You cannot copy content of this page.
. . .

Day: December 22, 2019

66ನೇ ಫಿಲ್ಮ್ ಫೇರ್ ಅವಾರ್ಡ್; ಪ್ರಶಸ್ತಿ ಪಡೆದ ಸ್ಯಾಂಡಲ್‍ವುಡ್

 ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿನಿಮಾ ಕಲಾವಿದರಿಗೆ ಪ್ರತಿ ವರ್ಷ ಫಿಲ್ಮ್ ಫೇರ್‍ ಅವಾರ್ಡ್‍ ನೀಡಲಾಗುತ್ತದೆ. ಅಂತೆಯೇ ಈ ವರ್ಷ ಚೆನ್ನೈನಲ್ಲಿ ಶನಿವಾರ ನಡೆದ 66ನೇ ಫಿಲ್ಮ್ ಫೇರ್‍ ಅವಾರ್ಡ್‍ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ (ಕನ್ನಡ, ತೆಲುಗು, ತಮಿಳು, ಮಲೆಯಾಳಂ) ಪ್ರಶಸ್ತಿ ನೀಡಲಾಯಿತು. 66ನೇ ಫಿಲ್ಮ್‍ ಫೇರ್‍ ಪ್ರಶಸ್ತಿ ಸಮಾರಂಭದಲ್ಲಿ ಸ್ಯಂಡಲ್‍ವುಡ್‍ನ ಈ ಕೆಳಕಂಡ ಸಿನಿಮಾಗಳು, ನಿರ್ದೇಶಕರು, ಕಲಾವಿದರಿಗೆ ಪ್ರಶಸ್ತಿ ನೀಡಲಾಯಿತು.  ನಾತಿಚರಾಮಿ ಸಿನಿಮಾ    ಅತ್ಯುತ್ತಮ ನಿರ್ದೇಶಕ: ಮಂಸೋರೆ ಅತ್ಯುತ್ತಮ ಪೋಷಕ […]

ಆರು ಮಂದಿ ದರೋಡೆಕೋರರ ಬಂಧನ

 ಮೈಸೂರು: ರಾತ್ರಿ ಸಮಯದಲ್ಲಿ ದರೋಡೆ ಮಾಡುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿ, ಅವರಿಂದ 5,68,750 ರೂ. ವಶಪಡಿಸಿಕೊಂಡಿದ್ದಾರೆ.  ನಗರದ ಮಹದೇಶ್ವರ ಬಡಾವಣೆಯ ಮಂಜುನಾಥ್, ಕುಂಬಾರಕೊಪ್ಪಲು ನಿವಾಸಿ ಮಂಜು, ಕೆ.ಆರ್.ಮೊಹಲ್ಲಾ ನಿವಾಸಿ ಶ್ರೀಧರ್, ಬನ್ನೂರು ಟೌನ್ ನಿವಾಸಿ ಇಮ್ರಾನ್ ಪಾಷಾ, ಮೇಟಗಳ್ಳಿಯ ನಾರಾಯಣ, ಸರಸ್ವತಿಪುರಂ ನಿವಾಸಿ ಪುಟ್ಟರಾಜು ಬಂಧಿತ ಆರೋಪಿಗಳು.  ಬಂಧಿತರಿಂದ 5.68 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಬೈಕ್‍ ಮತ್ತು ಓಮಿನಿ ವ್ಯಾನ್ ವಶಕ್ಕೆ ಪಡೆದಿದ್ದಾರೆ. ಮಧ್ಯರಾತ್ರಿ ಹೈವೆ ವೃತ್ತದ ಬಳಿ ಕಾರ್ಯಾಚರಣೆ ನಡೆಸಿ […]

ನಿತ್ರಾಣಗೊಂಡು ಬಿದ್ದಿದ್ದ ಕಾಡಾನೆ ಸಾವು

 ಮಡಿಕೇರಿ: ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದು ನಿತ್ರಾಣಗೊಂಡು ಮೂರು ದಿನಗಳಿಂದ ಕಾಫಿ ತೋಟದಲ್ಲಿಯೇ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ಕಾಡಾನೆ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದೆ.  ಕೊಡಗು ಜಿಲ್ಲೆಯ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಗತ್ತೂರು ರವಿ ಪೊನ್ನಪ್ಪ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕಳೆದ ಮೂರು ದಿನಗಳ ಹಿಂದೆ ಕಾಡಾನೆ ಒಂದು ಅಸ್ವಸ್ಥಗೊಂಡಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಅರಣ್ಯ ಇಲಾಖೆಯಿಂದ ಚಿಕಿತ್ಸೆ ನೀಡುವ ಕಾರ್ಯ ಮುಂದುವರಿದಿತ್ತು.  ಸ್ಥಳಕ್ಕೆ ಭೇಟಿ ನೀಡಿದ […]

ಯುವಕರಿಬ್ಬರ ಮೇಲೆ ಹಲ್ಲೆ ಪ್ರಕರಣ; ಆರೋಪಿ ಪುರಸಭೆ ಸದಸ್ಯನಿಗೆ ಜಾಮೀನು

 ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ಮೇಲೆ ಹಲ್ಲೆ ಮಾಡಿ ನ್ಯಾಯಾಂಗ ಬಂಧನದಲ್ಲಿದ್ದ ಕೆ.ಆರ್‍.ನಗರದ ಪಟ್ಟಣದ ೧೯ನೇ ವಾರ್ಡ್‍ನ ಕಾಂಗ್ರೆಸ್ ಪುರಸಭೆ ಸದಸ್ಯ ಸೈಯದ್ ಸಿದ್ದಿಕ್ ಅವರಿಗೆ ಹುಣಸೂರಿನ ೮ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.  ಜಾಮೀನು ದೊರೆತ ಹಿನ್ನೆಲೆಯಲ್ಲಿ ವಕೀಲ ಕೆ.ಸಿ.ಹರೀಶ್ ಅವರು ಕೆ.ಆರ್.ನಗರದ ಬಂದೀಖಾನೆಗೆ ಜಾಮೀನು ಪ್ರತಿಯನ್ನು ಹಾಜರು ಪಡಿಸಿ ಪುರಸಭೆ ಸದಸ್ಯರನ್ನು ಬಿಡುಗಡೆ ಮಾಡಿಸಿದರು. ಕೆ.ಆರ್.ನಗರದ ೧೯ನೇ ವಾರ್ಡ್‍ನ ಪುರಸಭೆ ಸದಸ್ಯ ಸೈಯದ್ ಸಿದ್ದಿಕ್ ಅವರನ್ನು ಬಂದೀಖಾನೆಯಿಂದ ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಬೆಂಬಲಿಗರು ಅಭಿನಂದಿಸಿದರು.

ಅಕ್ರಮವಾಗಿ ಸಂಗ್ರಹಿಸಿದ್ದ 80 ಲಕ್ಷ ರೂ. ಮೌಲ್ಯದ ರಕ್ತಚಂದನ ಮರ ವಶ; ಆರೋಪಿ ಬಂಧನ

 ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಾಗಿಲು ಅಕ್ರಮವಾಗಿ ರಕ್ತಚಂದನ ಮರಗಳನ್ನು ಸಂಗ್ರಹಿಸಿದ್ದ ವ್ಯಕ್ತಿಯನ್ನು ಮೈಸೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತನಿಂದ 80 ಲಕ್ಷ ರೂ. ಮೌಲ್ಯದ ರಕ್ತಚಂದನ ಮರಗಳನ್ನು ವಶಪಡಿಸಿಕೊಳ್ಳಲಾಗಿದೆ.  ನಗರದ ಲಷ್ಕರ್ ಮೊಹಲ್ಲಾದ ನಿವಾಸಿ ಫೈರೋಜ್ ಅಲಿಖಾನ್ ಬಂಧಿತ ಆರೋಪಿ. ಬಂಧಿತನಿಂದ 80 ಲಕ್ಷ ಮೌಲ್ಯದ 750 ಕೆ.ಜಿ ತೂಕದ 80 ರಕ್ತಚಂದನದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಮಾಹಿತಿ ಮೇರೆಗೆ ಲಷ್ಕರ್ ಮೊಹಲ್ಲಾದ ಪುಲಿಕೇಶಿ ರಸ್ತೆಯಲ್ಲಿದ್ದ ಫೈರೋಜ್ ಅಲಿಖಾನ್‍ನನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

ಸಿಎಎ ವಿಚಾರವಾಗಿ ಜನರ ದಾರಿ ತಪ್ಪಿಸುತ್ತಿರುವ ಪ್ರತಿಪಕ್ಷಗಳು; ಮೋದಿ ಟೀಕೆ

 ದೇಶದ ಜನರ ಭವಿಷ್ಯಕ್ಕಾಗಿ ಲೋಕಸಭೆ, ರಾಜ್ಯಸಭೆ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದೆ. ದೇಶದ ಸಂಸತ್ತಿಗೆ ಬೆಲೆ ಕೊಡಿ. ದೇಶದ ಜನರು ಚುನಾಯಿಸಿರುವ ಸಂಸದರಿಗೆ ಬೆಲೆ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳಿಗೆ ತಿಳಿಸಿದರು.  2020ರಲ್ಲಿ ದೆಹಲಿ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್‍ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ವಿಚಾರದಲ್ಲಿ ಪ್ರತಿಪಕ್ಷಗಳು ದೇಶದ ಜನರ ಹಾದಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು.  ಮುಸ್ಲಿಮರನ್ನು ಕಾಗದ, ದಾಖಲೆಗಳು ಬೇಕು ಅಂತ ದಾರಿ […]

ಪಿಕ್ ಪಾಕೇಟ್ ಮಾಡುತ್ತಿದ್ದ ಮೂವರ ಬಂಧನ

 ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಪಿಕ್ ಪಾಕೇಟ್ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಆರೀಫ್, ಅಸ್ಗರ್‌ಪಾಷ, ನದೀಮ್ ಪಾಷ ಬಂಧಿತ ಆರೋಪಿಗಳು.  ಗುಂಡ್ಲುಪೇಟೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿರು ಬಸ್ ಹತ್ತುವಾಗ ಅವರ ಜೇಬಿಗೆ ಕೈಹಾಕಿ ಪಿಕ್ ಪಾಕೇಟ್‍ ಮಾಡುತ್ತಿದ್ದ ಮೂವರನ್ನೂ ಹಿಡಿದು ಅವರ ಬಳಿ ಇದ್ದ ನಗದನ್ನು ವಶಪಡಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಸಿಎಎ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲಲ್ಲ; ಯತೀಂದ್ರ ಸಿದ್ದರಾಮಯ್ಯ

 ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರ ಕಾಯ್ದೆಯನ್ನು ಹಿಂಪಡೆಯುವವರೆಗೂ ನಾವು ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.  ಮೈಸೂರಿನಲ್ಲಿ ಸಿಎಎ ವಿರುದ್ಧ ಕಾಂಗ್ರೆಸ್‍ ವತಿಯಿಂದ ಇಂದು (ಭಾನುವಾರ) ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು, ನಾವು ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ತಡೆದಿದ್ದಾರೆ. ಮೈಸೂರಿನಲ್ಲಿ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೂ, 144 ಸೆಕ್ಷನ್‍ ಜಾರಿ ಮಾಡಿದ್ದಾರೆ. […]

ವಿಪಕ್ಷದ ಪಟ್ಟಭದ್ರ ಹಿತಾಸಕ್ತಿಗಳಿಂದ ಗಲಭೆಯಲ್ಲಿ ಬೆಂಕಿ ಹಚ್ಚುವ ಕೆಲಸ ಆಗುತ್ತದೆ; ಅಶ್ವಥ್‍ ನಾರಾಯಣ್

 ಪೌರತ್ವ ಕಾಯ್ದೆ ವಿರುದ್ಧ ಕೆಲವರು ಬೆಂಕಿ ಹಚ್ಚುವ, ಹೊತ್ತಿಸುವ ಮನಸ್ಥಿತಿಯಿಂದ ಕೆಲಸ ಮಾಡುತ್ತಿದ್ದಾರೆ. ವಿಪಕ್ಷದ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ಈ ಕೆಲಸ ಆಗುತ್ತಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್‍ ನಾರಾಯಣ್‍ ಟೀಕಿಸಿದರು.  ಮೈಸೂರಿನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯ್ದೆ ವಿಚಾರವಾಗಿ ಗೊಂದಲದ ವಾತಾವರಣ ಸೃಷ್ಟಿಸುವುದು ಸರಿಯಲ್ಲ. ವಿಪಕ್ಷದವರ ಈ ನಡೆಯನ್ನು ಜನರು ತಿರಸ್ಕರಿಸುತ್ತಾರೆ. ಸಿಎಎ ಕಾಯ್ದೆಯನ್ನು ಎಲ್ಲಾ ಭಾರತೀಯರು ಸ್ವೀಕರಿಸಬೇಕು ಎಂದು ತಿಳಿಸಿದರು.  ನಾವು ಇಲ್ಲಿ ಸರ್ವಾಧಿಕಾರ ನಡೆಸುತ್ತಿಲ್ಲ. ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಮಾಜಿ ಸಿಎಂ […]

ಮಂಗಳೂರು ಗಲಭೆ; ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

 ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಉಂಟಾದ ಗಲಭೆಯಲ್ಲಿ ಮೃತಪಟ್ಟವರ (ಇಬ್ಬರು) ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.  ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರದ ಹಣ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಗಲಭೆ ಕುರಿತು ತನಿಖೆ ನಡೆಸಲು ಕ್ರಮವಹಿಸುವುದಾಗಿ ತಿಳಿಸಿದ್ದಾರೆ.