You cannot copy content of this page.
. . .

Day: January 3, 2020

ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ವ್ಯಕ್ತಿ ಬಂಧನ

 ಮೈಸೂರು: ರಸ್ತೆಯಲ್ಲಿ ಓಡಾಡುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಕಳ್ಳನನ್ನು ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿದ್ದಾರೆ.  ಉದಯಗಿರಿಯ ಸತ್ಯಾನಗರ ನಿವಾಸಿ ಸೈಯದ್ ಉಮರ್ (೩೯) ಬಂಧಿತ ಆರೋಪಿ. ಈತನಿಂದ 9.32 ಲಕ್ಷ ರೂ. ಮೌಲ್ಯದ 233 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೃತ್ಯವೆಸಗಿದ ನಂತರ ಆಕ್ಟೀವಾ ಹೋಂಡಾ ನಂಬರ್ ಪ್ಲೇಟ್ ಬದಲಿಸಿ ಪರಾರಿಯಾಗುತ್ತಿದ್ದ. ಜೆ.ಪಿ.ನಗರದಲ್ಲಿ ವಾಹನ ತಪಾಸಣೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಸ್ಕೂಟರ್ ಡಿಕ್ಕಿಯಲ್ಲಿ ಎರಡು ನಂಬರ್ ಪ್ಲೇಟ್ ಗಳು ಪತ್ತೆಯಾಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆಹಾರದಲ್ಲಿ ಹುಳ; ಊಟ ತ್ಯಜಿಸಿದ ಪೌರ ಕಾರ್ಮಿಕರು

 ಮೈಸೂರಿನಲ್ಲಿ ಪೌರ ಕಾರ್ಮಿಕರಿಗೆ ನೀಡುವ ಆಹಾರದಲ್ಲಿ ಹುಳುಗಳು ಕಂಡುಬಂದಿದ್ದು, ಪೌರ ಕಾರ್ಮಿಕರು ಸಾಮೂಹಿಕವಾಗಿ ಆಹಾರವನ್ನು ನಿರಾಕರಿಸಿದ್ದಾರೆ. ಇದು ನಡೆದದ್ದು ವಾರ್ಡ್ ಸಂಖ್ಯೆ ೩೫ರ ವ್ಯಾಪ್ತಿಯ ಎನ್‌ಆರ್ ಮೊಹಲ್ಲಾ ಬಡಾವಣೆಯಲ್ಲಿ. ಸ್ವಚ್ಚ ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಪೌರ ಕಾರ್ಮಿಕರು ಮಧ್ಯಾಹ್ನದ ವೇಳೆ ಕೂಡ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಬೆಳಗಿನ ಉಪಹಾರದ ಜೊತೆಗೆ ಮಧ್ಯಾಹ್ನದ ವೇಳೆ ಊಟ ನೀಡಲಾಗುತ್ತಿದೆ.   ಊಟದ ಗುಣಮಟ್ಟದ ಬಗ್ಗೆ ಪೌರ ಕಾರ್ಮಿಕರು ಆಗಾಗ್ಗೆ ಅಸಮಧಾನ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಅದಕ್ಕೆ ಇಂಬು ನೀಡುವಂತೆ ಶುಕ್ರವಾರ […]

ಕುಡಿದ ಮತ್ತಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

 ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.  ಯರಗನಹಳ್ಳಿ ನಿವಾಸಿ ಪೈಂಟರ್ ರಘು (೩೦) ಮೃತ ದುರ್ದೈವಿ. ನಗರದ ಲಲಿತಮಹಲ್ ರಸ್ತೆಯಲ್ಲಿರುವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಜಗಳವಾಡಿ ಬಂದು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಡಹಗಲೇ ದರೋಡೆಗೆ ಯತ್ನ; ಲಾಂಗ್ ಬೀಸಲು ಬಂದ ದುಷ್ಕರ್ಮಿ..!

ಹಾಡಹಗಲೇ ಚಿನ್ನಾಭರಣ ಅಂಗಡಿಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಾಲೀಕನ ಮೇಲೆ ಲಾಂಗ್‍ ಬೀಸಲು ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹೆಲ್ಮೆಟ್‍ ಧರಿಸಿ  ಬಂದಿದ್ದ ದುಷ್ಕರ್ಮಿ ದರೋಡೆಗೆ ಯತ್ನಿಸಿದ್ದು, ಜನ ಸೇರುತ್ತಿದ್ದಂತೆ ಪರಾರಿಯಾದ್ದಾನೆ.  ಇಂದು ಮಧ್ಯಾಹ್ನ ಚಾಮರಾಜ ಜೋಡಿ ರಸ್ತೆ ಮಹದೇಶ್ವರ ದೇವಸ್ಥಾನ ಹತ್ತಿರವಿರುವ ಚಿನ್ನಾಭರಣ ಅಂಗಡಿಗೆ ವ್ಯಕ್ತಿಯೊಬ್ಬ ಬಂದಿದ್ದಾನೆ. ಡಿಯೋ ಸ್ಕೂಟರ್‍ ನಲ್ಲಿ ಬಂದಿದ್ದ ಆತ, ಹೆಲ್ಮೆಟ್‍ ಧರಿಸಿಯೇ ಅಂಗಡಿಗೆ ನುಗ್ಗಿದ್ದಾನೆ. ಒಳ ಹೋಗುತ್ತಿದ್ದಂತೆ ಅಂಗಡಿ ಮಾಲೀಕ ರಾಜೇಶ್ ಕಣ್ಣಿಗೆ ಪೆಪ್ಪರ್‍ ಸ್ಪ್ರೇ ಹಾಕಿದ್ದಾನೆ. ಈ ವೇಳೆ ರಾಜೇಶ್‍, […]

ಕೆಲಸಕ್ಕೆ ಹಾಜರಾಗಲ್ಲ; ಮನೆಯಿಂದಲೇ ಆಶಾ ಕಾರ್ಯಕರ್ತೆಯರ ಪ್ರೊಟೆಸ್ಟ್

  ಸಂಬಳ ಹೆಚ್ಚಳ ಸೇರಿ 10 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ‍ನಲ್ಲಿ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಧರಣಿ ಮನೆಗಳಿಗೆ ಶಿಫ್ಟಾಗಿದೆ. ಅನಿರ್ಧಿಷ್ಟಾವಧಿ ಧರಣಿಗೆ ಪೊಲೀಸರು ಅನುಮತಿ ನೀಡದ ಕಾರಣ ನಾಳೆಯಿಂದ ಕೆಲಸಕ್ಕೆ ಹಾಜರಾಗದೇ ಮನೆಯಿಂದಲೇ ಪ್ರತಿಭಟನೆ ದಾಖಲಿಸಲು ಆಶಾ ಕಾರ್ಯಕರ್ತೆಯರು ತೀರ್ಮಾನಿಸಿದ್ದಾರೆ.   ಫ್ರೀಡಂ ಪಾರ್ಕ್‍ ನಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮೀ, ಪೊಲೀಸರು ಒಂದು ದಿನಕ್ಕಷ್ಟೇ ಅವಕಾಶ ನೀಡಿದ್ದರು. ಹೀಗಾಗಿ ಕೆಲಸಕ್ಕೆ ಹಾಜರಾಗದೇ ಮನೆಯಲ್ಲೇ ಕೂರಲು ತೀರ್ಮಾನಿಸಿದ್ದೇವೆ. ಬಾಕಿ […]

ಬೇಡಿಕೆಗಳಿಗೆ ಪ್ರಧಾನಿ ಸ್ಪಂದಿಸಿದ್ದಾರೆ : BSY

 ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಿಗೆ ಸಂಬಂಧಿಸಿದಂತೆ, ಪತ್ರಿಕಾ ಹೇಳಿಕೆಯನ್ನು ಅವರು ಬಿಡುಗಡೆ ಮಾಡಿದ್ದಾರೆ. ‘ಹೊಸವರ್ಷದ ಪ್ರಾರಂಭದಲ್ಲಿಯೇ ರಾಜ್ಯದ ಪ್ರಸಿದ್ದ ಕ್ಷೇತ್ರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ನಡೆದ ರೈತ ಸಮಾವೇಶ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ನಮ್ಮ ಅಹವಾಲನ್ನು ದೇಶದ ಪ್ರಧಾನಮಂತ್ರಿಗಳಲ್ಲಿ ಸಲ್ಲಿಸಿದ್ದೇನೆ. ಇದು ನಮ್ಮ […]

ಪವರ್ ಗ್ರಿಡ್ ಸ್ಥಳ ಪರಿಶೀಲನೆಗೆ ಸಚಿವರ ಒಪ್ಪಿಗೆ; ಧರಣಿ ಅಂತ್ಯಗೊಳಿಸಿದ ರೈತರು

 ಮೈಸೂರು: ಪವರ್ ಗ್ರಿಡ್‍ ಮಾರ್ಗಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದರಿಂದ, ರೈತ ಸಂಘಟನೆಯು ನಾಲ್ಕು ದಿನಗಳಿಂದ ಕೈಗೊಂಡಿದ್ದ ಧರಣಿಯನ್ನು ಶುಕ್ರವಾರ ಅಂತ್ಯಗೊಳಿಸಿತು.  ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾ ನಿರತ ಸ್ಥಳಕ್ಕೆ ಶುಕ್ರವಾರ ಆಗಮಿಸಿದ ಸಚಿವರು ರೈತರ ಸಮಸ್ಯೆ ಆಲಿಸಿದರು. ನಂತರ ಜ.11ರಂದು ಪವರ್‍ ಗ್ರಿಡ್‍ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಅಲ್ಲದೆ, 3-4 ದಿನದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವ ಬಗ್ಗೆಯೂ ಚರ್ಚೆ ನಡೆಸಿ […]

ಫ್ರೀಡಂ ಪಾರ್ಕ್ ‘ಗುಲಾಬಿ’ಮಯ; ‘ಆಶಾ’ಭಾವನೆ ಮೂಡಿಸಿದ ರಾಮುಲು..

    ಹಲವು ವರ್ಷಗಳಿಂದ ಬಾಕಿ ಇರುವ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ಮತ್ತೆ ಬೀದಿಗಿಳಿದಿದ್ದಾರೆ. ಬೆಂಗಳೂರು ರೈಲ್ವೆ ನಿಲ್ದಾಣದಿಂದ ಮೆರವಣಿಗೆ ನಡೆಸಿದ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸಾವಿರಾರು ಆಶಾ ಕಾರ್ಯಕರ್ತೆಯರು, ಫ್ರೀಡಂ ಪಾರ್ಕ್‍ ನಲ್ಲಿ ಧರಣಿ ಕುಳಿತಿದ್ದಾರೆ. ಆಶಾ ಕಾರ್ಯಕರ್ತೆಯರು 10 ಬೇಡಿಕೆಗಳನ್ನು ಮುಂದಿಟ್ಟಿದ್ದು, ಇದರಲ್ಲಿ 7 ಬೇಡಿಕೆ ಈಡೇರಿಸಲು ಸರ್ಕಾರ ಭರವಸೆ ನೀಡಿದೆ. ಇದರಿಂದ ಆಶಾ ಕಾರ್ಯಕರ್ತೆಯರಲ್ಲಿ ಆಶಾಭಾವನೆ ಮೂಡಿದೆ.   ಆಶಾ ಕಾರ್ಯಕರ್ತೆಯರ 10 ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವ […]

ಅನುದಾನಕ್ಕೆ ಕತ್ತರಿ; ಕೆಡಿಪಿ ಸಭೆಯಿಂದ ಹೊರಗುಳಿದ ಸಾರಾ

 ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಇಲಾಖೆಗಳಿಂದ ಮಂಜೂರಾಗಿದ್ದ ೪೦ ಕೋಟಿ ರೂ. ಅನುದಾನಕ್ಕೆ ಹಾಲಿ ಸರ್ಕಾರ ಕತ್ತರಿ ಹಾಕಿರುವುದನ್ನು ಪ್ರತಿಭಟಿಸಿ ಕೆಡಿಪಿ ಸಭೆಗೆ ಶಾಸಕ, ಮಾಜಿ ಸಚಿವ ಸಾ.ರಾ.ಮಹೇಶ್ ಗೈರಾಗಿದ್ದಾರೆ.  ಈ ಸಂಬಂಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿರುವ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಹಣವನ್ನು ತಡೆಹಿಡಿಯಲಾಗಿದ್ದು ಇದನ್ನು ಬಿಡುಗಡೆ ಮಾಡುವವರೆಗೆ ಕೆಡಿಪಿ ಸಭೆಯಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆ.ಆರ್.ನಗರ ವಿಧಾನಸಭಾ […]

ಹಳೆಯ ದ್ವೇಷಕ್ಕೆ ಅಣ್ಣನಿಗೆ ಚಾಕು ಇರಿದು ಕೊಲೆ

 ಕೊಳ್ಳೇಗಾಲ: ಹಳೆಯ ದ್ವೇಷ ಇಟ್ಟುಕೊಂಡು ಗಾಂಜಾ ಮತ್ತಿನಲ್ಲಿ ತನ್ನ ಅಣ್ಣನಿಗೆ ಚಾಕು ಇರಿದು ಕೊಲೆಗೈದ ಘಟನೆ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಜರುಗಿದೆ.  ಮಧುವನಹಳ್ಳಿ ಗ್ರಾಮದ ಹೊಂಗಶೆಟ್ಟಿ ಬೀದಿಯ ಗುರುಸ್ವಾಮಿ ಎಂಬವರ ಪುತ್ರ ಸಿದ್ದಪ್ಪಸ್ವಾಮಿ ಸಾವನ್ನಪ್ಪಿದ್ದ ವ್ಯಕ್ತಿ. ಮೃತನ ಚಿಕ್ಕಪ್ಪನ ಮಗನಾದ ಬಿಸಲರಾಜು ಎಂಬಾತನು ಚಾಕು ಇರಿದ ಆರೋಪಿ.  ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ನವೀನ್ ಕುಮಾರ್, ಪಿಎಸ್ಐ ಅಶೋಕ್ ಆಗಮಿಸಿ ವಿಚಾರಣೆ ನಡೆಸಿ ಪರಾರಿಯಾದ ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಮೃತ್ತನ ಪತ್ನಿ […]