You cannot copy content of this page.
. . .

Day: December 24, 2019

ಮೀನುಗಾರ ನಾಪತ್ತೆ; ಮೀನು ಹಿಡಿಯುವಾಗ ದೋಣಿ ಮುಗುಚಿ ಸಾವು ಶಂಕೆ

 ಸರಗೂರು: ಕದ್ದು ಮೀನುಗಾರಿಕೆ ನಡೆಸುತ್ತಿದ್ದವ ನದಿಯೊಳಗೆ ನಾಪತ್ತೆಯಾಗಿರುವ ಘಟನೆ ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ನಡೆದಿದ್ದು, ದೋಣಿ ಮುಗುಚಿ ಸಾವನ್ನಪ್ಪಿರಬಹುದು. ಬದಲಿಗೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.  ತಾಲ್ಲೂಕಿನ ಮೊಸರಹಳ್ಳ ಗ್ರಾಮದ ವೆಂಕಟನಾಯಕ ಎಂಬುವರ ಪುತ್ರ ಗೋವಿಂದನಾಯಕ (೪೦) ನಾಪತ್ತೆಯಾದವರು. ಪತ್ತೆಗಾಗಿ ಅಗ್ನಿಶಾಮಕದಳದ ಸಿಬ್ಬಂದಿ, ಈಜುಗಾರರು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಗೆ ಕೇಂದ್ರ ಅಸ್ತು

 2021ರ ಜನಗಣತಿ ಭಾಗವಾದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ಪರಿಷ್ಕರಣೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.  ಎನ್‍ಪಿಆರ್ ಪರಿಷ್ಕರಣೆ ಕಾರ್ಯಕ್ಕೆ 3,941 ಕೋಟಿ ರೂ. ಅಂದಾಜು ವೆಚ್ಚ ಆಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.  ಎನ್‍ಪಿಆರ್ ಮತ್ತು ಎನ್‍.ಆರ್.ಸಿ ಗೂ ಹೊಂದಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್‍ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ. ಇದು ಸರಳ ಪ್ರಕ್ರಿಯೆಯಾಗಿದ್ದು, ಜನರು ಮೊಬೈಲ್‍ ಆ್ಯಪ್‍ ಮೂಲಕವೇ ತಮ್ಮ ಮಾಹಿತಿಯನ್ನು ಅಪ್‍ಲೋಡ್‍ ಮಾಡಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ಯಾವುದೇ […]

ದೇಶದ ಸಂಸ್ಕೃತಿ-ಸಾಧನೆಯ ಪ್ರತಿಬಿಂಬ; ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಸೋಮಣ್ಣ ಚಾಲನೆ

 ದೇಶದ ಸಂಸ್ಕೃತಿ-ಸಾಧನೆಯನ್ನು ಪ್ರತಿಬಿಂಬಿಸುವ ಫಲಪುಷ್ಪ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸಾಂಸ್ಕೃತಿಕ ನಗರಿಯ ಅರಮನೆ ಅಂಗಳದಲ್ಲಿ ಬಗೆ ಬಗೆಯ ಮಾದರಿಯಲ್ಲಿ ಸಿಂಗಾರಗೊಂಡು ನಿಂತಿರುವ ಫಲಪುಷ್ಪಗಳು ನೋಡುಗರ ಕಣ್ಮನ ತಣಿಸುತ್ತಿದೆ.  ಮಾಗಿ ಉತ್ಸವದ ಪ್ರಯುಕ್ತ ಮೈಸೂರಿನ ಅರಮನೆ ಆವರಣದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.  ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಉಪಮಹಾಪೌರ ಶಫೀ ಅಹಮ್ಮದ್, ಜಿಲ್ಲಾಧಿಕಾರಿ ಅಭಿರಾಮ್ ಶಂಕರ್, ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ನಗರ ಪಾಲಿಕೆ ಆಯುಕ್ತ ಗುರುದತ್ತ […]

ಎಚ್.ಡಿ.ರೇವಣ್ಣ ಬಾಯಿ ಚಪಲಕ್ಕೆ ಮಾತನಾಡುವ ವ್ಯಕ್ತಿ; ಬಿಜೆಪಿ ಮುಖಂಡ ಎ.ಮಂಜು ಟೀಕೆ

 ಎಚ್.ಡಿ.ರೇವಣ್ಣ ಸಿಎಎ ಅನ್ನು ಎಬಿಸಿಡಿ ಅಂತ ತಿಳಿದಿದ್ದಾರೆ. ಅವರು ಸಿಎಎ ಬಗ್ಗೆ ಮೊದಲು ತಿಳಿದುಕೊಳ್ಳಲಿ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಎ.ಮಂಜು ಟೀಕಿಸಿದ್ದಾರೆ.  ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ಬಗ್ಗೆ ತಿಳಿದುಕೊಳ್ಳದೇ ಎಚ್.ಡಿ.ರೇವಣ್ಣ ಮಾತನಾಡುವುದು ಸರಿಯಲ್ಲ. ಅವರು ಬಾಯಿ ಚಪಲಕ್ಕಾಗಿ ಮಾತನಾಡುತ್ತಾರೆ ಎಂದು ಏಕವಚನದಲ್ಲಿ ಕುಟುಕಿದ್ದಾರೆ.

ಜಾರ್ಖಂಡ್‍; ಮೋದಿ, ಶಾ ಪ್ರಚಾರ ನಡೆಸಿದ ಭಾಗಗಳಲ್ಲೇ ಬಿಜೆಪಿ ಅಭ್ಯರ್ಥಿಗಳಿಗೆ ಸೋಲು

 ಜಾರ್ಖಂಡ್‍ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಅಮಿತ್‍ ಶಾ ಅವರು ರ್‍ಯಾಲಿ ನಡೆಸಿದ ಭಾಗಗಳಲ್ಲೇ ಬಿಜೆಪಿ ಅಭ್ಯರ್ಥಿಗಳು ಸೋತಿರುವ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ದೇಶಾದ್ಯಂತ ಇವರು ಮೋದಿ ಅವರ ಜನಪ್ರಿಯತೆ ಮತ್ತು ಶಾ ಅವರ ವರ್ಚಸ್ಸಿಗೆ ಜಾರ್ಖಂಡ್‍ನಲ್ಲಿ ಮುಖಭಂಗವಾಗಿರುವ ಸ್ಪಷ್ಟ ಚಿತ್ರಣ ಇದಾಗಿದೆ.  ಮಾಧ್ಯಮ ವರದಿಗಳ ಪ್ರಕಾರ, ಮೋದಿ ಮತ್ತು ಅಮಿತ್‍ ಶಾ ಅವರು ಜಾರ್ಖಂಡ್‍ನಲ್ಲಿ 9 ರ್‍ಯಾಲಿಗಳಲ್ಲಿ ಭಾಗಿಯಾಗಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಇಬ್ಬರೂ ನಾಯಕರು ಸೇರಿ 18 […]

‘ಸಿಎಎ’ ಸಂವಿಧಾನ ಶೀಲಕ್ಕೆ ಕೈ ಹಾಕಿದೆ; ದೇಮ ಟೀಕೆ

 ಮೋದಿ ಮತ್ತು ಶಾ ಅವರ ‘ಕಾ… ಕಾ..’ ಕೂಗಿಗೆ ದೇಶ ಬೆಚ್ಚಿಬಿದ್ದಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಅಂದರೆ ‘CAA’ ಧ್ವನಿ ಕಾಗೆಯ ಕೂಗಿನಂತೆ ದೇಶದ ಸುಪ್ತ ಮನಸ್ಸಿಗೆ ತಟ್ಟಿರಬೇಕು. ಭಾರತೀಯ ಮನಸ್ಸಿಗೆ ‘ಕಾ.. ಕಾ..’ ಶಬ್ದ ಅಪಶಕುನ, ಕೇಡು ಎಂಬಂತೆ ಕೇಳಿಸುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟಿದ್ದಾರೆ.  ಸಿಎಎ ವಿರೋಧಿಸಿ ಮೈಸೂರಿನ ಪುರಭವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸಂವಿಧಾನಕ್ಕೆ ಒಂದು ಚರಿತ್ರೆ ಇದೆ. ಚಾರಿತ್ರ್ಯ ಕೂಡ ಇದೆ. ಚಾರಿತ್ರ್ಯ ಎಂದರೆ ಶೀಲ. […]

ಕಾಂಗ್ರೆಸ್ ಸೊಳ್ಳೆ ಇದ್ದಂತೆ; ಸಂಸದ ಪ್ರತಾಪಸಿಂಹ ವಿವಾದಾತ್ಮಕ ಹೇಳಿಕೆ

 ಕಾಂಗ್ರೆಸ್‍ ಸೊಳ್ಳೆ ಇದ್ದಂತೆ. ಕೊಚ್ಚೆ ಎಲ್ಲಿ ಇರುತ್ತೊ ಅಲ್ಲಿಗೆ ಸೊಳ್ಳೆ ಹುಡುಕಿಕೊಂಡು ಹೋಗುತ್ತೆ. ಕಾಂಗ್ರೆಸ್ ಎಲ್ಲಿರುತ್ತೊ ಅಲ್ಲಿ ನಿರುದ್ಯೋಗ, ಅಕ್ಷರತೆ, ದೌರ್ಜನ್ಯ ಬಡತನ ಇದ್ದೆ ಇರುತ್ತೆ ಎಂದು ಸಂಸದ ಪ್ರತಾಪಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂಸಾಚಾರ ಸೃಷ್ಟಿಸುವವರನ್ನು ಇಟ್ಟುಕೊಂಡು ಗಲಭೆ ಮಾಡಿಸುತ್ತಿದ್ದಾರೆ. ಈ ರೀತಿಯ ಗಲಭೆ ಮಾಡುತ್ತಿರುವವರು ಸಿದ್ದರಾಮಯ್ಯ ಸೃಷ್ಟಿಸಿದ ಮರಿ ಟಿಪ್ಪುಗಳು. ಆ ಮರಿ ಟಿಪ್ಪುಗಳಿಂದ ಈ ರೀತಿಯ ಕೃತ್ಯ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.  ಆಸ್ಪತ್ರೆಗೆ ನುಗ್ಗಿ ಬಾಗಿಲು ಹಾಕಿಕೊಂಡು […]

ಸಿಎಎ, ಎನ್‍.ಆರ್.ಸಿ ವಿರೋಧಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ

 ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍.ಆರ್‍.ಸಿ) ವಿರೋಧಿಸಿ ಮೈಸೂರಿನಲ್ಲಿ ಬೃಹತ್‍ ಪ್ರತಿಭಟನೆ ನಡೆಯುತ್ತಿದೆ. ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು, ಹಿರಿಯ ಸಾಹಿತಿಗಳು, ವಿಚಾರವಾದಿಗಳು, ರಾಜಕೀಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕೂಡಲೇ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು.  ಸಂವಿಧಾನ ರಕ್ಷಣಾ ಸಮಿತಿ ನೇತೃತ್ವದಲ್ಲಿ ಇಂದು (ಮಂಗಳವಾರ) ಬೆಳಿಗ್ಗೆ ಪುರಭವನದ ಎದುರು ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗವಹಿಸಿದ್ದರು. ಕಾಯ್ದೆ ಹಾಗೂ ಸರ್ಕಾರದ ವಿರುದ್ಧದ ಘೋಷಣೆ ಫಲಕಗಳು ರಾರಾಜಿಸಿದವು. ‘ದಿಲ್ಲಿಯಲ್ಲಿ […]

ಸೋತವರಿಗೂ ಮಂತ್ರಿಗಿರಿ ವಿಚಾರ; ಸಚಿವ ಸೋಮಣ್ಣ ಹೇಳಿದ್ದೇನು?

 ಯಾರನ್ನು ಸಚಿವ ಸಂಪುಟಕ್ಕೆ ಸೇರಿಸಬೇಕು, ಯಾರನ್ನು ಬಿಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದರು.  ನಂಜನಗೂಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ‌ ವಿಚಾರ. ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡದಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ. ವಿಶ್ವನಾಥ್ ಅವರನ್ನು ಮಧ್ಯಾಹ್ನ ಭೇಟಿ ಮಾಡಿ ಮಾತನಾಡಿಸುತ್ತೇನೆ ಎಂದರು.  ಜಿಲ್ಲಾ ಉಸ್ತುವಾರಿ ಸಚಿವರ […]

ಪೌರತ್ವ ಕಾಯ್ದೆಯ ಅಂಶಗಳಿಗೆ ಬಿಜೆಪಿ ನಾಯಕ ಆಕ್ಷೇಪ

 ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಎಲ್ಲೆಡೆ ಬಿಜೆಪಿ ನಾಯಕರು ಬೆಂಬಲಿಸುತ್ತಿದ್ದರೆ, ಇತ್ತ ಬಿಜೆಪಿ ಪಕ್ಷದ ನಾಯಕರೊಬ್ಬರು ಕಾಯ್ದೆಯ ವಿವಾದಿತ ಅಂಶಗಳನ್ನು ಆಕ್ಷೇಪ ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ. ಪೌರತ್ವ ಕಾಯ್ದೆಗೆ ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕರ ಹೇಳಿಕೆಯೊಂದು ಕುತೂಹಲ ಕೆರಳಿಸಿದೆ.  ಸಿಎಎ ಗೆ ಮುಸ್ಲಿಮರನ್ನೂ ಯಾಕೆ ಸೇರಿಸಬಾರದು ಎಂದು ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಪ್ರಶ್ನಿಸಿದ್ದಾರೆ. ಕಾಯ್ದೆ ಬೆಂಬಲಿಸಿ ಕೋಲ್ಕತ್ತದಲ್ಲಿ ನಡೆದ ರ್‍ಯಾಲಿಯಲ್ಲಿ […]