You cannot copy content of this page.
. . .

Day: December 27, 2019

ಕೊಡಗಿನಲ್ಲಿ ಕಳ್ಳತನ ಮಾಡಿದ್ದ ಮೈಸೂರಿನ ಆರೋಪಿಗಳ ಬಂಧನ

 ಮಡಿಕೇರಿ: ಕೊಡಗಿಗೆ ಆಗಮಿಸಿ ಪೆಟ್ರೋಲ್ ಬಂಕ್‌ವೊಂದರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಇಟ್ಟಿದ್ದ ಹಣವನ್ನು ಕಳ್ಳತನ ಮಾಡಿದ್ದ ಮೈಸೂರು ಮೂಲದ ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.  ಮೈಸೂರಿನ ಉದಯಗಿರಿಯ ಭಾರತ್‌ನಗರ ನಿವಾಸಿ ಸೈಯ್ಯದ್ ಸೈಕ್ಲೇನ್ (೨೧), ರಾಜೀವ್‌ನಗರದ ಮಹದೇವಗೌಡ ಸರ್ಕಲ್ ನಿವಾಸಿ ಇಮ್ರಾನ್ ಶರೀಪ್ (೧೮) ಬಂಧಿತ ಆರೋಪಿಗಳು. ಈ ಗುಂಪಿನಲ್ಲಿ ಬಾಲಕನೂ ಇದ್ದಾನೆ. ಕಳ್ಳರ ಗುಂಪಿನಲ್ಲಿದ್ದ ಮೈಸೂರು ಶಾಂತಿನಗರ ನಿವಾಸಿ ನುಹಿದ್‌ಖಾನ್ ತಲೆಮರೆಸಿಕೊಂಡಿದ್ದಾನೆ.  ಕೆಲ ದಿನಗಳ ಹಿಂದೆ ಕೊಡಗಿನ ಕುಟ್ಟ ಮಾನಂದವಾಡಿ ರಸ್ತೆಯಲ್ಲಿರುವ ಅನುಗ್ರಹ ಪೆಟ್ರೋಲ್ ಬಂಕ್‌ಗೆ ಆಗಮಿಸಿದ್ದ […]

ಎಸ್.ಎಂ.ಕೃಷ್ಣರನ್ನು ಪ್ರಧಾನಿ ಮಾಡಲು ಮುಂದಾಗಿದ್ದರಾ ಸೋನಿಯಾ..?

   ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ಪ್ರಧಾನಮಂತ್ರಿ ಆಗುವ ಅವಕಾಶ ಸ್ವಲ್ಪದರಲ್ಲಿ ತಪ್ಪಿತ್ತಾ..?. ಕೃಷ್ಣ ಅವರ ಆತ್ಮಕಥನ ಸ್ಮೃತಿ ವಾಹಿನಿ ಹೌದು ಎನ್ನುತ್ತಿದೆ. 2004ರಲ್ಲಿ ಯುಪಿಎ-1 ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರ ಬದಲಿಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣಾ ಪ್ರಧಾನಮಂತ್ರಿ ಆಗಬೇಕಾಗಿತ್ತು. ಕೃಷ್ಣ ಅವರೆ ಮುಂದಿನ ಪ್ರಧಾನಿ ಎಂಬ ಮಾತುಗಳು ಕಾಂಗ್ರೆಸ್ ಹೈಕಮಾಂಡ್ ವಲಯದಲ್ಲಿಯೂ ಕೇಳಿ ಬಂದಿದ್ದವು ಎಂಬ ವಿಚಾರವನ್ನು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.  2004ರಲ್ಲಿ ಮನಮೋಹನ್‍ ಸಿಂಗ್‍ ಅವರು ತಮ್ಮ ಸಹಪಾಠಿಗಳಾಗಿದ್ದ ಪ್ರೊ. ಕೆ. ವೆಂಕಟಗಿರಿಗೌಡರವರ […]

ಪೇಜಾವರ ಶ್ರೀಗಳ ಸ್ಥಿತಿ ಗಂಭೀರ

  ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ಮಣಿಪಾಲ್ ನ ಕಸ್ತೂರಬಾ ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ. ಇಂದು ಸಂಜೆ 6 ಗಂಟೆಗೆ ಆಸ್ಪತ್ರೆಯ ಪ್ರಕಟಣೆ ಹೊರಬಿದ್ದಿದೆ.  ಸ್ವಾಮೀಜಿಯವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು, ಅವರ ಪ್ರಜ್ಞೆಯ ಸ್ಥಿತಿಯಲ್ಲಿ ಇದುವರೆಗೆ ಯಾವುದೇ ಸುಧಾರಣೆ ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವರು ಇನ್ನೂ ಕೂಡ ಜೀವ ರಕ್ಷಕ ಸಾಧನಗಳ ಸಹಾಯದಲ್ಲಿ ಇದ್ದಾರೆ. ಅವರ ಆರೋಗ್ಯ ಸ್ಥಿತಿ ಗುರುವಾರದಿಂದ ಇಳಿಮುಖವಾಗಿದೆ ಎಂದು ಆಸ್ಪತ್ರೆ ಪ್ರಕಟಣೆ […]

ಮೈಸೂರು ರಂಗಾಯಣ ನಿರ್ದೇಶಕರಾಗಿ ಅಡ್ಡಂಡ ಕಾರಿಯಪ್ಪ ನೇಮಕ

 ಮೈಸೂರು ರಂಗಾಯಣ ನಿರ್ದೇಶಕರಾಗಿ ಕೊಡಗಿನ ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.  ಬಿಜೆಪಿ ಸರ್ಕಾರ ರಚನೆಯ ನಂತರ ರಾಜ್ಯದ ಮೈಸೂರು, ಶಿವಮೊಗ್ಗ, ಧಾರವಾಡ, ಕಲಬುರ್ಗಿ ರಂಗಾಯಣಗಳ ನಿರ್ದೇಶಕರನ್ನು ವಜಾಗೊಳಿಸಿ, ಸುಮಾರು ಮೂರು ತಿಂಗಳವರೆಗೆ ಖಾಲಿ ಇದ್ದ ಸ್ಥಾನಗಳಿಗೆ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಯಾವ ರಂಗಾಯಣಕ್ಕೆ ಯಾರು ನಿರ್ದೇಶಕರು? ಶಿವಮೊಗ್ಗ ರಂಗಾಯಣ           ಸಂದೇಶ ಜವಳಿ ಧಾರವಾಡ ರಂಗಾಯಣ           ರಮೇಶ್‍ ಪರವಿನಾಯ್ಕರ್ ಕಲಬುರಗಿ ರಂಗಾಯಣ            […]

ಯಡಿಯೂರಪ್ಪಗೆ ಫೆಬ್ರವರಿ 9 ಡೆಡ್ ಲೈನ್ ಕೊಟ್ಟ ಪ್ರಸನ್ನಾನಂದ ಶ್ರೀ..!

  ಚಿತ್ರದುರ್ಗ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ 2020ರ ಫೆಬ್ರವರಿ 9 ರಂದು ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಲಿದೆ. ಅಷ್ಟರೊಳಗೆ ವಾಲ್ಮೀಕಿ ಜನಾಂಗಕ್ಕೆ ನೀಡುತ್ತಿರುವ ಮೀಸಲಾತಿಯನ್ನು ಶೇ.3 ಇದ್ದುದನ್ನು ಶೇ.7.5ಕ್ಕೆ ಏರಿಸಬೇಕು. ಇಲ್ಲದಿದ್ದರೆ ಸಿಎಂ ಯಡಿಯೂರಪ್ಪ ಅವರು ಮನೆಯಲ್ಲಿರಬೇಕಾ ಅಥವಾ ವಿಧಾನಸೌಧದ ಮೂರನೇ ಮಹಡಿಯಲ್ಲಿರಬೇಕಾ ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.  ಹೊಸಪೇಟೆಯಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಈ ಬಗ್ಗೆ ಅಧ್ಯಯನಕ್ಕಾಗಿ […]

ಸ್ಯಾಂಡಲ್‌ವುಡ್ ನಟಿ, ಬಾಲಿವುಡ್ ನಿರ್ಮಾಪಕಿ ನಡುವೆ ಜಗಳ

 ಕ್ಷುಲ್ಲಕ ಕಾರಣಕ್ಕೆ ಸ್ಟಾರ್ ಹೋಟೆಲೊಂದರಲ್ಲಿ ಜಗಳವಾಡಿಕೊಂಡಿದ್ದ ಸ್ಯಾಂಡಲ್‍ವುಡ್‍ನ ನಟಿ ಹಾಗೂ ಬಾಲಿವುಡ್‍ ನಿರ್ಮಾಪಕಿಯಿಬ್ಬರ ವೈಷಮ್ಯ ಈಗ ಗಂಭೀರ ಆರೋಪಕ್ಕೆ ಬಂದು ನಿಂತಿದೆ.  ಹೌದು, ನಟಿ ಸಂಜನಾ ಅವರು ನಿರ್ಮಾಪಕಿ ವಂದನಾ ಜೈನ್ ವಿರುದ್ಧ 200 ಕೋಟಿ ರೂ. ಅಕ್ರಮ ಆಸ್ತಿ ಗಳಿಕೆಯ ಗಂಭೀರ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಕೂಡ ಒತ್ತಾಯಿಸಿದ್ದಾರೆ. ಇಷ್ಟಕ್ಕೂ ಇವರಿಬ್ಬರ ನಡುವಿನ ವೈಷಮ್ಯ ದೊಡ್ಡದಾಗಲು ಕಾರಣವಾದರು ಏನು?  ಕಳೆದ ಭಾನುವಾರ ಬೆಂಗಳೂರಿನ ಸ್ಟಾರ್ ಹೋಟೆಲೊಂದರಲ್ಲಿ […]

ವೈದ್ಯರಿಗೆ ‘ಭೂತ ವಿದ್ಯೆ’ ಕಲಿಸುತ್ತಂತೆ ಬನಾರಸ್ ವಿವಿ..!

  ಹಳ್ಳಿ ಪ್ರದೇಶಗಳಲ್ಲಿ ಜನ ಈಗಲೂ ದೆವ್ವಗಳಿವೆ ಎಂಬುದನ್ನು ನಂಬುತ್ತಾರೆ. ಮೈಮೇಲೆ ದೆವ್ವ ಬಂದಿದೆ ಎಂದು ವಿಚಿತ್ರವಾಗಿ ಆಡುತ್ತಾರೆ. ಈ ವೇಳೆ ಮಾಟಗಾರರು, ಯಂತ್ರ ತಂತ್ರ ವಿದ್ಯೆ ಕಲಿತಿರುವವರ ಹತ್ತಿರ ಹೋಗುತ್ತಾರೆ. ಆದರೆ ಈ ಇಂತಹ ಸಮಸ್ಯೆ ನಿವಾರಿಸಲೆಂದೇ ವಿಶ್ವವಿದ್ಯಾಲಯವೊಂದು ‘ಭೂತ್‍ ವಿದ್ಯಾ’ ಎಂಬ ಸರ್ಟಿಫಿಕೇಟ್‍ ಕೋರ್ಸ್‍ ಪರಿಚಯಿಸಿದೆ.     ವಾರಾಣಸಿಯಲ್ಲಿರುವ ದೇಶದ ಪ್ರತಿಷ್ಠಿತ ಬನಾರಸ್‍ ಹಿಂದೂ ವಿಶ್ವವಿದ್ಯಾಲಯದಲ್ಲಿ ಈ ವಿಶೇಷ ಕೋರ್ಸ್‍ ಪರಿಚಯಿಸಲಾಗಿದೆ. ವೈದ್ಯರಿಗಾಗಿ ಶುರು ಮಾಡುತ್ತಿರುವ ಈ ಕೋರ್ಸ್‍ 6 ತಿಂಗಳ ಅವಧಿಯದ್ದಾಗಿದ್ದು, […]

ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ 2 ಚಿರತೆ ಮರಿಗಳ ರಕ್ಷಣೆ

 ಚಾಮರಾಜನಗರ ಜಿಲ್ಲೆಯ ಮುದಗೆರೆ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಇಂದು (ಶುಕ್ರವಾರ) ಎರಡು ಚಿರತೆ ಮರಿಗಳು ಕಾಣಿಸಿಕೊಂಡಿವೆ.   ಚಿರತೆ ಮರಿಗಳನ್ನು ರಕ್ಷಿಸಲಾಗಿದೆ. ಈ ವೇಳೆ ಅರಣ್ಯ ಅಧಿಕಾರಿಗಳು ಸ್ಥಳದಲ್ಲಿದ್ದರು.

ಹೊಸ ವರ್ಷಕ್ಕೆ 2 ಲಕ್ಷ ಲಡ್ಡು; ಯೋಗಾನರಸಿಂಹ ದೇಗುಲದಲ್ಲಿ ಭರ್ಜರಿ ತಯಾರಿ

  ಮೈಸೂರಿನ ವಿಜಯನಗರದಲ್ಲಿರುವ ಯೋಗಾನರಸಿಂಹ ಸ್ವಾಮಿ ದೇಗುಲದಲ್ಲಿ ಹೊಸ ವರ್ಷದ ದಿನ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಭಕ್ತರಿಗೆ ವಿತರಿಸಲು 2 ಲಕ್ಷ ಲಡ್ಡುಗಳ ತಯಾರಿ ನಡೆಯುತ್ತಿದೆ.  ಡಿಸೆಂಬರ್‍ 20 ರಿಂದಲೇ ಲಡ್ಡು ತಯಾರಿಕೆ ನಡೆಯುತ್ತಿದೆ ಡಿಸೆಂಬರ್‍ 31ಕ್ಕೆ 2 ಲಕ್ಷ ಲಡ್ಡುಗಳ ತಯಾರಿ ಮುಗಿಯುತ್ತದೆ ಎಂದು ತಿಳಿದುಬಂದಿದೆ. ತಿರುಪತಿ ಲಡ್ಡು ಮಾದರಿಯಲ್ಲಿ ಈ ಲಡ್ಡು ತಯಾರಿ ಮಾಡಲಾಗುತ್ತಿದೆ ಎಂದು ಯೋಗನರಸಿಂಗಸ್ವಾಮಿ ದೇಗುಲದ ಸಂಸ್ಥಾಪಕರಾದ ಭಾಷ್ಯಂ ಸ್ವಾಮೀಜಿ ತಿಳಿಸಿದ್ದಾರೆ. 50 ಮಂದಿ ನುರಿತ ಬಾಣಸಿಗರು […]

ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆ ನಾಟಾ ವಶ

 ಅಕ್ರಮವಾಗಿ ಬೀಟೆ ನಾಟಾಗಳನ್ನು ಸಾಗಿಸುತ್ತಿದ್ದ ಗೂಡ್ಸ್ ಆಟೊವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೀಟೆ ನಾಟಾಗಳನ್ನು ಸಾಗಿಸುತ್ತಿದ್ದ ವ್ಯಕ್ತಿ ಆಟೊವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.  ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದಿಂದ ಕುಶಾಲನಗರ ಮಾರ್ಗವಾಗಿ ಗೂಡ್ಸ್‍ ಆಟೊದಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದರು. ಮಾಹಿತಿ ಮೇರೆಗೆ ಕುಶಾಲನಗರ ಮೀನುಕೊಲ್ಲಿ ವ್ಯಾಪ್ತಿಯ ಅರಣ್ಯ ಸಿಬ್ಬಂದಿ ವಾಹನವನ್ನು ಬೆನ್ನಟ್ಟಿ ಸೆರೆಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಆರೋಪಿ ಆಟೊ ನಿಲ್ಲಿಸಿ ಪರಾರಿಯಾಗಿದ್ದಾನೆ. ಅರಣ್ಯ ಸಿಬ್ಬಂದಿ ಜೀಪು […]