You cannot copy content of this page.
. . .

Day: January 6, 2020

ಮೊಬೈಲ್ ಅಂಗಡಿಗೆ ಕನ್ನ; 10 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳು ಕಳವು

 ಎಚ್.ಡಿ.ಕೋಟೆ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಆನಂದ್ ಮೊಬೈಲ್ ಅಂಗಡಿಯಲ್ಲಿ ಒಟ್ಟು ೧೦ ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.  ಸೋಮವಾರ ಬೆಳಿಗ್ಗೆ ಅಂಗಡಿಗೆ ಹೂವು ಹಾಕಲು ಬಂದಿದ್ದ ವ್ಯಕ್ತಿ, ಅಂಗಡಿಯ ಮುಂಭಾಗದ ಬಾಗಿಲನ್ನು ಹಾರೆಯಿಂದ ಮೀಟಿರುವುದನ್ನು ಗಮನಿಸಿ ತಕ್ಷಣ ಅಂಗಡಿಯ ಮಾಲೀಕ ಆನಂದ್ ವಿಷಯ ತಿಳಿಸಿದ್ದಾರೆ. ಅಂಗಡಿಗೆ ತಕ್ಷಣ ಧಾವಿಸಿದ ಮಾಲೀಕ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ವಿವಿಧ ಕಂಪನಿಯ ಆ್ಯಂಡ್ರಾಯಿಡ್ ೬೫ ಮೊಬೈಲ್‌ಗಳು ಕಳವಾಗಿರುವುದು […]

ಇಡೀ ರಾತ್ರಿ ಕಾಫಿ ತೋಟದಲ್ಲೇ ಕಾಲ ಕಳೆದ ಮಗು

 ಮಡಿಕೇರಿ: ಒಂದೂವರೆ ವರ್ಷದ ಮಗುವೊಂದು ಇಡೀ ರಾತ್ರಿ ಕಾಫಿ ತೋಟದಲ್ಲೇ ಕಾಲ ಕಳೆದ ಘಟನೆ ವಿರಾಜಪೇಟೆ ತಾಲ್ಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ನಡೆದಿದೆ.  ತಮಿಳುನಾಡಿನ ತಿರುವಣ್ಣಾಮಲೈನಿಂದ ಕೂಲಿ ಕೆಲಸಕ್ಕೆ ಬಂದಿರುವ ನಾಗರಾಜು ಮತ್ತು ಸೀತಾ ದಂಪತಿಯ ಒಂದೂವರೆ ವರ್ಷದ ಮಗು ನಿತ್ಯಾಶ್ರೀ, ಇಡೀ ರಾತ್ರಿ ಕಾಫಿ ತೋಟದಲ್ಲೇ ಕಾಲ ಕಳೆದಿದ್ದಾಳೆ. ಭಾನುವಾರ ಸಂಜೆ ವೆಸ್ಟ್ ನೆಮ್ಮಲೆ ಗ್ರಾಮದ ರಾಜಕುಶಾಲಪ್ಪ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಈ ದಂಪತಿ ಮಗುವನ್ನು ಸೀರೆಯೊಂದರಲ್ಲಿ ಜೋಲಿ ಕಟ್ಟಿ ಮಲಗಿಸಿದ್ದರು. ಬಳಿಕ ಬಂದು […]

ರಾಜ್ಯದಲ್ಲಿ ಪ್ರವಾಹ ಪರಿಹಾರಕ್ಕೆ 1869 ಕೋಟಿ ರಿಲೀಸ್

 ಕೊನೆಗೂ ಕೆಂದ್ರ ಸರ್ಕಾರ ರಾಜ್ಯದ ಮನವಿಗೆ ಸ್ಪಂದಿಸಿದೆ. ಪ್ರವಾಹ ಪರಿಹಾರಕ್ಕೆ 2ನೇ ಕಂತಿನಲ್ಲಿ 1869.85 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ರಿಲೀಸ್‍ ಮಾಡಿದೆ.   ಕೇಂದ್ರ ಗೃಹ ಸಚಿವ ಅಮಿತ್‍ ಷಾ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ 7 ರಾಜ್ಯಗಳಿಗೆ 5908.56 ಕೋಟಿ ರೂಪಾಯಿ ಹೆಚ್ಚುವರಿ ಸಹಾಯಧನವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ.   ಕರ್ನಾಟಕ ರಾಜ್ಯಕ್ಕೆ 1869.85 ಕೋಟಿ ರೂಪಾಯಿ […]

ಜಿಂಕೆ ಎಂದು ಪಟಾಕಿ ಸಿಡಿಸಿದರೆ ಜಿಗಿದದ್ದು ಹುಲಿ..!

  ತರಕಾರಿ ಬೆಳೆ ಮಧ್ಯೆ ಜಿಂಕೆ ಇದೆ ಎಂದು ತಿಳಿದು ರೈತ ಪಟಾಕಿ ಸಿಡಿಸಿದರೆ ಅಲ್ಲಿಂದ ಹುಲಿ ಜಿಗಿದು ಭೀತಿ ಉಂಟು ಮಾಡಿದ ಘಟನೆ ಮೈಸೂರು ಜಿಲ್ಲೆ ಸರಗೂರು ಸಮೀಪದ ಭಿರವಾಳ್‍ ಅಣೆಕಟ್ಟೆ ಹತ್ತಿರ ನಡೆದಿದೆ.   ರೈತ ರಾಮಪ್ಪ ಎಂಬುವವರು ತಮ್ಮ ಜಮೀನಿನಲ್ಲಿ ಟೊಮ್ಯಾಟೋ, ಬದನೆ ಸೇರಿದಂತೆ ಹಲವು ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ. ಆನೆಗಳು, ಜಿಂಕೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ದಾಳಿ ಮಾಡಿ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಹೀಗಾಗಿ ರಾಮಪ್ಪ ಅವರು ಬೆಳೆಯ ಬಳಿಯೇ […]

ಜ.18ಕ್ಕೆ ಮೈಸೂರು ಮೇಯರ್, ಉಪ ಮೇಯರ್ ಚುನಾವಣೆ

  ಕೊನೆಗೂ ಮೈಸೂರು ಮಹಾನಗರ ಪಾಲಿಕೆಯ ಮೇಯರ್‍, ಉಪಮೇಯರ್‍ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಜನವರಿ 18 ರಂದು ಚುನಾವಣೆ ನಡೆಯಲಿದ್ದು, ಅಂದು ಬೆಳಗ್ಗೆ 9.30ಕ್ಕೆ ಚುನಾವಣಾ ಪ್ರಕ್ರಿಯೆಯ ಸಭೆ ನಡೆಯಲಿದೆ. ಸಭೆ ಆರಂಭಕ್ಕೂ ಮೊದಲು ನಾಮಪತ್ರಗಳ ಪರಿಶೀಲನೆ ನಡೆಸಿ, ಅರ್ಹ ಅಭ್ಯರ್ಥಿಗಳ ವಿವರವನ್ನು ಸಭೆಯಲ್ಲಿ ಓದಲಾಗುತ್ತದೆ. ಇದೇ ದಿನ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಯೂ ನಡೆಯಲಿದೆ.    ಕಾರ್ಪೋರೇಷನ್ ನಲ್ಲಿರುವ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೇಯರ್‍ ಸ್ಥಾನ ಹಿಂದುಳಿದ ವರ್ಗ […]

ಹುಳು ಇದ್ದ ಆಹಾರ ಸೇವಿಸಿ ಶಾಲೆ ಮಕ್ಕಳು ಅಸ್ವಸ್ಥ

 ಹುಳು ಇದ್ದ ಆಹಾರ ಸೇವಿಸಿ ಎಚ್.ಡಿ.ಕೋಟೆಯ ಆದರ್ಶ ಶಾಲೆ ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ವಿದ್ಯಾರ್ಥಿಗಳನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.  ಊಟ ಮಾಡುತ್ತಿದ್ದಾಗ ಹುಳು ಕಂಡೊಡನೆ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ. ಕೂಡಲೆ ಎಚ್ಚೆತ್ತು ಶಾಲಾ ಸಿಬ್ಬಂದಿ ಇತರ ವಿದ್ಯಾರ್ಥಿಗಳಿಗೆ ಊಟ ನೀಡದಂತೆ ಸ್ಥಗಿತಗೊಳಿಸಿದ್ದಾರೆ. ಹುಳು ಇದ್ದ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.

ಫೆ.8ರಂದು ದೆಹಲಿ ವಿಧಾನಸಭೆ ಚುನಾವಣೆ

 ದೆಹಲಿಯ ವಿಧಾನಸಭೆ ಚುನಾವಣೆಯು ಫೆ.8ರಂದು ನಡೆಯಲಿದ್ದು, ಫೆ.11ಕ್ಕೆ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.  ದೆಹಲಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ, ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಲಿದೆ. ಜ.14- ಅಧಿಸೂಚನೆ, ಜ.21- ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಜ.22- ನಾಮಪತ್ರ ಪರಿಶೀಲನೆ, ಜ.24- ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.  ಹಾಲಿ ವಿಧಾನಸಭೆ ಮತ ಚಲಾಯಿಸುವ ಅರ್ಹರ ಸಂಖ್ಯೆ ಈ ಬಾರಿ 1.46 ಕೋಟಿ ಆಗಿದೆ. ಈ ಪೈಕಿ 80.55 ಲಕ್ಷ […]

ನಟಿ, ರಾಜಕಾರಣಿ ರೋಜಾ ಮೇಲೆ ಹಲ್ಲೆ..?

  ಟಾಲಿವುಡ್‍ ನ ಖ್ಯಾತ ನಟಿ ಹಾಗೂ ರಾಜಕಾರಣಿ ರೋಜಾ ಮೇಲೆ ಸ್ವಪಕ್ಷೀಯರೇ ಹಲ್ಲೆಗೆ ಯತ್ನಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.  ರೋಜಾ ಅವರನ್ನು ಚಿತ್ತೂರು ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಚೇರಿಯ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ರೋಜಾ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ, ಅದೇ ಊರಿನ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಯೂನಿಯನ್ ಸಮಿತಿ ಸದಸ್ಯ ಅಮ್ಮುಲಿನ್ ಎಂಬಾತನ 200ಕ್ಕೂ ಹೆಚ್ಚು ಬೆಂಬಲಿಗರು ರೋಜಾ ಅವರ ಕಾರನ್ನು ತಡೆದಿದ್ದಾರೆ. ಅವರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ.    […]

ಉರುಳಿಗೆ ಚಿರತೆ ಬಲಿ

 ಬೇಟೆಗಾರರು ಇಟ್ಟಿದ್ದ ಉರುಳಿಗೆ ಚಿರತೆ ಬಲಿಯಾಗಿರುವ ಘಟನೆ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿ ನಡೆದಿದೆ.  ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಚಂಗಪ್ಪ ಎಂಬವರ ಕಾಫಿ ತೋಟದ ಸನಿಹದಲ್ಲಿರುವ ತೋಡಿನಲ್ಲಿ ಚಿರತೆಯ ಕಳೇಬರ ಭಾನುವಾರ ಮಧ್ಯಾಹ್ನ ದೊರೆತ್ತಿದ್ದು, ಹಿಂದಿನ ರಾತ್ರಿ ಸತ್ತಿರಬಹುದು ಎನ್ನಲಾಗಿದೆ. ಕುತ್ತಿಗೆಯಲ್ಲಿ ಉರುಳು ಕಂಡುಬಂದಿದ್ದು, ಸುಮಾರು ೪ ವರ್ಷ ಪ್ರಾಯದ ಗಂಡು ಚಿರತೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.  ಎಸಿಎಫ್, ಆರ್.ಎಫ್.ಒ, ಡಿಆರ್‌ಎಫ್‌ಒ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಪಟ್ಟಣದ ಪಶುವೈದ್ಯ ಇಲಾಖೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಜ.8ರಂದು ಕಾರ್ಮಿಕ ಸಂಘಟನೆಗಳಿಂದ ಮುಷ್ಕರ; ಜಾಗೃತಿ ರಥಕ್ಕೆ ಚಾಲನೆ

 ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಿಐಟಿಯು ಹಾಗೂ ಇತರೆ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಜ.8ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ರಥಕ್ಕೆ ಮೈಸೂರಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಎರಡು ದಿನಗಳ ಕಾಲ ಜಾಗೃತಿ ರಥ ನಗರದೆಲ್ಲೆಡೆ ಸಂಚರಿಸಲಿದೆ.