You cannot copy content of this page.
. . .

Day: December 31, 2019

2 ಲಕ್ಷ ಟನ್ ಕಸ ವಿಲೇವಾರಿಗೆ ಜ.3ಕ್ಕೆ ಅಂತಿಮ ನಿರ್ಧಾರ; ಸಂಸದ ಪ್ರತಾಪಸಿಂಹ

 ಮೈಸೂರಿನ ವಿದ್ಯಾರಣ್ಯಪುರಂ ಪ್ಲಾಂಟ್‍ನಲ್ಲಿ ಬಿದ್ದಿರುವ 2 ಲಕ್ಷ ಟನ್ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಜ.3ರಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.  ಕಸ ವಿಲೇವಾರಿ ತಾಂತ್ರಿಕ ವಿಧಾನದ ಬಗ್ಗೆ ತಿಳಿದುಕೊಳ್ಳಲು ಮೈಸೂರಿನ ಜಿಲ್ಲಾಧಿಕಾರಿ, ಮೇಯರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದ ನಿಯೋಗವನ್ನು ಮಹಾರಾಷ್ಟ್ರದ ನಾಗಪುರ ಕಸ ವಿಲೇವಾರಿ ಘಟಕಕ್ಕೆ ಕಳುಹಿಸಿದ್ದೆವು. ಮೈಸೂರಿನಲ್ಲಿ ಕಸ ವಿಲೇವಾರಿಗೆ ಜ.3ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ‘ಸಕ್ಕರೆ’ ಸಚಿವರಿಗೆ ‘ಕಹಿ’ ಅನುಭವ..!

    ಮೈಶುಗರ್‍ ಸಕ್ಕರೆ ಕಾರ್ಖಾನೆ ಪುನಾರಂಭ ಸಂಬಂಧ ನಡೆದ ಸಭೆ ವೇಳೆ ರೈತರು ಗದ್ದಲ ನಡೆಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಮೈಶುಗರ್‍ ಸರ್ಕಾರಿ ಸಕ್ಕರೆ ಕಾರ್ಖಾನೆ ಪುನಾರಂಭದ ಸಂಬಂಧ ನಿನ್ನೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಕ್ಕರೆ ಸಚಿವ ಸಿ.ಟಿ.ರವಿಯವರು ಕಾರ್ಖಾನೆಗೆ ಭೇಟಿ ನಿಡಿದ್ದರು. ಈ ವೇಳೆ ಕೆಲ ರೈತರು ಒಳಗಡೆ ಬಿಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ಮಾಡಿದ್ದಾರೆ. ಈ ವೇಳೆ ಸಚಿವರು ಹಾಗೂ ಪೊಲೀಸರು ರೈತರನ್ನು ಸಮಾಧಾನಪಡಿಸಿದ್ದಾರೆ.   ಮಂಡ್ಯದ […]

ಶಿಕ್ಷಕರ ಕಡ್ಡಾಯ ವರ್ಗಾವಣೆ ರದ್ದಿಗೆ ಕ್ರಮ; ಶೈಕ್ಷಣಿಕ ಸಭೆಯಲ್ಲಿ ಸಚಿವ ಸುರೇಶ್‍ಕುಮಾರ್ ಭರವಸೆ

 ಮೈಸೂರು: ಶಿಕ್ಷಕರ ಕಡ್ಡಾಯ ವರ್ಗಾವಣೆಯನ್ನು ರದ್ದು ಮಾಡಿ, ಶಿಕ್ಷಕರ ಸ್ನೇಹಿ ನೀತಿ ತರಲು ಸಿದ್ಧತೆ ನಡೆಸಲಾಗುತ್ತಿದೆ. ಫೆಬ್ರವರಿ ಮತ್ತು ಮಾರ್ಚ್ ಅಧಿವೇಶನದಲ್ಲಿ ಚರ್ಚಿಸಿ ಕಾಯ್ದೆ ರೂಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದರು.  ಆಡಳಿತ ತರಬೇತಿ ಸಂಸ್ಥೆಯ ಹೇಮಾವತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೈಸೂರು ವಿಭಾಗದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶೈಕ್ಷಣಿಕ ಪ್ರಗತಿ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.  ಕಡ್ಡಾಯ ವರ್ಗಾವಣೆ ಎಂಬುದು ಯಾವ ಇಲಾಖೆಯಲ್ಲೂ ಇಲ್ಲ. ಹೀಗಿರುವಾಗ ಶಿಕ್ಷಕರಿಗೆ […]

ಜಮೀನಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

 ಚಾಮರಾಜನಗರ: ಜಮೀನು ವಿಚಾರವಾಗಿ ಇಬ್ಬರ ನಡುವೆ ಉಂಟಾಗಿದ್ದ ವೈಮನಸ್ಸು ಕೊಲೆಯಲ್ಲಿ ಅಂತ್ಯ ಕಂಡಿದೆ.  ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪುಟ್ಟಸ್ವಾಮಪ್ಪ (59) ಕೊಲೆಯಾದ ವ್ಯಕ್ತಿ. ಹತ್ಯೆ ಮಾಡಿದ್ದಾರೆ ಎನ್ನಲಾದ ಸೋಮಪ್ಪ (ಸೋಮೇಶ್ವರ್) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಸೋಮಪ್ಪ ಮತ್ತು ಪುಟ್ಟಸ್ವಾಮಪ್ಪ ನಡುವೆ ಜಮೀನಿನ ವಿಚಾರದಲ್ಲಿ ಮೊದಲಿನಿಂದಲೂ ಆಗಾಗ ಜಗಳವಾಗುತ್ತಿತ್ತು. ಇಂದು ಮುಂಜಾನೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಕೋಪಗೊಂಡ ಸೋಮಪ್ಪ ಪುಟ್ಟಸ್ವಾಮಪ್ಪಗೆ ಕಲ್ಲಿನಿಂದ ಹೊಡೆದು ಹತ್ಯೆ […]

ಸರ್ಕಾರಿ ಆಸ್ಪತ್ರೆಯಲ್ಲಿ ದುರ್ವರ್ತನೆ; ವ್ಯಕ್ತಿ ಬಂಧನ

 ಕೊಡಗು ಜಿಲ್ಲೆಯ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಸೆಕ್ಯೂರಿಟಿ ಗಾರ್ಡ್‍ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  ದರ್ಶನ್ ಎಂಬ ವ್ಯಕ್ತಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಮಹಿಳಾ ಸಿಬ್ಬಂದಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆತನನ್ನು ಹೊರ ಕಳುಹಿಸಲು ಮುಂದಾದ ಸೆಕ್ಯೂರಿಟಿ ಗಾರ್ಡ್ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೊಲೀಸ್‍ ಠಾಣೆಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ವಿರಾಜಪೇಟೆ […]

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಬಿಜೆಪಿ ಸಂಸದರಿಗೆ ಗುಲಾಬಿ ಹೂ ನೀಡಿ ಪ್ರತಿಭಟನೆ

 ಮೈಸೂರು: ಎನ್‍.ಆರ್.ಸಿ, ಸಿಎಎ ವಿರೋಧಿಸಿ ದೇಶಾದ್ಯಂತ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಮಹಿಳಾ ಕಾಂಗ್ರೆಸ್ ಕೂಡ ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಿಳಿಸಿದರು.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ಕಾಯ್ದೆಯನ್ನು ಜಾರಿಗೊಳಿಸಬಾರದು ಮತ್ತು ಮಹಿಳಾ ದೌರ್ಜನ್ಯ ನಿರ್ಮೂಲನೆ ಮಾಡುವಂತೆ  ಜ.೧ರಂದು ಬಿಜೆಪಿ ಸಂಸದರ ಮನೆಗಳಿಗೆ ಭೇಟಿ ನೀಡಿ, ಬಿಳಿ ಗುಲಾಬಿಯೊಂದಿಗೆ ಮನವಿ ಪತ್ರ ನೀಡುವ ಮೂಲಕ ಗಾಂಧಿ ಆಶಯದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಅಲ್ಲದೆ ರಾಜ್ಯಾದ್ಯಂತ […]

ಆದಿವಾಸಿ ಕುಟುಂಬಗಳಿಗೆ ವಿತಣೆಯಾಗದ ಆಹಾರ ಸಾಮಗ್ರಿ

 -ಬಿ.ಎನ್.ಧನಂಜಯಗೌಡ  ಮೈಸೂರು: ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಆದಿವಾಸಿಗಳಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ (ಪಿಡಿಎಸ್) ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ. ಆದರೆ, ಎಚ್.ಡಿ.ಕೋಟೆಯಲ್ಲಿ ಇರುವ ಆದಿವಾಸಿ ಕುಟುಂಬಗಳಿಗೆ ೩ ತಿಂಗಳಿಂದ ಆಹಾರ ಸಾಮಗ್ರಿಗಳು ದೊರೆತ್ತಿಲ್ಲ. ಇದರಿಂದಾಗಿ, ಇಲ್ಲಿನ ಜನರು ಮೂರು ತಿಂಗಳಿಂದ ದುಸ್ತರ ಜೀವನ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ.  ಹೌದು..ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯ ಬುಡಕಟ್ಟು ಜನರು ಇರುವುದು ಎಚ್.ಡಿ.ಕೋಟೆ ತಾಲೂಕಿನಲ್ಲಿ ಸುಮಾರು ೧೨೦ ಹೆಚ್ಚು ಹಾಡಿಗಳು ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು […]

ಇದು ಮನುಷ್ಯ ಭಾರತವಲ್ಲ ಪೇಶ್ವೆಗಳ ಭಾರತ: ಜ್ಞಾನಪ್ರಕಾಶ ಸ್ವಾಮೀಜಿ

 ಮೈಸೂರು: ಈಗ ಇರುವುದು ಮನುಷ್ಯ ಭಾರತವಲ್ಲ, ಪೇಶ್ವೆಗಳ ಭಾರತ ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಸಂಘದ ವತಿಯಿಂದ ಬಲ್ಲಾಳ್ ವೃತ್ತದ ಬಳಿಯ ಬುದ್ಧ ವಿಹಾರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.  ಪೊಲೀಸ್ ಆಗಿದ್ದು, ಕರ್ತವ್ಯ ನಿರತಳಾಗಿದ್ದ ದಲಿತ ಸಮುದಾಯದ ಹೆಣ್ಣುಮಗಳೊಬ್ಬಳನ್ನು ಉಡುಪಿಯ ಶ್ರೀ ಕೃಷ್ಣಮಠದಿಂದ ಹೊರಗೆ ಇಡಲಾಗಿದೆ. ಪ್ಲಾಸ್ಟಿಕ್ ವಸ್ತುವೊಂದನ್ನು ಮುಟ್ಟಿದ ಕಾರಣಕ್ಕೆ ದಲಿತ […]

ನಿಂಬೆಹಣ್ಣು, ಆಲೂಗೆಡ್ಡೆಯಿಂದ ವಿದ್ಯುತ್ ಉತ್ಪಾದನೆ..!

 ಮೈಸೂರು: ಅಡುಗೆಗೆ ಬಳಕೆಯಾಗುತ್ತಿದ್ದ ಆಹಾರ ಪದಾರ್ಥಗಳು ವಿದ್ಯುತ್‍ ಉತ್ಪಾದನೆಗೆ ಬಳಕೆಯಾಗುವುದನ್ನು ಎಲ್ಲಾದರೂ ನೋಡಿದ್ದೀರಾ? ಈ ಮಾತು ಕೇಳಿ ನಿಮಗೆ ಅಚ್ಚರಿಯಾಗದೇ ಇರದು. ಹೌದು, ಇಂಥದ್ದೊಂದು ವಿಶೇಷ ಸಂಶೋಧನೆಯನ್ನು ವಿದ್ಯಾರ್ಥಿಗಳು ಮಾದರಿ ರೂಪದಲ್ಲಿ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.  ಮಕ್ಕಳು ನಿಂಬೆಹಣ್ಣು, ಆಲೂಗೆಡ್ಡೆಯನ್ನು ಬಳಸಿ ವಿದ್ಯುತ್‍ ಉತ್ಪಾದಿಸಿ ಅದಕ್ಕೆ ‘ವಿದ್ಯುತ್‍ ಕೋಶ’ ಎಂದು ಹೆಸರಿಟ್ಟಿದ್ದಾರೆ. ಇದರೊಂದಿಗೆ ಕಾಲಚಕ್ರವನ್ನು ಕೊಡೆಯ ರೂಪದಲ್ಲಿ ಚಿತ್ರಣ, ದೇಹದ ಅಂಗಾಂಗ ಮಾದರಿ ರೂಪಿಸುವ ಮೂಲಕ ವಿಜ್ಞಾನ ಲೋಕವನ್ನೇ ಅನಾವರಣಗೊಳಿಸಿದ್ದಾರೆ.  ಮೈಸೂರು ತಾಲ್ಲೂಕಿನ ಹಡಜನ ಸರ್ಕಾರಿ ಪ್ರಾಥಮಿಕ […]

ಅತ್ತಿಗೆ ಕೊಲೆಗೆ ಸುಪಾರಿ: ಆರೋಪಿ ಅರೆಸ್ಟ್

  ಆಸ್ತಿ ಮೇಲೆ ಕಣ್ಣು ಹಾಕಿದ್ದ ವ್ಯಕ್ತಿಯೊಬ್ಬ ತನ್ನ ಅತ್ತಿಗೆಯನ್ನೇ ಕೊಲ್ಲಲು ಸುಪಾರಿ ಕೊಟ್ಟು ಸಿಕ್ಕಿಬಿದ್ದಿರುವ ಘಟನೆ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ. ಮಡಿಕೇರಿಯ ಚೇಲಾವರದ ಸುಬ್ಬಯ್ಯ ಎಂಬಾತನೇ ಅತ್ತಿಗೆಯ ಕೊಲೆಗೆ ಸುಪಾರಿ ಕೊಟ್ಟ ಆಸಾಮಿ ತಪ್ಪಿಗಾಗಿ ಆರೋಪಿ ಕಂಬಿ ಎಣಿಸುತ್ತಿದ್ದಾನೆ.  ಆರೋಪಿ ಸುಬ್ಬಯ್ಯ ತನ್ನ ಅಣ್ಣನ ಕಾಫಿ ಎಸ್ಟೇಟ್ ಅನ್ನು ಕಬಳಿಸಲು ಅನೇಕ ಬಾರಿ ಪ್ರಯತ್ನಪಟ್ಟಿದ್ದ. ಆದರೆ ಅದರಲ್ಲಿ ವಿಫಲನಾಗಿದ್ದ. ಕಾಫಿ ಎಸ್ಟೇಟ್ ಅತ್ತಿಗೆಯ ಹೆಸರಲ್ಲಿ ಇರುವುದು ತಿಳಿದು ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ ಎನ್ನಲಾಗಿದೆ.   ಅತ್ತಿಗೆಯನ್ನು […]