You cannot copy content of this page.
. . .

Day: December 30, 2019

ಹೊಸ ವರ್ಷಾಚರಣೆ; ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧ

 ಮೈಸೂರು: ಚಾಮುಂಡಿಬೆಟ್ಟದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.  ಡಿ.31ರ ಸಂಜೆ 7ಗಂಟೆಯಿಂದ ಜ.1ರ ಬೆಳಿಗ್ಗೆ 6ಗಂಟೆಯವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಉತ್ತನಹಳ್ಳಿ ಗೇಟ್, ದೈವಿವನ ಗೇಟ್, ಲಲಿತಮಹಲ್ ಗೇಟ್ ಹಾಗೂ ಚಾಮುಂಡಿಬೆಟ್ಟದ ಪಾದದ ಬಳಿ ಇರುವ ಗೇಟ್‌ಗಳಲ್ಲಿ ಪ್ರವೇಶ ಇರುವುದಿಲ್ಲ. ತಾವರೆಕಟ್ಟೆ ಗೇಟ್‌ನಲ್ಲಿ ಚಾಮುಂಡಿಬೆಟ್ಟದ ನಿವಾಸಿಗಳಿಗಷ್ಟೇ ಪ್ರವೇಶಕ್ಕೆ ಅವಕಾಶ ಇರಲಿದೆ. ಬೆಟ್ಟ ಮತ್ತು ತಪ್ಪಲಿನಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ.  ನಗರದ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್‍ ಮೊದಲಾದ ಕಡೆ ಮಧ್ಯರಾತ್ರಿ […]

ಗುಜರಾತ್‍ ಕಾಂಡ್ಲಾ ಬಂದರು ಸಮೀಪ ರಾಸಾಯನಿಕ ತೊಟ್ಟಿ ಸ್ಫೋಟ; ಒಂದು ಸಾವು

 ಗುಜರಾತ್‍ನ ಕಾಂಡ್ಲಾ ಬಂದರು ಹಾಗೂ ಭಾರತೀಯ ತೈಲ ಸಂಸ್ಕರಣಾಗಾರ ಬಳಿಯ ರಾಸಾಯನಿಕ ತೊಟ್ಟಿ ಸೋಮವಾರ ಸ್ಫೋಟಗೊಂಡಿದೆ. ಸ್ಫೋಟದಿಂದ ಒಬ್ಬರು ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಾವೇರಿ ತೀರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್

  2020 ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಆರ್‍ಎಸ್‍ ಪೊಲೀಸ್‌ ಠಾಣೆ ವ್ಯಾಪ್ತಿಯ ಬಲಮುರಿ, ಎಡಮುರಿ ಹಾಗೂ ಕಾವೇರಿ ನದಿ ತೀರದ ಪ್ರದೇಶ ಸುತ್ತಮುತ್ತ ಡಿ.31 ಬೆಳಗ್ಗೆ 6 ರಿಂದ ಜ.1 ಸಂಜೆ 6 ರ ವರೆಗೆ ಜನರ ಪ್ರವೇಶ, ಹೊಸ ವರ್ಷಾಚರಣೆ ನಿಷೇಧಿಸಲಾಗಿದೆ.   ಈ ಬಗ್ಗೆ ಹೇಳಿಕೆ ನೀಡಿರುವ ಶ್ರೀರಂಗಪಟ್ಟಣ ತಹಸೀಲ್ದಾರ್‍ ಎಂ.ವಿ. ರೂಪಾ, ಮೋಜು ಮಸ್ತಿ ನೆಪದಲ್ಲಿ ಪ್ರಾಣಹಾನಿ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತವೆ. ಇವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು […]

ಕೆಪಿಎಸ್‍ಸಿ ಎ, ಬಿ ದರ್ಜೆ ಹುದ್ದೆಗಳಿಗಿಲ್ಲ ಸಂದರ್ಶನ; ಸಂಪುಟ ಸಭೆಯಲ್ಲಿ ತೀರ್ಮಾನ

 ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‍ಸಿ) ಎ ಮತ್ತು ಬಿ ದರ್ಜೆ ಹುದ್ದೆಗಳಿಗೆ ಸಂದರ್ಶನ ನಡೆಸದೇ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ವೈದ್ಯ, ಎಂಜಿನಿಯರ್‍ ನಂತಹ ಹುದ್ದೆಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಅಂಗಡಿ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ರಾತ್ರಿ ಪಾಳಿಯಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸಲು ಅನುಮತಿ ನೀಡುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಮಹಿಳೆಯರಿಗೆ ರಕ್ಷಣೆ ಕೊಡುವ […]

ಮೈಸೂರು ರೇಸ್‍ ಕ್ಲಬ್‍ ಪರವಾನಗಿ ನವೀಕರಣ

  ಮೈಸೂರು ರೇಸ್‍ ಕ್ಲಬ್‍ ಪರವಾನಗಿಯನ್ನು 30 ವರ್ಷಗಳ ಅವಧಿಗೆ ನವೀಕರಿಸಿ ರಾಜ್ಯ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಾರ್ಷಿಕ ಆದಾಯದ ಶೇ.2 ರಷ್ಟನ್ನು ಸರ್ಕಾರಕ್ಕೆ ಪಾವತಿಸಬೇಕೆಂದು ಮೈಸೂರು ಪ್ರೆಸ್‍ ಕ್ಲಬ್‍ ಗೆ ನಿರ್ದೇಶನ ಮಾಡಲಾಗಿದೆ.  139 ಎಕರೆ 30 ಗುಂಟೆ ಇರುವ ಮೈಸೂರು ರೇಸ್‍ ಕ್ಲಬ್‍ ನ ಈ ಜಾಗ ಲೋಕೋಪಯೋಗಿ ಇಲಾಖೆಗೆ ಸೇರುತ್ತದೆ. 1976ರಲ್ಲಿ ಮೈಸೂರು ರೇಸ್‍ ಕ್ಲಬ್‍ ಗೆ ಮೊದಲ ಬಾರಿಗೆ ಲೀಸ್‍‍ […]

MARCH 5 ರಂದು ರಾಜ್ಯ ಬಜೆಟ್‍ ಮಂಡನೆ

  ವಿಧಾನ ಮಂಡಲ ಅದಿವೇಶನಕ್ಕೆ ಕೊನೆಗೂ ದಿನಾಂಕ ನಗದಿಯಾಗಿದೆ. ಇಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಅಧಿವೇಶನ ದಿನಾಂಕವನ್ನು ಅಂತಿಮಗೊಳಿಸಲಾಗಿದೆ.  ಫೆಬ್ರವರಿ 17 ರಿಂದ 21ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಫೆಬ್ರವರಿ 17ರಂದು ಎರಡೂ ಸದನಗಳನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಮಾರ್ಚ್‍ 2 ರಿಂದ ಬಜೆಟ್‍ ಅಧಿವೇಶನ ಶುರುವಾಗಲಿದ್ದು, ಮಾರ್ಚ್‍ 5 ರಂದು ಬಜೆಟ್‍ ಮಂಡಿಸಲಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಮೂಲ ಸೌಕರ್ಯಕ್ಕಾಗಿ ಕಾವಾ ವಿದ್ಯಾರ್ಥಿಗಳ ಪ್ರತಿಭಟನೆ

  ಶಾಶ್ವತ ಡೀನ್ ನೇಮಿಸುವಂತೆ ಆಗ್ರಹಿಸಿ ಮೈಸೂರಿನ ಕಾವಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು  ಶಾಶ್ವತ ಡೀನ್ ನೇಮಿಸಬೇಕೇಂದು ಪ್ರತಿಭಟನಾಕಾರರು ಆಗ್ರಹಿಸಿದರು.   ಕಾಲೇಜಿನ ಆಡಳಿತ ಕಚೇರಿಗೆ ಬೀಗ ಜಡಿದು, ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾಲೇಜಿನ ವಿದ್ಯುತ್ ಬಿಲ್ ಕಟ್ಟದ ಕಾರಣ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ನೀರು, ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ  ಹೀಗಾಗಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಇನ್ನೊಂದು ವಾರದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಆರಂಭ; ಭಾರತಿ ವಿಷ್ಣುವರ್ಧನ್

 ಇನ್ನೊಂದು ವಾರದಲ್ಲಿ ಡಾ.ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ನಟಿ ಭಾರತಿ ವಿಷ್ಣುವರ್ಧನ್ ಭರವಸೆ ವ್ಯಕ್ತಪಡಿಸಿದ್ದಾರೆ.  ನಟ ಡಾ.ವಿಷ್ಣುವರ್ಧನ್ ಅವರ 10ನೇ ಪುಣ್ಯಸ್ಮರಣೆ ಹಿನ್ನೆಲೆ ಎಚ್‍.ಡಿ.ಕೋಟೆ ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿರುವ ಸ್ಮಾರಕ ನಿರ್ಮಾಣ ಸ್ಥಳದಲ್ಲಿ ಅವರ ಭಾವಚಿತ್ರಕ್ಕೆ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿದರು. ಈ ವೇಳೆ ನೂರಾರು ಅಭಿಮಾನಿಗಳು ವಿಷ್ಣು ಪರ ಜೈಕಾರ ಕೂಗಿದರು. ಭಾರತಿ ವಿಷ್ಣುವರ್ಧನ್ ಮಾತನಾಡಿ, ಸ್ಮಾರಕ ವಿಷ್ಣು ಅವರ ಕನಸು. ಸ್ಮಾರಕ ಜಾಗದಲ್ಲಿ ಜನಪರ ಕೆಲಸಗಳಾಬೇಕು ಎಂಬುದು ಅವರ ಬಯಕೆಯಾಗಿತ್ತು. ಕಟ್ಟಡದ […]

ಪೌರತ್ವ ಕಾಯ್ದೆ ಬೆಂಬಲಿಸಲು ಪ್ರಧಾನಿ ಮೋದಿ ಅಭಿಯಾನ

  ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಾದ್ಯಂತ ವಿರೋಧ, ಆಕ್ರೋಶಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕಾಯ್ದೆಗೆ ಬೆಂಬಲ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.    ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಯಾನ ಆರಂಭಿಸಿರುವ ಪ್ರಧಾನಿ ಮೋದಿ, ಇಂಡಿಯಾ ಸಪೋರ್ಟ್ಸ್ ಸಿಟಿಜೆನ್’ಶಿಫ್ ಅಮೆಂಡ್ಮೆಂಟ್ ಆ್ಯಕ್ಟ್ ಎಂಬ ಹ್ಯಾಷ್ ಟ್ಯಾಗ್ ಮೂಲಕ ಅಭಿಯಾನ ಆರಂಭಿಸಿದ್ದಾರೆ.    ಅಭಿಯಾನದ ಟ್ವೀಟ್’ನೊಂದಿಗೆ ಪೌರತ್ವ ಕಾಯ್ದೆ ಎಂದರೇನು ಎಂಬುದನ್ನು ಕೆಲ ಪದಗಳಲ್ಲಿ ಮೋದಿ ವಿವರಿಸಿದ್ದಾರೆ. ಭಾರತ ಪೌರತ್ವ ಕಾಯ್ದೆಯನ್ನು ಬೆಂಬಲಿಸುತ್ತದೆ. […]

ಪೇಜಾವರ ಶ್ರೀಗಳ ಜೊತೆ ನಿಮ್ಮ ಒಡನಾಟದ ಚಿತ್ರ ಕಳುಹಿಸಿ

ಪೇಜಾವರ ಶ್ರೀಗಳು ಮೈಸೂರಿನಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಶ್ರೀಗಳು ಪಟ್ಟಾಧಿಕಾರ ಸ್ವೀಕರಿಸಿದಂದಿನಿಂದ ಮೈಸೂರಿನ ಜೊತೆ ನಂಟು ಹೊಂದಿದ್ದರು. ಹೀಗಾಗಿ ಮೈಸೂರು ಭಾಗದಲ್ಲಿ ಪೇಜಾವರ ಶ್ರೀಗಳು ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ನೀವೂ ಕೂಡಾ ಪೇಜಾವರ ಶ್ರೀಗಳ ಭಕ್ತರಾಗಿದ್ದರೆ, ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಅವಕಾಶ ನಿಮಗೂ ಸಿಕ್ಕಿದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಅವರೊಂದಿಗಿನ ಫೋಟೋ ಇದ್ದರೆ ಅದನ್ನು ಕಳುಹಿಸಿ. ಆಂದೋಲನ ವೆಬ್‍ ಸೈಟ್‍ andolana.in ಹಾಗೂ ಆಂದೋಲನ ಪತ್ರಿಕೆಯಲ್ಲಿ ಪೇಜಾವರ ಶ್ರೀಗಳೊಂದಿಗಿನ ನಿಮ್ಮ ಫೋಟೋಗಳನ್ನು ಪ್ರಕಟಿಸುತ್ತೇವೆ. ನೀವು […]