You cannot copy content of this page.
. . .

Day: January 7, 2020

ಜೆಎನ್‍ಯು ದಾಂದಲೆ ಖಂಡಿಸಿ ವಿದ್ಯಾರ್ಥಿಗಳಿಂದ ಮೊಂಬತ್ತಿ ಮೆರವಣಿಗೆ

 ಜೆಎನ್‍ಯುನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದಾಂದಲೆ ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತೆಯೇ, ಬೆಂಗಳೂರಿನಲ್ಲಿ ಇಂದು ರಾತ್ರಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಾಯಿಸಿ ಪ್ರತಿಭಟಿಸಿದರು. ಮೊಂಬತ್ತಿ ದೀಪದ ಮೆರವಣಿಗೆ ಹೊರಟು ದಾಂದಲೆಗೆ ವಿರೋಧ ವ್ಯಕ್ತಪಡಿಸಿದರು.

ವ್ಯಕ್ತಿ ಗಮನ ಬೇರೆಡೆ ಸೆಳೆದು ನಗದು ದೋಚಿದ ಕಳ್ಳರು

 ಮೈಸೂರು: ‘ನಿಮ್ಮ ಹಣ ಬಿದ್ದಿದೆ’ ಎಂದು ಹೇಳಿ ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ನಾಲ್ವರು ಕಳ್ಳರು ವ್ಯಕ್ತಿ ಬಳಿ ೫೦ ಸಾವಿರ ರೂ. ಇದ್ದ ಬ್ಯಾಗ್‌ನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.  ನಗರದ ಚಂದ್ರು ಹಣ ಕಳೆದುಕೊಂಡವರು. ಅವರು ಸೋಮವಾರ ಸಂಜೆ ಸರಸ್ವತಿಪುರಂನ ಎಸ್‌ಬಿಐ ಬ್ಯಾಂಕ್‌ನಲ್ಲಿ ೫೦ ಸಾವಿರ ರೂ. ಹಣವನ್ನು ಡ್ರಾ ಮಾಡಿಕೊಂಡು ತಮ್ಮ ಬಳಿ ಇದ್ದ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದಾರೆ. ನಂತರ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ಇಬ್ಬರು ವ್ಯಕ್ತಿಗಳು ನಿಮ್ಮ ಶರ್ಟ್ […]

ಕಾಲೇಜಿಗೆ ಕನ್ನ ಹಾಕಿದ ಖದೀಮರು

 ಮೈಸೂರು: ಕಾಲೇಜೊಂದರ ಹಿಂಬಾಗಿಲಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ಅಲ್ಲಿದ್ದ ೧.೫೦ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ತಾಲ್ಲೂಕಿನ ಚಿಕ್ಕಳ್ಳಿ ಗ್ರಾಮದ ಬಳಿಯ ಮೈಸೆಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಳ್ಳತನವಾಗಿದೆ.  ಸೆಕ್ಯುರಿಟಿಯವರು ರಾತ್ರಿ ವೇಳೆ ಕಾಲೇಜಿನ ಎಲ್ಲಾ ವಿಭಾಗಗಳಿಗೆ ಬೀಗ ಹಾಕಿ ಕಾವಲಿದ್ದರು. ಬೆಳಗ್ಗಿನ ಜಾವ ಅವರಿಗೆ ತಿಳಿಯದಂತೆ ಕಳ್ಳತನವಾಗಿದೆ. ಕಳ್ಳರು ಕಾಲೇಜಿನ ಸಿಸಿಟಿವಿ ಜಖಂಗೊಳಿಸಿದ್ದಾರೆ. ಕಾಲೇಜಿನಲ್ಲಿದ್ದ ಬೆಲೆ ಬಾಳುವ ವಸ್ತು, ಗೋಲಕದ ಹಣವನ್ನು ಕಳವು ಮಾಡಿದ್ದಾರೆ. ಇದರ ಜೊತೆಗೆ […]

ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ ಗೊತ್ತಾ..?

   2012ರಲ್ಲಿ ನಡೆದ ದೆಹಲಿ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ದಿನಾಂಕ FIX ಆಗಿದೆ. ಇದೇ ಜನವರಿ 22 ರಂದು ಬೆಳಗ್ಗೆ ನಾಲ್ವರು ಅಪರಾಧಿಗಳು ಗಲ್ಲಿಗೇರುತ್ತಿದ್ದಾರೆ. ಆದರೆ ಪ್ರಕರಣದ ಬಾಲಾಪರಾಧಿ 3 ವರ್ಷ ಅನುಭವಿಸಿ, 2015ರ ನವೆಂಬರ್ 15ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಹಾಗಾದರೆ ಆ ಬಾಲಾಪರಾಧಿ ಈಗ ಎಲ್ಲಿದ್ದಾನೆ..? ಏನು ಮಾಡುತ್ತಿದ್ದಾನೆ..? ಇದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಆ ಕುತೂಹಲ ತಣಿಸುವ ಪ್ರಯತ್ನವೇ ಈ ವರದಿ.  ನಿರ್ಭಯಾ ಪ್ರಕರಣದಲ್ಲಿ ಒಟ್ಟು ಆರು ಮಂದಿ […]

ನಿರ್ಭಯಾ ಪ್ರಕರಣ; ಜನವರಿ 22ಕ್ಕೆ ಗಲ್ಲು ಜಾರಿ

  2012ರ ದೆಹಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ದೆಹಲಿಯ ಪಟಿಯಾಲ ಕೋರ್ಟ್‍ ಗಲ್ಲು ಶಿಕ್ಷೆ ದಿನಾಂಕ ನಿಗದಿ ಮಾಡಿದೆ. ಜನವರಿ 22ರ ಬೆಳಗ್ಗೆ 7 ಗಂಟೆಗೆ ನೇಣುಶಿಕ್ಷೆ ವಿಧಿಸುವಂತೆ ಸೂಚಿಸಲಾಗಿದ್ದು, ನಾಲ್ವರು ಅಪರಾಧಿಗಳಿಗೆ ಡೆತ್‍ ವಾರೆಂಟ್‍ ಜಾರಿ ಮಾಡಿದೆ.   ಶೀಘ್ರವಾಗಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಸಂತ್ರಸ್ತೆಯ ತಾಯಿ ಕೋರ್ಟ್‍ ಮೊರೆ ಹೋಗಿದ್ದರು. ಆಕೆಯ ಮನವಿಗೆ ಸ್ಪಂದಿಸಿದ ಕೋರ್ಟ್‍ ಗಲ್ಲು ಶಿಕ್ಷೆಯ ದಿನಾಂಕವನ್ನು ಪ್ರಕಟಿಸಿದೆ. ಇದರಿಂದ ಕೊನೆಗೂ 130 ಕೋಟಿ […]

ಖಾಸಿಂ ಸೊಲೆಮನಿ ಅಂತ್ಯಕ್ರಿಯೆ: ಕಾಲ್ತುಳಿತಕ್ಕೆ 35 ಮಂದಿ ಬಲಿ

  ಅಮೆರಿಕದ ವೈಮಾನಿಕ ದಾಳಿಯಲ್ಲಿ ಕಳೆದ ವಾರ ಸಾವನ್ನಪ್ಪಿದ್ದ ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿ ಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆ ಕಾಲ್ತುಳಿತ ಸಂಭವಿಸಿದೆ. ಈ ವೇಳೆ 35ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.   ಖಾಸಿಂ ಪಾರ್ಥಿವ ಶರೀರದ ಅಂತಿಮ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದು, ಈ ವೇಳೆ ನೂಕುನುಗ್ಗಲು ಉಂಟಾಗಿ ಈ ದುರಂತ ನಡೆದಿದೆ. ಕಾಲ್ತುಳಿತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ಇರಾನ್ ತುರ್ತು ಸೇವೆಯ ಮುಖ್ಯಸ್ಥ ಪಿರೋಸ್ಸೈನ್ […]

ಜಿ.ಟಿ.ದೇವೇಗೌಡರು ಸೈಲೆಂಟ್‍ ರಾಜಕಾರಣಿಯಂತೆ..!

 ಅಬ್ಬರಿಸಿ ಬೊಬ್ಬಿರಿದರಷ್ಟೇ ರಾಜಕಾರಣ ಅಲ್ಲ. ನನ್ನದು ಈಗ ಸೈಲೆಂಟ್ ಪಾಲಿಟಿಕ್ಸ್ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಮಾತಾನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತಾನಾಡದೆಯೇ ರಾಜಕಾರಣ ಮಾಡುತ್ತೇನೆ ಎಂದರು.   ಹುಣಸೂರು ಉಪಚುನಾವಣೆ ವೇಳೆ ತಟಸ್ಥವಾಗಿದ್ದ  ಜಿ.ಟಿ.ದೇವೇಗೌಡರು, ಮೈಸೂರು ಪಾಲಿಕೆ ಮೇಯರ್-ಉಪಮೇಯರ್‍ ಚುನಾವಣೆ ವಿಚಾರದಲ್ಲೂ ಹಸ್ತಕ್ಷೇಪ ಮಾಡುತ್ತಿಲ್ಲ. ಈ ಬಗ್ಗೆ ವಿಚಾರಿಸಿದಾಗ ಅವರು ಹೇಳಿದ್ದು ಹೀಗೆ.. ಎಲ್ಲವನ್ನು ಸಾರಾ ಮಹೇಶ್ ನೋಡಿಕೊಳ್ಳುತ್ತಿದ್ದಾರೆ. ಪಕ್ಷದ ಸಭೆ ಕರೆದಾಗಲೂ ನನ್ನನ್ನು […]

ಮಾನ್ಯ ಸಚಿವರೆ ನಾನು ಪ್ರಾಮಾಣಿಕ, ತಪ್ಪು ಮಾಡಿಲ್ಲ.. ಮಾಡಿಲ್ಲ..

 ‘ಮಾನ್ಯ ಸಚಿವರೆ ನಾನು ಪ್ರಾಮಾಣಿಕ. ತಪ್ಪು ಮಾಡಿಲ್ಲ.. ಮಾಡಿಲ್ಲ.. ಮಾಡಿಲ್ಲ. ನಿಮ್ಮ ಹೇಳಿಕೆಯಿಂದ ಮುಜುಗರವಾಗಿದ್ದು, ಸಾರ್ವಜನಿಕವಾಗಿ ಜೀವನ ನಡೆಸಲು ಆಗುತ್ತಿಲ್ಲ. ನೀವು ಯಾವುದೇ ತನಿಖೆ ಮಾಡಿದ್ರು ನಾನು ಸಿದ್ಧನಿದ್ದೇನೆ..’  ಮೈಸೂರು ಯುವಜನ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಸುರೇಶ್ ಅವರ ಹೇಳಿಕೆಗಳಿವು. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಭಾವುಕವಾಗಿ ನುಡಿದರು.  ‘ಉಸ್ತುವಾರಿ ಸಚಿವರೆ ಸತ್ಯ ಅರಿತು ಅಧಿಕಾರಿಗಳನ್ನು ಪ್ರಶ್ನೆ ಮಾಡಿ. ನಿಮ್ಮ ಹೇಳಿಕೆಯಿಂದ ಮನಸ್ಸಿಗೆ ನೋವುಂಟಾಗಿದೆ. ನಿಮ್ಮ ಅಸಾಂವಿಧಾನಿಕ ಮಾತುಗಳಿಂದ ನಾನು ಮತ್ತು ನನ್ನ […]

ಗಗನಯಾನಿಗಳಿಗೆ ಮೈಸೂರಿನಲ್ಲಿ ಸಿದ್ಧವಾಗ್ತಿದೆ ಆಹಾರ..!

ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. 2022ರೊಳಗೆ ಗಗನಯಾನ ನಡೆಯಲಿದ್ದು, ಈಗಾಗಲೇ ಇದಕ್ಕಾಗಿ ನಾಲ್ವರು ಗಗನಯಾನಿಗಳನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತದೆ. 5 ರಿಂದ 7 ದಿನಗಳ ಕಾಲ ಗಗನಯಾನ ನಡೆಸಲಿರುವ ಗಗನಯಾತ್ರಿಗಳಿಗೆ ಮೈಸೂರಿನಲ್ಲಿ ಆಹಾರ ತಯಾರಿಸಲಾಗುತ್ತದೆ ಎಂಬುದು ಹೆಮ್ಮೆಯ ಸಂಗತಿ.  ಹೌದು, ಮೈಸೂರಿನಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‍ ಎಲ್‍) ಗಗನಯಾನಿಗಳಿಗಾಗಿ ಆಹಾರ ಪದಾರ್ಥಗಳು ಮತ್ತು ಆಹಾರ ಹೀಟರ್‌ಗಳನ್ನು ಸಿದ್ಧಪಡಿಸುತ್ತಿದೆ ಎಂದು ತಿಳಿದು ಬಂದಿದೆ. ಎಗ್ ರೋಲ್ಸ್, […]

ಕೋರ್ಟ್ ತೀರ್ಪಿನಲ್ಲಿ ಸೋತ ಅನರ್ಹರು ಸಚಿವರಾಗಬಾರದು ಎಂದಿಲ್ಲ; ಎಚ್.ವಿಶ್ವನಾಥ್

 ಸೋತ ಅನರ್ಹ ಶಾಸಕರು ಸಚಿವರಾಗಬಾರದು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಎಲ್ಲಿಯೂ ಇಲ್ಲ ಎಂದು ಮಾಜಿ ಸಚಿವ ಅಡಗೂರು ಎಚ್‍.ವಿಶ್ವನಾಥ್‍ ಪ್ರತಿಕ್ರಿಯಿಸಿದ್ದಾರೆ.   ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವುದು ಬಿಜೆಪಿ ಹೈಕಮಾಂಡ್ ಹಾಗೂ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಸೋತ ಅನರ್ಹರಿಗೆ ಸಚಿವ ಸ್ಥಾನ ನೀಡಬಾರದು ಎಂದು ಕೋರ್ಟ್‌ ತೀರ್ಪಿನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಎನ್ನುವ ಮೂಲಕ ತಾನು ಸಚಿವ ಸ್ಥಾನ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.