You cannot copy content of this page.
. . .

Day: December 20, 2019

ಪೌರತ್ವ ಕಾಯ್ದೆಗೆ ವಿರೋಧ; ‘ಯುಪಿ’ಯಲ್ಲಿ ಹಿಂಸಾಚಾರಕ್ಕೆ 5 ಸಾವು

 ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದು 5 ಮಂದಿ ಮೃತಪಟ್ಟಿದ್ದಾರೆ ಎಂದು ಯುಪಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್‍ ಕುಮಾರ್‍ ಅವಸ್ತಿ ಎಎನ್‍ಐಗೆ ಪ್ರತಿಕ್ರಿಯಿಸಿದ್ದಾರೆ.  ಉತ್ತರ ಪ್ರದೇಶದ ಬಿಜ್ನೋರ್‍ ನಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟರೆ, ಉಳಿದ ಮೂವರು ಸಂಬಾಲ್‍, ಫಿರೋಜಾಬಾದ್‍, ಮೀರತ್‍ (ತಲಾ ಒಬ್ಬರು) ನಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್‍, ‘ಇವರ್‍ಯಾರೂ ಪೊಲೀಸರ ಗೋಲಿಬಾರ್‍ ನಿಂದ ಮೃತಪಟ್ಟವರಲ್ಲ. […]

ಕಾರಿನ ಮೇಲೆ ಮಗುಚಿದ ಲಾರಿ; ಮಂಡ್ಯ ಮೂಲದ ಮೂವರ ದುರ್ಮರಣ

 ಧರ್ಮಸ್ಥಳದಲ್ಲಿ ದೇವರ ದರ್ಶನ ಮುಗಿಸಿಕೊಂಡು ಊರಿಗೆ ವಾಪಾಸ್ಸಾಗುತ್ತಿದ್ದ ಯಾತ್ರಿಕರ ಕಾರಿನ ಮೇಲೆ ಕಬ್ಬಿಣದ ಪೈಪ್‍ ತುಂಬಿಕೊಂಡು ಹೋಗುತ್ತಿದ್ದ ಲಾರಿ ಉರುಳಿಬಿದ್ದು ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.  ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಪರವರ ಕೊಟ್ಯ ಈ ಘಟನೆ ನಡೆದಿದೆ. ಕಾರಿನ ಮೇಲೆ ಲಾರಿ ಉರುಳಿದ ಪರಿಣಾಮ ಕಾರಿನಲ್ಲಿದ್ದ ಐದು ಜನರ ಪೈಕಿ ನಾರಾಯಣ ರಾವ್‍, ಅವರ ಪುತ್ರಿ ನೀತು, ಮತ್ತು ಮೊಮ್ಮಗಳು ನಿಧಿ ಮೃತಪಟ್ಟವರು ಹಾಗೂ ಚಂದ್ರಶೇಖರ್‍, ಕಾವೇರಿ ತೀವ್ರವಾಗಿ ಗಾಯಗೊಂಡಿದ್ದಾರೆ. […]

ಟಿ.ನರಸೀಪುರ ಬಳಿ ಕಾರು ಪಲ್ಟಿ: ಒಬ್ಬ ಸ್ಥಳದಲ್ಲೇ ಸಾವು

  ಮೈಸೂರಿನ ಟಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಬಳಿ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಒಬ್ಬ ಸಾವನ್ನಪ್ಪಿದ್ದಾನೆ. ಮತ್ತೊಬ್ಬನಿಗೆ ತೀವ್ರ ಗಾಯವಾಗಿದ್ದು ಮೈಸೂರಿನ ಕೆ.ಆರ್‍.ಆಸ್ಪತ್ರೆಗೆ ಸೇರಿಸಲಾಗಿದೆ.   ಕಾರು ಮೈಸೂರಿನಿಂದ ಕೊಳ್ಳೇಗಾಲಕ್ಕೆ ಹೋಗುತ್ತಿತ್ತು. ಟಿ.ನರಸೀಪುರ ಬಳಿಯ ತೂಗುದೀಪ ದರ್ಶನ್ ಫಾರಂ ತಿರುವಿನ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ.  ದುರ್ಘಟನೆಯಲ್ಲಿ ನಾಗರಾಜ್ ಭಟ್ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮತ್ತೊಬ್ಬನಿಗೆ ತೀವ್ರ ಗಾಯವಾಗಿದೆ.

ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿ ಮನೆ ತೆರವು ಕಾರ್ಯಾಚರಣೆ

 ಮೈಸೂರಿನ ಇರ್ವಿನ್‍ ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿಯಲ್ಲಿದ್ದ ಮನೆಯನ್ನು ಜೆಸಿಬಿ ಮೂಲಕ ಕೆಡವಲಾಯಿತು.  ನಗರಪಾಲಿಕೆ ವತಿಯಿಂದ ಶುಕ್ರವಾರ ಮನೆ ತೆರವು ಕಾರ್ಯಾಚರಣೆ ನಡೆಯಿತು. ನಗರದಲ್ಲಿ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಈ ನಡುವೆ ರಸ್ತೆ ಬದಿಯಲ್ಲಿದ್ದ ಎರಡು ಮನೆಗಳ ಮಾಲೀಕರು ಮನೆ ತೆರವುಗೊಳಿಸುವುದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಹೂಡಿದ್ದ ದಾವೆ ಖುಲಾಸೆಯಾಗಿದೆ. ಹೀಗಾಗಿ, ತೆರವು ಕಾರ್ಯಾಚಾರಣೆ ಮುಂದುವರಿದಿದೆ.

ಜೈಪುರ ಸ್ಫೋಟ ಪ್ರಕರಣ; ನಾಲ್ವರು ದೋಷಿಗಳಿಗೆ ಗಲ್ಲು

   2008ರಲ್ಲಿ ನಡೆದಿದ್ದ ಜೈಪುರ ಸರಣಿ ಬಾಂಬ್‍ ಸ್ಫೋಟ ಪ್ರಕರಣದ ನಾಲ್ವರು ದೋಷಿಗಳಿಗೆ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಮೊಹಮ್ಮದ್‍ ಸೈಫ್‍, ಸರ್ವಾರ್‍ ಅಜ್ಮಿ, ಸಲ್ಮಾನ್‍ ಮತ್ತು ಸೈಫ್‍ ಉರ್‍ ರೆಹಮಾನ್‍ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು.   2008ರಲ್ಲಿ ನಡೆದಿದ್ದ ಈ ದರ್ಘಟನೆಯಲ್ಲಿ 80 ಮಂದಿ ಸಾವಿಗಿಡಾಗೀದ್ದರು. 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣದ ಪ್ರಮುಖ ಆರೋಪಿ ಉತ್ತರ ಪ್ರದೇಶದ ಮೊಹಮದ್‍ 2008ರಲ್ಲಿ ಬಾಟ್ಲಾ ಹೌಸ್‍ ಎನ್‍ ಕೌಂಟರ್‍ ನಲ್ಲಿ ಪೊಲೀಸರ […]

ಉತ್ತರ ಭಾರತದಲ್ಲಿ ಪ್ರಬಲ ಭೂಕಂಪನ

     ದೆಹಲಿ, ಪಂಜಾಬ್‍, ಹರ್ಯಾಣ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ. ಇದರ ಜೊತೆಗೆ ಪಾಕಿಸ್ತಾನ ಹಾಗೂ ಆಫ್ಘಾನಿಸ್ಥಾನದಲ್ಲೂ ಭೂಮಿ ಕಂಪಿಸಿದ್ದು, ಯಾವುದೇ ಅನಾಹುತವಾದ ಬಗ್ಗೆ ವರದಿಯಾಗಿಲ್ಲ.   ಇಂದು 5 ಗಂಟೆ ಸುಮಾರಿಗೆ ಭೂಮಿ ಕಂಪಿಸಿದರ ಅನುಭವವಾಗಿದೆ. ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, ಮನೆಗಳಲ್ಲಿದ್ದ ವಸ್ತುಗಳು ಕೆಳಗೆ ಬಿದ್ದಿವೆ. ಜನರು ಭಯಭೀತಿಯಿಂದ ಹೊರಗೆ ಓಡಿಬಂದಿದ್ದಾರೆ.   ಅಫ್ಘಾನಿಸ್ತಾನದ ಹಿಂದ್ ಕುಶ್ ಪ್ರಾಂತ್ಯದಲ್ಲಿ ಈ ಭೂಕಂಪದ ಕೇಂದ್ರಬಿಂದು ಇತ್ತು ಎಂದು ತಿಳಿದುಬಂದಿದೆ. ಭೂಕಂಪದ […]

ಎಸಿಬಿ ಬಲೆಗೆ ಬಿದ್ದ ನಗರಪಾಲಿಕೆ ಗುಮಾಸ್ತ

  ಆಶ್ರಯ ಮನೆಯ ಖುಲಾಸಾ ಪತ್ರ ಕೊಡಿಸುತ್ತೇನೆಂದು ಹೇಳಿ ವ್ಯಕ್ತಿಯೊಬ್ಬರ ಬಳಿ 3 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಮೈಸೂರು ಮಹಾ ನಗರ ಪಾಲಿಕೆ ಗುಮಾಸ್ತ ಮಂಜುನಾಥ್ ಎಸಿಬಿ ಬಲೆಗೆ ಬಿದ್ದಿದ್ದಾರೆ.   ಸೋಮಶೇಖರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ನಗರದ ಗನ್ ಹೌಸ್ ವೃತ್ತದ ಬಳಿ ದಾಳಿ ನಡೆಸಲಾಗಿದೆ. ಸೋಮಶೇಖರ್‍ ಅವರಿಂದ 3 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಗುಮಾಸ್ತ ಮಂಜುನಾಥ್‍ ರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದರು. ಎಸಿಬಿ ಡಿಎಸ್‌ಪಿ ಪರಶುರಾಮಪ್ಪ ನೇತೃತ್ವದ ತಂಡ ಈ […]

ಪೌರತ್ವ ಪೌರುಷ ಹಿನ್ನೆಲೆ: ನಾಳೆ ಕೇಂದ್ರ ಸಂಪುಟ ಸಭೆ

  ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ದಿನೆದಿನೇ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗ್ಗೆ 10.30ಕ್ಕೆ (ಶನಿವಾರ) ಕೇಂದ್ರ ಸಚಿವ ಸಂಪುಟ ಸಭೆಯ ಕರೆದಿದ್ದಾರೆ.   ಈಶಾನ್ಯ ಭಾರತದ ರಾಜ್ಯಗಳು ಸೇರಿದಂತೆ ದೇಶಾದ್ಯಂತ ಹೋರಾಟಗಳು ನಡೆಯುತ್ತಿವೆ. ಮಂಗಳೂರಿನಲ್ಲಿ ಇಬ್ಬರು ಹೋರಾಟಗಾರರು ಗೋಲಿಬಾರ್‍ ಗೆ ಬಲಿಯಾಗಿದ್ದಾರೆ. ಹಲವು ನಗರಗಳಲ್ಲಿ ಕರ್ಫ್ಯು ವಿಧಿಸಲಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಪರಿಸ್ಥಿತಿ ಹತೋಟಿಗೆ ಬರದ ಹಿನ್ನೆಲೆಯಲ್ಲಿ ನಾಳೆ ಪ್ರಧಾನಿ ಮೋದಿ, […]

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

 ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ರಾಜ್ಯದಲ್ಲಿ ಸೆಕ್ಷನ್‌ 144 ಜಾರಿ ಮಾಡಲಾಗಿದೆ ಎಂದು ಆರೋಪಿಸಿ, ಅದರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹೈಕೋರ್ಟ್‍ ವಿಚಾರಣೆ ನಡೆಸಿದೆ. ಈ ವೇಳೆ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದೆ. ಹೈಕೋರ್ಟ್‍ನ ಪ್ರಶ್ನೆಗಳು ಇಂತಿವೆ..  ಪ್ರತಿಭಟನೆ ನಡೆಸಲು ಕೆಲ ಸಂಘಟನೆಗಳಿಗೆ ಅವಕಾಶ ನೀಡುವ ಸರ್ಕಾರ ರಾತ್ರೋರಾತ್ರಿ ಅವಕಾಶ ನಿರಾಕರಿಸಿರುವುದು ಏಕೆ  ಪ್ರತಿಭಟನೆಗೆ ನೀಡಿರುವ ಅವಕಾಶವನ್ನು ಸೆಕ್ಷನ್‌ 144 ಜಾರಿಯಾಗುತ್ತಲೇ ರದ್ದು ಮಾಡಲು ಸಾಧ್ಯವೇ?  ಶಾಲೆಯ ವಿದ್ಯಾರ್ಥಿಗಳನ್ನೂ ಪೊಲೀಸರು ಠಾಣೆಗಳಿಗೆ ಕರೆದೊಯ್ಯುತ್ತಾರೆಯೇ? […]

ಬಂದೂಕುಗಳಿರುವುದು ಪೂಜೆ ಮಾಡುವುದಕ್ಕಲ್ಲ; ಸುರೇಶ್‍ ಅಂಗಡಿ

 ಬಂದೂಕು ಗಳಿರುವುದು ಮನೆಯಲ್ಲಿಟ್ಟು ಪೂಜೆ ಮಾಡುವದಕ್ಕಲ್ಲ ಎಂದು ಮಂಗಳೂರಿನಲ್ಲಿ ನಡೆದ ಗೋಲಿಬಾರ್‍ ನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್‍ ಅಂಗಡಿ ಸಮರ್ಥಿಸಿಕೊಂಡಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಅವರು ಹೇಳಿಕೆ ನೀಡಿದ್ದರು. ಅದನ್ನು ಅವರು ಮತ್ತೆ ಸಮರ್ಥಿಸಿಕೊಂಡಿದ್ದಾರೆ.     ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸಾರ್ವಜನಿಕ ಹಾಗೂ ರೈಲ್ವೆ ಇಲಾಖೆಯ ಆಸ್ತಿಪಾಸ್ತಿ ಹಾನಿ ಮಾಡಬಾರದು. ಒಂದು ವೇಳೆ […]