You cannot copy content of this page.
. . .

Day: January 4, 2020

ಅಪಘಾತವಾಗಿ ದಾಳಿಂಬೆ ಚೆಲ್ಲಾಪಿಲ್ಲಿ; ಹಣ್ಣಿಗಾಗಿ ಮುಗಿಬಿದ್ದ ಜನ

ಕಾರವಾರದ ಬಿಸಗೋಡು ಕ್ರಾಸ್ ಬಳಿ ದಾಳಿಂಬೆ ತುಂಬಿದ ವಾಹನವೊಂದು ಮಗುಚಿ ಬಿದ್ದಿದ್ದು, ದಾಳಿಂಬೆ ಹಣ್ಣುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.  ಮಹಾರಾಷ್ಟ್ರದ ಸಾಂಗ್ಲಿಯಿಂದ ಯಲ್ಲಾಪುರ ಮಾರ್ಗವಾಗಿ ದಾಳಿಂಬೆ ತುಂಬಿದ ವಾಹನ ಮಂಗಳೂರಿಗೆ ಸಾಗುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಿಸಗೋಡು ಕ್ರಾಸ್ ಬಳಿ ಬರುತ್ತಿದ್ದಂತೆ ಪಲ್ಟಿಯಾಗಿದೆ. ವಾಹನ ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದ ದಾಳಿಂಬೆ ಹಣ್ಣು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಕೆಳಗೆ ಬಿದ್ದ ದಾಳಿಂಬೆ ಹಣ್ನು ಎತ್ತಿಕೊಳ್ಳಲು ಜನರು ಮುಗಿಬಿದ್ದರು. ಸಿಕ್ಕಷ್ಟು ಹಣ್ಣುಗಳನ್ನು ದೋಚಿಕೊಂಡು ಹೋದರು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು […]

ಸ್ವಚ್ಛನಗರಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ನಾಗರಿಕರ ಸಹಕಾರ ಅಗತ್ಯ

ಮೈಸೂರು: ಸ್ವಚ್ಛ ಸರ್ವೇಕ್ಷಣಾಗೆ ಸಂಬಂಧಿಸಿದಂತೆ ಪ್ರತಿಬಾರಿ ನಮಗೆ ಸಿಟಿಜನ್ ಫೀಡ್‌ಬ್ಯಾಕ್‌ನಲ್ಲಿ ಅಂಕ ಕಡಿಮೆಯಾಗುತ್ತಿದ್ದು, ಇದರಿಂದಾಗಿ ನಮಗೆ ಹಿನ್ನೆಡೆಯಾಗುತ್ತಿದೆ. ಹಾಗಾಗಿ, ಈ ಬಾರಿ ನಗರದ ಎಲ್ಲ ನಾಗರಿಕರು ನಮ್ಮೊಂದಿಗೆ ಕೈ ಜೋಡಿಸಿ ಆನ್‌ಲೈನ್ ಮೂಲಕ ಮತ್ತು ಮಿಸ್‌ಕಾಲ್ ನೀಡಿ ವೋಟ್ ಮಾಡುವ ಮೂಲಕ ಮೈಸೂರು ಸ್ವಚ್ಛನಗರಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಸಹಕರಿಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮನವಿ ಮಾಡಿದರು.ನಗರದ ಜಿಲ್ಲಾ ಪತ್ರಕರ್ತ ಸಂಘದ ಸಭಾಂಗಣದಲ್ಲಿ ಸ್ವಚ್ಛ ಭಾರತ್ ಮತ್ತು ಸ್ವಚ್ಛ ಸರ್ವೇಕ್ಷಣೆ ಕುರಿತಂತೆ […]

ಬೆಲೆಬಾಳುವ ಹರಳು ದಂಧೆ; ಮಡಿಕೇರಿಯಲ್ಲಿ ಇಬ್ಬರ ಅರೆಸ್ಟ್

  ಕೊಡಗು ಜಿಲ್ಲೆ ಭಾಗಮಂಡಲ ಸಮೀಪದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಸದ್ದಿಲ್ಲದೆ ಮ್ತತೆ ಅಕ್ರಮವಾಗಿ ಹರಳು ಕಲ್ಲು ಹೊರ ತೆಗೆಯುವ ದಂಧೆ ನಡೆಯುತ್ತಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಪ್ರಕರಣದ ರೂವಾರಿ ಎಂ.ಕೆ. ಸಲೀಂ ಮತ್ತು ಮಡಿಕೇರಿ ತ್ಯಾಗರಾಜ ಕಾಲೋನಿ ನಿವಾಸಿ ಎಂ.ಡಿ. ಶರೀಫ್ ಪೊಲೀಸರ ಅತಿಥಿಗಳಾಗಿದ್ದಾರೆ.   ಬಂಧಿತರಿಂದ ಒಟ್ಟು 25 ಕೆ.ಜಿ ಹರಳುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಶಾಮೀಲಾಗಿದ್ದು, ತಲೆ ಮರೆಸಿಕೊಂಡಿರುವ ಮಡಿಕೇರಿ […]

ಬ್ರಾಹ್ಮಣ ವೇಷದಲ್ಲಿ ಕಳ್ಳತನ; ಕಂಬಕ್ಕೆ ಕಟ್ಟಿ ಗೂಸಾ

 ಬ್ರಾಹ್ಮಣನ ವೇಷದಲ್ಲಿ ಬಂದು ಬ್ರಾಹ್ಮಣರ ಮನೆಯಲ್ಲಿ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ರೆಡ್‍ ಹ್ಯಾಂಡಾಗಿ ಹಿಡಿದು ಕಂಬಕ್ಕೆ ಕಟ್ಟಿ ಗೂಸಾ ಕೊಟ್ಟಿರುವ ಘಟನೆ ಮೈಸೂರಿನ ರಾಮಾನುಜ ರಸ್ತೆ ಒಂದನೇ ಕ್ರಾಸ್‍ ನಲ್ಲಿ ನಡೆದಿದೆ.   ತಾನು ಭದ್ರಾವತಿಯ‌ ನಿವಾಸಿ ಎಂದು ಹೇಳಿಕೊಂಡಿರುವ ಪ್ರವೀಣ್ ಎಂಬ ಚಾಲಾಕಿ ಕಳ್ಳಿ, ದೇವಾಲಯಕ್ಕೆ ಡೊನೇಷನ್‍ ನೆಪದಲ್ಲಿ ಬಂದು ಬ್ರಾಹ್ಮಣರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದ. ನಂತರ ಮನೆಯವರಲ್ಲಿ ನಂಬಿಕೆ ಬರುವಂತೆ ಮಾಡಿ, ಅವರಿಗೆ ಗೊತ್ತಿಲ್ಲದಂತೆ ಹಣ, ಆಭರಣ ಎಗರಿಸಿ ಪರಾರಿಯಾಗುತ್ತಿದ್ದ. ಅದೇ ರೀತಿ ಅರ್ಚಕ ವ್ಯಾಸತೀರ್ಥಾಚಾರ್ಯ […]

ಒಗ್ಗಟ್ಟಿನ ಮಂತ್ರ ಜಪಿಸಲು ಕೈ ನಾಯಕರ ಸಭೆ

  ಉಪಚುನಾವಣೆ ಸೋಲಿನ ಬಳಿಕ ಎಚ್ಚೆತ್ತಕೊಂಡಿರುವ ಕಾಂಗ್ರೆಸ್​ ನಾಯಕರು, ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಇಂದು ಮಾಜಿ ಡಿಸಿಎಂ ಪರಮೇಶ್ವರ್​ ಅವರ ಬೆಂಗಳೂರು ನಿವಾಸದಲ್ಲಿ ಕಾಂಗ್ರೆಸ್‍ ನಾಯಕರ ಸಭೆ ನಡೆಯಲಿದೆ.     ಉಪಚುನಾವಣೆಗೆ ಮುನ್ನ ಪಕ್ಷದಲ್ಲಿ ಮೂಡಿದ್ದ ವಲಸಿಗ ಹಾಗೂ ಮೂಲ ಕಾಂಗ್ರೆಸ್​ನಾಯಕರ ನಡುವಿನ ತಿಕ್ಕಾಟ ಪಕ್ಷದ ಸೋಲಿಗೆ ಕಾರಣವಾಗಿತ್ತು. ಅಧಿಕಾರ, ಪಕ್ಷದ ಚುಕ್ಕಾಣಿಗಾಗಿ ನಾಯಕರ ನಡುವೆ ಮೂಡಿದ ಒಡಕಿನಿಂದಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್‍ ಮುಗ್ಗರಿಸುವಂತಾಗಿತ್ತು.    ಇದೇ ರೀತಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮುಂದುವರೆದರೆ […]

ಸಚಿವ ಸ್ಥಾನಕ್ಕೆ ಲಾಬಿ; ಮುಂಜಾನೆಯೇ ಸಿಎಂ ಭೇಟಿ ಮಾಡಿದ ವಿಶ್ವನಾಥ್

  ಸಂಕ್ರಾಂತಿ ಹಬ್ಬದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಈ ವೇಳೆ ಉಪಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ ಸಚಿವಗಿರಿ ನೀಡಲು ಸಿದ‍್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಸೋತು ಅನರ್ಹರಾಗಿಯೇ ಉಳಿದಿರುವವರು ಕೂಡಾ ಸಚಿವಗಿರಿಯಾಗಿ ಲಾಬಿ ಶುರು ಮಾಡಿದ್ದಾರೆ. ಹುಣಸೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಚ್‍.ವಿಶ್ವನಾಥ್‍ ಇವತ್ತು ಮುಂಜಾನೆಯೇ ಬೆಂಗಳೂರಿನ ಡಾಲರ್ಸ್‍ ಕಾಲೊನಿಯ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದರು. ತಮಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದರು ಎನ್ನಲಾಗಿದೆ.   ವಿಶ್ವನಾಥ್‍ ಭೇಟಿ ನಂತರ ಮತ್ತೊಬ್ಬ […]

ವ್ಯಾನ್‍ ಗೆ ಖಾಸಗಿ ಬಸ್‍ ಡಿಕ್ಕಿ; ಮೂವರ ಸಜೀವ ದಹನ

 ಬಸ್ ಮತ್ತು ಓಮ್ನಿ ವಾಹನದ ನಡುವೆ ಅಪಘಾತ ಸಂಭವಿಸಿ ಮೂವರು ಸಜೀವ ದಹನವಾಗಿರುವ ಘಟನೆ ಇಂದು ಬೆಳಗಿನ ಜಾವ ಎರಡು ಗಂಟೆಯ ಸಮಯದಲ್ಲಿ ತುಮಕೂರು ಜಿಲ್ಲೆಯ ದೊಡ್ಡಗುಣಿ ಬಳಿ ಸಂಭವಿಸಿದೆ.    ಬೆಳಗಿನ ಜಾವ ಎರಡು ಗಂಟೆ ಸಮಯದಲ್ಲಿ ನರಸಮ್ಮ ಎಂಬುವರಿಗೆ ಅನಾರೋಗ್ಯದ ಕಾರಣ ನಿಟ್ಟೂರು ಆರೋಗ್ಯ ಕೇಂದ್ರಕ್ಕೆ ಮಾರುತಿ ವ್ಯಾನ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 206 ರ ದೊಡ್ಡಗುಣಿ ಕೆರೆ ಏರಿ ಮೇಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ […]