸಲಾಗಿದೆ ಎಂದು ದಿ ಹಿಲ್ ಪತ್ರಿಕೆ ವರದಿ ಮಾಡಿದೆ.  ‘ಒಂಟೆಗಳು ಬೇಲಿಗಳನ್ನು ಮುರಿದು ಮನೆಗಳಿಗೆ ಬಂದು ಏರ್‍ಕಂಡೀಷನರ್‍ನಲ್ಲಿರುವ ನೀರನ್ನು ಕುಡಿದು ತೊಂದರೆ ನೀಡುತ್ತಿವೆ. ಮನೆಗಳಿಗೆ ಹಾನಿಯುಂಟು ಮಾಡುತ್ತಿವೆ. ಇದರಿಂದ ಸಾರ್ವಜನಿಕ […]

ಛಪಾಕ್‍ ಬಾಯ್ಕಾಟ್ ಅಭಿಯಾನ : ಪೇಚಿಗೆ ಸಿಲುಕಿಸಿದ ‘420’ ಟಿಕೆಟ್..!

  ದೀಪಿಕಾ ಪಡುಕೋಣೆ ನಟಿಸಿರುವ ಛಪಾಕ್‍ ಸಿನಿಮಾ ಬಾಯ್ಕಾಟ್‍ ಮಾಡಲು ಹೋಗಿ ಒಂದು ಗುಂಪು ಪೇಚಿಗೆ ಸಿಲುಕಿದೆ. ದೀಪಿಕಾ ಪಡುಕೋಣೆ ವಿರುದ್ಧ ಟ್ವಿಟರ್‍ ಅಭಿಯಾನ ಶುರು ಮಾಡಿದ್ದು, ಇದರಲ್ಲಿ ಛಪಾಕ್‍ ಸಿನಿಮಾ ನೋಡಲು ಬುಕಿಂಗ್‍ ಮಾಡಿದ್ದ ಟಿಕೆಟ್‍ ಗಳನ್ನು ಕ್ಯಾನ್ಸಲ್‍ ಮಾಡಿರುವುದಾಗಿ ಒಂದಷ್ಟು ಜನ ಟಿಕೆಟ್‍ ಸಮೇತ ಟ್ವೀಟ್‍ ಮಾಡಿದ್ದಾರೆ. ಆದರೆ ಎಲ್ಲರೂ ಟ್ವೀಟ್‍ ಮಾಡಿರುವ ಟಿಕೆಟ್‍ ನಲ್ಲಿದ ಸಂಖ್ಯೆ ಒಂದೇ ಆಗಿದೆ. ಒಂದೇ ಟಿಕೆಟ್‍ ಇಟ್ಟುಕೊಂಡು ಎಲ್ಲರೂ  ಟಿಕೆಟ್‍ ಗಳನ್ನು ಕ್ಯಾನ್ಸಲ್‍ ಮಾಡಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ ಅಂತ […]