You cannot copy content of this page.
. . .

Day: December 26, 2019

ಮೈಸೂರು ನಗರ ಪಾಲಿಕೆ ಮೇಯರ್, ಉಪಮೇಯರ್ ಮೀಸಲಾತಿ ಪಟ್ಟಿ ಪ್ರಕಟ

 ಮೈಸೂರು ಮಹಾನಗರ ಪಾಲಿಕೆಯ ಎರಡನೇ ಅವಧಿಯ ಮೇಯರ್‍ ಸ್ಥಾನ  ಹಿಂದುಳಿದ ವರ್ಗ ಎ (ಮಹಿಳೆ) ಹಾಗೂ ಉಪಮೇಯರ್‍ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.  ಇದೇ ರೀತಿ ರಾಜ್ಯದ ವಿವಿಧ ನಗರಪಾಲಿಕೆಗಳ ಮೇಯರ್‍ ಹಾಗೂ ಉಪಮೇಯರ್‍ ಸ್ಥಾನಕ್ಕೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಪಟ್ಟಿ ಈ ಕೆಳಕಂಡಂತಿದೆ. ಜಿಲ್ಲೆ                               ಮೇಯರ್                         ಉಪಮೇಯರ್ ಬಳ್ಳಾರಿ                            ಪರಿಶಿಷ್ಟ ಜಾತಿ                  ಪರಿಶಿಷ್ಟ […]

ಆ್ಯಕ್ಸಲ್ ಕಟ್‍; ರಸ್ತೆಯಲ್ಲಿ ಉರುಳಿಬಿದ್ದ ಬಸ್

 ಆ್ಯಕ್ಸಲ್‍ ತುಂಡಾದ ಪರಿಣಾಮ ಖಾಸಗಿ ಬಸ್‍ ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಕಮರವಾಡಿ ಗೇಟ್‍ ಬಳಿ ನಡೆದಿದೆ.  ಆ್ಯಕ್ಸಲ್‍ ಬ್ಲೇಡ್‍ ತುಂಡಾದ ಪರಿಣಾಮ ಬಸ್‍ ರಸ್ತೆಯಲ್ಲಿ ಉರುಳಿಬಿದ್ದು ಬಸ್‍ನಲ್ಲಿದ್ದ 40ಕ್ಕೂ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಅವರಲ್ಲಿ 12 ಮಂದಿಯನ್ನು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸಂತೇಮರಹಳ್ಳಿ ಪೊಲೀಸ್‍ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  

ಕಾಲೇಜಿಗೆ ಬಂದ ಬುಸ್ ಬುಸ್ ನಾಗಪ್ಪ..

  ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಜೆಎಸ್‍ಎಸ್‍ ಮಹಾವಿದ್ಯಾಪೀಠಕ್ಕೆ ವಿಶೇಷ ಅತಿಥಿಯೊಬ್ಬ ಬಂದಿದ್ದ. ಅತಿಥಿಗಳಿಗಾಗಿ ಹಾಕಿದ್ದ ಸಾಲು ಕುರ್ಚಿಗಳ ಅಡಿಯಲ್ಲಿ ವಿರಾಜಮಾನವಾಗಿ ಬುಸ್‍ ಬುಸ್‍ ಶಬ್ದ ಮಾಡೋಕೆ ಶುರು ಮಾಡಿದ್ದ. ಹೌದು, ಬಂದಿದ್ದಿದ್ದು ಬೇರೆ ಯಾರೂ ಅಲ್ಲ. ನಾಗರಾಜ ಅಲಿಯಾಸ್‍ ನಾಗರಹಾವು. ಹಾವನ್ನು ನೋಡಿದ ಸಿಬ್ಬಂದಿ, ಹಾವು ಇದ್ದ ರೂಮಿನ ಬಾಗಿಲು ಹಾಕಿದ್ದಾರೆ. ನಂತರ ಉರಗ ತಜ್ಞ ಸೂರ್ಯಕೀರ್ತಿಗೆ ವಿಷಯ ತಿಳಿಸಿದ್ದಾರೆ. ಸೂರ್ಯಕೀರ್ತಿ ಸ್ಥಳಕ್ಕೆ ಬಂದು ಹಾವನ್ನು ಹಿಡಿದು, ಅದನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಉತ್ತರಪ್ರದೇಶದಲ್ಲಿ ‘ಜಾಲ’ಕ್ಕೆ ಪೊಲೀಸರ ‘ಬಲೆ’

 ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದವರ ವಿರುದ್ಧ ಉತ್ತರಪ್ರದೇಶ ಸರ್ಕಾರ ಕ್ರಮಕೈಗೊಂಡಿದೆ. ಉ.ಪ್ರದೇಶದ ಪೊಲೀಸರು ಸಾಮಾಜಿಕ ಜಾಲತಾಣಕ್ಕೆ ಬಲೆ ಬೀಸಿದ್ದಾರೆ.  ಸಿಎಎ ಕಾಯ್ದೆ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ ಎಂದು 124 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 93 ಮಂದಿ ವಿರುದ್ಧ ಎಫ್‍ಐಆರ್‍ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದ 19,409 ಪೋಸ್ಟ್‍ಗಳ ವಿರುದ್ಧ ಕ್ರಮಜರುಗಿಸಲಾಗಿದೆ. 9,372 ಟ್ಟಿಟರ್‍, 9,856 ಫೇಸ್‍ಬುಕ್‍, 181 ಯೂಟ್ಯೂಬ್‍ ಪ್ರೊಫೈಲ್‍ಗಳನ್ನು ಬ್ಲಾಕ್‍ ಮಾಡಲಾಗಿದೆ ಎಂದು ಎಎನ್‍ಐ ವರದಿ […]

ರೈಲ್ವೆ ಇಲಾಖೆ ವೆಬ್‌ಸೈಟ್ ನಲ್ಲಿ ಕನ್ನಡದಲ್ಲೂ ಮಾಹಿತಿ

– ಕೇಶವ್‍ ಎಂ.  ಮೈಸೂರು: ರೈಲ್ವೆ ಇಲಾಖೆ ವೆಬ್‌ಸೈಟ್‌ಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಇರುತ್ತದೆ. ಇದರಿಂದ ಪ್ರಾದೇಶಿಕ ಭಾಷೆಗಳ ಜನರಿಗೆ ರೈಲ್ವೆ ವೆಬ್‌ಸೈಟ್‌ನಲ್ಲಿ ಮಾಹಿತಿ ತಿಳಿಯಲು ಕಷ್ಟವಾಗುತ್ತಿದೆ ಎನ್ನುತ್ತಿದ್ದವರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ.  ಹೌದು, ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿಯೇ ಇದುವರೆಗೂ ನಡೆಯುತ್ತಿತ್ತು. ಇದರಿಂದ ಪ್ರಾದೇಶಿಕ ಭಾಷೆಗಳ ಅಭ್ಯರ್ಥಿಗಳಿಗೆ ವಂಚನೆಯಾಗುತ್ತಿದೆ ಎಂದು ಆರೋಪಿಸಿ ಹಲವಾರು ಭಾರಿ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆಯು ಪ್ರಾದೇಶಿಕ ಭಾಷೆಗಳಲ್ಲಿ […]

ವಿಶ್ವನಾಥ್ ಗೆ ಸಚಿವ ಸ‍್ಥಾನ ಸಿಗೋದಿಲ್ವಾ..?

  ಉಪಚುನಾವಣೆಯಲ್ಲಿ ಪರಾಭವಗೊಂಡ ಅನರ್ಹರಿಗೆ ಸಚಿವ ಸ್ಥಾನ ಸಿಗೋದಿಲ್ವಾ..? ಹೌದು ಎನ್ನುತ್ತಿದೆ ಕಂದಾಯ ಸಚಿವ ಆರ್‍.ಅಶೋಕ್‍ ಹೇಳಿಕೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು ಮಾತು ಕೊಟ್ಟಂತೆ ಉಪಚುನಾವಣೆಯಲ್ಲಿ ಗೆದ್ದಿರುವವರನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದಾರೆ.   ಧನುರ್ಮಾಸ ಮುಗಿದ ಮೇಲೆ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಆದರೆ ಉಪಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಆರ್‍.ಅಶೋಕ್‍ ಹೇಳಿದರು. ಉಪಚುನಾವಣೆ ಮುಗಿದ ಮೇಲೆ ಸಿಎಂ ಯಡಿಯೂರಪ್ಪ ಅವರು ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್‍ ಹಾಗೂ ಎಚ್‍.ವಿಶ್ವನಾಥ್‍ ಅವರನ್ನು […]

ಮೈಸೂರು ಪಾಲಿಕೆ WEBSITE ‘ಸ್ವಚ್ಛ’ ಮಾಡುವವರು ಯಾರು..?

    ಮೈಸೂರಿಗೆ ಮತ್ತೊಮ್ಮೆ ಏಷ್ಯಾದ ಸ್ವಚ್ಛ ನಗರಿ ಎಂಬ ಕಿರೀಟ ಗಿಟ್ಟಿಸಿಕೊಳ್ಳಲು ಮಹಾನಗರ ಪಾಲಿಕೆ ಶತಪ್ರಯತ್ನ ಮಾಡುತ್ತಿದೆ. ಹಲವಾರು ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ನಡೆಸುತ್ತಿದೆ. ಆದರೆ ಅದಕ್ಕಿಂತ ಮುಂಚೆ ಮೈಸೂರು ಪಾಲಿಕೆ WEBSITE ಸ್ವಚ್ಛತೆ ಮಾಡುವ ಅಗತ್ಯವಿದೆ. ಇದಕ್ಕಾಗಿ ಪಾಲಿಕೆ ಸಿಬ್ಬಂದಿಯಲ್ಲಿ ಮೊದಲು ಜಾಗೃತಿ ಮೂಡಿಸುವ ಅನಿವಾರ್ಯತೆ ಜರೂರಾಗಿದೆ.  http://www.mysorecity.mrc.gov.in/ ಇದು ಮೈಸೂರು ಮಹಾನಗರ ಪಾಲಿಕೆಯ ಅಧಿಕೃತ ವೆಬ್‍ ಸೈಟ್‍. ಇದರಲ್ಲಿ ಕನ್ನಡ ಮತ್ತು ಇಂಗ್ಲೀಷ್‍ ಅವತರಣಿಕೆಗಳಿವೆ. ಕನ್ನಡದಲ್ಲಿ ಹೆಚ್ಚೇನು ಮಾಹಿತಿ […]

ಕಾವಲು ನಾಯಿಯಲ್ಲ- ಮುದ್ದಿನ ನಾಯಿ

-ಡಿ.ಉಮಾಪತಿ  ನಾವು ಭೂಮಿಗೆ ಭಾರವಾಗಿ ಬದುಕುತ್ತಿದ್ದೇವೆ. ಮಾನವನ ಮನೆಯಾದ ಭೂಮಿ ಬಹುದೊಡ್ಡ ಗಂಡಾಂತರಗಳನ್ನು ಎದುರಿಸುತ್ತಿದೆ. ಹವಾಮಾನ ಬದಲಾವಣೆ ಈ ಪೈಕಿ ಬಹುಮುಖ್ಯವಾದದ್ದು. ಈ ಬದಲಾವಣೆ ಬೇರೆಯೇ ಆದ ಜೀವನಶೈಲಿಯನ್ನು ಬೇಡುತ್ತಿದೆ. ಅಂತಹ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮನಸ್ಸು ನಮಗೆ ಇಲ್ಲವಾಗಿದೆ. ಈ ನಿಸ್ಸೀಮ ತಾತ್ಸಾರ ಈ ಗೋಳವನ್ನು ಪ್ರಳಯದತ್ತ ಎಳೆದೊಯ್ಯುತ್ತಿದೆ. ಈ 463-ಪ್ರಳಯದೊಳಕ್ಕೆ ನಾವು ನಿದ್ದೆಯಲ್ಲಿ ನಡೆಯತೊಡಗಿದ್ದೇವೆ. ಇದು ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆಯ ನಿದ್ದೆ. ಸಾವಿನ ನಿದ್ದೆ. The world it seems is most clearly walking […]

ಪೌರತ್ವ ಕಾಯ್ದೆ ಪ್ರತಿ ಹರಿದು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ

  ಕೊಲ್ಕತ್ತಾದಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಅದೇ ವೇದಿಕೆ ಮೇಲೆ ಪೌರತ್ವ ಕಾಯ್ದೆಯ ಪ್ರತಿಯನ್ನು ಹರಿದು ಹಾಕಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಜಾದವ್ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ದೇಬಸ್ಮಿತಾ ಚೌಧರಿ ಅವರಿಗೆ ಇಂದು ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು  ಪದಕ ಸ್ವೀಕರಿಸಿದ ವಿದ್ಯಾರ್ಥಿನಿ ವೇದಿಕೆಯಲ್ಲೇ ಪೌರತ್ವ ಕಾಯ್ದೆಯ ಪ್ರತಿಯನ್ನು ಹರಿದು ಪ್ರತಿಭಟಿಸಿದರು.   ವೇದಿಕೆಯ ಮೇಲೆ ಪದವಿ ಸ್ವೀಕರಿಸಿ ನಗುತ್ತಲೇ ಕುಲಪತಿಗಳ ಅನುಮತಿ ಪಡೆದು, ವೇದಿಕೆ ಮುಂಭಾಗಕ್ಕೆ ಬಂದು ಸಿಎಎ ಪ್ರತಿ ಹರಿದು, ‘ಇನ್ಕ್ವಿಲಾಬ್ […]

ದೇಶದ ಭದ್ರತೆಗಾಗಿ ಪೌರತ್ವ ಕಾಯ್ದೆ ಒಪ್ಪಿಕೊಳ್ಳಬೇಕು: ಎಚ್.ವಿಶ್ವನಾಥ್

ರಾಷ್ಟ್ರೀಯ ಭದ್ರತೆ ಹಾಗೂ ಭಾರತೀಯರ ಆದ್ಯತೆ ದೃಷ್ಠಿಯಿಂದ ಪೌರತ್ವ ಕಾಯ್ದೆ ಒಪ್ಪಿಕೊಳ್ಳಬೇಕು ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಸಮರ್ಥನೆ ಮಾಡಿಕೊಂಡರು.   ಗುರುವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಭದ್ರತೆ- ಐಕ್ಯತೆ ಕಾಂಗ್ರೆಸ್ ನ ಘೋಷ ವಾಕ್ಯವಾಗಿದ್ದು, ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನ ಅಧಿನಾಯಕಿ ಸೋನಿಯಾ ಗಾಂಧಿ ನಡೆದುಕೊಳ್ಳುತ್ತಿದ್ದಾರೆ. ಪೌರತ್ವ ಕಾಯ್ದೆ ಈಗ ಜಾರಿಗೆ ಬಂದಿರುವುದಲ್ಲ ನೆಹರೂ, ಇಂದಿರಾ ಗಾಂಧಿ ಕಾಲದಿಂದಲ್ಲೂ ಜಾರಿಯಲಿದೆ ಎಂದರು.   ಕಾಯ್ದೆಯ ಬಗ್ಗೆ ಬೀದಿಗಿಳಿದು ಹೋರಾಟ ಮಾಡುವುದು ಸರಿಯಲ್ಲ. ಇದರ ಬಗ್ಗೆ […]