You cannot copy content of this page.
. . .

Day: December 14, 2019

ಒಂದು ಧರ್ಮ ಬದಿಗಿಟ್ಟು ಪೌರತ್ವ ಕಾಯ್ದೆ ತಂದಿದ್ದು ಸರಿಯಲ್ಲ : ಸಂತೋಷ್ ಹೆಗ್ಡೆ

 ಪೌರತ್ವ ತಿದ್ದುಪಡಿ ಮಸೂದೆಯಿಂದ ಒಂದು ಧರ್ಮವನ್ನು ಹೊರಗಿಟ್ಟು ಕಾಯ್ದೆ ಜಾರಿಗೆ ತಂದಿರುವುದು ಸರಿಯಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಮಟ್ಟದ 8ನೇ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.   ಬೇರೆ ದೇಶದಲ್ಲಿ ಜೀವಿಸಲು ಸಾಧ್ಯವಾಗದಂತ ಜನರಿಗೆ ಆಶ್ರಯ ನೀಡುವುದು ನಮ್ಮ ಕಾನೂನಿನಲ್ಲಿ ಅವಕಾಶವಿದೆ. ಒಂದು ಜಾತಿ ಹಾಗೂ ಧರ್ಮವನ್ನು ಹೊರಗಿಟ್ಟು ಕಾನೂನು ರೂಪಿಸಬಾರದು. ಎಲ್ಲ ಧರ್ಮದವರೂ ನಮ್ಮ ದೇಶದಲ್ಲಿ ಜೀವಿಸಬಹುದು ಎಂದರು. […]

ರೈಲ್ವೆ ಕಾಮಗಾರಿ ಹಿನ್ನೆಲೆ; ಡಿ.15 ರಂದು ರೈಲು ಸಂಚಾರದಲ್ಲಿ ಬದಲಾವಣೆ

  ಡಿಸೆಂಬರ್‍ 15ರ ಯಶವಂತಪುರದ ಬಳಿ ರೈಲ್ವೇ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೈಸೂರಿನಿಂದ ಯಶವಂತಪುರ ಮಾರ್ಗವಾಗಿ ಸಂಚಾರ ಮಾಡುವ ರೈಲುಗಳ ಮಾರ್ಗ ಬದಲಾವಣೆ ಹಾಗೂ ಮಾರ್ಗದಲ್ಲಿ ಕೆಲ ಭಾಗದ ಸಂಚಾರವನ್ನು ಒಂದು ದಿನದ ಮಟ್ಟಿಗೆ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದರ ವಿವರ ಈ ರೀತಿ ಇದೆ. ಭಾನುವಾರ ರೈಲು ಸಂಚಾರದಲ್ಲಿ ಬದಲಾವಣೆ ರೈಲು ಸಂಖ್ಯೆ; 16023/16024 – ಮೈಸೂರು-ಯಲಹಂಕ ಎಕ್ಸ್‍ ಪ್ರೆಸ್‍ ರೈಲು […]

ಸಲ್ಮಾನ್‍ ಖಾನ್‍ ಮನೆಯಲ್ಲಿ ಟೈಂ ಬಾಂಬ್; ಮುಂದೇನಾಯ್ತು..?

  ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಬಾಂದ್ರಾ ಪೊಲೀಸ್ ಠಾಣೆಗೆ 16 ವರ್ಷದ ಬಾಲಕನೊಬ್ಬ ಬೆದರಿಕೆ ಇ ಮೇಲ್ ಕಳುಹಿಸಿ, ಭೀತಿ ಹುಟ್ಟಿಸಿದ್ದ. ಹುಸಿ ಬೆದರಿಕೆ ಹಾಕಿದ್ದ ಉತ್ತರಪ್ರದೇಶದ ಗಾಜಿಯಾಬಾದ್ ನ ಬಾಲಕ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.   ಮುಂಬೈನ ಬಾಂದ್ರಾ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನಲ್ಲಿರುವ ಸಲ್ಮಾನ್ ಖಾನ್ ಮನೆಯಲ್ಲಿ ಟೈಂ ಬಾಂಬ್ ಇಟ್ಟಿದ್ದು, ಇನ್ನು ಎರಡು ಗಂಟೆಯೊಳಗೆ ಸ್ಫೋಟಗೊಳ್ಳಲಿದೆ ಎಂದು 16 ವರ್ಷದ ಬಾಲಕ ಪೊಲೀಸರಿಗೆ ಇ-ಮೇಲ್ ಕಳುಹಿಸಿದ್ದ.    […]

ಪೌರತ್ವ ತಿದ್ದುಪಡಿ ಕಾಯ್ದೆ ಪರ ಬ್ಯಾಟ್‍ ಮಾಡಿದ ತಸ್ಲಿಮಾ ನಸ್ರಿನ್

  ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಗೆ ಬರಹಗಾರ್ತಿ ತಸ್ಲಿಮಾ ನಸ್ರೀನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಇಂಡಿಯಾ ಟುಡೆ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತಸ್ಲಿಮಾ ನಸ್ರೀನ್, ಈ ಕಾಯ್ದೆ ಮುಸ್ಲಿಂ ವಿರೋಧಿಯಲ್ಲ. ಭಾರತದಲ್ಲಿರುವ ಮುಸ್ಲಿಮರನ್ನು ಭಾರತ ಗಡಿಪಾರು ಮಾಡುತ್ತಿಲ್ಲ ಎಂದು ಹೇಳಿದ್ದಾರೆ.   ಪೌರತ್ವ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ದೊರೆತಿದ್ದಕ್ಕೆ ಸಂತಸವಾಗುತ್ತಿದೆ. ನನ್ನ ರೀತಿಯಲ್ಲಿ ಗಡಿಪಾರಾದ ಜನರಿಗೂ ಪೌರತ್ವ ಸಿಗಬೇಕು. ನನ್ನ ತವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಬಂಗಾಳಕ್ಕೆ ಕೂಡ ಹೋಗಲು ಸಾಧ್ಯವಿಲ್ಲ. ಏಕೆಂದರೆ ನಾನು ಸತ್ಯ ನುಡಿದ ತಪ್ಪಿಗೆ […]

ಸುಳ್ವಾಡಿ ದುರಂತ ಪ್ರಕರಣ; ಶೀಘ್ರದಲ್ಲೇ ಜಮೀನು ಪರಿಹಾರ-ಸುರೇಶ್ ಕುಮಾರ್

   ಸುಳ್ವಾಡಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಜಮೀನು ನೀಡಲು ಖಾಸಗಿಯವರಿಂದ ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್‍.ಸುರೇಶ್‍ ಕುಮಾರ್ ಹೇಳಿದ್ದಾರೆ.   ಸುಳ್ವಾಡಿ ವಿಷ ಪ್ರಾಶಣ ದುರಂತ ನಡೆದು ಇಂದಿಗೆ ಒಂದು ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುರೇಶ್‍ ಕುಮಾರ್‍ ಅವರು, ಮೃತಪಟ್ಟವರ ಕುಟುಂಬಗಳಿಗೆ 2 ಎಕರೆ ಜಮೀನು ನೀಡುವುದಾಗಿ ಹಿಂದಿನ ಮುಖ್ಯಮಂತ್ರಿ ಎಚ್‍.ಡಿ.ಕುಮಾರಸ್ವಾಮಿ ಹೇಳಿದ್ದರು. ಅದರಂತೆ ಜಿಲ್ಲಾಡಳಿತ ಜಮೀನು ಹಂಚಿಕೆ ಮಾಡಲಿದೆ ಎಂದು ಹೇಳಿದ್ದಾರೆ.  ಘಟನೆ […]

ವಂಶಪಾರಂಪರ್ಯ ಹ್ಯಾಂಗ್ ಮ್ಯಾನ್ ಕೆಲಸ; 10 ರೂಪಾಯಿಯಿಂದ ಶುರುವಾದ ಸಂಬಳ..!

   ನಿರ್ಭಯಾ ಹಂತಕರಿಗೆ ಸದ್ಯದಲ್ಲೇ ನೇಣು ಶಿಕ್ಷೆ ಜಾರಿ ಮಾಡಲಾಗುತ್ತದೆ. ಅದಕ್ಕಾಗಿ ಹ್ಯಾಂಗ್‍ ಮ್ಯಾನ್‍ ನ ಹುಡುಕಾಟ ನಡೆಯುತ್ತಿತ್ತು. ಕೊನೆಗೆ ಮೀರತ್‍ ಜೈಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹ್ಯಾಂಗ್‍ ಮ್ಯಾನ್‍ ಪವನ್‍, ನಾಲ್ವರು ಅಪರಾಧಿಗಳಿಗೆ ಕುಣಿಕೆ ಬಿಗಿಯೋಕೆ ರೆಡಿಯಾಗಿದ್ದಾರೆ. ಪವನ್‍ ಕುಟಂಬ ವಂಶಪಾರಂಪರ್ಯವಾಗಿ ಈ ಹ್ಯಾಂಗ್‍ ಮ್ಯಾನ್ ‍ಕೆಲಸ ಮಾಡುತ್ತಿದೆ. ಈ ಕುಟುಂಬದ 3 ತಲೆಮಾರಿನ ಜನ ಇದೇ ಕೆಲಸ ಮಾಡುತ್ತಾ ಬಂದಿದ್ದಾರೆ. ಇಂದಿರಾಗಾಂಧಿ ಹಂತಕರನ್ನು ಗಲ್ಲಿಗೇರಿಸಿದ್ದ ಪವನ್‍ ತಾತ..!  1951 ರಿಂದ ಪವನ್‍ ಕುಟುಂಬ ಹ್ಯಾನ್‍ ಮ್ಯಾನ್‍ […]

3 ವರ್ಷದ ನಂತರ ರಾಜಕೀಯ ದಿಕ್ಕು ನೋಡಿ ನಿರ್ಧಾರ; ಜಿಟಿಡಿ

   ಈಗ ಜೆಡಿಎಸ್‍ ಪಕ್ಷದಲ್ಲಿದ್ದೀನಿ. ಮೂರು ವರ್ಷದ ನಂತರ ರಾಜಕೀಯ ಯಾವ ದಿಕ್ಕಿಗೆ ತಿರುಗುತ್ತೋ ನೋಡೋಣ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.   ಸರ್ಕರ ಉಳಿಸುವ ಬಗ್ಗೆ ನಮ್ಮ ನಾಯಕರೇ ಹೇಳುತ್ತಿದ್ದರು. ಜನರೂ ಅದರ ಪ್ರಕಾರ ಮತ ಹಾಕಿದ್ದಾರೆ ಎಂದರು. ಕರ್ನಾಟಕದಲ್ಲಿ ಜನ ಬುದ್ದಿವಂತರಿದ್ದಾರೆ, ಸುಭದ್ರ ಸರ್ಕಾರ ಬಯಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಜಿ.ಟಿ.ದೇವೇಗೌಡರು ಹೇಳಿದರು. […]

ನಿರ್ಭಯಾ ಹಂತಕರಿಗೆ ಡಿ.16ಕ್ಕೆ ನೇಣು ಶಿಕ್ಷೆ ಇಲ್ಲ..!

  ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಡಿಸೆಂಬರ್ 16ರಂದು ಗಲ್ಲಿಗೇರಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಅದು ವಿಳಂಬವಾಗಲಿದೆ. ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆದೇಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ,ಡಿಸೆಂಬರ್‍ 18ರಂದು ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.   ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇರುವ ಮರು ಪರಿಶೀಲನಾ ಅರ್ಜಿ ಡಿಸೆಂಬರ್ 17ರಂದು ವಿಚಾರಣೆಗೆ ಬರಲಿದೆ. ಅಪೆಕ್ಸ್ ನ್ಯಾಯಾಲಯ […]