You cannot copy content of this page.
. . .

Day: December 16, 2019

ಚೂರಿಯಿಂದ ಇರಿದು ಮಹಿಳೆ ಕೊಲೆ

ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಮಡಿಕೇರಿ ತಾಲ್ಲೂಕಿನ ಜೋಡುಪಾಲದಲ್ಲಿ ಇಂದು ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.   ಜೋಡುಪಾಲದ ಅಬ್ಬಿಕೊಳ್ಳಿ ನಿವಾಸಿ ಹೊನ್ನಮ್ಮ (47) ಕೊಲೆಯಾದ ಮಹಿಳೆ. ಕೃತ್ಯಕ್ಕೆ ಆಸ್ತಿ ವೈಷಮ್ಯ ಕಾರಣ ಎನ್ನಲಾಗಿದೆ. ಹೊನ್ನಮ್ಮ ಅವರ ಸಂಬಂಧಿ ಆನಂದ್ ಎಂಬಾತನೇ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್-ಬೈಕ್ ನಡುವೆ ಡಿಕ್ಕಿ; ೩ ವರ್ಷದ ಮಗು ಸಾವು

 ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಿಂದ ಮೂರು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಕುಶಾಲನಗರದ ಬೈಚನಹಳ್ಳಿ ಬಳಿ ನಡೆದಿದೆ.  ಗೊಂದಿಬಸವನಹಳ್ಳಿ ನಿವಾಸಿಗಳಾದ ಪರಮೇಶ್ವರ್ ಹಾಗೂ ಗೀತಾ ದಂಪತಿ ಕಿರಿಯ ಪುತ್ರ ಪೃಥ್ವಿ(೩) ಸಾವಿಗೀಡಾದ ಮಗು. ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಅದೇ ಮಾರ್ಗವಾಗಿ ಬರುತ್ತಿದ್ದ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಸ್ಕೂಟರ್ ಚಾಲಕ ವಾಹನವನ್ನು ಬಲಬದಿಗೆ ತಿರುಗಿಸುವ ವೇಳೆ ಬಸ್ ಆಗಮಿಸಿದ್ದು, ಈ ಸಂದರ್ಭ ಹಿಂಬದಿ ಚಕ್ರಕ್ಕೆ ಸಿಲುಕಿದ […]

ಗ್ರಾಮಸ್ಥರಿಗೆ ಕಾಟ ಕೊಡುತ್ತಿದ್ದ ಚಿರತೆ ಸೆರೆ

 ಮೈಸೂರು: ಜಾನುವಾರುಗಳನ್ನು ಕೊಂದು ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತೆ ಮಾಡಿದೆ.  ಸರಗೂರು ತಾಲ್ಲೂಕಿನ ಹಂಚಿಪುರ ಗ್ರಾಮದಲ್ಲಿ ತಿಂಗಳಿನಿಂದ ಸಂಜೆ ವೇಳೆ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಜಾನುವಾರುಗಳನ್ನು ಎಳೆದುಕೊಂಡು ಹೋಗಿತ್ತು. ಚಿರತೆ ಉಪಟಳ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಚಿರತೆ ಸೆರೆಗೆ ಅರಣ್ಯಾಧಿಕಾರಿಗಳಿಗೆ ಒತ್ತಾಯ ತಂದಿದ್ದರು. ಮನವಿಗೆ ಸ್ಪಂದಿಸಿದ ಅರಣ್ಯಾಧಿಕಾರಿಗಳ ಜಮೀನೊಂದರಲ್ಲಿ ಬೋನು ಇಟ್ಟಿದ್ದರು. ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಸೆರೆ ಸಿಕ್ಕಿರುವ ಚಿರತೆಯನ್ನು ನಾಗರಹೊಳೆ ಅರಣ್ಯಕ್ಕೆ […]

ಕಾರಂಜಿ ಕೆರೆಯಲ್ಲಿ ಉತ್ಸವದ ವೈಭವ

-ಬಿ.ಎನ್.ಚಂದ್ರಶೇಖರ್  ಸಾಂಸ್ಕೃತಿಕ ನಗರಿ ಮೈಸೂರಿನ ಕಾರಂಜಿ ಕೆರೆಯಲ್ಲಿ ಉತ್ಸವದ ವಾತಾವರಣ ರಂಗೇರಿತ್ತು. ಪ್ರಕೃತಿಯ ಮಡಿಲಲ್ಲಿ ಹಕ್ಕಿಗಳ ಚಿಲಿಪಿಲಿ ಗಾನ ಪರಿಸರ ಪ್ರೇಮಿಗಳ ಕಿವಿಗೆ ಇಂಪೆರೆದಿತ್ತು. ಪ್ರಕೃತಿ ಪ್ರಿಯರು ಕೆರೆಯ ಸೊಬಗನ್ನು ಕಣ್ತುಂಬಿಕೊಂಡರು, ಹಲವರು ದೋಣಿ ವಿಹಾರ ಮಾಡಿದರು. ಕಾರಂಜಿ ಕೆರೆಯಲ್ಲಿ ಉತ್ಸವವೇ ಮೈವೆತ್ತಂತಿತ್ತು.  ೨೦ ವರ್ಷಗಳ ನಂತರ ಹೂಳೆತ್ತಿ ಅಭಿವೃದ್ಧಿಪಡಿಸಲಾದ ಕೆರಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ‘ಕಾರಂಜಿ ಕೆರೆ ಉತ್ಸವದಲ್ಲಿ’ ಪ್ರಕೃತಿ ಪ್ರೇಮಿಗಳು ಮಿಂದೆದ್ದರು. ಜೀವವೈವಿಧ್ಯ ಪುನಶ್ಚೇತನಗೊಂಡಿರುವ ಕಾರಂಜಿಕೆರೆಯಲ್ಲಿ ಯಾವುದೇ ಆಡಂಬರವಿಲ್ಲದೆ ಪರಿಸರಸ್ನೇಹಿಯಾಗಿ ನಡೆಯುತ್ತಿರುವ ಮೊದಲ […]

ವಿದ್ಯುತ್ ಸ್ಪರ್ಶಕ್ಕೆ ಮತ್ತೊಂದು ಕಾಡಾನೆ ಸಾವು

   ವಿದ್ಯುತ್ ಸ್ಪರ್ಶದಿಂದ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಕಾಡಾನೆ ಸಾವನ್ನಪ್ಪಿದೆ. ಮಳವಳ್ಳಿ ತಾಲೂಕು ಹಲಗೂರು ಸಮೀಪದ ಎಚ್.ಬಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಬಸವನಬೆಟ್ಟದ ತಾಳುಬೆಟ್ಟದ ಬಳಿ ಈ ಘಟನೆ ನಡೆದಿದೆ.  ಸುದ್ದಿ ತಿಳಿಯುತ್ತಿದ್ದಂತೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿ ಅವರು, ಹಲಗೂರು ವನ್ಯ ಜೀವಿ ವಲಯ ಬ್ಯಾಡರಹಳ್ಳಿ ಬೀಟ್ , ಬಸವನಹಳ್ಳಿಯ ತಾಳು ಬೆಟ್ಟದ ಹತ್ತಿರ ಇರುವ ಜಮೀನಿನಲ್ಲಿ ರಾಗಿ ಬೆಳೆಯನ್ನು ಬೆಳೆಯಲಾಗಿದೆ. ಐದಾರು […]

ವಿದ್ಯುತ್ ಸ್ಪರ್ಶ; ಲೈನ್‌ಮ್ಯಾನ್ ಸಾವು

 ವಿದ್ಯುತ್ ಕಂಬದಲ್ಲಿ ಲೈನ್ ದುರಸ್ತಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಹರಿದು ಲೈನ್‌ಮ್ಯಾನ್ ಸ್ಥಳದಲ್ಲೇ ಸಾವನಪ್ಪಿದ ಘಟನೆ ಮಡಿಕೇರಿಯ ಚೆಂಬು ಗ್ರಾಮದಲ್ಲಿ ನಡೆದಿದೆ.  ಮಡಿಕೇರಿ ಚೆಸ್ಕಾಂ ವಿಭಾಗದಲ್ಲಿ ಲೈನ್‌ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೂಲತಃ ಅರಸೀಕೆರೆ ಸಮೀಪದ ಕಡೂರು ನಿವಾಸಿಯಾದ ಯೋಗೇಶ್(೨೪) ಎಂಬವರೇ ಮೃತ ದುರ್ದೈವಿ.  ಇಂದು ಬೆಳಿಗ್ಗೆ ೯ ಗಂಟೆಯ ಸಮಯದಲ್ಲಿ ಅಲ್ಲಿನ ಗ್ರಾಮಸ್ಥರು ವಿದ್ಯುತ್ ಸಮಸ್ಯೆಯ ಬಗ್ಗೆ ಯೋಗೇಶ್‌ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಹೀಗಾಗಿ, ಚೆಂಬುವಿಗೆ ತೆರಳಿದ ಯೋಗೇಶ್ ಅಲ್ಲಿನ ಆನೆಹಳ್ಳ ಸಮೀಪದ ಗೋಪಾಲಕೃಷ್ಣ […]

ಸಿದ್ದರಾಮಯ್ಯರನ್ನು ನೋಡಲು ಬಂದ ‘ಹುಲಿಯಾ’

  ಉಪಚುನಾವಣೆಯ ವೇಳೆ ಕಾಗವಾಡದಲ್ಲಿ ಸಿದ್ದರಾಮಯ್ಯರನ್ನು ಹೌದೋ ಹುಲಿಯಾ ಎಂದು ವ್ಯಕ್ತಿಯೊಬ್ಬ ಕರೆದಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ ಆಗಿತ್ತು. ಹುಲಿಯಾ ಎಂದು ಕರೆದಿದ್ದ ವ್ಯಕ್ತಿ ಇಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯರ ಆರೋಗ್ಯ ವಿಚಾರಿಸಿದ್ದಾರೆ. ಈ ವಿಚಾರವನ್ನು ಸ್ವತಃ ಸಿದ್ದರಾಮಯ್ಯ ಅವರೇ ಟ್ವಿಟರ್‍ ನಲ್ಲಿ ಹಂಚಿಕೊಂಡಿದ್ದಾರೆ.

ಉನ್ನಾವೋ ಅತ್ಯಾಚಾರ ಪ್ರಕರಣ; ಶಾಸಕ ಕುಲದೀಪ್‍ ಅಪರಾಧಿ..

 ಉನ್ನಾವೋ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್‍ ಸೆಂಗರ್ ಅಪರಾಧಿ ಎಂದು ದೆಹಲಿ ಕೋರ್ಟ್‍ ತೀರ್ಪು ನೀಡಿದೆ. ಡಿಸೆಂಬರ್‍ 19 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುತ್ತದೆಂದು ಕೋರ್ಟ್‍ ಹೇಳಿದೆ.  ಕಲಂ 376, ಫೋಕ್ಸೋ ಕಾಯ್ದೆಯಡಿ ದೆಹಲಿಯ ತೀಸ್‍ ಹಜಾರಿ ಕೋರ್ಟ್‍ ಈ ತೀರ್ಪು ನೀಡಿದೆ. ಇನ್ನು ಜಾರ್ಜ್‍ ಶೀಟ್‍ ಸಲ್ಲಿಸಲು ವಿಳಂಬ ಬಾಡಿದ್ದಕ್ಕೆ ಸಿಬಿಐ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.  2017ರ ಜೂನ್‍ 14ರಂದು ಕೆಲಸ ಕೇಳಿಕೊಂಡು ಬಂದಿದ್ದ ಅಪ್ರಾಪ್ತ ಬಾಲಕಿ […]

ಮೈಸೂರಿನಲ್ಲೂ ಪೌರತ್ವ ಕಾಯ್ದೆ ವಿರೋಧಿಸಿ ಭಾರೀ ಪ್ರತಿಭಟನೆ

 ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದೆಲ್ಲೆಡೆ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದೆ. ಹಲವೆಡೆ ಹಿಂಸಾಚಾರ ನಡೆಯುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಮೈಸೂರು ನಗರದಲ್ಲೂ ಕಾಯ್ದೆ ವಿರೋಧಿಸಿ ಹಲವಾರು ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದವು.  ನಗರದ ಪುರಭವನದ ಎದುರು ಸೋಮವಾರ ಮೈಸೂರು ಯುನೈಟೆಡ್ ಮುಸ್ಲಿಂ ವೆಲ್‌ಫೇರ್ ಟ್ರಸ್ಟ್ ಸಹಯೋಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾವಣೆಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಅಬ್ದುಲ್ ಮಜೀದ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸುಮಾರು ೫ ಸಾವಿರಕ್ಕೂ […]

ಮದುವೆಗೆ ಚಿನ್ನಾಭರಣ ಮಾಡಿಸಲು ಕಳ್ಳತನಕ್ಕಿಳಿದ ಆಸಾಮಿ..!

 ಮಂಡ್ಯ ಜಿಲ್ಲೆಯಲ್ಲಿ ಎರಡು ಕ್ರಷರ್‍ ಹಾಗೂ ವಿವಿಧೆಡೆ ನಡೆದ ದರೋಡೆ ಪ್ರಕರಣ ಸಂಬಂಧ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 2.10 ಲಕ್ಷ ರೂಪಾಯಿ ನಗದು ಸೇರಿ 9 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಒಬ್ಬ ಆರೋಪಿ ಮದುವೆಗೆ ಚಿನ್ನ ಖರೀದಿಸಲು, ಇನ್ನೊಬ್ಬ ಆರೋಪಿ ಇಎಂಐ ಕಟ್ಟಲು ಹಣವಿಲ್ಲದಿದ್ದಕ್ಕೆ ಕಳ್ಳತನಕ್ಕಿಳಿದಿದ್ದಾರೆಂದು ತಿಳಿದುಬಂದಿದೆ.   ಪಾಂಡವಪುರ ತಾಲ್ಲೂಕಿನ ಹೊನಗಾನಹಳ್ಳಿ ಗ್ರಾಮದ ಎಸ್.ಕೃಷ್ಣ, ಚಿನಕುರುಳಿ ಗ್ರಾಮದ ಸಿ.ಎನ್.ಆಕಾಶ್ ಮತ್ತು ಸಿ.ಎಸ್.ಗುರುಕಿರಣ್, ಮೈಸೂರಿನ ನವಾಜ್, ಹಬೀಬ್‍, ರೋಹನ್ ಮತ್ತು […]