You cannot copy content of this page.
. . .

Day: January 2, 2020

ಮನೆ ಬಾಗಿಲು ಮೀಟಿ 2.50 ಲಕ್ಷ ರೂ. ಚಿನ್ನಾಭರಣ ದೋಚಿದ ಕಳ್ಳರು

 ಮೈಸೂರು: ಮನೆಗ ಬಾಗಿಲಿನ ಲಾಕ್ ಮೀಟಿ ಒಳ ನುಗ್ಗಿರುವ ಕಳ್ಳರು ಡ್ರಾಯರ್‌ನಲ್ಲಿದ್ದ ೨.೫೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.  ನಗರದ ಎನ್‌.ಆರ್.ಮೊಹಲ್ಲಾ ನಿವಾಸಿ ಎಂ.ಎಂ.ಗಂಗಾಧರ ಎಂಬವರ ಮನೆಯಲ್ಲಿಯೇ ಕಳ್ಳತನವಾಗಿರುವುದು. ಅವರು ಅನ್ಯ ಕೆಲಸದ ನಿಮಿತ್ತ ಹೊರಗೆ ತೆರಳಿದ್ದ ವೇಳೆ ಮನೆಯ ಬಾಗಿಲಿನ ಡೋರ್ ಲಾಕ್‌ನ್ನು ಮೀಟಿ ಒಳ ನುಗ್ಗಿರುವ ಕಳ್ಳರು ಕಳ್ಳತನ ನಡೆಸಿದ್ದಾರೆ. ೫೦ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, ೧೮ ಗ್ರಾಂ ತೂಕದ ಒಂದು ಜೊತೆ ಮುತ್ತಿನ […]

ನಂಜನಗೂಡು ಬಳಿ ಕಿಡಿಗೇಡಿಗಳಿಂದ ಬೈಕ್ ಗೆ ಬೆಂಕಿ

  ನಂಜನಗೂಡು ತಾಲ್ಲೂಕು ಹೋಬಳಿ ಬಂಚಹಳ್ಳಿ ಹುಂಡಿ ಗ್ರಾಮದಲ್ಲಿ ಬೈಕ್‍ ವೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿಗೆ ಆಗುತಿಯಾದ ಬೈಕ್ ಗ್ರಾಮದ‍ ಶಂಭನಾಯಕ ಅವರ ಮಗ ಎಸ್‌ಐಪಿಎಂ ಕಾರ್ಮಿಕ ಮಂಜುನಾಥ್ ಅವರಿಗೆ ಸೇರಿದ್ದು.   ಮನೆಯ ಮುಂದೆ ನಿಲ್ಲಿಸಿದ್ದ (ಕೆಎ-೦೯ ಇಇ-೩೫೫೧) ಬೈಕ್‌ಗೆ ಇಂದು ಬೆಳಗಿನ ಜಾವ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಒಂದು ವೇಳೆ ಬೈಕಿಗೆ ಹತ್ತಿದ್ದ ಬೆಂಕಿ ಮನೆಯ ಚಾವಣಿಗೆ ತಾಕಿದ್ದರೆ ಇಡೀ ಮನೆಗೇ ಬೆಂಕಿ ವ್ಯಾಪಿಸುತ್ತಿತ್ತು. ಬೈಕ್‌ಗೆ […]

ಜೆಕೆ ಲೋನ್ ಆಸ್ಪತ್ರೆಯಲ್ಲಿ 100 ಕ್ಕೆ ಏರಿದ ನವಜಾತ ಶಿಶುಗಳ ಸಾವಿನ ಸಂಖ್ಯೆ

 ಕಡಿಮೆ ತೂಕ, ಅಪೌಷ್ಠಿಕತೆಯಿಂದಾಗಿ ರಾಜಸ್ಥಾನ ಕೋಟಾದ ಜೆಕೆ ಲೋನ್ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಲ್ಲಿ ಮತ್ತೆ ಒಂಬತ್ತು ನವಜಾತ ಶಿಶುಗಳು ಸಾವನ್ನಪ್ಪಿವೆ. ಇದರಿಂದ 2019ರ ಡಿಸೆಂಬರ್‍ ನಿಂದ ಈವರೆಗೆ ಸಾವನ್ನಪ್ಪಿರುವ ಮಕ್ಕಳ ಸಂಖ್ಯೆ 100ಕ್ಕೆ ಏರಿದೆ.  2018ರ ಡಿಸೆಂಬರ್ ತಿಂಗಳಿನಲ್ಲಿ ಇದೇ ಆಸ್ಪತ್ರೆಯಲ್ಲಿ ಸುಮಾರು 77 ನವಜಾತ ಶಿಶುಗಳು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 2019ರ ಡಿಸೆಂಬರ್ 30, 31ರಂದು ಜೆಕೆ ಲೋನ್ ಆಸ್ಪತ್ರೆಯಲ್ಲಿ ನವಜಾತ ಹಾಗೂ ಮಕ್ಕಳು ಸೇರಿದಂತೆ 9 ಸಾವು ಸಂಭವಿಸಿದೆ. ಡಿಸೆಂಬರ್ ತಿಂಗಳು ಒಂದರಲ್ಲೇ […]

ಸಿಂಗಾನಲ್ಲೂರಿನಲ್ಲಿ ವಿಚಿತ್ರ ಜ್ವರ; ಡೆಂಗ್ಯೂ ಭೀತಿ

  ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಸಿಂಗಾನಲ್ಲೂರು ಗ್ರಾಮದ ಜನರಲ್ಲಿ ವಿಚಿತ್ರ ಜ್ವರ ಕಾಣಿಸಿಕೊಂಡಿದೆ. ಹಲವು ದಿನಗಳಿಂದ ಗ್ರಾಮದ 20ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿದ್ದಾರೆ. ಹೀಗಿರುವಾಗಲೇ ಸಿಂಗಾನಲ್ಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಧ್ಯಕ್ಷ ಮಲ್ಲಯ್ಯರ ಪುತ್ರ ಸಾಗರ್ (30) ಡೆಂಗ್ಯೂ ಮಹಾಮಾರಿಗೆ ಬಲಿಯಾಗಿದ್ದಾರೆ. ಹೀಗಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.   ಕಳೆದ 20 ದಿನಗಳಿಂದ ಗ್ರಾಮದ ಜನ ಜ್ವರದಿಂದ ಬಳಲುತ್ತಿದ್ದಾರೆ. 8 ರಿಂದ 10 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿದ್ದರೂ ಇಷ್ಟು […]

ರಸ್ತೆಯಲ್ಲಿ ಬಿದ್ದಿದ್ದ ವೃದ್ಧನನ್ನು ಉಪಚರಿಸಿ ಮಾನವೀಯತೆ ಮೆರೆದ ಮಾಜಿ ಶಾಸಕ

 ಮೈಸೂರು: ರಸ್ತೆಯಲ್ಲಿ ನಿಶಕ್ತರಾಗಿ ಬಿದ್ದಿದ್ದ ವೃದ್ಧರೊಬ್ಬರನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್‍ ಖುದ್ದು ಉಪಚರಿಸಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.    ನಂಜನಗೂಡು ತಾಲ್ಲೂಕಿನ ನೇರಳೆ ಗ್ರಾಮದ ವಯೋವೃದ್ಧ ನಾಗನಾಯಕ ಎಂಬವರು ನಿಶಕ್ತರಾಗಿ ರಾಮಸ್ವಾಮಿ ವೃತ್ತದ ರಸ್ತೆಯಲ್ಲಿ ಬಿದ್ದಿದ್ದರು. ಅವರನ್ನು ಕಂಡು ಮನೆಕಡೆ ತೆರಳುತ್ತಿದ್ದ ಮಾಜಿ ಶಾಸಕರು ಖುದ್ದು ತಾವೇ ನಿಂತು ನೀರು ಕುಡಿಸಿ, ಊಟ ತಿನ್ನಿಸಿ ಅಂಬುಲೆನ್ಸ್ ಕರೆಯಿಸಿ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ  ಚಿಕಿತ್ಸೆಗೆ ಕಳುಹಿಸಿದ್ದಾರೆ. ಆಸ್ಪತ್ರೆಯ ಮುಖ್ಯಸ್ಥರಿಗೆ ಕರೆ ಮಾಡಿ ಚಿಕಿತ್ಸೆ ನೀಡಲು ತಿಳಿಸಿದರು. ಮಾಜಿ […]

ಸ್ಪರ್ಧೆಗಾಗಿ ಸ್ವಚ್ಛ ಮಾಡೋದಾ..?: ಪಾಲಿಕೆ ಸಭೆಯಲ್ಲಿ ಗದ್ದಲ

      ಒಂದು ತಿಂಗಳು ಕಸ ಸಂಗ್ರಹಿಸಿ ಸ್ಪಚ್ಛ ನಗರಿ ಪಟ್ಟ ಗಿಟ್ಟಿಸಿದರೆ ಏನು ಪ್ರಯೋಜನ..? ಇದು ಮೈಸೂರು ಮಹಾನಗರ ಪಾಲಿಕೆ ಸದಸ್ಯರ ಒಕ್ಕೊರಲ ಪ್ರಶ್ನೆ. ಸ್ವಚ್ಛ ಸರ್ವೇಕ್ಷಣೆ ತಂಡ ಜನವರಿ 4 ರಂದು ಮೈಸೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಪಾಲಿಕೆಯ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ನಗರದಲ್ಲಿ ಸರಿಯಾಗಿ ಸ್ವಚ್ಛತಾ ಕಾರ್ಯ ನಡೆಯದಿದ್ದುದರ ಬಗ್ಗೆ ಪಾಲಿಕೆ ಸದಸ್ಯರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಸದಸ್ಯರು ಸಭೆಯಿಂದ ಹೊರನಡೆದರು.    ಇದಕ್ಕೂ ಮೊದಲು ಪಾಲಿಕೆ ಸಭಾಂಗಣದಲ್ಲಿ […]

ಬಿಎಸ್‌ವೈ ಮನವಿಗೆ ಸ್ಪಂದಿಸದೇ ತೆರಳಿದ ಮೋದಿ

 ಕೇಂದ್ರ ಸರ್ಕಾರದಿಂದ ನೀರಾವರಿಗೆ 50 ಸಾವಿರ ಕೋಟಿ ಅನುದಾನ ನೀಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಡಿದ ಮನವಿಗೆ ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡದೇ ಹೋದದ್ದು ಅಚ್ಚರಿ ಮೂಡಿಸಿದೆ.  ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕೃಷಿ ಕರ್ಮಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಸಿಎಂ ಯಡಿಯೂರಪ್ಪ ಅವರು, ಪ್ರಕೃತಿ ವಿಕೋಪದಿಂದಾಗಿ ರಾಜ್ಯದಲ್ಲಿ 30 ಸಾವಿರ ಕೋಟಿ ನಷ್ಟವಾಗಿದೆ. ಇದಕ್ಕೆ ಕೇಂದ್ರದಿಂದ ಪರಿಹಾರ ಕೋರಿ ಮನವಿ ಮಾಡಲಾಗಿತ್ತು. ಆದರೆ, […]

ಶುರುವಾಯ್ತು ಟ್ವೀಟ್ ಫೈಟ್; ಉತ್ತರ ಕೊಡಿ ಕಾಂಗ್ರೆಸ್ ಅಂತಿದೆ ಬಿಜೆಪಿ

ರಾಜ್ಯಕ್ಕೆ ಮೋದಿ ಆಗಮಿಸಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಾಂಗ್ರೆಸ್‍ ಟ್ವಿಟರ್‍ ಅಭಿಯಾನ ಶುರು ಮಾಡಿತ್ತು. ಪ್ರವಾಹದ ಸಂದರ್ಭದಲ್ಲಿ ಮೋದಿ ಬರದೇ ಇದ್ದುದಕ್ಕೆ ಹಾಗೂ ಪರಿಹಾರ ನೀಡದಿದ್ದಕ್ಕೆ ಕಾಂಗ್ರೆಸ್‍ ಟ್ವಿಟರ್‍ ಅಕೌಂಟ್‍ ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಇದೀಗ ಕಾಂಗ್ರೆಸ್‍ ‘ಉತ್ತರ ಕೊಡಿ ಮೋದಿ’ ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿ ಕೂಡಾ ‘ಉತ್ತರ ಕೊಡಿ ಕಾಂಗ್ರೆಸ್‍’ ಎಂಬ ಅಭಿಯಾನ ಶುರು ಮಾಡಿದೆ.   ರಾಜ್ಯ ಸರ್ಕಾರದ ಪ್ರಕಾರ ನೆರೆಯಿಂದ 35,300 ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಕಾಂಗ್ರೆಸ್ ಅಂದಾಜಿನ ಪ್ರಕಾರ 1,00,000 […]

ಮೈಸೂರಿಗೆ ಸ್ವಚ್ಛನಗರಿ ಪಟ್ಟಕ್ಕಾಗಿ ಪಾಲಿಕೆಯಲ್ಲಿ ಚರ್ಚೆ

 ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛ ಸರ್ವೇಕ್ಷಣ್ 2020ರ ಸರ್ವೇ ಕಾರ್ಯ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಟಿಜನ್ ಅಲರ್ಟ್ ಟೀಮ್ ಸದಸ್ಯರು ಹಾಗೂ ಇತರೆ ಗಣ್ಯರೊಂದಿಗೆ ಗುರುವಾರ ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಅವರು ಗೃಹಕಚೇರಿಯಲ್ಲಿ ಚರ್ಚಿಸಿದರು.  ರಾಷ್ಟ್ರಮಟ್ಟದ ಸ್ವಚ್ಛ ಸರ್ವೇಕ್ಷಣ್ 2020 ಅಭಿಯಾನದ ಅಡಿಯಲ್ಲಿ ಮೈಸೂರು ನಗರವನ್ನು ದೇಶದ ಸ್ವಚ್ಛನಗರ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ತರಲು ನಗರ ಪಾಲಿಕೆ ವತಿಯಿಂದ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಹಾಗೂ ನಗರದ ಶಾಲಾ ಕಾಲೇಜು, ಸಂಘ […]

ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯ ಭಾಷಣ; ಮೋದಿ ವಿರುದ್ಧ ಸಿದ್ದು ಟ್ವೀಟ್

 ಜಾತ್ಯತೀತ, ಪಕ್ಷಾತೀತವಾದ ಗೌರವದ ಕ್ಷೇತ್ರದಲ್ಲಿ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ ಮೋದಿ ಅವರೇ ನಿಮ್ಮನ್ನು ಕ್ಷೇತ್ರ ಕ್ಷಮಿಸದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ಟ್ವೀಟರ್‍ ನಲ್ಲಿ ಗುಡುಗಿದ್ದಾರೆ.  ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಾತ್ಯತೀತ ಮತ್ತು ಪಕ್ಷತೀತವಾದ ಗೌರವದ ಸ್ಥಾನ ಇದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯದ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮನ್ನು ಆ […]