You cannot copy content of this page.
. . .

Day: January 1, 2020

ಕೆಲಸ ಕೊಡಿಸುತ್ತೇನೆಂದು ವಂಚನೆ; ದೂರು ದಾಖಲು

 ಕುವೈತ್ ರಾಷ್ಟ್ರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕಯೊಬ್ಬನಿಗೆ ೮೦ ಸಾವಿರ ರೂ. ವಂಚಿಸಿರುವ ಕುರಿತು ಮೈಸೂರಿನಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ.ನಗರದ ಹೆಬ್ಬಾಳು ಬಳಿಯ ಜೈನ್ ಎಂಟರ್ ಪ್ರೈಸಸ್ ಮಾಲೀಕ ವಿಜಯ್ ಎಂಬುವವರೇ ಆರೋಪಿ.   ಹೆಬ್ಬಾಳು ನಿವಾಸಿ ಸುಖೇಶ್ ಎಂಬವರಿಗೆ ವಿಜಯ್ ಅವರು ಕುವೈತ್ ರಾಷ್ಟ್ರದಲ್ಲಿ  ಕೆಲಸ ಕೊಡಿಸುವುದಾಗಿ ನಂಬಿಸಿ ೮೦ ಸಾವಿರ ರೂ. ನಗದು ಹಾಗೂ ಅವರ ಪಾಸ್‌ಪೋರ್ಟ್‌ನ್ನು ಪಡೆದುಕೊಂಡಿದ್ದಾರೆ. ನಂತರ ಸುಖೇಶ್ ಅವರ ಸ್ನೇಹಿತರಿಂದಲೂ ಕೂಡ ಅವರ ಪಾಸ್‌ಪೋರ್ಟ್ ಪಡೆದುಕೊಂಡು ಕೆಲಸ ಕೊಡಿಸುವುದಾಗಿ […]

ದೀದಿ ಸೋಲಿಸಲು ಬೆಂಗಾಳಿ ಭಾಷೆ ಕಲಿಯುತ್ತಿದ್ದಾರಂತೆ ಅಮಿತ್‍ ಷಾ..!

   ಜಾರ್ಖಂಡ್‍ ಸೋಲಿನ ಬಳಿಕ ಬಿಜೆಪಿ ಚಾಣಕ್ಯ ಅಮಿತ್‍ ಷಾ ಎಚ್ಚೆತ್ತುಕೊಂಡಿದ್ದಾರೆ. ಮುಂಬರುವ ಚುನಾವಣೆಗಳಿಗೆ ಕಠಿಣ ತಾಲೀಮು ಶುರು ಮಾಡಿದ್ದಾರೆ. ಮುಂದಿನ ವರ್ಷ ಅಂದರೆ 2021ಕ್ಕೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯುತ್ತದೆ. ಇದಕ್ಕಾಗಿ ಈಗಲೇ ಸಿದ್ಧತೆ ಶುರು ಮಾಡಿರುವ ಅಮಿತ್‍ ಷಾ, ಪಶ್ಚಿಮ ಬಂಗಾಳದ ಮತದಾರರನ್ನು ಸೆಳೆಯಲು ಹಾಗೂ ಮಮತಾ ಬ್ಯಾನರ್ಜಿಯವರನ್ನು ಸೋಲಿಸಲು ಅಮಿತ್‍ ಷಾ,  ಭಾಷಾಸ್ತ್ರ ಉಪಯೋಗಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಮತದಾರರಿಗೆ ಹತ್ತಿರವಾಗಲು ಬೆಂಗಾಳಿ ಭಾಷೆಯನ್ನು ಕಲಿಯುತ್ತಿದ್ದಾರೆ.   ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ […]

ಪ್ರವಾಸಿಗರ ಮನರಂಜಿಸುವ ಮುನ್ನಿ, ದೀಪು!

-ಮೋಹನ ಬಿ.ಎಂ   ಮೈಸೂರು: ಮೈಸೂರು ಮೃಗಾಲಯಕ್ಕೆ ಈಚೆಗಷ್ಟೇ ಅತಿಥಿಗಳಾಗಿ ಆಗಮಿಸಿರುವ ಅಪರೂಪದ ವನ್ಯಪ್ರಾಣಿ, ಮನುಷ್ಯನನ್ನೇ ಹೋಲುವಂತಹ ವಾನರ ಪ್ರಭೇದದ ಹೂಲಾಕ್ ಗಿಬ್ಬನ್‌ಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿ, ಮೈಸೂರು ಮೃಗಾಲಯ ಪ್ರವಾಸಿಗರಿಗೆ ಹೊಸವರ್ಷದ ಉಡುಗೊರೆಯನ್ನು ನೀಡಿದೆ.  ಈಶಾನ್ಯ ರಾಜ್ಯದ ಅರಣ್ಯದಲ್ಲಿ ಕಂಡು ಬರುವ ಹೂಲಾಕ್ ಗಿಬ್ಬನ್ ಮೈಸೂರು ಮೃಗಾಲಯ ಹಾಗೂ ಗೌಹಾತಿಯ ಅಸ್ಸಾಂ ಮೃಗಾಲಯದ ನಡುವಿನ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಅಸ್ಸಾಂ ಮೃಗಾಲಯದಿಂದ ತರಿಸಿಕೊಳ್ಳಲಾಗಿತು. ಅಸ್ಸಾಂನಿಂದ ತರಿಸಿದ್ದ ಗಿಬ್ಬನ್‌ಗಳು ವಾತಾವರಣಕ್ಕೆ ಹೊಂದಿಕೊಳ್ಳುವವರೆಗೂ ದಿಗ್ಭಂದನದಲ್ಲಿ ಇಡಲಾಗಿತ್ತು. ಬುಧವಾರ ಅರಣ್ಯ […]

ಕನ್ನ ಹಾಕಿದ್ದ ಅಂಗಡಿ ಹುಡುಗನಿಗೇ ೧೦೦ ರೂ. ಟಿಪ್ಸ್ ಕೊಟ್ಟ ಖದೀಮರು

 ಸುಂಟಿಕೊಪ್ಪ: ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದ ಖದೀಮರಿಬ್ಬರು ಅಂಗಡಿ ಮಾಲೀಕನಿಗೆ ಚಳ್ಳೇಹಣ್ಣು ತಿನ್ನಿಸಿ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನು ಎಗರಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.  ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ವಿಎಎಂ ಸೂಪರ್ ಮಾರ್ಕೆಟಿಗೆ ಅಂಗಡಿಯ ಪದಾರ್ಥ ಖರೀದಿಸಲು ಇಬ್ಬರು ಅಪರಿಚಿತ ಗ್ರಾಹಕರು ಬಂದು ಕೆಲವು ಸಾಮಗ್ರಿಗಳನ್ನು ಖರೀದಿಸಿದ್ದರು. ತಾವು ಖರೀದಿಸಿದ ಸಾಮಗ್ರಿಗಳ ಬಿಲ್ ೬೦೦ ರೂ. ಆಗಿದ್ದು, ಮತ್ತೆ ವಸ್ತುಗಳನ್ನು ಕೇಳಿದ್ದಾರೆ. ಅಂಗಡಿ ಮಾಲೀಕ ಹಾಗೂ ಕೆಲಸದ ಹುಡುಗ ಅಂಗಡಿ ಒಳಗಿನಿಂದ ಸಾಮಾನು ತರಲು ತೆರಳಿದಾಗ ಖದೀಮರು ಕೈ ಚಳಕ […]

ಕಾಣೆಯಾಗಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

 ಸೋಮವಾರಪೇಟೆ: ಕಳೆದ ತಿಂಗಳು ಗರ್ವಾಲೆ ಗ್ರಾಮದಿಂದ ಕಾಣೆಯಾಗಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಗರ್ವಾಲೆ ಗ್ರಾಮದಲ್ಲಿ ಮಂಗಳವಾರ ಪತ್ತೆಯಾಗಿದ್ದಾನೆ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕು, ರಾಜನಹಳ್ಳಿ ನಿವಾಸಿ ಮುಲುವೆರ ಪಿ.ಗಣಪತಿ ಅವರ ಪುತ್ರ ಶರತ್ ಕಾವೇರಪ್ಪ (೨೪) ಅವರ ಶವ, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.   ಸೋಮವಾರಪೇಟೆ ತಾಲ್ಲೂಕಿನ ಹಾಲೇರಿ ಗ್ರಾಮದಲ್ಲಿರುವ ಕಾಫಿ ತೋಟಕ್ಕೆ ಆಗಮಿಸಿದ್ದ ಶರತ್, ತನ್ನ ದೊಡ್ಡಪ್ಪನ ಮಗ ಬಿದ್ದಪ್ಪ ಅವರ ಕಾರಿನಲ್ಲಿ ಸೂರ್ಲಬ್ಬಿ ಗ್ರಾಮಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಗರ್ವಾಲೆ ಗ್ರಾಮದ ಮೇದುರ […]

ಮೈಸೂರು ರೈಲ್ವೆ ವಿಭಾಗದಲ್ಲೂ ಪರಿಷ್ಕೃತ ದರ ಜಾರಿ

 ಮೈಸೂರು: ರೈಲ್ವೆ ನಿಲ್ದಾಣಗಳ ಆಧುನೀಕರಣ ಮತ್ತು ಪ್ರಯಾಣಿಕರಿಗೆ ಸುಧಾರಿತ ಸೌಲಭ್ಯಗಳನ್ನು ಒದಗಿಸುವುದು ಮತ್ತು 7ನೇ ವೇತನ ಆಯೋಗದ ಹೊರೆಯನ್ನು ನಿಭಾಯಿಸುವ ಕಾರಣದಿಂದ ಕೇಂದ್ರ ಸರ್ಕಾರ ರೈಲ್ವೆ ಸೇವೆಗಳ ಶುಲ್ಕ ಹೆಚ್ಚಳ ಮಾಡಿದೆ. ಬುಧವಾರ (ಜ.೧)ದಿಂದ ಪರಿಷ್ಕೃತ ದರ ಜಾರಿಯಾಗಿದ್ದು, ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗದಲ್ಲೂ ಪರಿಷ್ಕೃತ ದರ ಜಾರಿಯಾಗಿದೆ.  ೨೦೧೪-೧೫ರ ಬಳಿಕ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಿರಲಿಲ್ಲ. ಆದರೆ, ಈ ಅವಧಿಯಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಿದೆ. ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು […]

ಇಂದು, ನಾಳೆ ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

 ಮಾಗಿ ಉತ್ಸವದ ವಿಶೇಷ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜ.1 ಮತ್ತು 2ರಂದು ಮೈಸೂರು ಅರಮನೆ ಆಡಳಿತ ಮಂಡಳಿಯು ಅರಮನೆ ಅಂಗಳದಲ್ಲಿ ಸಾರ್ವಜನಿಕರು, ಪ್ರವಾಸಿಗರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಉಣಬಡಿಸಲಿದೆ.  ಜ.1ರಂದು (ಬುಧವಾರ) ಸಂಜೆ 6 ಗಂಟೆಗೆ ಪೊಲೀಸ್‍ ಬ್ಯಾಂಡ್, ಸಂಜೆ 7ರಿಂದ 9 ಗಂಟೆಯವರೆಗೆ ಸುನಿತಾ ಚಂದ್ರಕುಮಾರ್ ನೇತೃತ್ವದಲ್ಲಿ ರಘುಲೀಲ ಸಂಗೀತ ಮಂದಿರ ತಂಡದ 110 ಮಂದಿಯಿಂದ ‘ಶ್ರೀನಿವಾಸ ಕಲ್ಯಾಣ’ ನೃತ್ಯ ವೈಭವ ಹಾಗೂ ರಾತ್ರಿ 9 ಗಂಟೆಯಿಂದ ಅರ್ಧ ತಾಸು ಬಣ್ಣದ ಚಿತ್ತಾರಗಳಿಂದ ಕೂಡಿದ […]

ಸಂಸದರ ಕಚೇರಿ ಬಾಗಿಲಿಗೆ ಗುಲಾಬಿ ಹೂವು..!

     ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್‍ ಸಿ ವಿರೋಧಿಸಿ ರಾಜ್ಯ ಮಹಿಳಾ ಕಾಂಗ್ರೆಸ್‍ ಗಾಂಧಿಗಿರಿ ಹೋರಾಟ ಶುರು ಮಾಡಿದೆ. ಅದರ ಭಾಗವಾಗಿ ಇಂದು ಸಂಸದ ನಿವಾಸ ಅಥವಾ ಕಚೇರಿಗಳಿಗೆ ತೆರಳಿ ಬಿಳಿ ಗುಲಾಬಿ ಹೂವು  ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೈಸೂರಿನಲ್ಲೂ ಕೂಡಾ ಮಹಿಳಾ ಕಾಂಗ್ರೆಸ್‍ ಕಾರ್ಯಕರ್ತರು ಸಂಸದ ಪ್ರತಾಪ್‍ ಸಿಂಹ ಕಚೇರಿಗೆ ಭೇಟಿ ನೀಡಿದ್ದರು.   ಸಂಸದ ಪ್ರತಾಪ್‍ ಸಿಂಹ ಅವರು ಪ್ರವಾಸದಲ್ಲಿದ್ದಾರೆ. ಹೀಗಾಗಿ ಸಂಸದರ ಕಚೇರಿಗೆ ಬೀಗ ಹಾಕಲಾಗಿತ್ತು. ಇದನ್ನು ನೋಡಿದ ಮಹಿಳಾ ಕಾಂಗ್ರೆಸ್‍ […]

ರಸ್ತೆ ಕಾಮಗಾರಿಗೆ 58.8 ಕೋಟಿ ರೂ. ಮಂಜೂರು

  ಕಳೆದ ಬಾರಿ ಸುರಿದ ಮಳೆಗೆ ಸಂಪರ್ಕ ಕಳೆದುಕೊಂಡಿದ್ದ NH-275 ಮಡಿಕೇರಿ-ಸಂಪಾಜೆ ರಸ್ತೆಗೆ ತಡೆಗೋಡೆ ಹಾಗೂ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರ 58.8 ಕೋಟಿ ರೂಪಾಯಿ ಮಂಜೂರು ಮಾಡಿದೆ.   ಮಳೆಯಿಂದ ತೀವ್ರ ಹಾನಿಯಾಗಿರುವ NH-275ನ ಮಡಿಕೇರಿ-ಸಂಪಾಜೆ ರಸ್ತೆ ದುರಸ್ತಿಗೆ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ತಡೆಗೋಡೆ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ 58.8 […]

ನಾಳೆ ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ; ಸಕಲ ಸಿದ್ಧತೆ

 ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.  ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುಮಕೂರಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರು ರೈತ ಸಮಾವೇಶದಲ್ಲಿ ರಾಜ್ಯದ ಮೂವರು ಪ್ರಗತಿಪರ ರೈತರು ಸೇರಿದಂತೆ 28 ಮಂದಿಗೆ ಕೃಷಿಕರ್ಮಣ್ಯೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜೊತೆಗೆ ಪ್ರಧಾಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣ […]