You cannot copy content of this page.
. . .

Day: December 23, 2019

ಕ್ರಿಸ್‍ಮಸ್‍ ವಿಶೇಷ; ಇಂದಿನಿಂದ ನಾಗರಹೊಳೆ ಉದ್ಯಾನದಲ್ಲಿ 4 ಸುತ್ತು ಸಫಾರಿಗೆ ಅವಕಾಶ

 ಅಂತರಸಂತೆ: ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಡಿ.24 ರಿಂದ ಜ.1 ರವರೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ದಮ್ಮನಕಟ್ಟೆ ವಿಭಾಗದಲ್ಲಿ ದಿನಕ್ಕೆ ನಾಲ್ಕು ಸುತ್ತು ಸಫಾರಿ ಮಾಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.   ಇಂದಿನಿಂದ ಬೆಳಿಗ್ಗೆ 6 ರಿಂದ 7.30 ಮತ್ತು ಬೆಳಿಗ್ಗೆ 7.30 ರಿಂದ 9 ಗಂಟೆಯ ತನಕ 2 ಸುತ್ತು ಮತ್ತು ಮಧ್ಯಾಹ್ನ 3 ರಿಂದ ಸಂಜೆ 4.30 ಹಾಗೂ 4.30 ರಿಂದ ಸಂಜೆ 6 ಗಂಟೆಯವರೆಗೆ 2 ಸುತ್ತು ಸಫಾರಿ ಮಾಡಲಾಗುತ್ತದೆ ಎಂದು ಮಾಹಿತಿ […]

ಪ್ರವಾಸಕ್ಕೆಂದು ಬಂದಿದ್ದ ಶಿಕ್ಷಕ ಅಪಘಾತದಲ್ಲಿ ಸಾವು

 ಪಿರಿಯಾಪಟ್ಟಣ: ಪ್ರವಾಸಕ್ಕೆಂದು ಬಂದಿದ್ದ ವೇಳೆ ಶಿಕ್ಷಕನೋರ್ವ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬಿ.ಎಂ.ರಸ್ತೆಯಲ್ಲಿನ ಮಲ್ಲಿನಾಥಪುರ ಗೇಟ್ ಬಳಿ ಭಾನುವಾರ ರಾತ್ರಿ ನಡೆದಿದೆ.  ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ವೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಈರಣ್ಣ ನರಸಪ್ಪ ಅಗನೂರು (೫೫) ಮೃತಪಟ್ಟವರು. ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಕಳೆದ ಡಿ.೧೯ರಂದು ಶಾಲೆಯ ಮಕ್ಕಳ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿತ್ತು. ಶಿರಸಿ, ಕುಮುಟ, ಇಡಗುಂಜಿ, ಜೋಗದಗುಂಡಿ, ಮುರುಡೇಶ್ವರ, ಉಡುಪಿ, ತಲಕಾವೇರಿ, ಭಾಗಮಂಡಲ ಪ್ರವಾಸ ಮುಗಿಸಿ ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಬಂದು ಬೈಲಕಪ್ಪೆ […]

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ತೊಂದರೆ ಇಲ್ಲ; ಶಾಸಕ ನಾಗೇಂದ್ರ

 ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ಭಾರತೀಯರು ಹಾಗೂ ಮೂಲ ನಿವಾಸಿಗಳ ಹಕ್ಕಿಗೆ ಯಾವುದೇ ಧಕ್ಕೆಯಿರುವುದಿಲ್ಲ ಎಂದು ಶಾಸಕ ಎಲ್.ನಾಗೇಂದ್ರ ಪ್ರತಿಕ್ರಿಯಿಸಿದ್ದಾರೆ.  ಮೈಸೂರಿನಲ್ಲಿ ಸೋಮವಾರ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಭಾರತೀಯರು ಹಾಗೂ ದೇಶದ ಆರ್ಥಿಕ, ಸಾಮಾಜಿಕ ಹಿತದೃಷ್ಟಿಯಿಂದ ಅಕ್ರಮ ಪ್ರವೇಶ ಮಾಡಿರುವ ಮತ್ತು ಅನಧಿಕೃತ ವಾಸ ಮಾಡುತ್ತಿರುವವರಿಗೆ ಮಾತ್ರ ಈ ಪೌರತ್ವ ಕಾಯ್ದೆಯಿಂದ ಪರಿಣಾಮವಾಗಲಿದ್ದು, ಮೂಲ ಭಾರತೀಯರಿಗೆ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದರು.  ಇದನ್ನು ಮುಸ್ಲಿಂ ಭಾಂದವರು ಅರಿಯಬೇಕು. ತಪ್ಪು ತಿಳಿವಳಿಕೆಯಿಂದಾಗಿ ಅಹಿತಕರ ಘಟನೆಗಳು ನಡೆಯುತ್ತಿದ್ದು, […]

ಶರಣಬಸವೇಶ್ವರ ಸಂಸ್ಥಾನಕ್ಕೆ 2 ವರ್ಷದ ಮಗು ಪೀಠಾಧಿಪತಿ..!

   ಕಲಬುರಗಿ ಜಿಲ್ಲೆಯ ಸುಪ್ರಸಿದ್ಧ ಶರಣಬಸವೇಶ್ವರ ಸಂಸ್ಥಾನಕ್ಕೆ ನೂತನ ಪೀಠಾಧಿಪತಿಯ ನೇಮಕ ಮಾಡಲಾಗಿದೆ. ತಮ್ಮ ಎರಡು ವರ್ಷದ ಪುತ್ರ ಚಿರಂಜೀವಿ ದೊಡ್ಡಪ್ಪ ಅಪ್ಪನನ್ನು 9ನೇ ಪೀಠಾಧಿಪತಿಯಾಗಿ ಡಾ. ಶರಣಬಸಪ್ಪ ಅಪ್ಪಾಅವರು ಪೀಠದಲ್ಲಿ ಕೂರಿಸಿದ್ದಾರೆ.   ಪೀಠಾಲಂಕಾರ ಮಾಡುವ ಮುನ್ನ ಧಾರ್ಮಿಕ ಕಾರ್ಯ ನೆರವೇರಿಸಿ ಬೆಳ್ಳಿ ಕಿರಿಟ ತೊಡಿಸಿ, ಬಳಿಕ ಪೀಠದ ಮೇಲೆ ಮಗನನ್ನು ಡಾ. ಶರಣಬಸವಪ್ಪ ಅಪ್ಪ ಅವರು ಕೂರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಮತ್ತು ಸಂಸ್ಥಾನದ ಭಕ್ತರು ಉಪಸ್ಥಿತರಿದ್ದರು. 82ನೇ ವಯಸ್ಸಿಗೆ ಡಾ. ಶರಣಬಸಪ್ಪ […]

ಜಾರ್ಖಂಡ್‍ ನಲ್ಲಿ ಬಿಜೆಪಿಗೆ ಮುಖಭಂಗ; ಹೇಮಂತ್ ಸೊರೇನ್‍ ಸಿಎಂ

  ಜಾರ್ಖಂಡ್ ವಿಧಾನಸಭೆಗೆ ನಡೆದ ಐದು ಹಂತಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿದೆ.   ಒಟ್ಟು 81 ಕ್ಷೇತ್ರಗಳ ಪೈಕಿ ಕಾಂಗ್ರೆಸ್, ಜೆಎಂಎ ಮೈತ್ರಿಕೂಟ 45 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಆಡಳಿತರೂಢ ಬಿಜೆಪಿ ಮೈತ್ರಿಕೂಟ ಕೇವಲ 26 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡು ತೀವ್ರ ಮುಖಭಂಗ ಅನುಭವಿಸಿದೆ.  ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ್ದ ಎಜೆಎಸ್ ಯು ಪಕ್ಷ 3, ಜೆವಿಎಂ 3 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿವೆ. ಇತರರು […]

ಶಾಲಾ ಮಕ್ಕಳು ದಿನಕ್ಕೆಷ್ಟು ನೀರು ಕುಡೀಬೇಕು..?; ‘ವಾಟರ್ ಬೆಲ್’ ನೆರವಾಗುತ್ತಾ..?

   ಕೆಲಸದ ಬ್ಯುಸಿಯಲ್ಲಿ ನೀರು ಇರಲಿ, ಊಟ ಮಾಡುವುದನ್ನೂ ಜನ ಮರೆತುಬಿಡುತ್ತಾರೆ. ಹೀಗಿರುವಾಗ ಶಾಲೆಗಳಲ್ಲಿ ಮಕ್ಕಳು ಅಗತ್ಯಕ್ಕೆ ತಕ್ಕಂತೆ ನೀರು ಕುಡಿಯಲು ಹೇಗೆ ಸಾಧ್ಯ..? ಬಹುತೇಕ ಮಕ್ಕಳು ತರಗತಿ ಶುರುವಾದ ಬಳಿಕ ನೀರು ಕುಡಿಯುವುದೇ ಇಲ್ಲ. ಅನೇಕ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಅವಧಿಯ ಬಿಡುವು ಸಿಗುವವರೆಗೂ ನೀರು ಕುಡಿಯಲು ಅವಕಾಶವೂ ಸಿಗುವುದಿಲ್ಲ. ಇನ್ನು ಊಟದ ಬಳಿಕ ಸಂಜೆ ತರಗತಿಗಳು ಮುಗಿದ ಬಳಿಕವೇ ಮತ್ತೆ ವಿರಾಮ. ಹೀಗಿರುವಾಗ ಮಕ್ಕಳ ದೇಹಕ್ಕೆ ಅಗತ್ಯವಿರುವಷ್ಟು ನೀರು ಎಲ್ಲಿ ಸಿಕ್ಕೀತು..?   ನಮ್ಮ […]

ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

 ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಾಲೇಜು ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.  ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಭೂಮಿಕಾ ಪ್ರಥಮ ಪಿಯು ಬಿಬಿಎ ಓದುತ್ತಿದ್ದರು. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಗೋಲಿಬಾರ್‍; ಮೃತರ ಕುಟುಂಬಕ್ಕೆ ಪರಿಹಾರದ ಚೆಕ್‍ ನೀಡಿದ ಸಿದ್ದರಾಮಯ್ಯ

 ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸ್ ಗೋಲಿಬಾರ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪರಿಹಾರದ ಚೆಕ್‍ ವಿತರಿಸಿದರು.  ಸೋಮವಾರ ಮಧ್ಯಾಹ್ನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಕಂದಕ್ ಪ್ರದೇಶಕ್ಕೆ ತೆರಳಿ ಮೃತ ಜಲೀಲ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದರು. ಬಳಿಕ ಕುದ್ರೋಳಿಗೆ ತೆರಳಿ ಮೃತ ನೌಸೀನ್ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.  ಮೃತ ಅಬ್ದುಲ್ ಜಲೀಲ್‌ ಮತ್ತು ನೌಸೀನ್ ಕುಟುಂಬಗಳಿಗೆ ಸಿದ್ದರಾಮಯ್ಯ ಅವರು ತಲಾ  7.5 […]

ರಾಜ್ಯದ ಶಾಲೆಗಳಲ್ಲಿ ಮೊಳಗಲಿದೆ ‘ವಾಟರ್‍ ಬೆಲ್’

  ರಾಜ್ಯದ ಎಲ್ಲಾ ಶಾಲೆಗಳಲ್ಲಿಯೂ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಕಡ್ಡಾಯವಾಗಿ ನೀರಿನ ವಿರಾಮ ಕೊಡಬೇಕು ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.   ರಾಜ್ಯದ ಪ್ರತಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ನೀರು ಕುಡಿಯಲು ಬೆಳಗ್ಗೆ ಮತ್ತು ಮಧ್ಯಾಹ್ನ 10 ನಿಮಿಷಗಳ ವಿರಾಮ ನೀಡನೇಕು. ಶಾಲೆಗಳಲ್ಲಿ ಬೆಳಗ್ಗೆ ಎರಡು ಮತ್ತು ಮೂರನೇ ಅವಧಿಯ ತರಗತಿಗಳ ನಡುವೆ ಮತ್ತು ಮಧ್ಯಾಹ್ನ 3 ಮತ್ತು 4ನೇ ಅವಧಿಯ ತರಗತಿಗಳ ನಡುವೆ ನೀರು ಕುಡಿಯಲು ಅವಕಾಶ ನೀಡಬೇಕೆಂದು ಸರ್ಕಾರ […]

ಮೈಸೂರಿನ ಮೂವರು ವಿಧವೆಯರನ್ನು ನಂಬಿಸಿ ವಂಚಿಸಿದ್ದ ವ್ಯಕ್ತಿ ಬಂಧನ

 ವಿಧವೆಯರನ್ನು ಟಾರ್ಗೆಟ್‍ ಮಾಡಿ ನಂಬಿಸಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನಂಬಿದ್ದ ಮೈಸೂರಿನ ಮೂವರು ಮಹಿಳೆಯರು ಮೋಸ ಹೋಗಿದ್ದಾರೆ.  ತಮಿಳುನಾಡು ಕೊಯಮತ್ತೂರಿನ ನಿವಾಸಿ ವಿನೀತ್‍ ರಾಜ್‍ (47)ನನ್ನು ಕೃಷ್ಣರಾಜ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನಲ್ಲಿ ವಿಧವೆ ಒಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯಿಂದ 80 ಸಾವಿರ ರೂ. ಮೌಲ್ಯದ ಮಾಂಗಲ್ಯ ಸರವನ್ನು ಪಡೆದು ವಂಚಿಸಿದ್ದ. ಈ ಸಂಬಂಧ ಮಹಿಳೆ ಪೊಲೀಸ್‍ ಠಾಣೆಯಲ್ಲಿ ಆರೋಪಿ ವಿರುದ್ಧ ದೂರಿ ದಾಖಲಿಸಿದ್ದರು.  ಆರೋಪಿಯು ವೈವಾಹಿಕ ತಾಣಗಳಲ್ಲಿ (Shadhi.com) ತನ್ನ ಪ್ರೊಫೈಲ್‍ […]