You cannot copy content of this page.
. . .

Day: December 17, 2019

ಅಕ್ರಮ ವಲಸೆ ಸಬೀತಾದರೆ ಬಾಂಗ್ಲಾ ನಾಗರಿಕರನ್ನು ವಾಪಸ್ ಕರೆಸಿಕೊಳ್ಳಲು ಸಿದ್ಧ; ಬಾಂಗ್ಲಾ ಪಿಎಂ ಸಲಹೆಗಾರ

 ಬಾಂಗ್ಲಾದ ನಾಗರಿಕರು ಭಾರತಕ್ಕೆ ಅಕ್ರಮ ವಲಸೆ ಬಂದಿದ್ದಾರೆ ಎಂಬುದನ್ನು ಭಾರತ ಸರ್ಕಾರ ಸಬೀತು ಪಡಿಸಿದರೆ, ವಲಸಿಗರನ್ನು ವಾಪಸ್ಸು ಕರೆಸಿಕೊಳ್ಳಲು ಬಾಂಗ್ಲಾ ಸಿದ್ಧವಾಗಿದೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸಲಹೆಗಾರ ಗೌಹರ್ ರಿಜ್ವಿ ಹೇಳಿದ್ದಾರೆ.  ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಆಂತರಿಕ ವಿಚಾರವಾಗಿದೆ. ಹೀಗಾಗಿ, ಬಾಂಗ್ಲಾದಿಂದ ಭಾರತಕ್ಕೆ ಯಾರೇ ಅಕ್ರಮ ವಲಸಿಗರು ಬಂದಿದ್ದರೂ ಅವರನ್ನು ವಾಪಸ್ಸು ಕರೆಸಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.  ‘ಬಾಂಗ್ಲಾದೇಶದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರಿಗೆ ಯಾವುದೇ ಅನ್ಯಾಯ ಆಗಿಲ್ಲ. ಇಲ್ಲಿ […]

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ವಿ.ಶ್ರೀನಿವಾಸ್ ಪ್ರಸಾದ್

 ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮಂಗಳವಾರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.  ಚಿಕಿತ್ಸೆ ನಂತರ ಸಿದ್ದರಾಮಯ್ಯ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಈ ನಡುವೆ ರಾಜಕೀಯ ಮುಖಂಡರು, ಮಠಾಧೀಶರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ಸುಧಾರಣೆ ವಿಚಾರಿಸುತ್ತಿದ್ದಾರೆ.

ಚರಂಡಿ ಕಾಮಗಾರಿ; ಕುಸಿದ ಮಣ್ಣಿನ ಗೋಡೆ

 ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಬಾಕ್ಸ್ ಚರಂಡಿ ಕಾಮಗಾರಿ ನಡೆಯುತ್ತಿದ್ದ ವೇಳೆ ಹಳೇ ಮನೆಯೊಂದರ ಮುಂಭಾಗದ ಮಣ್ಣಿನ ಗೋಡೆ ಕುಸಿದಿರುವ ಘಟನೆ ನಗರದಲ್ಲಿ ನಡೆದಿದೆ.  ಇಲ್ಲಿನ ತಿಲಕ್‌ನಗರದ ೭ನೇ ಮೇನ್‌ನಲ್ಲಿ ಕಳೆದ ವಾರ ನಗರಪಾಲಿಕೆ ಬಾಕ್ಸ್ ಚರಂಡಿ ಕಾಮಗಾರಿ ಕೆಲಸ ಆರಂಭಿಸಿದೆ. ಚರಂಡಿ ನಿರ್ಮಾಣಕ್ಕೆ ಮಣ್ಣು ತೋಡಲಾಗಿತ್ತು. ಮಣ್ಣು ತೋಡಿದ್ದರಿಂದ ಅಡಿಪಾಯ ಸಡಿಲಗೊಂಡು ಜಿ.ಸಾವಿತ್ರಿ ಎಂಬವರ ಹಳೇ ಮನೆಯೊಂದರ ಮುಂಭಾಗದ ಮಣ್ಣಿನ ಗೋಡೆ ಕುಸಿದಿದೆ. ಈ ಮನೆಯಲ್ಲಿ ಸಾವಿತ್ರಿ ಹಾಗೂ ಅವರ ತಂದೆ ಗೋವಿಂದ ಮತ್ತು ತಾಯಿ […]

7 ವರ್ಷದಿಂದ ಶೌಚಾಲಯದಲ್ಲೇ 13 ಜನರ ವಾಸ..!

    ಮೈಸೂರನ್ನು ಮತ್ತೆ ದೇಶದ ಸ್ವಚ್ಛ ನಗರಿ ಮಾಡಲು ಪ್ರಯತ್ನಗಳು ಮುಂದುವರೆದೇ ಇದೆ. ಇಂತಹ ನಗರಿಯಲ್ಲಿ ಕುಟುಂಬವೊಂದು ಕಳೆದ 7 ವರ್ಷಗಳಿಂದ ಶೌಚಾಲಯದಲ್ಲೇ ವಾಸವಾಗಿದೆ ಎಂಬುದು ತಲೆತಗ್ಗಿಸುವ ವಿಚಾರ.    ಮೈಸೂರನ್ನು ಗುಡಿಸಲು ಮುಕ್ತ ನಗರವಾಗಿ ಮಾಡಲು ಕಳೆದ 10 ವರ್ಷಗಳಿಂದ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಈಗಲೂ ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣ ವ್ಯಯವಾಗುತ್ತಿದೆ. ಹೀಗಿದ್ದರೂ ರಾಜೇಂದ್ರ ನಗರದ ಬಳಿ ಇರುವ ಕುರಿಮಂಡಿ ಎ ಬ್ಲಾಕ್​ನಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ 7 ವರ್ಷಗಳಿಂದ ವೃದ್ಧೆ ಸೇರಿ […]

JNU ನಲ್ಲಿ WHATSAPP, E-MAIL ಮೂಲಕ ಪರೀಕ್ಷೆ ಮಾಡ್ತಾರಂತೆ..!

  ನವದೆಹಲಿಯ ಜವಹರಲಾಲ್​ ನೆಹರೂ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರೆಸಿದ್ದಾರೆ. ಜೊತೆಗೆ ಕೊನೆಯ ಸೆಮಿಸ್ಟರ್‍ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪರೀಕ್ಷೆ ಬಹಿಷ್ಕರಿಸುವ ಬೆದರಿಕೆ ಒಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಯ ಆಡಳಿತ ಮಂಡಳಿ, WHATSAPP, E-MAIL ಮೂಲಕ ಪರೀಕ್ಷೆ ನಡೆಸುವ ಅಸಂಬದ್ಧ ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ.   ಶುಲ್ಕ ಹೆಚ್ಚಳದ ಕಾರಣದಿಂದಾಗಿ ವಿದ್ಯಾರ್ಥಿಗಳು ನಡೆಸುತ್ತಿರುವ ಮುಷ್ಕರ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಪರೀಕ್ಷೆ ನಡೆಸುವುದಕ್ಕೆ ತೊಂದರೆಯಾಗುತ್ತದೆ ಎಂದು ಮನಗಂಡ ಆಡಳಿತ ಮಂಡಳಿ ಸೋಮವಾರ […]

ಕಡಲ್ಗಳ್ಳರಿಂದ 20 ಭಾರತೀಯರ ಅಪಹರಣ

  ಆಫ್ರಿಕಾದ ಪಶ್ಚಿಮ ಕರಾವಳಿ ತೀರದ ಬಳಿ ವಾಣಿಜ್ಯ ಹಡಗಿನಲ್ಲಿ   ಪ್ರಯಾಣಿಸುತ್ತಿದ್ದ 20 ಭಾರತೀಯರನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ. 10 ದಿನಗಳ ಹಿಂದೆ ಹಾಂಕಾಂಗ್ ಮೂಲದ ಹಡಗಿನಲ್ಲಿದ್ದ 18 ಮಂದಿ ಭಾರತೀಯರನ್ನು ಕಡಲ್ಗಳ್ಳರು ನೈಜೀರಿಯಾ ಕರಾವಳಿಯಲ್ಲಿ ಅಪಹರಿಸಿದರು. ಈ ಘಟನೆಯ ಬೆನ್ನಲ್ಲೇ ಮತ್ತೊಂದು ಅಪಹರಣವಾಗಿರುವುದು ಆತಂಕಕ್ಕೆ ಕಾರಣವಾಗಿದೆ.  ಈ ಬಗ್ಗೆ ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಅಪಹೃತ ಒತ್ತೆಯಾಳುಗಳ ಬಿಡುಗಡೆಗೆ, ಸುರಕ್ಷತೆಗೆ ವಿಶೇಷ ಗಮನ ಹರಿಸಲಾಗಿದೆ ಎಂದು ಹೇಳಿದ್ದಾರೆ. ಭಾರತ ಸರ್ಕಾರ ಈ […]

‘ಇಂದಿರಾ ಕ್ಯಾಂಟೀನ್’ ಬದಲು ‘ವಾಲ್ಮೀಕಿ ಅನ್ನ ಕುಟೀರ’; ಸರ್ಕಾರದ ಚಿಂತನೆ

  ಬಡವರಿಗೆ ಕಡಿಮೆ ದರದಲ್ಲಿ ಆಹಾರ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇಂದಿರಾ ಕ್ಯಾಂಟೀನ್‍ ಗೆ  ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಎಂದು ಹೆಸರು ಬದಲಾಯಿಸುವ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್‍.ಅಶೋಕ್ ತಿಳಿಸಿದ್ದಾರೆ.   ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಎಂಬ ಹೆಸರಿಡಲು ಮಾಜಿ ಸಚಿವ ರಾಜೂಗೌಡರು ಮನವಿ ಮಾಡಿದ್ದಾರೆ‌. ಅವರ ಮನವಿ ಪರಿಶೀಲನೆ ನಡೆಸಿದ್ದೇವೆ. ಸಿಎಂ ಜೊತೆ […]

ಹೆಸರ ಹಿಂದೆ ಸಾ.ರಾ. ಎಂದಿದ್ದವರೆಲ್ಲಾ ನನ್ನ ಸಹೋದರರು ಆಗಲ್ಲ; ಸಾ.ರಾ. ಮಹೇಶ್ ಗರಂ

 ಸಾಲಿಗ್ರಾಮದಲ್ಲಿ ಆದ ಗುಂಪು ಘರ್ಷಣೆ ಪ್ರಕರಣ ಸಂಬಂಧ ಇನ್ನೂ ಯಾವುದೇ ಶಾಂತಿ ಸಭೆ ನಡೆದಿಲ್ಲ. ಹೆಸರ ಹಿಂದೆ ಸಾ.ರಾ. ಇದ್ದವರೆಲ್ಲ ನನ್ನ ಸಹೋದರರು ಆಗಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಗರಂ ಆಗಿ ನುಡಿದಿದ್ದಾರೆ.  ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲಿಗ್ರಾಮದಲ್ಲಿ ಯಾರ ತಂದೆ ರಾಮೇಗೌಡ ಆಗಿರುತ್ತಾರೋ ಅವರ ಹೆಸರ ಹಿಂದೆ ಸಾ.ರಾ. ಅಂತ ಇರುತ್ತೆ. ಪ್ರಕರಣದಲ್ಲಿ ನನ್ನ ಒಬ್ಬನೇ ಸಹೋದರ ಸಿಲುಕಿರೋದು. ಒಬ್ಬ ಸಹೋದರ ಜಿಪಂ ಸದಸ್ಯ ಆಗಿದ್ದಾನೆ. ಈಗ ಪ್ರಕರಣದಲ್ಲಿ ಸಿಲುಕಿರುವ ಸಹೋದರ ಯಾರು […]

ನಾನೂ ಕೂಡ ಸಚಿವ ಸ್ಥಾನ ಆಕಾಂಕ್ಷಿ; ಅಪ್ಪಚ್ಚು ರಂಜನ್

 ಐದು ಬಾರಿ ಶಾಸಕನಾಗಿ ಗೆದ್ದಿರುವ ನಾನು ಕೂಡ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದೇನೆ ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ.  ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆದ್ದು ಬರುವ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಪಕ್ಷ ಹೇಳಿದೆ. ಅವರಿಗೆ ಸಚಿವ ಸ್ಥಾನ ಕೊಟ್ಟು ಉಳಿದ ಸ್ಥಾನಗಳಲ್ಲಿ ನನಗೂ ಒಂದು ಸಚಿವ ಸ್ಥಾನ ನೀಡಲಿ. ಹಿಂದೆಯೂ ನನಗೆ ಸಚಿವ ಸ್ಥಾನ ಕೈತಪ್ಪಿದೆ. ಈಗಲಾದರೂ ಸಿಗುತ್ತೇ ಎನ್ನುವ ನಿರೀಕ್ಷೆಯಲ್ಲಿದ್ದೇನೆ. ಈ ವಿಚಾರವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು […]

‘ಗೌರಿ’ ಲಂಕೇಶ್ ಹೆಸರಿನಲ್ಲಿ ಟ್ರಸ್ಟ್ ಅಕ್ರಮ; ಇಂದ್ರಜಿತ್ ಆರೋಪ ತಳ್ಳಿ ಹಾಕಿದ ಕವಿತಾ ಲಂಕೇಶ್

 ಗೌರಿ ಲಂಕೇಶ್ ಹೆಸರಿನಲ್ಲಿ ಟ್ರಸ್ಟ್ ಮಾಡಿಕೊಂಡು ಅಕ್ರಮ ನಡೆಸಲಾಗುತ್ತಿದೆ ಎಂಬ ಇಂದ್ರಜಿತ್ (ಗೌರಿ ಸಹೋದರ) ಹೇಳಿಕೆಯನ್ನು, ಕವಿತಾ ಲಂಕೇಶ್ ತಳ್ಳಿಹಾಕಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್, ಕೆಲವರು ಗೌರಿ ಲಂಕೇಶ್ ಹೆಸರಿನಲ್ಲಿ ಟ್ರಸ್ಟ್ ಮಾಡಿಕೊಂಡು ಅಕ್ರಮ ನಡೆಸುತ್ತಿದ್ದಾರೆ. ಸುಮಾರು ೭ ಕೋಟಿ ರೂ. ಚಂದಾ ವಸೂಲಿ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಟ್ರಸ್ಟ್‌ನಲ್ಲಿ ನಮ್ಮ ಕುಟುಂಬದ ಸದಸ್ಯರು ಯಾರೂ ಇಲ್ಲ. ಅನ್ಯರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಟ್ರಸ್ಟ್‌ನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ, ಈ ಬಗ್ಗೆ ಸೂಕ್ತ ತನಿಖೆ ಆಗಬೇಕು […]