You cannot copy content of this page.
. . .

Day: December 28, 2019

ನಾಳೆ ಮಠಕ್ಕೆ ಪೇಜಾವರ ಶ್ರೀ ಸ್ಥಳಾಂತರ ; ಮಠದಲ್ಲಿಯೇ ನಡೆಯುತ್ತೆ ಚಿಕಿತ್ಸೆ

ವಿಶ್ವೇಶ ತೀರ್ಥ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿಲ್ಲ. ಹೀಗಾಗಿ ನಾಳೆ ಶ್ರೀಗಳನ್ನು ಮಠಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಮಠದಲ್ಲೇ ಶ್ರೀಗಳಿಗೆ ವೆಂಟಿಲೇಟರ್‍ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಶ್ರೀಗಳ ಅಂತಿಮ ಆಸೆಯಂತೆ ಮಠಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಕಿರಿಯ ಶ್ರೀಗಳು ಹೇಳಿದ್ದಾರೆ.   ಇದಕ್ಕೂ ಮೊದಲು ಸಿಎಂ ಯಡಿಯೂರಪ್ಪ ಕೂಡಾ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರ ಜೊತೆ ಚರ್ಚಿಸಿದ್ದರು. ಸಿಎಂ ಯಡಿಯೂರಪ್ಪ ನಾಳೆ ಕೂಡಾ ಉಡುಪಿಯಲ್ಲೇ ಉಳಿಯಲಿದ್ದಾರೆ. ಇನ್ನು ನಾಳೆ ಸಿಎಂ […]

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶೇ.10 ಮೀಸಲಾತಿ; ಸಿಎಂ

 ಕೇಂದ್ರ ಸರ್ಕಾರದ ನೀತಿಯಂತೆ ಹಲವು ರಾಜ್ಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಬ್ರಾಹ್ಮಣ ಸಮಾಜಕ್ಕೆ ಶೇಕಡಾ 10ರಷ್ಟು ಮೀಸಲಾತಿ ಜಾರಿಯಲ್ಲಿದೆ. ಅದರಂತೆ ರಾಜ್ಯದಲ್ಲಿಯೂ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶೇ.10ರಷ್ಟು ಮೀಸಲಾತಿ ಜಾರಿಗೆ ತರುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.     ಉಡುಪಿಯ ಕೋಟೇಶ್ವರದಲ್ಲಿ ನಡೆಯುತ್ತಿರುವ 10ನೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬ್ರಾಹ್ಮಣ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಕ್ಷ […]

ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲವಂತೆ..!: ಹೇಳಿದ್ದು ಸಿಎಂ..!

  ಸದ್ಯ ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಸಿಎಂ ಯಡಿಯೂರಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಮಂಕಿ ಗ್ರಾಮದಲ್ಲಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಪ್ರವಾಹದಿಂದ ನೂರಾರು ಕುಟುಂಬಗಳು ಮನೆ ಮಠ ಕಳೆದುಕೊಂಡಿವೆ. ಅವರಿಗೆಲ್ಲಾ ಪರಿಹಾರ ಕೊಡಬೇಕು. ಅವರ ಬದುಕು ಕಟ್ಟಿಕೊಡಬೇಕು. ಆದರೆ ಸದ್ಯ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಮುಂದಿನ ದಿನಗಳಲ್ಲಿ ಸರಿಹೋಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.   ಕೇಂದ್ರ ಸರ್ಕಾರ ಸಿದ್ದಪಡಿಸಿದ ಆಡಳಿತ ಸೂಚ್ಯಂಕ ಪಟ್ಟಿಯಲ್ಲಿ ಆರ್ಥಿಕ ಶಿಸ್ತು ಪಾಲನೆಯಲ್ಲಿ […]

ಹೊಸ ವರ್ಷಾಚರಣೆ ವೇಳೆ ಅನುಚಿತ ವರ್ತನೆ ತೋರಿದರೆ ಹುಷಾರ್..!

   ಡಿಸೆಂಬರ್‍ 31ರ ರಾತ್ರಿ ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆಗಳು ನಡೆದಂತೆ ಮೈಸೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಹೊಸ ವರ್ಷಾಚರಣೆ ಮಾಡುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.   ಸಾರ್ವಜನಿಕ ಸ್ಥಳಗಳಲ್ಲಿ ಕೂಗಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ, ಸೌಂಡ್ಸ್ ಗೆ ಅವಕಾಶವಿರುವುದಿಲ್ಲ. ಒಂದು ವೇಳೆ ಶುಭಾಶಯ ತಿಳಿಸುವ ನೆಪದಲ್ಲಿ ಅನುಚಿತ ವರ್ತನೆ ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಾಲಕೃಷ್ಣ ಅವರು ಎಚ್ಚರಿಸಿದ್ದಾರೆ. […]

ಮತ್ತಷ್ಟು ಕ್ಷೀಣಿಸಿದ ಪೇಜಾವರ ಶ್ರೀ ಆರೋಗ್ಯ

  ಪೇಜಾವರ ಶ್ರೀಗಳ ಆರೋಗ್ಯ ಮತ್ತಷ್ಟು ಕ್ಷೀಣಿಸುತ್ತಿದ್ದು, ಗಂಟೆಯಿಂದ ಗಂಟೆಗೆ ಶ್ರೀಗಳ ಆರೋಗ್ಯ ಹದಗೆಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.   ಉಡುಪಿಯ ಮಣಿಪಾಲದಲ್ಲಿ ಮಾತನಾಡಿದ ಅವರು, ವೈದ್ಯರು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹ ಸೂಚನೆಗಳನ್ನು ಪಡೆಯುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.  

ಬಿಜೆಪಿ ಸಂವಿಧಾನವನ್ನು ಶಕ್ತಿಹೀನ ಮಾಡುತ್ತಿದೆ; ಸಿದ್ದರಾಮಯ್ಯ

   ಬಿಜೆಪಿ ಪಕ್ಷ ದೇಶದ ಸಂವಿಧಾನವನ್ನು ಶಕ್ತಿಹೀನ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್‍ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ದೇಶಕ್ಕೆ ಯಾವುದು ಬೇಕಾಗಿಲ್ಲವೋ ಮೋದಿ ಅದನ್ನು ಜಾರಿಗೆ ತರುತ್ತಿದ್ದಾರೆ. ಆದರೆ ದೇಶದಲ್ಲಿನ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಆರ್‍ ಎಸ್‍ ಎಸ್‍ ಹಾಗೂ ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟಗಾರರಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ತಾವಷ್ಟೇ ದೇಶಭಕ್ತ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು. […]

‘ಮಾಗಿ’ ಫಲ ಪುಷ್ಪಗಳಿಗೆ ‘ವಿದೇಶಿ ದುಂಬಿ’ಗಳ ಮುತ್ತಿಗೆ..

  ಮಾಗಿ ಉತ್ಸವದಿಂದ ಮೈಸೂರು ಎಂದಿಗಿಂತ ಕಳೆಗಟ್ಟಿದೆ. ಅರಮನೆ ಆವರಣದಲ್ಲಿ ವರ್ಣರಂಜಿತವಾಗಿ ನಳನಳಿಸುತ್ತಿರುವ ಹೂವುಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮಾಗಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಪ್ರಪಂಚದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸಿದ್ದಾರೆ. ದೂರದ ಫ್ರಾನ್ಸ್, ಇಟಲಿ, ಜರ್ಮನಿ, ಅಮೆರಿಕಾ ದೇಶಗಳಿಂದ ಪ್ರವಾಸಿಗರು ಅರಮನೆಗೆ ಆಗಮಿಸಿ ಮಾಗಿ ಉತ್ಸವದಲ್ಲಿ ಉತ್ಸಾಹದಿಂದ ಸಮಯ ಕಳೆಯುತ್ತಿದ್ದಾರೆ.  ಜೊತೆಗೆ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್ ನಿಂದ ಬಂದಿರುವ ಪ್ರವಾಸಿಗರನ್ನೂ ಕಾಣಬಹುದು. ವಿಶೇಷವೆಂದರೆ ಇಡೀ ಅರಮನೆ ಆವರಣದಲ್ಲಿರುವ ಶೇ.70ರಷ್ಟು ಪ್ರವಾಸಿಗರು […]

ಸಿಕ್ಕಿಂನಲ್ಲಿ ಹಿಮಪಾತ; 1500 ಪ್ರವಾಸಿಗರ ರಕ್ಷಣೆ

  ಉತ್ತರ ಭಾರತ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಚಳಿ ತುಂಬಾ ಜಾಸ್ತಿಯಾಗಿದೆ. ಅಲ್ಲಿನ ಜನ ಹಾಗೂ ಪ್ರವಾಸಿಗರು ತತ್ತರಿಸುತ್ತಿದ್ದಾರೆ. ಈ ನಡುವೆ ಹಿಮಪಾತಗಳಾಗಿ ಅನಾಹುತಗಳಾಗುತ್ತಿದೆ. ಪೂರ್ವ ಸಿಕ್ಕಿಂ ನಲ್ಲಿ ಭಾರೀ ಹಿಮಪಾತವಾಗಿದ್ದು, ಹಿಮಪಾತದಲ್ಲಿ ಸಿಲುಕಿದ್ದ ಸುಮಾರು 1500ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಲಾಗಿದೆ.   ಇಲ್ಲಿನ ಜವಹರಲಾಲ್ ನೆಹರು ರಸ್ತೆಯಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ. ರಕ್ಷಿಸಿದ ಪ್ರವಾಸಿಗರಿಗೆ ಆಹಾರ, ಬೆಚ್ಚಗಿನ ಬಟ್ಟೆಗಳು, ಔಷಧಿ ನೀಡಲಾಗಿದ್ದು, ಉಳಿದುಕೊಳ್ಳುವ ವ್ಯವಸ್ಥೆ ಕೂಡಾ ಮಾಡಲಾಗಿದೆ.   ನಾಥುಲಾ […]

ಪ್ರತಾಪ ಸಿಂಹ ಓದಿದ್ದು ಕ್ರೈಸ್ತ ಮಿಷನರಿಗಳ ಶಾಲೆಯಲ್ಲಿ..!; ಧ್ರುವನಾರಾಯಣ್

   ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆ ವಿರುದ್ಧವಾಗಿ ಮಾತನಾಡುತ್ತಿರುವ ಸಂಸದ ಪ್ರತಾಪ ಸಿಂಹ ಕೂಡಾ ಓದಿದ್ದು ಕ್ರೈಸ್ತ ಮಿಷನರಿಗಳ ಕಾಲೇಜಿನಲ್ಲೇ ಎಂದು ಮಾಜಿ ಸಂಸದ ಧ್ರುವನಾರಾಯಣ್‍ ಹೇಳಿದ್ದಾರೆ.   ಮೈಸೂರಿನಲ್ಲಿ ಮಾತನಾಡಿದ ಅವರು, ಕ್ರೈಸ್ತ ಮಿಷನರಿಗಳು ಸ್ವಾತಂತ್ರ್ಯಪೂರ್ವದಿಂದಲೂ ಭಾರತದಲ್ಲಿವೆ. ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿವೆ. ಬಹುತೇಕ ಬಿಜೆಪಿ ನಾಯಕರ ಮಕ್ಕಳು ಕೂಡಾ ಇದೇ ಕ್ರೈಸ್ತ ಮಿಷನರಿಗಳ ಶಾಲೆ, ಕಾಲೇಜುಗಳಲ್ಲಿ ಓದಿದ್ದಾರೆ. ಸಂಸದ ಪ್ರತಾಪ ಸಿಂಹ ಕೂಡಾ ಕ್ರೈಸ್ತ ಮಿಷನರಿಗಳ ಕಾಲೇಜಿನಲ್ಲೇ ಓದಿದ್ದು ಎಂದು […]

ಮಾದಪ್ಪನಿಗೆ 2019ರಲ್ಲಿ 2 ಕೋಟಿ ರೂಪಾಯಿ ಕಾಣಿಕೆ..!

 ಚಾಮರಾಜನಗರ ಜಿಲ್ಲೆಯ ಐತಿಹಾಸಿಕ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಲಾಗಿದೆ. ಈ ವರ್ಷವೂ ಮಹದೇಶ್ವರ ಸ್ವಾಮಿ ಕೋಟ್ಯಧಿಪತಿಯಾಗಿದ್ದಾನೆ. ಕಳೆದ ವರ್ಷ ಈ ದೇವಾಲಯದಲ್ಲಿ 1.08 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿತ್ತು. ಈ ವರ್ಷ 1.88 ಕೋಟಿ ರೂಪಾಯಿ ಕಾಣಿಕೆ ರೂಪದಲ್ಲಿ ದೇವರಿಗೆ ಅರ್ಪಿತವಾಗಿದೆ.     ಈ ಬಾರಿ ಒಟ್ಟು 1,88,21,108 ರೂಪಾಯಿ ನಗದು, 48 ಗ್ರಾಂ ಚಿನ್ನ, 1.800 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಪ್ರತಿವರ್ಷ ಧನುರ್ಮಾಸದಲ್ಲಿ ಹುಂಡಿಯ ಕಾಣಿಕೆ ಎಣಿಕೆ ಮಾಡಲಾಗುತ್ತದೆ. ಮಲೆ […]