You cannot copy content of this page.
. . .

Day: December 21, 2019

ಹೆದ್ದಾರಿಗಳಲ್ಲಿ ದರೋಡೆ ಮಾಡುತ್ತಿದ್ದ ಐವರ ಬಂಧನ

ಮೈಸೂರು: ಹೆದ್ದಾರಿಗಳಲ್ಲಿ ಮುಂಜಾನೆ ಒಂಟಿಯಾಗಿ ತಿರುಗಾಡುತ್ತಿದ್ದವರನ್ನು ಹೆದರಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ. ನಂಜನಗೂಡು ಪಟ್ಟಣದ ವರುಣ(೧೯), ಜಯಂತ್(೧೯), ಸೈಯಾದ್ ಅಯಾಜ್(೧೯) ಬಂಧಿತರು. ಇನ್ನಿಬ್ಬರು ಅಪ್ರಾಪ್ತರನ್ನ ಬಾಲಮಂದಿರಕ್ಕೆ ಸೇರಿಸಲಾಗಿದೆ. ಬಂಧಿತರಿಂದ 10 ಮೊಬೈಲ್ ,ಎರಡು ಬೈಕ್ ಹಾಗೂ 18 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ತಿಳಿಸಿದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಸಂತೇಮರಳ್ಳಿ, ಮೈಸೂರು ನಗರ, ಮೈಸೂರು-ನಂಜನಗೂಡು ಹೆದ್ದಾರಿ ರಸ್ತೆಗಳಲ್ಲಿ  ದರೋಡೆ ಮಾಡಿರುವುದಾಗಿ ದರೋಡೆಕೋರರು […]

ಕಾಡಾನೆ ದಾಳಿ; ಹಸುವಿಗೆ ತೀವ್ರ ಗಾಯ

  ಹನಗೋಡು; ನಾಗರಹೊಳೆ ಉದ್ಯಾನದಂಚಿನ ವೀರನಹೊಸಹಳ್ಳಿಯ ಅರಣ್ಯ ಸಿಬ್ಬಂದಿಯ ವಸತಿ ಗೃಹದ ಎದುರಿನಲ್ಲೇ ಕಾಡಾನೆ ದಾಳಿಯಿಂದ ಹಸುವೊಂದು ತೀವ್ರವಾಗಿ ಗಾಯಗೊಂಡಿದೆ. ತೀವ್ರವಾಗಿ ಗಾಯಗೊಂಡಿರುವ ಹಸು ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ವೀರನಹೊಸಹಳ್ಳಿಯ ನಿಂಗೇಗೌಡ ಅವರಿಗೆ ಸೇರಿದ್ದೆಂದು ತಿಳಿದುಬಂದಿದೆ. ಶುಕ್ರವಾರ ರಾತ್ರಿ ಕಾಡಿನಿಂದ ಮೇವನ್ನರಸಿ ಹೊರಬಂದಿದ್ದ ಸಲಗ ಬೆಳಿಗ್ಗೆಯಾದರೂ ಕಾಡು ಸೇರಲಾಗದೆ ಪರಿತಪಿಸುತ್ತಿತ್ತು. ಶನಿವಾರ ಮುಂಜಾನೆ ಉದ್ಯಾನದೊಳಗೆ ಹೋಗಲು ಯತ್ನಿಸಿ, ವೀರನಹೊಸಹಳ್ಳಿಯ ಮುಖ್ಯರಸ್ತೆಗೆ ಬಂದ ಆನೆಯನ್ನು ಕಂಡು ನಾಯಿಗಳು ಬೊಗಳಿವೆ. ಈ ವೇಳೆ ಬೆದರಿದ ಸಲಗ ಪಕ್ಕದಲ್ಲೇ ಇದ್ದ […]

ಪೌರತ್ವ ತಿದ್ದುಪಡಿ ಕಾಯ್ದೆ ದೇಶಕ್ಕೆ ಕಪ್ಪು ಚುಕ್ಕೆ; ಧ್ರುವನಾರಾಯಣ್

  ಪೌರತ್ವ ತಿದ್ದುಪಡಿ ಕಾಯ್ದೆ ದೇಶಕ್ಕೆ ಕಪ್ಪು ಚುಕ್ಕೆ ತರುವಂತಹದ್ದು ಎಂದು ಮಾಜಿ ಸಂಸದ ಧ್ರುವನಾರಾಯಣ್‍ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪೌರತ್ವ ಕಾಯ್ದೆ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಹದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.   ಈ ಕಾಯ್ದೆಯಿಂದ ಭಾರತ ಜನರ ವಿಶ್ವಾಸ ಕಳೆದುಕೊಳ್ಳುವುದಲ್ಲದೆ, ಪ್ರಪಂಚದ ಇತರ ದೇಶಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಧ್ರುವನಾರಾಯಣ್‍, ಸಂಸದ ಪ್ರತಾಪ್‍ ಸಿಂಹ ಹೇಳಿಕೆಗೂ ಆಕ್ರೋಶ ವ್ಯಕ್ತಪಡಿಸಿದರು. ಯು.ಟಿ.ಖಾದರ್ ಹೇಳಿಕೆಯಿಂದ ಗಲಾಟೆ ಶುರುವಾಯ್ತು ಎಂದು ಪ್ರತಾಪ್ […]

ಪತ್ರಕರ್ತರೊಂದಿಗೆ ಡಿಕೆಶಿ ಆಲ್‍ ರೌಂಡ್ ಆಟ..

   ಬೆಂಗಳೂರಿನ ಪಿಇಎಸ್‍ ಕಾಲೇಜು ಮೈದಾನದಲ್ಲಿ ಇಂಟರ್‍ ಮೀಡಿಯಾ ಟಿ-10 ಕ್ರಿಕೆಟ್‍ ಟೂರ್ನಿ ಆಯೋಜಿಸಲಾಗಿತ್ತು. ಟೂರ್ನಿ ಉದ್ಘಾಟಿಸಿದ ಕಾಂಗ್ರೆಸ್‍ ನಾಯಕ ಡಿ.ಕೆ.ಶಿವಕುಮಾರ್‍, ಬ್ಯಾಟ್‍ ಹಿಡಿದು ಫೀಲ್ಡಿಗಿಳಿದರು. ಚೆಂಡು ಬೌಂಡರಿಗಟ್ಟಿ, ಚಪ್ಪಾಳೆ ಗಿಟ್ಟಿಸಿಕೊಂಡರು. ನಂತರ ಬೌಲಿಂಗ್‍ ಮಾಡಿಯೂ ಸೈ ಎನಿಸಿಕೊಂಡರು.

ಮೂವರು ಗಂಧದ ಮರ ಕಳ್ಳರ ಬಂಧನ

 ಮೈಸೂರಿನ ನಜರ್ ಬಾದ್‍ ಪೊಲೀಸ್‍ ಠಾಣಾ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಗಂಧದ ಮರಗಳ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಹ್ಯಾರಿಸ್‍ ಎಕ್ಬಾಲ್‍, ವಸೀಂ ಅಕ್ರಂ, ಸೈಯದ್‍ ಮುಜರ್‍ ಎಂದು ಗುರುತಿಸಲಾಗಿದೆ. ಮೂವರು ಮೈಸೂರಿನ ರಾಜೀವ್‍ ನಗರ ಹಾಗೂ ಮಂಡಿಮೊಹಲ್ಲಾದವರೆಂದು ತಿಳಿದುಬಂದಿದೆ.  ಖಚಿತ ಮಾಹಿತಿ ಮೇರೆಗೆ ನಜರಬಾದ್‍ ಠಾಣೆ ನಿರೀಕ್ಷಕ ಎಚ್‍.ಆರ್‍.ವಿವೇಕಾನಂದ ನೇತೃತ್ವದಲ್ಲಿ ದಾಳಿ ನಡೆಸಿ, ಮಾಲು ಸಮೇತ ಬಂಧಿಸಲಾಗಿದೆ. ಬಂಧಿತರಿಂದ 45 ಕೆಜಿ ತೂಕದ 3 ಲಕ್ಷ ರೂಪಾಯಿ ಮೌಲ್ಯದ ಗಂಧದ […]

ಪರಿಸ್ಥಿತಿ ಕೈಮೀರಿತ್ತು, ಗೋಲಿಬಾರ್ ಅನಿವಾರ್ಯವಾಯಿತು; ಸಿಎಂ ಸ್ಪಷ್ಟನೆ

 ಗುರುವಾರ ಮಂಗಳೂರಿನಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಪರಿಸ್ಥಿತಿ ಕೈ ಮೀರಿತ್ತು. ಹೀಗಾಗಿ ಅನಿವಾರ್ಯವಾಗಿ ಗೋಲಿಬಾರ್ ಮಾಡಲಾಯಿತು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.  ಮಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಂಗಳೂರಿನ ಬಂದರ್ ಪೊಲೀಸ್ ಸ್ಟೇಷನ್ ಬಳಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ನುಗ್ಗಿದ್ದರೆ ಅನಾಹುತವಾಗುತ್ತಿತ್ತು. ಹೀಗಾಗಿ ಪೊಲೀಸರು ಅನ್ಯದಾರಿ ಇಲ್ಲದೆ ಗೋಲಿಬಾರ್‍ ನಡೆಸಬೇಕಾಯಿತು ಎಂದರು.   ಗೋಲಿಬಾರ್ ನಲ್ಲಿ ಮೃತರಾದವರ ಕುಟುಂಬಗಳಿಗೆ ಜಿಲ್ಲಾಧಿಕಾರಿಗಳು ಪರಿಹಾರ […]

ಪೌರತ್ವ ಕಾಯ್ದೆ ಅಸಾಂವಿಧಾನಿಕ; ಶಾಸಕ ಯತೀಂದ್ರ

ಪೌರತ್ವ ತಿದ್ದುಪಡಿ ಕಾಯಿದೆ ಅಸಾಂವಿಧಾನಿಕವಾದುದು ಎಂದು ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪೌರತ್ವ ಕಾಯ್ದೆ ವಿರುದ್ಧ ಗುರುವಾರ ಹೋರಾಟ ಮಾಡಬೇಕಾಗಿತ್ತು. ಆದರೆ 144 ಸೆಕ್ಷನ್‍ ಜಾರಿ ಮಾಡಿದ್ದರಿಂದ ಪ್ರತಿಭಟನೆ ಮುಂದೂಡಲಾಯಿತು. ನಿಷೇಧಾಜ್ಞೆ ತೆರವು ಮಾಡಿದ ಮೇಲೆ ಕಾಂಗ್ರೆಸ್‍ ಪಕ್ಷದಿಂದ ಪ್ರತಿಭಟನೆ ಮುಂದುವರೆಸುತ್ತೇವೆಂದು ಯತೀಂದ್ರ ಅವರು ಹೇಳಿದರು.   ಈ ಸಂದರ್ಭದಲ್ಲಿ ಜಿಪಂ ವಿರೋಧ ಪಕ್ಷದ ನಾಯಕ ಡಿ.ರವಿಶಂಕರ್ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಮತ್ತು ನಗರ ಅಧ್ಯಕ್ಷರುಗಳು ಉಪಸ್ಥಿತರಿದ್ದರು

ಗಾಂಧೀಜಿಯೂ ಪೌರತ್ವ ನೋಂದಣಿ ವಿರೋಧಿಸಿದ್ದರು; ರಾಜಮೋಹನ್

ಸಿಎಎ ಮತ್ತು ಎನ್ ಆರ್ ಸಿ ಅತ್ಯಂತ ಕ್ರೂರ ಕಾನೂನುಗಳು ಎಂದು ಮಹಾತ್ಮ ಗಾಂಧಿ ಮೊಮ್ಮಗ ಹಾಗೂ ಪತ್ರಕತ್ರ ರಾಜಮೋಹನ ಗಾಂಧಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, 1914 ರಲ್ಲಿ ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಪೌರತ್ವ ನೋಂದಣಿ ವಿರೋಧಿಸಿ ಚಳವಳಿ ಮಾಡಿದ್ದರು. ಅವರ ಜೀವನದುದ್ದಕ್ಕೂ ಪೌರತ್ವ ನೋಂದಣಿ ವಿರೋಧಿಸಿದ್ದರು ಎಂದರು‌.

ಕತ್ತಿ ಬಂದು ಭಾರತದ ನೆತ್ತಿ ಮೇಲೆ ನಿಂತಿದೆ; ದೇವನೂರು ಮಹದೇವ

  ಕತ್ತಿ ಬಂದು ಭಾರತದ ನೆತ್ತಿ ಮೇಲೆ ನಿಂತಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹದೇವ ಆತಂಕ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ಹೋರಾಟ ವಿದ್ಯಾರ್ಥಿಗಳ ಅಂಗಳಕ್ಕೆ ಬಂದಿದೆ. ವಿದ್ಯಾರ್ಥಿಗಳು ಅತ್ಯಂತ ಎಚ್ಚರಿಕೆ ಮತ್ತು ಹೊಣೆಗಾರಿಕೆಯಿಂದ ಹೋರಾಟ ಮಾಡಬೇಕಿದೆ ಎಂದರು.    ಮುಸ್ಲಿಂ ವೇಷ ತೊಟ್ಟು ರೈಲಿಗೆ ಕಲ್ಲು ಹೊಡೆಯುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅಂದರೆ ಹೋರಾಟದ ದಿಕ್ಕು ತಪ್ಪಿಸುವಂತಹ ಸಾಧ್ಯತೆಗಳು ಹೆಚ್ಚಾಗಿವೆ‌. ಆದ್ದರಿಂದ ಅತ್ಯಂತ ಜಾಗ್ರತೆಯಿಂದ […]

ಸೋಮವಾರ ಹೋಗುತ್ತೇನೆ, ನನ್ನನ್ನೂ ಬಂಧಿಸಲಿ; ಸಿದ್ದರಾಮಯ್ಯ

  ಸೋಮವಾರ ನಾನು ಮಂಗಳೂರಿಗೆ ಭೇಟಿ ನೀಡುತ್ತಿದ್ದೇನೆ. ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಲು ಹೋಗುತ್ತಿದ್ದೇನೆ. ಬೇಕಿದ್ದರೆ ನನ್ನನ್ನೂ ಬಂಧಿಸಲು ಎಂದು ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.   ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗೋಲಿಬಾರ್‍ ನಲ್ಲಿ ಸತ್ತವರು ಹಿಂಸಾಚಾರಕ್ಕಿಳಿದವರಲ್ಲ, ಅಮಾಯಕರು ಎಂದು ಹೇಳಿದರು.