You cannot copy content of this page.
. . .

Day: December 15, 2019

ಕೀಳುಜಾತಿ ಎಂದು ಬಿರಿಯಾನಿ ಮಾರುತ್ತಿದ್ದ ದಲಿತನ ಮೇಲೆ ಹಲ್ಲೆ

 ಜೀವನೋಪಾಯಕ್ಕಾಗಿ ರಸ್ತೆ ಬದಿಯಲ್ಲಿ ಬಿರಿಯಾನಿ ಮಾರುತ್ತಿದ್ದ ವ್ಯಕ್ತಿಯನ್ನು ಕೆಳಜಾತಿ ಎಂಬ ಕಾರಣಕ್ಕೆ ಅಪರಿಚಿತರ ಗುಂಪು ಆತನ ಮೇಲೆ ಹಲ್ಲೆ ನಡೆಸಿ ಅನ್ನವನ್ನು ಚೆಲ್ಲಾಡಿರುವ ಘಟನೆ ಬೆಳಕಿಗೆ ಬಂದಿದೆ.  ದೆಹಲಿಯಿಂದ ಸುಮಾರು 66 ಕಿ.ಮೀ. ದೂರದಲ್ಲಿರುವ ರಾಬುಪುರ ಎಂಬಲ್ಲಿ ಲೋಕೇಶ್ (43) ಎಂಬಾತ ತನ್ನ ಪಾತ್ರೆ ಪರಿಕರಗಳನ್ನು ಇಟ್ಟುಕೊಂಡು ಬಿರಿಯಾನಿ ಮಾರಾಟ ಮಾಡುತ್ತಿದ್ದ. ಈ ವೇಳೆ ಸ್ಥಳಕ್ಕಾಗಮಿಸಿದ ಗುಂಪೊಂದು ಆತನನ್ನು ಯಾವ ಜಾತಿ ಎಂದು ಕೇಳಿದೆ. ತಾನು ದಲಿತ ಎಂದು ಹೇಳುತ್ತಿದ್ದಂತೆ ನೀನು ಕೀಳು ಜಾತಿಯವನು, ಬಿರಿಯಾನಿ ಮಾರಾಟ […]

ಪ್ರಿಯಕರನ ಮರ್ಮಾಂಗ ಕತ್ತರಿಸಿದ ಮಹಿಳೆಗೆ ೧೦ ವರ್ಷ ಶಿಕ್ಷೆ!

 ಮತ್ತೊಬ್ಬಳನ್ನು ವಿವಾಹವಾದ ಸಿಟ್ಟಿಗೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ದ ವೈದ್ಯೆ ಡಾ.ಸೈಯಿದಾ ಅಮಿನಾ ನಹೀಮ್‌ಗೆ (೩೨) ೧೦ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತನಿಗೆ ೨ ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಲಾಗಿದೆ.  ೨೦೦೮ರಲ್ಲಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಪ್ರಕರಣದಲ್ಲಿ ೬೧ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ ಶುಕ್ರವಾರ ಈ ಆದೇಶ ಹೊರಡಿಸಿದ್ದಾರೆ.

ಭಾರತ-ವಿಂಡೀಸ್ ಪಂದ್ಯ; ಮೈದಾನಕ್ಕೆ ನುಗ್ಗಿದ ನಾಯಿ

 ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ನಾಯಿಯೊಂದು ಮೈದಾನದೊಳಗೆ ನುಗ್ಗಿದ ಪರಿಣಾಮ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯಕ್ಕೆ ಕೆಲವು ನಿಮಿಷಗಳ ಕಾಲ ಅಡ್ಡಿಯುಂಟಾಯಿತು.  ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಬ್ಯಾಟಿಂಗ್ ವೇಳೆ ಕೀಮೊ ಪಾಲ್ ಬೌಲಿಂಗ್ ಮಾಡಲು ಸಿದ್ಧತೆ ನಡೆಸಿದ್ದಾಗ ನಾಯಿ ಮೈದಾನದೊಳಗೆ ಪ್ರವೇಶಿಸಿ ಪಂದ್ಯಕ್ಕೆ ಅಡ್ಡಿಪಡಿಸಿತು. ನಾಯಿ ಮೈದಾನದೊಳಗೆ ನುಗ್ಗುತ್ತಿದ್ದಂತೆ ಮೈದಾನದ ಸಿಬ್ಬಂದಿ ನಾಯಿ ಹಿಡಿಯಲು ಪ್ರಯತ್ನಿಸಿದರು. ಈ ನಡುವೆ ವೆಸ್ಟ್ ಇಂಡೀಸ್ ಆಟಗಾರ ಕೂಡ […]

ಗುವಾಹಟಿಯಲ್ಲಿ ಗುಂಡಿನ ದಾಳಿಗೆ ಮತ್ತಿಬ್ಬರ ಸಾವು; 4ಕ್ಕೆ ಏರಿದ ಸಾವಿನ ಸಂಖ್ಯೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭದ್ರತಾ ಪಡೆಯ ಗುಂಡು ತಾಕಿ ಮತ್ತಿಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿದೆ ಎಂದು ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದೆ ಇಬ್ಬರು ಇದೇ ರೀತಿ ಗುಂಡಿನ ದಾಳಿಗೆ ಬಲಿಯಾಗಿದ್ದರು.  ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೂಪರಿಂಟೆಂಡೆಂಟ್‍ ರಮೇಶ್‍ ಪಿಟಿಐಗೆ ಮಾಹಿತಿ ನೀಡಿ, ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈಶ್ವರ್‍ ನಾಯಕ್‍ ಶನಿವಾರ ರಾತ್ರಿ ಸಾವನ್ನಪ್ಪಿದರೆ, ಅಬ್ದುಲ್‍ ಅಲೀಮ್ ಭಾನುವಾರ ಬೆಳಿಗ್ಗೆ ನಿಧನರಾದರು. ಗುಂಡು […]

ಎಚ್.ಡಿ.ರೇವಣ್ಣ ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ; ಶಾಸಕ ನಾರಾಯಣಗೌಡ

 ರೇವಣ್ಣ ಅವರು ಹಾಸನ ಜಿಲ್ಲೆಯನ್ನು ನೋಡಿಕೊಳ್ಳಲಿ. ನಮ್ಮ ಜಿಲ್ಲೆ, ತಾಲ್ಲೂಕು ನೋಡುವ ಅಗತ್ಯವಿಲ್ಲ. ನಮ್ಮ ತಾಲ್ಲೂಕು ಶಾಂತಿಯಾಗಿತ್ತು, ಈಗ ಗೊಂದಲ ಮಾಡಿ ಹೋಗಿದ್ದಾರೆ ಎಂದು ಮಾಜಿ ಸಚಿವ ಎಚ್‍.ಡಿ.ರೇವಣ್ಣ ವಿರುದ್ಧ ಬಿಜೆಪಿ ಶಾಸಕ ಕೆ.ಸಿ.ನಾರಾಯಣಗೌಡ ವಾಗ್ದಾಳಿ ನಡೆಸಿ‍ದ್ದಾರೆ.  ರೇವಣ್ಣನಿಂದ ಪಾಠ ಕಲಿಯುವುದು ಮುಗಿಯಿತು. ನಾನು ಅವರ ಪಕ್ಷದಲ್ಲಿ ಇದ್ದೆ, ಆಗ ನಮ್ಮ ಗುರುಗಳಾಗಿದ್ದರು. ಈಗ ಅವರ ಮಾತು ಕೇಳುವ ಅವಶ್ಯಕತೆ ನಮಗಿಲ್ಲ. ಈಗ ನಮ್ಮ ಹೈಕಮಾಂಡ್ ಇದೆ. ರೇವಣ್ಣ ಹಿರಿಯರು ಎಂಬ ಗೌರವ ಇದೆ. ಗೌರವಯುತವಾಗಿ ನಡೆದುಕೊಂಡ್ರೆ […]

ಬಾಂಗ್ಲಾದ ವಲಸಿಗರನ್ನು ಪ.ಬಂಗಾಳದಲ್ಲೇ ಇರುವಂತೆ ನಿಯಂತ್ರಿಸಿ; ಪೇಜಾವರ ಶ್ರೀ

 ಬಾಂಗ್ಲದೇಶದಿಂದ ವಲಸೆ ಬಂದವರನ್ನು ಪಶ್ಚಿಮ ಬಂಗಾಳದಲ್ಲೇ ಇರುವಂತೆ ನಿಯಂತ್ರಿಸಬೇಕಿದೆ. ಅವರಿಗೆ ಅನ್ಯ ರಾಜ್ಯಗಳಲ್ಲಿ ಆಶ್ರಯ ನೀಡಬಾರದು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.  ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಸುಧಾಮಹಾಮಂಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ಕಾಯ್ದೆ ಜಾರಿಗೆ ಬಂದಿರುವುದು ಅಕ್ರಮ ವಲಸಿಗರನ್ನು ಹೊರಹಾಕುವ ಉದ್ದೇಶಕ್ಕಾಗಿ.‌ ಅನೇಕ ವರ್ಷಗಳಿಂದ‌ ದೇಶದ ವಿವಿಧೆಡೆ ವಾಸಿಸುತ್ತಿರುವ ಬಾಂಗ್ಲಾ ವಲಸಿಗರಿಗೆ ನೂತನ ಕಾಯ್ದೆ ಅನುಕೂಲ ಮಾಡಿಕೊಟ್ಟಿದೆ. ಮುಸ್ಲಿಮರನ್ನು ಹೊರಹಾಕಲಾಗುತ್ತಿದೆ ಎನ್ನುವ ಆತಂಕವನ್ನು ಹರಡುತ್ತಿರುವುದು ಸರಿಯಲ್ಲ […]

ಸಿಲ್ಲಿ-ಲಲ್ಲಿ ಸೀರಿಯಲ್ ಲಲಿತಾಂಬ ಹಾಗೂ ಪ್ರಧಾನಿ ಮೋದಿ ಮಾತಿಗೂ ವ್ಯತ್ಯಾಸವಿಲ್ಲ; ದೇಮ ವ್ಯಂಗ್ಯ

 ಪೌರತ್ವ ತಿದ್ದುಪಡಿಯನ್ನು ಕಾಯ್ದೆಯಾಗಿ ಜಾರಿ ಮಾಡಿದ ಮೇಲೆ ಆತಂಕಗೊಂಡ ಮೋದಿ ಜನರನ್ನು ಉದ್ದೇಶಿಸಿ ‘ಆತಂಕಕ್ಕೆ ಒಳಗಾಗಬೇಡಿ ನನ್ನನ್ನು ನಂಬಿ, ನಾನು ನಿಮ್ಮ ಸೇವಕ’ ಎಂದು ಟ್ವೀಟ್ ಮಾಡಿದ್ದಾರೆ. ಇದು ‘ಸಿಲ್ಲಿ ಲಲ್ಲಿ’ ಧಾರವಾಹಿಯಲ್ಲಿ ಬರುವ ಸಮಾಜ ಸೇವಕಿ ಲಲಿತಾಂಬ ಎನ್ನುವ ಪಾತ್ರದ ಹಾಗೆ ‘ನನ್ನ ನಂಬಿ ಪ್ಲೀಸ್’ ಎನ್ನುವ ಹಾಗಿದೆ ಎಂದು ಸಾಹಿತಿ ದೇವನೂರ ಮಹಾದೇವ ವ್ಯಂಗ್ಯ ಮಾಡಿದ್ದಾರೆ.  ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಜಾರಿಗೆ ತರುತ್ತಿರುವ ಈ ಪೌರತ್ವ ತಿದ್ದುಪಡಿಕಾಯ್ದೆಯಿಂದ […]

ವಿಶ್ವಸುಂದರಿಯಾದ ಜಮೈಕಾದ ಟೋನಿ ಅನ್‍ ಸಿಂಗ್‍; ಭಾರತದ ಸುಮನ್ ರಾವ್‍ ರನ್ನರ್ ಅಪ್

 ಲಂಡನ್‍ನಲ್ಲಿ ನಡೆದ 2019ನೇ ಸಾಲಿನ (69ನೇ ಆವೃತ್ತಿಯ) ವಿಶ್ವಸುಂದರಿ ಸ್ಪರ್ಧೆಯಲ್ಲಿ ಜಮೈಕಾದ ಟೋನಿ ಅನ್​ ಸಿಂಗ್ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಭಾರತದ ಸುಮನ್​ ರಾವ್ ಮೂರನೇ ಸ್ಥಾನ ಪಡೆದು ರನ್ನರ್‍ ಅಪ್‍ ಆಗಿದ್ದಾರೆ. 2017ರಲ್ಲಿ ಆಯ್ಕೆಯಾಗಿದ್ದ ಭಾರತದ ಮಾನುಷಿ ಚಿಲ್ಲರ್ ಅವರಿಂದ ವಿಶ್ವಸುಂದರಿ ಕಿರೀಟವನ್ನು ಅನ್​ ಸಿಂಗ್ ಮುಡಿಗೇರಿಸಿಕೊಂಡರು. ಈ ಬಾರಿ 120 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಅನೇಕ ಸುತ್ತುಗಳ ಸ್ಪರ್ಧೆ ನಡೆಯಿತು. ಫೈನಲ್‍ಗೆ ಜಮೈಕಾದ ಟೋನಿ ಅನ್​ ಸಿಂಗ್, ಭಾರತದ ಸುಮನ್‌ ರಾವ್‌, ಫ್ರಾನ್ಸ್‌ ದೇಶದ […]

ಪಾಕ್‍ ಸೇನೆಯ ಮೇಲೆ ದಾಳಿಗೆ ಭಾರತದ ವಾಯುಸೇನೆ ಸಿದ್ಧವಾಗಿತ್ತು; ಧನೋವಾ

ಭಾರತದ ವಾಯುಸೇನೆ ಬಾಲಾಕೋಟ್ ಮೇಲೆ (ಉಗ್ರರ ಶಿಬಿರ) ದಾಳಿ ಮಾಡಿದ್ದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಸೇನೆ ರೂಪಿಸಿದ್ದ ಕಾರ್ಯತಂತ್ರ ಯಶಸ್ವಿಯಾಗಿದ್ದರೆ, ನಮ್ಮ ಯುದ್ಧವಿಮಾನಗಳು ಪಾಕ್‍ ಸೇನೆಯ ಬ್ರಿಗೇಡ್‍ಗಳ ಮೇಲೆ ದಾಳಿ ಮಾಡುತ್ತಿದ್ದವು ಎಂದು ಭಾರತೀಯ ವಾಯುಸೇನೆಯ ನಿವೃತ್ತ ಮುಖ್ಯಸ್ಥ ಬಿ.ಎಸ್.ಧನೋವಾ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಾಲಾಕೋಟ್ ವಾಯುದಾಳಿ ನಡೆಸುವ ಪ್ರಸ್ತಾವನೆ ಸಮಯದಲ್ಲಿ ಭಾರತ ಎಲ್ಲಾ ರೀತಿಯ ಪ್ರತಿಕ್ರಿಯೆಗಳಿಗೆ ನಾವು ಸಿದ್ದರಾಗಿದ್ದೆವು. ಬಾಲಾಕೋಟ್‍ನಲ್ಲಿ ಉಗ್ರರ ತರಬೇತಿ ಶಿಬಿರ ನಡೆಸುತ್ತಿದ್ದ ಬಗ್ಗೆ ಮಾಹಿತಿ ಭಾರತೀಯ ಸೇನೆಗೆ ಲಭ್ಯವಾಗಿತ್ತು. ಹೀಗಾಗಿ, ದಾಳಿಗೆ […]

ಸ್ಟೇಟಸ್‍ಗೆ ಇನ್ನೊಂದು ಮದುವೆಯಾಗಲು ಹೊರಟ ಐಪಿಎಸ್‍ ಅಧಿಕಾರಿಗೆ ಏನಾಯ್ತು ಗೊತ್ತಾ?

 ಐಪಿಎಸ್‌ಗೆ ಆಯ್ಕೆಯಾದ ಬಳಿಕ ಹಳೇ ಹೆಂಡತಿಗೆ ಡಿವೊರ್ಸ್‍ ನೀಡಿ ತನ್ನ ಸ್ಟೇಟಸ್‍ಗೆ ತಕ್ಕ ಹೊಸ ಹೆಂಡತಿಯನ್ನು ಹುಡುಕಿಕೊಳ್ಳಲು ಮುಂದಾಗಿದ್ದ ಪ್ರೊಬೆಷನರಿ ಅಧಿಕಾರಿಯನ್ನು ಗೃಹ ಇಲಾಖೆ ಅಮಾನತು ಮಾಡಿದೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ 126ನೇ ರ್‍ಯಾಂಕ್‍ ಗಳಿಸಿದ್ದ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕೆ.ವಿ.ಮಹೇಶ್ವರ ರೆಡ್ಡಿ ಅಮಾನತುಗೊಂಡ ಅಧಿಕಾರಿ.  ಸಿಕಂದರಾಬಾದ್‌ನಲ್ಲಿ ರೈಲ್ವೆ ಇಲಾಖೆ ಉದ್ಯೋಗಿಯಾಗಿರುವ ಅವರ ಮೊದಲ ಹೆಂಡತಿ ಬಿರ್ದುಲ ಭವಾನಿ ನೀಡಿದ ದೂರು ಆಧರಿಸಿ ಮಹೇಶ್ವರ ರೆಡ್ಡಿ ಮೇಲೆ ಈಗ ಕೌಟುಂಬಿಕ ದೌರ್ಜನ್ಯ ಮತ್ತು ಜಾತಿನಿಂದನೆ ಪ್ರಕರಣ ದಾಖಲಾಗಿದೆ. 2018ರಲ್ಲಿ ರೆಡ್ಡಿ ಮತ್ತು ಭವಾನಿ […]