You cannot copy content of this page.
. . .

Day: December 19, 2019

ಪಿ.ಪಟ್ಟಣದ ಯುವಕ ಮಲೇಷ್ಯಾದಲ್ಲಿ ಸಾವು; ಕೊಲೆ ಶಂಕೆ

 ಪಿರಿಯಾಪಟ್ಟಣ: ಉದ್ಯೋಗ ಅರಸಿ ಮಲೇಷಿಯಾ ದೇಶಕ್ಕೆ ತೆರಳಿದ್ದ ಪಿರಿಯಾಪಟ್ಟಣದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಮೃತನ ಪೋಷಕರು ಇದೊಂದು ಕೊಲೆ ಎಂದು ದೂರಿದ್ದಾರೆ.  ಪಟ್ಟಣದ ರುದ್ರಪ್ಪ ಬಡಾವಣೆಯ ನಿವಾಸಿ ವೆಂಕಟೇಶ ಅವರ ಪುತ್ರ ಸುಮಂತ್ (೨೨) ಉದ್ಯೋಗ ಅರಸಿ ದೂರದ ಮಲೇಷಿಯಾಕ್ಕೆ ಹೋಗಿ ಪ್ರಾಣ ಬಿಟ್ಟಿದ್ದಾನೆ.  ಮೃತ ಸುಮಂತ್ ಡಿಪ್ಲೊಮಾ ಪದವಿ ಪಡೆದು ಬೆಂಗಳೂರಿನ ಎಸಿಟಿ ಎಂಬ ಕಂಪನಿಯಲ್ಲಿ ಕೆಲಸ ನಿರ್ವಹಿಸಿ, ಹೆಚ್ಚಿನ ಹಣ ಅಗತ್ಯವಿದ್ದಾಗ ತನ್ನ ಸ್ನೇಹಿತರ ಮೂಲಕ ಗುಜರಾತ್‌ನ ಮನೀಶ್ ಪಾಟೀಲ್ ಎಂಬ […]

ಸ್ಥಳಾಂತರಗೊಂಡ ಅರಳೀಮರ ಈಗ ಹೇಗಿದೆ?

 ಬದಲಾದ ನೆಲ, ವಾತಾವರಣ. ಉದುರಿದ ಎಲೆ, ಸೊರಗಿದ ದೇಹ ಹೊತ್ತು ಒಂಟಿಯಾಗಿ ನಿಂತಿದೆ. ತವರು ಮನೆಯಿಂದ ಬಂದ ಹೆಣ್ಣು ಗಂಡನ ಮನೆಗೆ ಹೊಂದಿಕೊಳ್ಳಲು ಎಷ್ಟು ದಿನಬೇಕು? ಅದೇ ರೀತಿ ಮರವೊಂದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಿದರೆ ಅಲ್ಲಿಗೆ ಹೊಂದಿಕೊಂಡು ಸೊಂಪಾಗಿ ಬೆಳೆಯಲು ನಿಧಾನವಾಗುತ್ತದೆ. ಮೈಸೂರಿನಲ್ಲಿ ತಿಂಗಳ ಹಿಂದೆ ಹೀಗೆಯೇ ಒಂದೆಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಗೊಂಡ ಅರಳೀಮರ ಈಗ ಹೇಗಿದೆ ಗೊತ್ತಾ?  ಅಗ್ರಹಾರದ ನ್ಯೂ ಸಯ್ಯಾಜಿ ರಾವ್‍ ರಸ್ತೆ ಬಳಿ ಖಾಲಿ ನಿವೇಶವೊಂದರಲ್ಲಿ ಸುಮಾರು 7 ವರ್ಷಗಳಿಂದ […]

ಸಮುದ್ರದಲ್ಲಿ ಸ್ಕೂಬಾ ಡೈವ್ ಮಾಡಿದ ಐಪಿಎಸ್ ಅಧಿಕಾರಿ ರೂಪಾ

  ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಖಡಕ್‍ ಪೊಲೀಸ್‍ ಅಧಿಕಾರಿಗಳಲ್ಲಿ ಒಬ್ಬರು. ಸದಾ ಕೆಲಸದಲ್ಲಿ ಬ್ಯುಸಿಯಾಗಿರುವ ಇವರು, ಎರಡು ದಿನದ ಹಿಂದೆ ರಿಲ್ಯಾಕ್ಸ್‍ ಮೂಡ್‍ ನಲ್ಲಿದ್ದರು. ಭಟ್ಕಳ ತಾಲೂಕಿನ ನೇತ್ರಾಣಿ ಗುಡ್ಡದ ಬಳಿ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವ್ ಮಾಡಿದರು. ಈ ಮೂಲಕ ಸಮುದ್ರದಾಳದ ವಿಸ್ಮಯವನ್ನು ಕಣ್ತುಂಬಿಕೊಂಡರು.    ರೂಪಾ ಮೌದ್ಗಿಲ್ ಅವರು ಬುಧವಾರ ತಮ್ಮ ಕುಟುಂಬದೊಂದಿಗೆ ಮುರುಡೇಶ್ವರಕ್ಕೆ ಹೋಗಿದ್ದರು. ಈ ವೇಳೆ ಸಾಗರದಾಳದಲ್ಲಿ ಸಂಚಾರ ಮಾಡುವ ಸಾಹಸಕ್ಕೆ ಇಳಿದರು. ಸ್ಕೂಬಾ ಡೈವಿಂಗ್ ಸಂಸ್ಥೆ ನೇತ್ರಾಣಿ ಅಡ್ವೆಂಚರ್ಸ್ […]

ಸಾರಿ.. ರಾಜೀನಾಮೆ ಹಿಂಪಡೆಯಲ್ಲ; ಹೈಕಮಾಂಡ್ ಗೆ ಕಡ್ಡಿಮುರಿದಂತೆ ಹೇಳಿದ ಸಿದ್ದರಾಮಯ್ಯ

   ಸಾರಿ, ನಾನು ರಾಜೀನಾಮೆ ಹಿಂಪಡೆಯುವುದಕ್ಕೆ ಆಗುವುದಿಲ್ಲ. ಯಾರನ್ನು ಬೇಕಾದರೂ ಆಯ್ಕೆ ಮಾಡಿ, ನಾನಂತೂ ಯಾವುದೇ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ. ಹೀಗಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೈಕಮಾಂಡ್‍ ಗೆ ಕಡ್ಡಿಮುರಿದಂತೆ ಹೇಳಿಬಿಟ್ಟಿದ್ದಾರೆ.     ಉಪಚುನಾವಣೆ ಸೋಲಿನ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್‍ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಈ ಸಂಬಂಧ ಮಾತನಾಡಲು ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ ಅವರನ್ನು ಕಾಂಗ್ರೆಸ್‍ ಹೈಕಮಾಂಡ್‍ ಬೆಂಗಳೂರಿಗೆ […]

ಪೌರತ್ವ ಕಾಯ್ದೆಗೆ ವಿರೋಧ; ರಂಗಕರ್ಮಿ ಪ್ರಸನ್ನ ಬಂಧನ, ಬಿಡುಗಡೆ

 ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‍ಸಿ) ವಿರೋಧಿಸಿ ಗದಗ್‍ನ ಗಜೇಂದ್ರಗಡದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.  ಸಿಪಿಐ (ಎಂ), ಕನ್ನಡಪರ ಹಾಗೂ ದಲಿತಪರ ಸಂಘಟನೆಗಳ ಮುಖಂಡರು ಬಾಯಿಗೆ ಬಟ್ಟೆ ಕಟ್ಟಿಕೊಂಡು ಗಜೇಂದ್ರಗಡದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ನಿಷೇಧಾಜ್ಞೆ ಇದ್ದರೂ ಪ್ರತಿಭಟನಾಕಾರರು ಸಿಪಿಐ (ಎಂ) ಕಚೇರಿಯಿಂದ  ಕಾಲಕಾಲೇಶ್ವರ ವೃತ್ತಕ್ಕೆ ತೆರಳುವ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಸೇರಿದಂತೆ 15ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ನಂತರ […]

ರಾಜ್ಯದಲ್ಲಿ ಶಾಂತಿ ಕಾಪಾಡಲು ಸಿಎಂ ಮನವಿ

 ರಾಜ್ಯದಲ್ಲಿ ಶಾಂತಿ ಕಾಪಾಡಿ. ಶಾಂತಿ ಕಾಪಾಡಲು ಎಲ್ಲರೂ ಸಹಕರಿಸಿ. ಜನರ ಆಶಯಗಳಿಗೆ ಧಕ್ಕೆ ತರಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ನಾಯಕರಿಗೆ ಮನವಿ ಮಾಡಿದ್ದಾರೆ.  ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಕಾನೂನು. ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ದೇಶದ ನಾಗಕರಿಗೆ ಇದರಿಂದ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ಪೊಲೀಸ್ ಕಮಿಷನರ್ ಕಚೇರಿ ಎದುರೇ ಪ್ರತಿಭಟನೆ

 ಮೈಸೂರು: ಕೇಂದ್ರದ ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ್ದರೂ, ಅದನ್ನೂ ಲೆಕ್ಕಿಸದೇ ಮೈಸೂರಿನ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಪ್ರಗತಿಪರ ಸಂಘಟನೆಗಳು ಪ್ರತಿಭಟನೆಗೆ ಅವಕಾಶ ನೀಡದ್ದನ್ನು ಖಂಡಿಸಿ ಪೊಲೀಸ್‍ ಆಯುಕ್ತರ ಕಚೇರಿ ಎದುರೇ ಧರಣಿ ಕುಳಿತಿದ್ದಾರೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ. ನಿಷೇಧಾಜ್ಞೆ ಜಾರಿಗೊಳಿಸಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಆಕ್ರೋಶ […]

ಪಿರಿಯಾಪಟ್ಟಣ ಯುವಕ ಮಲೇಷ್ಯಾದಲ್ಲಿ ನೀರುಪಾಲು..!

   ಮಲೇಷ್ಯಾದಲ್ಲಿ ಖಾಸಗಿ ಕಂಪನಿಯ ಗೂಡ್ಸ್ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಮೂಲದ ಯುವಕ ನೀರುಪಾಲಾಗಿದ್ದಾನೆ. ಈ ಬಗ್ಗೆ ಸರಿಯಾದ ಮಾಹಿತಿ ಸಿಗದೆ ಕುಟುಂಬಸ್ಥರು ಪರದಾಡುತ್ತಿದ್ದಾರೆಂದು ತಿಳಿದುಬಂದಿದೆ.   ಪಿರಿಯಾಪಟ್ಟಣದ ಕಾನ್ವೆಂಟ್ ರಸ್ತೆಯ ನಿವಾಸಿಗಳಾದ ವೆಂಕಟೇಶ್ ಹಾಗೂ ಶೋಭಾ ದಂಪತಿ ಮಗ ಸುಮಂತ್ (22) ಎಂಬಾತನೇ ಮಲೇಷ್ಯಾದಲ್ಲಿ ನೀರುಪಾಲಾಗಿರುವ ಯುವಕ. ಮೃತ ಯುವಕ 9 ತಿಂಗಳಿನಿಂದ ಮಲೇಷ್ಯಾದಲ್ಲಿ ಖಾಸಗಿ ಕಂಪನಿಯ ಗೂಡ್ಸ್ ಶಿಪ್​ನಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ಬೆಳಿಗ್ಗೆ ಅಲ್ಲಿನ ಅಧಿಕಾರಿಗಳು ಸುಮಂತ್ ಪೋಷಕರಿಗೆ […]

ಮೈಸೂರಿನ ಮಿಲಾದ್ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ

   ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆಗಳು ಮುಂದುವರೆದಿವೆ. ಮಿಲಾದ್‍ ಪಾರ್ಕ್‍ ನಲ್ಲಿ ನೂರಾರು ಜನರು ಸೇರಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.   ಅಪಾರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿರುವುದರಿಂದ ಪೊಲೀಸರಿಗೂ ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ನಿಷೇಧಾಜ್ಞೆ ಜಾರಿ ಮಾಡಿರುವುದು ಗೊತ್ತಿದ್ದರೂ, ಪ್ರತಿಭಟನಾಕಾರರು ಅದನ್ನು ಲೆಕ್ಕಿಸದೇ ಪ್ರತಿಭಟನೆಗಿಳಿದಿದ್ದಾರೆ.

ನೀವು ನಿಷೇಧಿಸಿ, ನಾವು ಇದ್ದಲ್ಲೇ ಧರಣಿ ಕೂರ್ತೀವಿ; ಮೈಸೂರಲ್ಲಿ ಒಂಟಿ-ಜಂಟಿ ಪ್ರೊಟೆಸ್ಟ್..!

   ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಹಿನ್ನೆಲೆಯಲ್ಲಿ ಎಲ್ಲೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೈಸೂರಿನ ಟೌನ್‍ ಹಾಲ್‍ ನಲ್ಲಿ ಪ್ರತಿಭಟನೆ ಮಾಡಲು ಬರುತ್ತಿರುವ ಜನರನ್ನು ಪೊಲೀಸರು ವಾಪಸ್‍ ಕಳುಹಿಸುತ್ತಿದ್ದಾರೆ. ಹೀಗಾಗಿ ಪ್ರತಿಭಟನಾಕಾರರು ವಿಭಿನ್ನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನೀವು ನಿಷೇಧ ಮಾಡಿ, ನಾವು ಇದ್ದಲ್ಲೇ ಧರಣಿ ಕೂರ್ತೀವಿ ಅಂತಿದಾರೆ.   ಕೆಲ ಪ್ರತಿಭಟನಾಕಾರರು ಮನೆಗಳ ಮುಂದೆಯೇ ಬೋರ್ಡ್‍ ಹಿಡಿದು ಮೌನ ಪ್ರತಿಭಟನೆಗಿಳಿದಿದ್ದಾರೆ. ಕೆಲವರು ಪಕ್ಷದ ಕಚೇರಿ, ಗಾಂಧಿ ಪ್ರತಿಮೆಗಳ ಮುಂದೆ ಧರಣಿ ಕುಳಿತಿದ್ದಾರೆ. ಒಬ್ಬರು, […]