You cannot copy content of this page.
. . .

Day: December 18, 2019

ಸಾಲ ಮನ್ನಾ ಮಾಡಿದ HDKಗೆ ರೈತನ ಸ್ಪೆಷಲ್‍ ಗಿಫ್ಟ್

  ಸಾಲ ಮನ್ನಾ ಮಾಡಿ ಬದುಕು ಉಳಿಸಿದರು ಎಂದು ರೈತರೊಬ್ಬರು ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ವಿಶೇಷ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಆ ರೈತ ನೀಡಿದ ಉಡುಗೊರೆ ಸ್ವೀಕರಿಸಿದ ಮಾಜಿ ಸಿಎಂ ಕುಮಾರಸ್ವಾಮಿಯವರು ಭಾವುಕರಾಗಿದ್ದಾರೆ.  ಹುಬ್ಬಳ್ಳಿ ಬಳಿಯ ಕಿರೇಸೂರ ಗ್ರಾಮದ ಗೋವಿಂದಪ್ಪ ಶ್ರೀ ಹರಿ ಎಂಬ ರೈತ ತನ್ನ ಹೊಲದಲ್ಲಿ ಬೆಳೆದ ಬೆಳೆಯಲ್ಲಿ ಜೋಳದ ರೊಟ್ಟಿ , ಶೇಂಗಾ ಚಟ್ನಿ ಪುಡಿ, ಪಲ್ಯ ತಯಾರು ಮಾಡಿ,‌ ಮಾಜಿ ಸಿಎಂ ಕುಮಾರಸ್ವಾಮಿಯವರ ಬೆಂಗಳೂರಿನ ಜೆಪಿ ನಗರ ನಿವಾಸಕ್ಕೆ ಕೊರಿಯರ್ ಕಳುಹಿಸಿದ್ದಾರೆ. ಇದರ […]

ಲಕ್ಷಕ್ಕೆ ಮಾರಾಟವಾಗುತ್ತಿದೆ ಗ್ರಾಪಂ ಅಧ್ಯಕ್ಷ, ಸದಸ್ಯರ ಸ್ಥಾನ!

 ತಮಿಳುನಾಡಿನ ಕೆಲವು ಭಾಗಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ಘೋಷಣೆಯಾದ ಬಳಿಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಮತ್ತು ಸದಸ್ಯರ ಹುದ್ದೆಗಳನ್ನು ೨ರಿಂದ ೫೦ ಲಕ್ಷದವರೆಗೆ ಹರಾಜು ಹಾಕುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.  ಹರಾಜಿನಲ್ಲಿ ಅತಿ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡುವವರು ಗ್ರಾಮದ ಮುಖ್ಯಸ್ಥರು ನೇಮಿಸುವ ಸಮಿತಿ ಬಳಿ ಹಣವನ್ನು ಠೇವಣಿ ಇಡಬೇಕು. ಹರಾಜು ಪ್ರಕ್ರಿಯೆ ನಡೆದ ಬಳಿಕ ಈ ಹುದ್ದೆಗಳಿಗೆ ಯಾರೂ ನಾಮಪತ್ರ ಸಲ್ಲಿಸದಂತೆ ಗ್ರಾಮದ ಮುಖ್ಯಸ್ಥರು ಆದೇಶ ಹೊರಡಿಸುತ್ತಾರೆ. ಒಂದು ವೇಳೆ, ಯಾರಾದರೂ ಚುನಾವಣೆಗೆ […]

ಶೂ ಇಲ್ಲದೆ ಬ್ಯಾಂಡೇಜ್‍ ಸುತ್ತಿಕೊಂಡು ರನ್ನಿಂಗ್ ರೇಸ್‍; 3 ಚಿನ್ನದ ಪದಕ ಗೆದ್ದ ಬಾಲಕಿ

  ಶೂ ಇಲ್ಲದೆ ಓಡಿ ಚಿನ್ನದ ಪದಕ ಗೆಲ್ಲುವ ದೃಶ್ಯಗಳನ್ನು ಸಿನಿಮಾಗಳನ್ನು ನೋಡುತ್ತೇವೆ. ನಿಜ ಜೀವನದಲ್ಲೂ ಒಮ್ಮೊಮ್ಮೆ ಇವು ನಿಜವಾಗುತ್ತವೆ. ಅದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಶೂ ಇಲ್ಲದೆಯೂ ಶಾಲಾ ಕ್ರೀಡಾಕೂಟದಲ್ಲಿ ಪಾದಕ್ಕೆ, ಬೆರಳುಗಳಿಗೆ ಬ್ಯಾಂಡೇಜ್ ಸುತ್ತಿಕೊಂಡು ರನ್ನಿಂಗ್‍ ರೇಸ್‍ ಮಾಡಿ 11 ಬಾಲಕಿ ಒಟ್ಟು ಮೂರು ಚಿನ್ನದ ಪದಕ ಗಳಿಸಿದ್ದಾಳೆ.  ಫಿಲಿಫ್ಫೀನ್ಸ್ ನ 11 ವರ್ಷದ ಬಾಲಕಿಯ ಈ ಸಾಧನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ರೇಯಾ ಬುಲ್ಲೋಸ್ ಇಲ್ಲೋಲಿಯೋ ಹೆಸರಿನ ಬಾಲಕಿ ಶಾಲಾ […]

ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಸೋಲಿಗ ಮಹಿಳೆ

 ಸೋಲಿಗ ಜನಾಂಗದ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.  ಚಾಮರಾಜನಗರದ ಕೆ.ಗುಡಿ ಅರಣ್ಯ ಪ್ರದೇಶ ಭೂತಣ್ಣಿ ಪೋಡಿನ ಸೋಲಿಗ ಮಹಿಳೆ ಬಸಮ್ಮಣಿ ಜಿಲ್ಲಾಸ್ಪತ್ರೆಯಲ್ಲಿ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯದಿಂದಿದ್ದಾರೆ. ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತೀವ್ರ ನಿಗಾ ಘಟಕದ ಮಕ್ಕಳಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ.

ಕರ್ನಾಟಕದಲ್ಲೂ ಅತ್ಯಾಚಾರ ಮಾಡಿದ್ದರಾ ಹೈದರಾಬಾದ್‍ ಆರೋಪಿಗಳು..?

   ಹೈದರಾಬಾದ್‍ ನಲ್ಲಿ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳು ಕರ್ನಾಟಕದಲ್ಲೂ ಇಂತಹ ಕೃತ್ಯಗಳನ್ನು ನಡೆಸಿದ್ದರಾ..? ಹೌದು, ಎನ್ನುತ್ತಿವೆ ಹೈದರಾಬಾದ್‍ ಪೊಲೀಸ್‍ ಮೂಲಗಳು. ENCOUNTERಗೆ ಬಲಿಯಾದ ನಾಲ್ವರು ಆರೋಪಿಗಳಲ್ಲಿ ಇಬ್ಬರು ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದಂತೆಯೇ ಈ ಹಿಂದೆ 9 ಮಂದಿಯನ್ನು ಹತ್ಯೆಗೈದಿದ್ದಾರಂತೆ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳನ್ನು ಈ ವಿಚಾರವನ್ನು ಬಾಯ್ಬಿಟ್ಟಿದ್ದರಂತೆ. ಇದರ ಜಾಡು ಹಿಡಿದಿರುವ ಪೊಲೀಸರು ಕರ್ನಾಟಕದಲ್ಲೂ ತನಿಖೆ ಕೈಗೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.   ಮೆಹಬೂಬ್‍ ನಗರ, ಸಂಗಾರೆಡ್ಡಿ, ರಂಗಾರೆಡ್ಡಿ, […]

ಫ್ಲೆಕ್ಸ್, ಕಟೌಟ್ ವಿರುದ್ಧ ಸಮರ ಸಾರಿದ ನಗರಸಭೆ

 ನಂಜನಗೂಡು: ನಗರದಾದ್ಯಂತ ಎಲ್ಲೆಂದರಲ್ಲಿ ಫ್ಲೆಕ್ಸ್ ಹಾಗೂ ಕಟೌಟ್ ಅಳವಡಿಸುವಿಕೆಯ ವಿರುದ್ಧ ಕೊನೆಗೂ ನಗರಸಭೆ ಸಮರ ಸಾರಿದೆ. ಬುಧವಾರ ನಗರಸಭಾ ವ್ಯಾಪ್ತಿಯ ಫ್ಲೆಕ್ಸ್ ಹಾಗೂ ಕಟೌಟ್‌ಗಳನ್ನು ಎತ್ತಂಗಡಿ ಮಾಡಿಸಿದ್ದಲ್ಲದೆ ಅವುಗಳನ್ನು ಅಳವಡಿಸಿದವರಿಗೆ ನೋಟಿಸ್ ನೀಡಿ ದಂಡ ವಿಧಿಸಲು ಆರಂಭಿಸಿತು.  ಜನಪ್ರತಿನಿಧಿಗಳು ಹಾಗೂ ಮರಿ ಪುಢಾರಿಗಳ ಜನುಮದಿನವೂ ಸೇರಿದಂತೆ ಹಬ್ಬ-ಹರಿದಿನಗಳು ಬಂತೆಂದರೆ ಕಂಡಕಂಡಲ್ಲಿ ಫ್ಲೆಕ್ಸ್ ಹಾಗೂ ಕಟೌಟ್‌ಗಳು ರಾರಾಜಿಸುತ್ತಿದ್ದವು. ಒಮ್ಮೆ ಅವುಗಳನ್ನು ಹಾಕಿದರೆ ಅದು ತಾನಾಗಿಯೇ ಬೀಳುವವರೆಗೂ ಅವುಗಳು ಅಲ್ಲೇ ಇರುತ್ತಿದ್ದವು. ಫ್ಲೆಕ್ಸ್‌ಗಳ ಹಾವಳಿಗಳಿಂದಾಗಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ […]

ಪಕ್ಷ ಬಿಟ್ಟು ಹೋಗುವವರನ್ನು ಹಿಡಿದಿಟ್ಟುಕೊಳ್ಳಲು ಆಗಲ್ಲ; ಎಚ್‌ಡಿಕೆ

 ಪಕ್ಷ ಬಿಟ್ಟು ಹೋಗುವವರನ್ನು ಹಿಡಿದಿಟ್ಟುಕೊಳ್ಳಲು ಆಗಲ್ಲ. ಆದರೆ, ಯಾರೂ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗಲ್ಲ ಎಂಬ ವಿಶ್ವಾಸ ನನಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.  ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಇತ್ತೀಚಿಗೆ ಹಲವರು ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರು ಪಕ್ಷದಿಂದ ಏನನ್ನೂ ಪಡೆದಿಲ್ಲವಾ? ನನ್ನಿಂದ ಅವರಿಗೂ ಏನೂ ಕೆಲಸ ಆಗಿಲ್ಲವಾ? ನನಗೆ ಯಾವ ಅಧಿಕಾರವೂ ಬೇಡ. ಪಕ್ಷದವರಿಗಾಗಿ ದುಡಿಯುತ್ತೇನೆ. ಎಲ್ಲಾ ಅಧಿಕಾರವನ್ನು ಅವರೇ ಇಟ್ಟುಕೊಳ್ಳಲಿ ಎಂದು ಎಚ್‌ಡಿಕೆ ಟಾಂಗ್ ನೀಡಿದ್ದಾರೆ.  ಮೈತ್ರಿ ಸರ್ಕಾರ ಪತನದ […]

ಹುಲಿ ಸೆರೆಗೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆ

  ಮೈಸೂರು ಜಿಲ್ಲೆ ಸರಗೂರು ಪಟ್ಟಣದ ಹೊರವಲಯದಲ್ಲಿನ ಜಮೀನಿನಲ್ಲಿ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬುಧವಾರ ಬೆಳಿಗ್ಗೆ ಬಿದ್ದಿದೆ. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ‌ನ ಸಮೀಪದ ಡಿಶ್ ನಾಗೇಶ್ ಅವರ ಜಮೀನಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ೪ ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ.   ಇದನ್ನು ಗಮನಿಸಿದ ನೆರೆಹೊರೆಯವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸಮೇತ ಬೋನನ್ನು ಸುರಕ್ಷಿತ […]

ಡಾ.ವಿಜಯಾ ಆತ್ಮಕಥೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

 ಬರಹಗಾರ್ತಿ ಹಾಗೂ ಹಿರಿಯ ಪತ್ರಕರ್ತರಾದ ಡಾ.ವಿಜಯಾ ಅವರ ‘ಕುದಿ ಎಸರು’ (ಆತ್ಮಕಥೆ) ಕೃತಿಗೆ ೨೦೧೯ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಿಸಿದೆ.  ದಾವಣಗೆರೆಯವರಾದ ಡಾ.ವಿಜಯಾ ಅವರು ಪತ್ರಿಕಾರಂಗದಲ್ಲಿ ಹೆಚ್ಚು ಗುರುತಿಸಿಕೊಂಡವರು. ಪ್ರಜಾಮತ, ಮಲ್ಲಿಗೆ, ತುಷಾರ, ರೂಪತಾರ (ವಾರ ಮತ್ತು ಮಾಸ ಪತ್ರಿಕೆಗಳು) ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ನಂತರ ಉದಯವಾಣಿ ಪತ್ರಿಕೆಯಲ್ಲಿ ಅಂಕಣಕಾರ್ತಿಯಾಗಿ ಹಲವು ಸಮಾಜಮುಖಿ ಮತ್ತು ಸ್ತ್ರೀವಾದ ನಿಲುವಿನ ಬರಹಗಳನ್ನು ಬರೆದಿದ್ದಾರೆ. ಕೆಲವು ಮಹಿಳಾ ಪತ್ರಿಕೆಗಳ ಸಂಪಾದಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ನಡುವೆ ಸಾಹಿತ್ಯ ಕ್ಷೇತ್ರಕ್ಕೂ […]

ಆಂಧ್ರಕ್ಕೆ 3 ರಾಜಧಾನಿಗಳು..!: ದೇಶಕ್ಕೆ ಮಾದರಿಯಾಗುತ್ತಾ ಜಗನ್‍ ಪ್ಲಾನ್..?

   ಜಾತಿ ಸಮೀಕರಣದ ಆಧಾರದ ಮೇಲೆ 5 ಮಂದಿಯನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಿ ದೇಶದ ಗಮನ ಸೆಳೆದಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ ಮೋಹನ್‍ ರೆಡ್ಡಿ ಈಗ ಹೊಸ ಪ್ಲಾನ್‍ ಒಂದನ್ನು ರೆಡಿ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ 3 ರಾಜಧಾನಿಗಳನ್ನು ಮಾಡಿ, ಆಡಳಿತ ಯಂತ್ರವನ್ನು ವಿಕೇಂದ್ರೀಕರಣಗೊಳಿಸಲು ಜಗನ್‍ ಮೋಹನ್‍ ರೆಡ್ಡಿ ಮುಂದಾಗಿದ್ದಾರೆ.   ಅಮರಾವತಿಯನ್ನು ಶಾಸಕಾಂಗದ ರಾಜಧಾನಿಯನ್ನಾಗಿ, ವಿಶಾಖಪಟ್ಟಣಂ ಅನ್ನು ಕಾರ್ಯಾಂಗದ ರಾಜಧಾನಿಯನ್ನಾಗಿ ಹಾಗೂ ಕರ್ನೂಲ್‍ ಅನ್ನು ನ್ಯಾಯಾಂಗದ ರಾಜಧಾನಿಯನ್ನಾಗಿ ಮಾಡಲು ಚಿಂತನೆ ಮಾಡಿದ್ದೇವೆಂದು ಆಂಧ್ರ ಸಿಎಂ ಜಗನ್‍ ತಿಳಿಸಿದ್ದಾರೆ. ಶಾಸನ ಸಭೆಗಳು, […]