You cannot copy content of this page.
. . .

Day: January 5, 2020

ರಾಜಸ್ಥಾನದ ಬಿಕಾನೇರ್ ಆಸ್ಪತ್ರೆಯಲ್ಲಿ ಒಂದೇ ತಿಂಗಳಲ್ಲಿ 162 ಶಿಶು ಮರಣ

 ರಾಜಸ್ಥಾನದ ಬಿಕಾನೇರ್‌ ಆಸ್ಪತ್ರೆಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ 162 ಶಿಶುಗಳು ಮೃತಪಟ್ಟಿವೆ. ಕೋಟಾದಲ್ಲಿರುವ ಜೆಕೆ ಲಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಡಿಸೆಂಬರ್‍ ತಿಂಗಳಲ್ಲೇ 110 ಶಿಶುಗಳು ಸಾವಿಗೀಡಾಗಿದ್ದವು. ಅದಕ್ಕೆ ಹೋಲಿಸಿದರೆ ಬಿಕಾನೇರ್‍ ಆಸ್ಪತ್ರೆಯಲ್ಲಿ ಸಾವಿಗೀಡಾದ ಶಿಶುಗಳ ಸಂಖ್ಯೆ ಹೆಚ್ಚಿದೆ.  ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದ ವಿವಿಧ ಆಸ್ಪತ್ರೆಗಳಲ್ಲಿ 2,219 ಶಿಶುಗಳು ಚಿಕಿತ್ಸೆಗಾಗಿ ದಾಖಲಾಗಿದ್ದವು. ಅದರಲ್ಲಿ 162 ಶಿಶುಗಳು ಐಸಿಯುನಲ್ಲಿಯೇ ಮೃತಪಟ್ಟಿವೆ. ಈ ಶಿಶುಗಳು ಆಸ್ಪತ್ರೆಯಲ್ಲಿ ಹುಟ್ಟಿದ್ದು ಅಲ್ಲ ಎಂದು ಸರ್ದಾರ್ ಪಟೇಲ್ ಮೆಡಿಕಲ್ ಕಾಲೇಜ್, ಪಿಬಿಎಂ ಆಸ್ಪತ್ರೆಯ ಪ್ರಾಂಶುಪಾಲ ಡಾ.ಎಚ್.ಎಸ್ ಕುಮಾರ್ ಹೇಳಿದ್ದಾರೆ.  ಪ್ರಾಥಮಿಕ ಆರೋಗ್ಯ […]

ಸಹಾಯ ಮಾಡುವ ನೆಪದಲ್ಲಿ ವಂಚನೆ

 ಮೈಸೂರು: ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಸಹಾಯ ಮಾಡುವ ನೆಪದಲ್ಲಿ ಬಂದ ಯುವಕನೋರ್ವ ವ್ಯಕ್ತಿಯೊಬ್ಬರಿಂದ 17 ಸಾವಿರ ರೂ. ಹಣವನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.  ನಗರದ ದೇವರಾಜು ಅವರು ದೇವರಾಜ ಮಾರುಕಟ್ಟೆ ಎದುರು ಇರುವ ಎಸ್.ಬಿ.ಐ ಬ್ಯಾಂಕ್ ಎಟಿಎಂಗೆ ಹೋಗಿದ್ದಾಗ ಅವರ ಹಿಂಭಾಗದಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿ ಸಹಾಯ ಮಾಡುವವನಂತೆ ನಟಿಸಿದ್ದಾನೆ. ನಂತರ ದೇವರಾಜು ಅವರಿಗೆ ತಿಳಿಯದ ಹಾಗೆ 17 ಸಾವಿರ ರೂ. ಹಣವನ್ನು ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ದೇವರಾಜ […]

ಪೌರಾಣಿಕ ನಾಟಕದಲ್ಲಿ ಪಾತ್ರ ನಿರ್ವಹಿಸಿದ ಜಿಟಿಡಿ!

 ‘ಶ್ರೀರಾಮ ಚಂದ್ರನಾ…’ ಎಂದು ಪೌರಾಣಿಕ ನಾಟಕದ ಪಾತ್ರದ ಹಾಡನ್ನು ಧ್ವನಿಪೂರ್ಣವಾಗಿ ಹಾಡುವ ಮೂಲಕ ಮಾಜಿ ಸಚಿವ ಜಿ.ಟಿ.ದೇವೇಗೌಡ ಪ್ರೇಕ್ಷಕರ ಮನಸೂರೆಗೊಂಡರು.  ನಗರದ ಪುರಭವನದಲ್ಲಿ ಮುಕ್ತ ಒಡ್ಡೊಲಗ ವೇದಿಕೆ ವತಿಯಿಂದ ಆಯೋಜಿಸಿರುವ ‘ಸಂಪೂರ್ಣ ರಾಮಾಯಣ’ ನಾಟಕ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಅವರು ವೇದಿಕೆಯಲ್ಲಿ ಪಾತ್ರಧಾರಿಯಂತೆ ಹಾಡಿದರು. ಆ ಮೂಲಕ ತಾವು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದ ಸಂದರ್ಭವನ್ನು ನೆನಪಿಸಿಕೊಂಡರು. ಜಿ.ಟಿ.ದೇವೇಗೌಡರು ಮೈಕ್‍ ಹಿಡಿದು ಹಾಡುತ್ತಿದ್ದಂತೆ ಸಭಿಕರು ಶಿಳ್ಳೆ, ಚಪ್ಪಾಳೆ ಹಾಕಿ ಖುಷಿಪಟ್ಟರು.  ಈ ಹಿಂದೆಯೂ ಉನ್ನತ ಶಿಕ್ಷಣ ಸಚಿವರಾಗಿದ್ದ ವೇಳೆ […]

ಭಕ್ತನ ಸೋಗಿನಲ್ಲಿ ಕಳ್ಳತನ

 ಮೈಸೂರು: ಭಕ್ತನ ಸೋಗಿನಲ್ಲಿ ಬಂದ ಖದೀಮನೊಬ್ಬ 24 ಸಾವಿರ ರೂ. ಹಣವಿದ್ದ ಅರ್ಚಕರ ಬ್ಯಾಗ್‌ನ್ನು ಕಳವು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕುವೆಂಪುನಗರ ನವಿಲು ರಸ್ತೆಯ ರಾಘವೇಂದ್ರ ಮಠದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿರುವ ಶ್ರೀಧರ ವಿಠಲ ಎಂಬವರೇ ವಂಚನೆಗೊಳಗಾದವರು.  ಅರ್ಚಕರು ಎಂದಿನಂತೆ ಮಠಕ್ಕೆ ಬಂದು ಬಾಗಿಲನ್ನು ತೆರೆದು ಒಳಗೆ ಹೋಗಿದ್ದು, ಅದೇ ಸಮಯದಲ್ಲಿ ಅಪರಿಚಿತ ವ್ಯಕ್ತಿ ಮಠಕ್ಕೆ ಬಂದು ಕುಳಿತುಕೊಂಡು ಮಠದಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ವಿಚಾರ ಮಾಡಿದ್ದಾನೆ. ನಂತರ ಅರ್ಚಕರು ಬ್ಯಾಗನ್ನು ಮಠದಲ್ಲಿದ್ದ ಬೀರುವಿನಲ್ಲಿಟ್ಟು, […]

ಸಿಎಎ ಜನಜಾಗೃತಿ ಅಭಿಯಾನ; ಮನೆ-ಮನೆಗೆ ತೆರಳಿ ಅರಿವು ಮೂಡಿಸಿದ ಬಿಜೆಪಿ ನಾಯಕರು

 ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ವಿವಾದ ಸೃಷ್ಟಿಸಿರುವ ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿ ಸದಭಿಪ್ರಾಯ ಮೂಡಿಸುವ ದೃಷ್ಟಿಯಿಂದ ಬಿಜೆಪಿ ನಾಯಕರು ಮನೆ-ಮನೆಗೆ ತೆರಳಿ ಸಿಎಎ ಜನಜಾಗೃತಿ ಮೂಡಿಸುತ್ತಿದ್ದಾರೆ. ಈ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಚಾಲನೆ ನೀಡಿದರು.  ಬೆಂಗಳೂರಿನ ವಸಂತನಗರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ನೂರಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು. ಅಭಿಯಾನದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ತಮ್ಮ ಕ್ಷೇತ್ರಗಳ ಜವಾಬ್ದಾರಿ ಹೊತ್ತು […]

ಅಡ್ಡದಾರಿ ಹಿಡಿದ ಪೌರತ್ವ ಬೆಂಬಲ

 ಮೈಸೂರು: ನೀವು ಫ್ರೀ ಇದ್ದೀರಾ? ಮಿಸ್ಡ್‌ಕಾಲ್ ಕೊಡಿ, ನಾನು ಫ್ರೀ ಇದ್ದೀನಿ, ಯಾರಾದರೂ ಕಾಲ್ ಮಾಡ್ತಿರಾ? ನನ್ನ ಜೊತೆ 69 ಹಾಟ್ ಗರ್ಲ್ಸ್ ಇದ್ದಾರೆ. ಕರೆ ಮಾಡಿ ಈ ನಂಬರ್‌ಗೆ ಕಾಲ್ ಮಾಡಿದರೆ ನೆಟ್ ಫ್ಲಿಕ್ಸ್ 6 ತಿಂಗಳು ಉಚಿತ… ಹೀಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ನಂಬರ್ ನೋಡಿ ಕರೆ ಮಾಡುವುದು ಅಥವಾ ಮಿಸ್ಡ್ ಕಾಲ್ ಮಾಡಿದರೆ ಜೋಕೆ!  ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಚೋದನಕಾರಿ ಬರಹಗಳ ಕೆಳಗೆ ಕಾಣಿಸುವುದು ಕೇವಲ ಒಂದೇ ಸಂಖ್ಯೆ 8866288662.  ಇದು […]

ನೆರೆ ಪರಿಹಾರ ನೀಡದಿದ್ದರೆ ಕರ್ನಾಟಕ ಬಂದ್; ವಾಟಾಳ್ ನಾಗರಾಜ್

 ನೆರೆಹಾವಳಿಯಿಂದ ಕರ್ನಾಟಕಕ್ಕೆ ಅಪಾರ ನಷ್ಟ, ಜೀವಹಾನಿಯಾಗಿದ್ದು, ಕೇಂದ್ರದಿಂದ ಈವರೆಗೂ ಅನುದಾನ ಬಿಡುಗಡೆಯಾಗಿಲ್ಲ. ನನ್ನ ಸಂಸದರು ಕೂಡ ಕೋಮಾ ಸ್ಥಿತಿಯಲ್ಲಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಕರ್ನಾಟಕ ಬಂದ್‍ ಮಾಡಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್‍ ನಾಗರಾಜ್‍ ಹೇಳಿದ್ದಾರೆ.  ಮೈಸೂರಿನಲ್ಲಿ ಇಂದು ಬೆಳಿಗ್ಗೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಪ್ರಧಾನಿ ಮೋದಿ ಅವರು ಗಣನೆಗೆ ತೆಗೆದುಕೊಂಡಿಲ್ಲ. ನೆರೆಯಿಂದ 50 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದ್ದರೂ ಪ್ರಧಾನ ಮಂತ್ರಿಗಳು ಸ್ಪಂದಿಸುತ್ತಿಲ್ಲ. ಕೇಂದ್ರದಿಂದ […]

ಸಿದ್ದರಾಮಯ್ಯ ಭೇಟಿಯಾದ ಡಿಕೆಶಿ; ಕುತೂಹಲ ಮೂಡಿಸಿದ ಭೇಟಿ

 ‘ಕೈ’ ಪಾಳಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ತೀವ್ರ ಚರ್ಚೆ ಹಾಗೂ ಲಾಬಿ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.  ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಡಿಕೆಶಿ 1 ಕ್ಕೂ ಹೆಚ್ಚು ಗಂಟೆಗಳ ಕಾಲ ಗಂಭೀರ ಚರ್ಚೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿಯೂ ಆಗಿರುವ ಅವರು ಇದೇ ವಿಚಾರವಾಗಿ ಮಾಜಿ ಸಿಎಂ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು […]

ಉಪಚುನಾವಣೆಯಲ್ಲಿ ಗೆದ್ದವರು ಮಾತ್ರ ಸಚಿವರಾಗುತ್ತಾರೆ, ಸೋತವರಲ್ಲ; ವಿ.ಶ್ರೀನಿವಾಸ ಪ್ರಸಾದ್ ಹೊಸ ಬಾಂಬ್

ಗೆದ್ದವರು ಮಾತ್ರ ಸಚಿವರಾಗುತ್ತಾರೆ, ಸೋತವರಲ್ಲ. ಉಪಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಸ್ಥಾನ ಇಲ್ಲ. ಅಡಗೂರು ಎಚ್‍.ವಿಶ್ವನಾಥ್‍ ಸೋತಿದ್ದಾರೆ. ಹೀಗಾಗಿ, ಅವರಿಗೆ ಮಂತ್ರಿ ಸ್ಥಾನ ಇಲ್ಲ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‍ ಹೊಸ ಬಾಂಬ್‍ ಸಿಡಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಸೋತವರು ಮಂತ್ರಿ ಆಗುವಂತಿಲ್ಲ ಎಂದು ಸುಪ್ರೀಂ ಕೋರ್ಟ್‍ ಉಲ್ಲೇಖಿಸಿದೆ. ಗೆದ್ದವರಿಗೆ ಮಂತ್ರಿ ಸ್ಥಾನ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಅದರಂತೆ ಮಾಡುತ್ತಾರೆ. ಧನುರ್ಮಾಸದ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು […]

ಸ್ವಚ್ಛ ಸರ್ವೇಕ್ಷಣ್ ಅಭಿಯಾನ- ಪ್ಲಾಗತಾನ್; ಕಸ ಸಂಗ್ರಹಿಸಿ ಸ್ವಚ್ಛತೆ ಮೆರೆದ ಜನತೆ

ಮೈಸೂರಿಗೆ ನಂ.1 ಸ್ವಚ್ಛನಗರಿ ಗರಿ ತಂದುಕೊಡಲು ಹಾಗೂ ಸ್ವಚ್ಛ ಸರ್ವೇಕ್ಷಣ್ ಅಭಿಯಾನ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ಇಂದು ಬೆಳಿಗ್ಗೆ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಪ್ಲಾಗತಾನ್‍ ಕಾರ್ಯಕ್ರಮ ಆಯೋಜಿಸಲಾಗಿತ್ತು. 1,500ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ನಗರ ಸ್ವಚ್ಛತೆಗೆ ಪಣ ತೊಟ್ಟರು. ಭಾನುವಾರ ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಜನ ಜಮಾಯಿಸತೊಡಗಿದರು. ಬೆಳಿಗ್ಗೆ 7 ಗಂಟೆಗೆ ಮೈಸೂರು ಮಹಾನಗರ ಪಾಲಿಕೆ ಸ್ವಚ್ಛತೆ ರಾಯಭಾರಿ, ಕ್ರಿಕೆಟಿಗ ಜಾವಗಲ್ ಶ್ರೀನಾಥ್‍ ಅವರು […]