You cannot copy content of this page.
. . .

Day: December 29, 2019

ಬೃಂದಾವನದಲ್ಲಿ ಲೀನರಾದ ಪೇಜಾವರ ಶ್ರೀಗಳು

 ಧಾರ್ಮಿಕವಾಗಿ ಸರ್ವಜನ ಹಿತ ಬಯಸುತ್ತಿದ್ದ, ಸಾಮರಸ್ಯದ ಸಾಕಾರ ಮೂರ್ತಿಯಾಗಿ ಜನಮಾನಸದಲ್ಲಿ ಸ್ಥಾನಪಡೆದುಕೊಂಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥರು ಭಾನುವಾರ ಸಕಲ ಸರ್ಕಾರಿ ಗೌರವ, ಧಾರ್ಮಿಕ ವಿಧಿವಿಧಾನ ಹಾಗೂ ಸಹಸ್ರಾರು ಭಕ್ತರ ಅಶ್ರುತರ್ಪಣದೊಂದಿಗೆ ವಿದ್ಯಾಪೀಠದಲ್ಲಿ ಬೃಂದಾವನಸ್ಥರಾದರು.  ಶಾಶ್ವತ ಹರಿಧ್ಯಾನಕ್ಕೆ ಕುಳಿತು ಬೃಂದಾವನಸ್ಥರಾದ ಶ್ರೀಗಳನ್ನು ‘ಹರಿ ಸರ್ವೋತ್ತಮ ವಾಯು ಜೀವೊತ್ತಮ’ ಎಂಬ ಘೋಷವಾಕ್ಯದೊಂದಿಗೆ ಕಳುಹಿಸಿಕೊಡಲಾಯಿತು.  ವಿಶ್ವೇಶ ತೀರ್ಥರ ಆಪ್ತ ಶಿಷ್ಯ ಮತ್ತು ವಿದ್ಯಾಪೀಠದ ಪ್ರಾಚಾರ್ಯ ಕೃಷ್ಣರಾಜ ಕುತ್ಪಾಡಿ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು. ವಿಧಿಗಳನ್ನು ಪೂರ್ಣಗೊಳಿಸಿ ತಾತ್ಕಾಲಿಕ ಬೃಂದಾವನ […]

ನಕಲಿ ದಾಖಲಾತಿ ಸೃಷ್ಟಿಸಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ ವ್ಯಕ್ತಿ ಬಂಧನ

 ಹುಣಸೂರು: ನಕಲಿ ದಾಖಲಾತಿ ಸೃಷ್ಟಿಸಿ, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ ವ್ಯಕ್ತಿಯನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಬಜಾರ್ ರಸ್ತೆಯ ನಿವಾಸಿ ಉಬೇದುಲ್ಲಾ ಖಾನ್ ಅವರ ಪುತ್ರ ರಾಮೀಜ್ ಉಲ್ಲಾಖಾನ್ (೨೯) ಬಂಧಿತ ಆರೋಪಿ.  ಈತ ಹಿಂದೆಯೇ ಪಾಸ್‌ಪೋರ್ಟ್ ಹೊಂದಿದ್ದು, ಪಾಸ್ ಪೋರ್ಟ್ ಜನ್ಮದಿನಾಂಕವನ್ನು ತಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಸ್‌ಪೋರ್ಟ್ ಇಲಾಖೆಯು ಆತನ ಪಾಸ್‌ಪೋರ್ಟ್ ರದ್ದುಪಡಿಸಿತ್ತು. ಆರೋಪಿಯು ಮತ್ತೆ ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಜನ್ಮದಿನಾಂಕವನ್ನು ತಿದ್ದಿ ನಕಲಿ ದಾಖಲಾತಿ ಸೃಷ್ಟಿಸಿರುವ ಬಗ್ಗೆ ಪಾಸ್‌ಪೋರ್ಟ್ ಇಲಾಖೆ ಅಧಿಕಾರಿಗಳು ನೀಡಿರುವ ದೂರಿನ […]

ಅಮಿತಾಬ್‍ ಬಚ್ಚನ್‍ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

 ಭಾರತದ ಚಿತ್ರರಂಗದಲ್ಲಿ ಜೀವಮಾನ ಸಾಧನೆಗಾಗಿ ಕೇಂದ್ರ ಸರ್ಕಾರದಿಂದ ನೀಡುವ ದಾದಾಸಾಹೇಬ್‍ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದ ಹಿಂದಿ ಖ್ಯಾತ ಚಲನಚಿತ್ರ ನಟ ಅಮಿತಾಬ್‍ ಬಚ್ಚನ್ ಅವರಿಗೆ ಇಂದು (ಭಾನುವಾರ) ರಾಷ್ಟ್ರಪತಿ ರಾಮನಾಥ್‍ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಿದರು.  ಭಾರತೀಯ ಸಿನಿಮಾ ರಂಗದ ಪಿತಾಮಹಾ ದಾದಾಸಾಹೇಬ್ ಫಾಲ್ಕೆ ಹೆಸರಲ್ಲಿ ಭಾರತ ಸರ್ಕಾರ 1969ರಿಂದ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯು ಸ್ವರ್ಣ ಕಮಲ ಪದಕ, ಶಾಲು ಹಾಗೂ 10 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

ಕರ್ಮಭೂಮಿ ಮೈಸೂರಿನಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ

 ಮೈಸೂರು: ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ೧೧೫ನೇ ಜನ್ಮ ದಿನವನ್ನು ಅವರ ಕರ್ಮಭೂಮಿ ಮೈಸೂರಿನಲ್ಲಿ ಆಚರಿಸಲಾಯಿತು.  ಜಿಲ್ಲಾಡಳಿತ, ಕುವೆಂಪು ಕನ್ನಡ ಅಧ್ಯಯನ, ಮೈಸೂರು ಮಹಾನಗರಪಾಲಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿಚಾರ ವೇದಿಕೆ, ಹಿರಿಮರಳಿ ಸಾಂಸ್ಕೃತಿಕ ಸಿರಿ, ಮೈಸೂರು ನಾಗರಿಕ ಸಾಂಸ್ಕೃತಿಕ ಸಂಸ್ಥೆ ಮೊದಲಾದ ಸಂಘ-ಸಂಸ್ಥೆಗಳಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಕುವೆಂಪು ಅವರಿಗೆ ನಮನ ಸಲ್ಲಿಸಿದರು.  ಪೇಜಾವರ ಶ್ರೀ ನಿಧನಕ್ಕೆ ಸಂತಾಪ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಜಯಂತೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ […]

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶ್ರೀಗಳ ಅಂತಿಮ ದರ್ಶನ

 ವಿಶ್ವೇಶ ತೀರ್ಥರ ಪಾರ್ಥಿವ ಶರೀರ ಹೊತ್ತ ವಾಯುಪಡೆಯ ಹೆಲಿಕಾಪ್ಟರ್‍ ಉಡುಪಿಯ ಅಜ್ಜರಕಾಡು ಮೈದಾನದಿಂದ ಬೆಂಗಳೂರಿಗೆ ಆಗಮಿಸಿತು. ಮಧ್ಯಾಹ್ನ 3.40ರ ವೇಳೆಗೆ ವೇಳೆಗೆ ಹೆಲಿಕಾಪ್ಟರ್ ಬೆಂಗಳೂರು ತಲುಪಿತು. ನಂತರ ನ್ಯಾಷನಲ್ ಕಾಲೇಜು ಮೈದಾನಕ್ಕೆ ಶ್ರೀಗಳ ಪಾರ್ಥಿವ ಶರೀರ ರವಾನಿಸಿ 2 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಶ್ರೀಗಳ ಅಂತಿಮ ದರ್ಶನ ಪಡೆಯುತ್ತಿದ್ದಾರೆ.  ಸಂಜೆ 5.30ರ ವೇಳೆಗೆ ಪಾರ್ಥಿವ ಶರೀರವನ್ನು ವಿದ್ಯಾಪೀಠಕ್ಕೆ ತರಲಾಗುವುದು. ರಾತ್ರಿ 8 ಗಂಟೆಯ ಒಳಗೆ ಬೃಂದಾವನ ನಿರ್ಮಾಣದ ವಿಧಿವಿಧಾನಗಳು […]

ಜಾರ್ಖಂಡ್‍ ಸಿಎಂ ಆಗಿ ಜೆಎಂಎಂನ ಹೇಮಂತ್‍ ಸೊರೇನ್ ಪ್ರಮಾಣ ವಚನ ಸ್ವೀಕಾರ

 ಜಾರ್ಖಂಡ್‌ನ 11ನೇ ಮುಖ್ಯಮಂತ್ರಿಯಾಗಿ ಜೆಎಂಎಂನ ಹೇಮಂತ್‌ ಸೊರೇನ್‌ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಮೊರಾಬಾದಿ ಮೈದಾನದಲ್ಲಿ ಇಂದು ನಡೆದ ‘ಸಂಕಲ್ಪ ದಿವಸ್‍’ ಧ್ಯೇಯದ ಬೃಹತ್‍ ಸಮಾರಂಭದಲ್ಲಿ ಸೊರೇನ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದ ಹಲವು ನಾಯಕರು ಇದಕ್ಕೆ ಸಾಕ್ಷಿಯಾಗಿದ್ದರು.  ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಬಿಜೆಪಿ ವಿರೋಧಿ ಪಕ್ಷಗಳ ಬಲ ಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ರಾಜಸ್ತಾನ್ ಸಿಎಂ ಅಶೋಕ್‍ ಗೆಹ್ಲೊಟ್‍, ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‍ ಬಗೇಲ್, ಡಿಎಂಕೆ […]

ವಿದ್ಯಾಪೀಠದಲ್ಲಿ ಬೃಂದಾವನ; ಶ್ರೀಗಳ ಅಂತ್ಯಕ್ರಿಯೆ ಹೀಗೆ ನಡೆಯುತ್ತೆ

 ಉಡುಪಿಯ ಪೇಜಾವರ ಮಠದಲ್ಲಿ ನಿಧನರಾದ ವಿಶ್ವೇಶ ತೀರ್ಥ ಸ್ವಾಮೀಜಿ ಪಾರ್ಥಿವ ಶರೀರದ ಅಂತಿಮ ವಿಧಿ ವಿಧಾನಗಳು ಇಂದು ಸಂಜೆ ಸ್ವಾಮೀಜಿಯ ಆಪ್ತ ಶಿಷ್ಯ ಕೃಷ್ಣರಾಜ ಕುತ್ಪಾಡಿ ಮಾರ್ಗದರ್ಶನದಲ್ಲಿ ಮಾಧ್ವ ಪರಂಪರೆಗೆ ಅನುಗುಣವಾಗಿ ಬೆಂಗಳೂರಿನ ಶ್ರೀನಿವಾಸನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಯಲಿದೆ.  ವಿದ್ಯಾಪೀಠ ಆವರಣಕ್ಕೆ ಪಾರ್ಥಿವ ಶರೀರ ಪ್ರವೇಶಿಸಿದ ನಂತರ ಗೋಪಿಚಂದನ ಮತ್ತು ಮುದ್ರಾಧಾರಣೆಗಳು ನಡೆಯುತ್ತವೆ. ಹೊಸಬಟ್ಟೆ ಉಡಿಸಿ ಅಲಂಕಾರ ಮಾಡಿದ ನಂತರ ಅವರಿಂದಲೇ ಕೃಷ್ಣ ಮತ್ತು ರಾಯರ ಸನ್ನಿಧಾನ ಪೂಜೆ ಮಾಡಿಸಲಾಗುತ್ತದೆ. ಶ್ರೀಗಳು ಬಯಸಿದ್ದಂತೆ ವಿದ್ಯಾಪೀಠ ಆವರಣದ ಹುಲ್ಲುಹಾಸಿನಲ್ಲಿ […]

ಮೈಸೂರಿನಲ್ಲಿ ಪೇಜಾವರ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ

 ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಬಲ್ಲಾಳ್ ವೃತ್ತದಲ್ಲಿರುವ ಬುದ್ಧವಿಹಾರದಲ್ಲಿ ಪೇಜಾವರ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಚಿಂತಕ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಪೇಜಾವರ ಶ್ರೀಗಳು ಇಂದು ನಮ್ಮನ್ನು ಅಗಲಿರುವುದು ವಿಷಾದದ ಸಂಗತಿ. ಶ್ರೀಗಳು ದಲಿತರ ಕೇರಿಗಳಿಗೆ ಭೇಟಿ ನೀಡಿ ಸಾಮರಸ್ಯ ಮಾಡುವ ಕೆಲಸ ಮಾಡಿದ್ದರು. ಹಿಂದೂ ಧರ್ಮದ ಅಸಮಾನತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕೆಂಬ ಧೋರಣೆ ಹೊಂದಿದ್ದವರು. ಸೈದ್ಧಾಂತಿಕವಾಗಿ ಅವರೊಟ್ಟಿಗೆ ಭಿನ್ನಾಭಿಪ್ರಾಯಗಳಿದ್ದರೂ, ವೈಯಕ್ತಿಕವಾಗಿ ನಾವೂ ಅವರನ್ನು ಗೌರವಿಸುತ್ತಿದ್ದೆವು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದರು. […]

ಪೇಜಾವರ ಶ್ರೀಗಳ ನಿಧನಕ್ಕೆ ಗಣ್ಯರ ಸಂತಾಪ

 ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶ್ರೀಗಳ ಪಾಂಡಿತ್ಯ, ಸರ್ವಧರ್ಮ ಸಮನ್ವಯ ದೃಷ್ಟಿ, ಸಾಮಾಜಿಕ ಕಳಕಳಿಯನ್ನು ಸ್ಮರಿಸಿದ್ದಾರೆ. ಅಲ್ಲದೆ, ತಮ್ಮೊಂದಿಗಿನ ಶ್ರೀಗಳ ಒಡನಾಟವನ್ನೂ ನೆನಪಿಸಿಕೊಂಡು ಭಾವುಕರಾಗಿದ್ದಾರೆ.  ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶ್ರೀಗಳು ದೈವಾಧಿನರಾಗಿರುವುದು ಯತಿವರ್ಯ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸುತ್ತೂರು ಮಠಕ್ಕೂ ಪೇಜಾವರ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಸಮಾಜದ ಎಲ್ಲ ಸ್ಥರದ ಜನತೆಗಾಗಿ ಬದುಕು ಮುಡಿಪಾಗಿಟ್ಟರು. ಜಪತಪಾದಿ ಮೂಲಕ ಜಗತ್ತಿನ ಒಳಿತಿಗಾಗಿ ಪ್ರಾರ್ಥಿಸುತ್ತಿದ್ದರು. ಮೈಸೂರಿನ ಮಂಜುನಾಥಪುರ […]

ಧರ್ಮಶಾಸ್ತ್ರದಲ್ಲಿ ಅದಮ್ಯ ಪಾಂಡಿತ್ಯ ಹೊಂದಿದ್ದ ಪೇಜಾವರ ಶ್ರೀ

 ಬಾಲಯತಿ ವಿದ್ವತ್ತಿಗೆ ತಲೆಬಾಗಿದ್ದ ಪಂಡಿತರು: ಅದು 1961ರ ಸಂದರ್ಭ. ದೆಹಲಿಯಲ್ಲಿ ವಿಶ್ವ ಕಲ್ಯಾಣ ಯಾಗ ಹಿನ್ನೆಲೆಯಲ್ಲಿ ವಿದ್ವತ್‍ ಪಂಡಿತರ ದಂಡು ನೆರೆದಿತ್ತು. ಅಲ್ಲಿ ಬಾಲಯತಿ ವಿಶ್ವೇಶ ತೀರ್ಥರೂ ಭಾಗವಹಿಸಿದ್ದರು. ಸಭೆಯಲ್ಲಿ ಇವರ ಪಾಂಡಿತ್ಯಕ್ಕೆ ಪ್ರಕಾಂಡ ಪಂಡಿತರೇ ಅಚ್ಚರಿ ವ್ಯಕ್ತಪಡಿಸಿ ತಲೆಬಾಗಿದ್ದರು. ಕಾಶಿಯ ಪಂಡಿತ ಷಡಂಗ ರಾಮಚಂದ್ರ ಶಾಸ್ತ್ರಿಗಳು ಸಭೆಯಲ್ಲಿ ತರ್ಕಶಾಸ್ತ್ರದ ಅತ್ಯಂತ ಜಟಿಲ ಪ್ರಶ್ನೆಯನ್ನು ಮುಂದಿಟ್ಟಿದ್ದರು. ಪಂಡಿತರೆಲ್ಲ ಉತ್ತರ ಕಾಣದೆ ಒಬ್ಬರ ಮುಖವನ್ನೊಬ್ಬರು ನೋಡುವಾಗ ಪೇಜಾವರ ಶ್ರೀಗಳು ಸಮಸ್ಯೆಯನ್ನು ಸುಲಭವಾಗಿ ಬಿಡಿಸಿ ನೆರೆದಿದ್ದವರನ್ನು ಚಕಿತಗೊಳಿಸಿದರು.  ನ್ಯಾಯಶಾಸ್ತ್ರ ಚರ್ಚೆ, […]