You cannot copy content of this page.
. . .

Day: December 13, 2019

ಟಿಯೆಸ್ಸಾರ್, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ

 ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿರುವವರಿಗೆ ನೀಡಲಾಗುವ ಪ್ರತಿಷ್ಠಿತ ಟಿಯೆಸ್ಸಾರ್‍ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕನ್ನಡ ಪತ್ರಿಕೆಯನ್ನು ಹುಟ್ಟು ಹಾಕಿ ಬೆಳೆಸಿದವರಿಗೆ ನೀಡಲಾಗುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.  2017ನೇ ವರ್ಷದ ಟಿಯೆಸ್ಸಾರ್‍‍ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಯು ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆಯ ನಿವೃತ್ತ ಸಂಪಾದಕ ಧ್ರುವರಾಜ್ ವೆಂಕಟರಾವ್ ಮುತಾಲಿಕ್ ದೇಸಾಯಿ ಹಾಗೂ 2018ನೇ ವರ್ಷದ ಪ್ರಶಸ್ತಿಯು ಮೈಸೂರಿನ ಕನ್ನಡಿಗರ ಪ್ರಜಾನುಡಿ ಪತ್ರಿಕೆಯ ಸಂಪಾದಕ ಡಿ.ಮಹಾದೇವಪ್ಪ ಅವರಿಗೆ ಲಭಿಸಿದೆ.  2017ನೇ […]

ಮೂವರು ಸಾಕಾಗಲ್ಲ.. ಇನ್ನೂ ಇಬ್ಬರು DCMಗಳು ಬೇಕು..!

  ಆಂಧ್ರ ಪ್ರದೇಶದಲ್ಲಿ ಸಿಎಂ ಜಗನ್‍ ಮೋಹನ್‍ ರೆಡ್ಡಿ ಜಾತಿ ಆಧಾರದ ಮೇಲೆ ಐವರು ಉಪಮುಖ್ಯಮಂತ್ರಿಗಳನ್ನು ನೇಮಿಸಿಕೊಂಡಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಜಾತಿ ಸಮೀಕರಣ ಮಾಡಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ. ಮುಂದಿನ ವಾರ ದೆಹಲಿಗೆ ತೆರಳಲಿರುವ ಸಿಎಂ ಯಡಿಯೂರಪ್ಪ, ಹೈಕಮಾಂಡ್‍ ಬಳಿ ಇನ್ನೂ ಇಬ್ಬರು ಡಿಸಿಎಂಗಳ ನೇಮಕಕ್ಕೆ ಒಪ್ಪಿಗೆ ಪಡೆಯಲಿದ್ದಾರೆಂಬ ಮಾಹಿತಿ ಇದೆ.   ರಾಜ್ಯದಲ್ಲಿ ಸದ್ಯ ಮೂವರು ಡಿಸಿಎಂಗಳಿದ್ದಾರೆ. ಗಾಣಿಗ ಲಿಂಗಾಯತ ಜನಾಂಗಕ್ಕೆ ಸೇರಿದ ಲಕ್ಷ್ಮಣ ಸವದಿ, ಪರಿಶಿಷ್ಟ ಜಾತಿಗೆ ಸೇರಿದ ಗೋವಿಂದ ಕಾರಜೋಳ […]

ಹುಲಿ ದಾಳಿಗೆ ಹಸು ಬಲಿ; ಪ್ರಾಣಾಪಾಯದಿಂದ ಪಾರಾದ ರೈತ

 ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ನಡೆದಿದೆ.  ಗ್ರಾಮದ ಮಹದೇವಪ್ಪ ತಮ್ಮ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದರು. ಆ ಸಂದರ್ಭದಲ್ಲಿ ಹುಲಿಯೊಂದು ಕಾಣಿಸಿಕೊಂಡಾಗ ಮಹದೇವಪ್ಪ ಕಿರುಚಾಡಿದ್ದಾರೆ. ಹಸುವಿನ ಮೇಲೆ ದಾಳಿ ಮಾಡಿದ ಹುಲಿ ಕುತ್ತಿಗೆ ಭಾಗವನ್ನು ಕಚ್ಚಿ ಸಾಯಿಸಿದೆ. ನಂತರ ಹುಲಿಯು ಅಲ್ಲಿಂದ ಕಾಲ್ಕಿತ್ತಿದೆ. ಭಯಭೀತರಾಗಿ ಅಲ್ಲಿಯೇ ನಿಂತಿದ್ದ ಮಹದೇವಪ್ಪ ಅವರ ಮೇಲೆ ಅದೃಷ್ಟವಶಾತ್ ಹುಲಿ ದಾಳಿ ನಡೆಸಿಲ್ಲ. ರೈತ  ಪ್ರಾಣಾಪಾಯದಿಂದ ಪಾರಾಗಿದ್ದಾರೆ.

11 ತಿಂಗಳಲ್ಲಿ 612 ರೈತರ ಆತ್ಮಹತ್ಯೆ; 2ನೇ ಸ್ಥಾನದಲ್ಲಿ ಮೈಸೂರು..!

  ಬೆಳೆನಷ್ಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಹೆಚ್ಚುತ್ತಲೇ ಇದೆ. 2019ರ ಜನವರಿಯಿಂದ ನವೆಂಬರ್‍ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 612 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ 59 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ಮೈಸೂರು ಜಿಲ್ಲೆಯಲ್ಲಿ 51 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಚಾರ ಆತಂಕಕಾರಿಯಾಗಿದೆ. ಇನ್ನೂ ಮಂಡ್ಯ ಜಿಲ್ಲೆಯಲ್ಲೂ 39 ರೈತರು ಸಾವಿಗೆ ಶರಣಾಗಿದ್ದು, ಈ ಜಿಲ್ಲೆ 5ನೇ ಸ್ಥಾನದಲ್ಲಿದೆ.    ಆತ್ಮಹತ್ಯೆ ಮಾಡಿಕೊಂಡ 612 ರೈತರ […]

ಅತ್ಯಾಚಾರಿಗೆ 21 ದಿನದಲ್ಲಿ ಮರಣದಂಡನೆ; ‘ದಿಶಾ’ ಮಸೂದೆ ಅಂಗೀಕಾರ

 ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ಕೂಡಲೇ ವಿಚಾರಣೆ ನಡೆಸಲು ಹಾಗೂ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಆಂಧ್ರಪ್ರದೇಶದ ವಿಧಾನಸಭೆ ಶುಕ್ರವಾರ ‘ದಿಶಾ’ ಮಸೂದೆ ಅಂಗೀಕರಿಸಿದೆ.  ‘ಎಪಿ ದಿಶಾ ಆಕ್ಟ್‌’ನ ಪ್ರಕಾರ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ದೂರು ದಾಖಲಾದ ಏಳು ದಿನಗಳಲ್ಲಿ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಬಳಿಕ ನ್ಯಾಯಾಲಯ 14 ದಿನಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು. ಒಟ್ಟು 21 ದಿನಗಳ ಒಳಗೆ ಪ್ರಕರಣ ಇತ್ಯರ್ಥವಾಗಬೇಕು ಎಂಬುದು […]

ಸಂಸತ್ ಅಧಿವೇಶನದ ನಂತರ ಸಂಪುಟ ವಿಸ್ತರಣೆ; ಶಾಸಕ ನಾರಾಯಣಗೌಡ

    ಸಂಸತ್‍ ಅಧಿವೇಶನ ಮುಗಿದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಕೆ.ಆರ್‍.ಪೇಟೆಯ ನೂತನ ಶಾಸಕ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಪುಟ ಸೇರಲು ನಮಗೇನೂ ಆತುರವಿಲ್ಲ ಎಂದು ಹೇಳಿದ್ದಾರೆ.   ಉಪಮುಖ್ಯಮಂತ್ರಿ ಪಟ್ಟ ಯಾರಿಗೆ ಅನ್ನೋದರ ಬಗ್ಗೆ ನಾನು ಮಾತಾಡಲ್ಲ ಎಂದ ನಾರಾಯಣಗೌಡರು, ಹುಣಸೂರು ಕ್ಷೇತ್ರ ಸೋಲಿನ ಬಗ್ಗೆ ನೋವಿದೆ ಎಂದರು. ನಾವೆಲ್ಲ ವಿಶ್ವನಾಥ್ ಜೊತೆಗಿದ್ದೇವೆ. ಮುಖ್ಯಮಂತ್ರಿಗಳು ಕೂಡಾ ವಿಶ್ವನಾಥ್ ಕೈ ಬಿಡಲ್ಲ. ಎಂಟಿಬಿ ನಾಗರಾಜ್‍ ಅವರಿಗೂ ಅನ್ಯಾಯವಾಗುವುದಿಲ್ಲ ಎಂದು ತಿಳಿಸಿದರು.

ವರ್ಷದಲ್ಲಿ 1 ಲಕ್ಷ ಸೆಲ್‍ಫೋನ್‍ಗಳು ಮಿಸ್!

 ತಂತ್ರಜ್ಞಾನ ಬೆಳೆದಂತೆ ಸೆಲ್‍ಫೋನ್‍ಗಳ ಬಳಕೆಯೂ ಹೆಚ್ಚಾಗಿದೆ. ಈಗಂತೂ ಎಲ್ಲರ ಕೈಯಲ್ಲೂ ಸ್ಮಾರ್ಟ್‍ಫೋನ್‍ಗಳು ಇರುತ್ತವೆ. ಫೋನ್‍ಗಳ ಸಂಖ್ಯೆ ಹೆಚ್ಚಿದಂತೆ, ಅವುಗಳ ಕಳವು ಪ್ರಕರಣಗಳೂ ಹೆಚ್ಚುತ್ತಿವೆ. ಕರ್ನಾಟಕದ ರಾಜಧಾನಿ, ಸಿಲಿಕಾನ್‍ ಸಿಟಿ ಬೆಂಗಳೂರು ನಗರದಲ್ಲಿ ಒಂದು ವರ್ಷದ ಅವಧಿಯಲ್ಲಿ 1 ಲಕ್ಷ ಮೊಬೈಲ್‍ಗಳು ಕಳವಾಗಿವೆ.  ಇದರಲ್ಲಿ ಕಳ್ಳರ ಕೈಚಳಕ ಮತ್ತು ಆಟೋ, ಕ್ಯಾಬ್‌, ಬಸ್‌, ಹೋಟೆಲ್‌ಗಳಲ್ಲಿ ಜನರು ಮರೆತು ಹೋದ ಮೊಬೈಲ್‌ಗಳು ಸೇರಿವೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕಳವು ಮತ್ತು ನಾಪತ್ತೆ ಪ್ರಕರಣ ನಾಗರಿಕರಿಗೆ ಆತಂಕ ತಂದೊಡ್ಡಿದೆ.  ಬೆಂಗಳೂರು ನಗರ ಪೊಲೀಸರ […]

ಮೈಸೂರು ಸೇರಿ ರಾಜ್ಯದಲ್ಲಿ ಮಳೆ ಸಾಧ್ಯತೆ; ರೈತರಲ್ಲಿ ಆತಂಕ

  ಮೈಸೂರು ಸೇರಿ ರಾಜ್ಯದ ವಿವಿಧ ಕಡೆ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಬೆಂಗಳೂರಿನ ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಮೈಸೂರು ಭಾಗದ ರೈತರಲ್ಲಿ ಆತಂಕ ಶುರುವಾಗಿದೆ. ಮೈಸೂರು, ಮಂಡ್ಯ ಭಾಗದಲ್ಲಿ ಸಾವಿರಾರು ಎಕರೆಯಲ್ಲಿ ಭತ್ತ ಬೆಳೆಯಲಾಗಿದ್ದು ಕಟಾವಿಗೆ ಬಂದಿದೆ. ಈ ವೇಳೆ ಮಳೆ ಬಂದರೆ ಭತ್ತ ಹಾಳಾಗುತ್ತದೆಂಬ ಭೀತಿ ಶುರುವಾಗಿದೆ.   ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, […]

ಬರಿಗೈಯಲ್ಲೇ ಒಳಚರಂಡಿ ಸ್ವಚ್ಛಗೊಳಿಸಿದ ಪೌರಕಾರ್ಮಿಕರು

 ನಗರಸಭೆ ಅಧಿಕಾರಿಗಳು ಪೌರಕಾರ್ಮಿಕರಿಂದ ಬರಿಗೈಯಲ್ಲೇ ಒಳಚರಂಡಿ ಸ್ವಚ್ಛತೆ ಕೆಲಸ ಮಾಡಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.  ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ಮುಖ್ಯರಸ್ತೆಯಲ್ಲಿ ಪೌರಕಾರ್ಮಿಕರು ಕೈಗಳಿಗೆ ಗ್ಲೌಸ್, ಕಾಲಿಗೆ ಬೂಟು ಇಲ್ಲದೇ ಸುಮಾರ 5 ಅಡಿ ಆಳದ ಒಳಚರಂಡಿಯ ಕೊಳಚೆ ಸ್ವಚ್ಛತೆ ಮಾಡಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಎರಡು ದಿನಗಳಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದರೂ ತಿರುಗಿ ನೋಡದ ಜನಪ್ರತಿನಿಧಿಗಳು, ನಗರಸಭೆ ಅಧಿಕಾರಿಗಳು ಪೌರಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸಾವರ್ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಹರಾಜು; ಕನ್ನಡಿಗ ಉತ್ತಪ್ಪಗೆ ಗರಿಷ್ಠ ಬೆಲೆ

 ಡಿಸೆಂಬರ್‍ ನಡೆಯಲಿರುವ ೧೩ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ ರಾಬಿನ್ ಉತ್ತಪ್ಪ ದೇಶೀಯ ಕ್ರಿಕೆಟಿಗರ ಪೈಕಿ ಅತೀ ಹೆಚ್ಚು ೧.೫ ಕೋಟಿ ರೂ. ಮೂಲಬೆಲೆ ಪಡೆದಿದ್ದಾರೆ.  ಕೋಲ್ಕತಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ೩೩೨ ಆಟಗಾರರ ಪಟ್ಟಿ ಇದ್ದು, ವಿದೇಶದ ೭ ಆಟಗಾರರ ಮೂಲ ಬೆಲೆ ಗರಿಷ್ಠ ೨ ಕೋಟಿ ರೂ. ಆಗಿದೆ. ಎಂಟು ಫ್ರಾಂಚೈಸಿಗಳು ತನ್ನ ಆಟಗಾರರನ್ನು ಬಿಡುಗಡೆ ಮಾಡಿದ ಬಳಿಕ ಈ ಬಾರಿಯ ಹರಾಜು ಪ್ರಕ್ರಿಯೆಗೆ ಒಟ್ಟು ೯೯೭ ಆಟಗಾರರ ಹಸರು ನೋಂದಣಿಯಾಗಿತ್ತು. […]