You cannot copy content of this page.
. . .

Day: December 25, 2019

ಯೋಜನೆ ಅನುಷ್ಠಾನಕ್ಕೆ ಪೂರ್ವ ತಯಾರಿ ಅಗತ್ಯ; ಎಸ್.ಜಿ.ಒಂಬತ್ಕೆರೆ

 ಮೈಸೂರು: ಯಾವುದೇ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸುವುದಕ್ಕೂ ಮುನ್ನ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿರಬೇಕು ಎಂದು ನಿವೃತ್ತ ಮೇಜರ್‍ ಜನರಲ್ ಎಸ್.ಜಿ.ಒಂಬತ್ಕೆರೆ ಅಭಿಪ್ರಾಯಪಟ್ಟರು.  ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪೌರತ್ವ ತಿದ್ದುಪಡಿ ಕಾಯ್ದೆ- ಸಂವಿಧಾನ ಉಲ್ಲಂಘನೆಯೇ?’ ಕುರಿತು ಉಪನ್ಯಾಸ ನೀಡಿದರು.  ಇಡೀ ಕಾಯಿದೆಯ ಇತಿಹಾಸವು ಕೊನೆ ಹಂತ ತಲುಪಿದ್ದು ಧರ್ಮಾನುಸಾರವಾಗಿ. ಸಿಎಎ (ಪೌರತ್ವ ತಿದ್ದುಪಡಿ ಕಾಯಿದೆ), ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಮತ್ತು ಎನ್‌ಪಿಆರ್ (ರಾಷ್ಟ್ರೀಯ ಜನಗಣತಿ) ಈ ಮೂರು ಕಾಯ್ದೆಗಳು ಪ್ರಧಾನ ಮಂತ್ರಿ ಹಾಗೂ ಗೃಹ […]

ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿ ಮಾಡಿ ಕೈಕೊಟ್ಟ ಯುವಕ

 ಹದಿನಾಲ್ಕು ವರ್ಷ ವಯಸ್ಸಿನ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಗರ್ಭಿಣಿ ಮಾಡಿ ಯುವಕನೊಬ್ಬ ಕೈಕೊಟ್ಟಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನಡೆದಿದೆ. ಮೋಸ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.   ಡ್ರೈವರ್‍ ಮಲ್ಲೇಶ್‍ (24) ಬಂಧಿತ ಆರೋಪಿ. ಮಂಚಹಳ್ಳಿ ಗ್ರಾಮದ ಯುವತಿ ಪಕ್ಕದ ಊರಿನ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ಅದೇ ಊರಿನ ಮಲ್ಲೇಶ್‍ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿದ್ದಾನೆ. ನಂತರ ಆಕೆಯನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡು ಗರ್ಭಿಣಿ ಮಾಡಿ ಮೋಸ ಮಾಡಿದ್ದಾನೆ. ಈ ಸಂಬಂಧ ಅಪ್ರಾಪ್ತೆ ಬೇಗೂರು ಪೊಲೀಸ್‍ ಠಾಣೆಯಲ್ಲಿ ದೂರು ನೀಡಿದ […]

ಬೈಕ್ ನಲ್ಲಿ ಸೇರಿಕೊಂಡಿದ್ದ ಹಾವು ರಕ್ಷಣೆ

 ಮೈಸೂರು: ಬೈಕ್‌ವೊಂದರಲ್ಲಿ ಸೇರಿಕೊಂಡಿದ್ದ ಮೂರುವರೆ ಅಡಿ ಉದ್ದದ ಹಾವನ್ನು ರಕ್ಷಿಸಿರುವ ಉರಗ ತಜ್ಞ ರಮೇಶ್ ಅದನ್ನು ಅಂತರಸಂತೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.  ಮೈಸೂರಿನ ಆಂದೋಲನ ವೃತ್ತ ಬಳಿ ಬುಧವಾರ ಬೆಳಿಗ್ಗೆ ೧೦ ಗಂಟೆ ಸಮಯದಲ್ಲಿ ನಿಲ್ಲಿಸಲಾಗಿದ್ದ ಶಾರದದೇವಿ ನಗರದ ಧನಂಜಯ ಎಂಬವರ ಬೈಕಿಗೆ ಕೆರೆಹಾವೊಂದು ಬಂದು ಸೇರಿಕೊಳ್ಳುವುದನ್ನು ಅಲ್ಲಿಯೇ ತರಕಾರಿ ಮಾರುತ್ತಿದ್ದ ವ್ಯಕ್ತಿಯೊಬ್ಬರು ನೋಡಿದ್ದಾರೆ. ಇದನ್ನು ಬೈಕಿನ ಮಾಲೀಕರಿಗೆ ತಿಳಿಸಿದ್ದಾರೆ. ಬಳಿಕ ಆಂದೋಲನ ವೃತ್ತ ಬಳಿಯೇ ಇರುವ ಉರಗ ತಜ್ಞ ರಮೇಶ್ ಅವರಿಗೆ ಮಾಹಿತಿ ತಿಳಿಸಿದ್ದು, ತಕ್ಷಣ […]

ಸೂರ್ಯಗ್ರಹಣ; ನಾಳೆ ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ದೇವರ ದರ್ಶನ ಇಲ್ಲ

 ಮೈಸೂರು: ಬಾಹ್ಯಾಕಾಶದಲ್ಲಿ ಕಂಕಣ ಸೂರ್ಯಗ್ರಹಣ ಏರ್ಪಡುವುದರಿಂದ ನಾಳೆ (ಗುರುವಾರ) ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.  ದೇವಾಲಯದಲ್ಲಿ ಸ್ಪರ್ಶಕಾಲ ಮತ್ತು ಮೋಕ್ಷಕಾಲದಲ್ಲಿ (ಗ್ರಹಣ ಸಂದರ್ಭ) ಗ್ರಹಣದ ಶಾಂತಿಗಾಗಿ ನಡೆಯುವ ವಿಶೇಷ ಪೂಜೆ ನಿಮಿತ್ತ ಗುರುವಾರ ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರುವುದಿಲ್ಲ. ಬೆಳಿಗ್ಗೆ ದೇವಾಲಯದಲ್ಲಿ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಮಧ್ಯಾಹ್ನ 1 ಗಂಟೆ ನಂತರ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬ್ರಿಟನ್ ಆರ್ಥಿಕ ಮಂತ್ರಿಯಾಗ್ತಾರಾ ಕರ್ನಾಟಕದ ಅಳಿಯ..?

ಜುಲೈ 23ರಂದು ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬ್ರಿಟನ್ ​​ನ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದ ನಾಯಕ ಬೋರಿಸ್ ಜಾನ್ಸನ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದರು. ಈಗ ಅವರ ಸಂಪುಟದಲ್ಲಿ ರಿಷಿ ಸುನಕ್‍ ಅವರು ಎಕನಾಮಿಕ್​ ಸೂಪರ್​ ಮಿನಿಸ್ಟ್ರಿ ಆಗುವ ಸಾಧ್ಯತೆ ಇದೆ.   ರಿಷಿ ಸುನಕ್​ ರವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯ ಅಳಿಯ. 2015ರಲ್ಲಿ ರಿಚ್ಮಂಡ್​ನಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಸುನಕ್, ಪ್ರಧಾನಿ ಬೋರಿಸ್​ ಜಾನ್ಸ್​ನ್​ ಗೆ ಅತ್ಯಂತ ನಂಬಿಕಸ್ತ. ಈ […]

ಎಚ್.ಡಿ.ದೇವೇಗೌಡರು ಮೂಲತಃ ಕಾಂಗ್ರೆಸ್ ನವರೇ..; ಅಡಗೂರು ಎಚ್.ವಿಶ್ವನಾಥ್

 ಎಚ್‍.ಡಿ.ದೇವೇಗೌಡರು ಮೂಲತಃ ಕಾಂಗ್ರೆಸ್‍ ಪಕ್ಷದವರೇ ಆಗಿದ್ದರು. ಕಾಂಗ್ರೆಸ್‍ನಲ್ಲಿ ಟಿಕೆಟ್‍ ಸಿಗದಿದ್ದ ಕಾರಣ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಎಂದು ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಹೇಳಿದರು. ಆ ಮೂಲಕ ಎಸ್‍.ಎಂ.ಕೃಷ್ಣ ಅವರು ‘ಸ್ಮೃತಿವಾಹಿನಿ’ ಕೃತಿಯಲ್ಲಿ ದಾಖಲಿಸಿರುವ ‘ಎಂಬತ್ತರ ದಶಕದಲ್ಲಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್‍ ಸೇರುವ ಬಯಕೆ ಹೊಂದಿದ್ದರು’ ವಿಚಾರಕ್ಕೆ ಪುಷ್ಟಿ ನೀಡುವಂತೆ ಮಾತನಾಡಿದರು.  ಕ್ರಿಸ್‍ಮಸ್‍ ಶುಭಾಷಯ ತಿಳಿಸಲು ಮೈಸೂರಿನ ಬಿಷಪ್‍ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡರು ಅಷ್ಟೇ ಅಲ್ಲ ನನ್ನಂಥ ಎಷ್ಟೋ […]

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಅವಧಿ ಹೆಚ್ಚಳಕ್ಕೆ ತೀರ್ಮಾನ

  ವಿದ್ಯಾರ್ಥಿಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಮಾರ್ಚ್- ಏಪ್ರಿಲ್‍ನಲ್ಲಿ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಅವಧಿಯನ್ನು 15 ರಿಂದ 30 ನಿಮಿಷ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.   ಈ ಬಾರಿ ಪ್ರಶ್ನೆ ಪತ್ರಿಕೆ ಮಾದರಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಬಾರದೆಂಬ ಕಾರಣಕ್ಕಾಗಿ ಪ್ರಥಮ ಹಾಗೂ  ಐಚ್ಛಿಕ ಭಾಷಾ ವಿಷಯಗಳಿಗೆ 15 ನಿಮಿಷ ಹೆಚ್ಚಳ ಮಾಡಲಾಗಿದೆ.  ಇನ್ನು ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಕ್ಕೆ 30 ನಿಮಿಷ ಹೆಚ್ಚುವರಿ ಸಮಯವನ್ನು ನೀಡಲಾಗಿದ್ದು, ಇದು ಪ್ರಸಕ್ತ ವರ್ಷಕ್ಕೆ ಮಾತ್ರ […]

ಮಾಗಿ ಉತ್ಸವ ವಿಶೇಷ; ಮೈಸೂರಿನಲ್ಲಿ ‘ಪ್ಯಾರಾ ಮೋಟರಿಂಗ್’ ಜಾಲಿ ರೈಡ್ ಆರಂಭ

 ಮೈಸೂರು: ಮಾಗಿಯ ಚಳಿಗಾಲದಲ್ಲಿ ಆಕಾಶದಲ್ಲಿ ಹಕ್ಕಿಯಂತೆ ಹಾರಾಡುತ್ತಾ ಅರಮನೆ ನಗರಿಯ ವಿಹಂಗಮ ನೋಟ ಬೀರಲು ಮೈಸೂರಿನಲ್ಲಿ ಪ್ಯಾರಾ ಮೋಟರಿಂಗ್ ಆರಂಭಿಸಲಾಗಿದೆ. ಮೈಸೂರಿಗರಿಗೆ ಮಾಗಿ ಉತ್ಸವದ ವಿಶೇಷ ಕೊಡುಗೆ ಇದಾಗಿದೆ.  ಪ್ರವಾಸೋದ್ಯಮ ಇಲಾಖೆ ಹಾಗೂ ‘ಬೇಸ್‍’ ಸಂಸ್ಥೆ ಸಹಯೋಗದಲ್ಲಿ ಮಾಗಿ ಉತ್ಸವದ ಅಂಗವಾಗಿ ಮಹಾರಾಜ ಕಾಲೇಜು ಕ್ರಿಕೆಟ್‍ ಮೈದಾನದಲ್ಲಿ ಮಂಗಳವಾರದಿಂದ ಪ್ಯಾರಾ ಮೋಟರಿಂಗ್‍ ಆರಂಭಗೊಂಡಿದೆ. ಆಸಕ್ತರು ಜಾಲಿ ರೈಡ್‍ ಮಾಡಿ ಸಾಂಸ್ಕೃತಿಕ ನಗರಿಯ ಸುಂದರ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಪ್ಯಾರಾ ಮೋಟರಿಂಗ್ ಹಾರಾಟದ ಸಮಯ  ನಿತ್ಯ ಬೆಳಿಗ್ಗೆ 9ರಿಂದ […]

10 ದಿನದಲ್ಲಿ 19 ಅಯ್ಯಪ್ಪ ಭಕ್ತರ ಸಾವು

  ಶಬರಿಮಲೆ ಅಯ್ಯಪ್ಪ ಯಾತ್ರಿಗಳು ಹೃದಯಾಘಾತಕ್ಕೀಡಾಗಿ ಮಾರ್ಗ ಮಧ್ಯೆ ಸಾಯುತ್ತಿದ್ದಾರೆ. ಕಳೆದ 10 ದಿನಗಳಲ್ಲಿ 19 ಭಕ್ತರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.   ದೇಗುಲಕ್ಕೆ ತೆರಳುವ ಮಾರ್ಗದಲ್ಲಿ ಕಡಿದಾದ ಬೆಟ್ಟಗಳನ್ನು ಏರುವಾಗ ಈ ದುರ್ಘಟನೆಗಳು ನಡೆಯುತ್ತಿವೆ. ಪಂಬದಿಂದ ಅಯ್ಯಪ್ಪ ದೇಗುಲದ ವರೆಗೆ ಇರುವ 15 ಮೆಡಿಕಲ್‍ ಸೆಂಟರ್‍ ಗಳಲ್ಲಿ ಡಿಸೆಂಬರ್‍ 15 ರಿಂದ ಈ ವರೆಗೆ 30 ಸಾವಿರ ಭಕ್ತರು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ 414 ಮಂದಿ ಸ್ಥಿತಿ ಗಂಭೀರವಾಗಿತ್ತು ಎಂದು ತಿಳಿದುಬಂದಿದೆ.  ಬೆಟ್ಟ […]

ಬಿಜೆಪಿಯವರು ಜನರ ರಕ್ತ ಹೀರುವ ತಿಗಣೆಗಳು; ಪುಷ್ಪಾ ಅಮರನಾಥ್ ವಾಗ್ದಾಳಿ

 ಮೈಸೂರು: ಜನರ ರಕ್ತ ಹೀರುವ ತಿಗಣೆಗಳು ಬಿಜೆಪಿಯವರು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‍ ವಾಗ್ದಾಳಿ ನಡೆಸಿದರು.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಸದಾ ರಕ್ತ ಹೀರಲು ಬಯಸುತ್ತಾರೆ. ಅವರು ಬಡವರ, ಮಹಿಳೆಯರ, ದೀನ-ದಲಿತರ ರಕ್ತ ಹೀರುವ ತಿಗಣೆಗಳಾಗಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಅವರ ಹೇಳಿಕೆಗೆ (ಕಾಂಗ್ರೆಸ್‍ ಸೊಳ್ಳೆ ಇದ್ದಂತೆ) ಪರೋಕ್ಷವಾಗಿ ತಿರುಗೇಟು ನೀಡಿದರು.  ಕೊಡಗಿನಲ್ಲಿ ಪ್ರವಾಹ ಬಂದು ಜನರ ಬದುಕು ಬೀದಿಪಾಲಾಗಿದ್ದರೂ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಅನುದಾನ […]