You cannot copy content of this page.
. . .

Day: December 11, 2019

ಆಕಸ್ಮಿಕ ಬೆಂಕಿ; ಸುಟ್ಟು ಕರಕಲಾದ ಆಲೆಮನೆ, ಕಾರು, ಟ್ರ್ಯಾಕ್ಟರ್

 ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಆಲೆಮನೆ, ಟ್ರಾಕ್ಟರ್ ಹಾಗೂ ಕಾರೊಂದು ಸುಟ್ಟು ಭಸ್ಮವಾಗಿರುವ ಘಟನೆ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ.  ಗ್ರಾಮದ ಶಿವಕುಮಾರಸ್ವಾಮಿ ಎಂಬವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಆಲೆಮನೆ ಹಾಗೂ ಅದರೊಳಗೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮತ್ತು ಕಾರು ಬೆಂಕಿಗಾಹುತಿಯಾಗಿದೆ. ಅಂದಾಜು ೫ ಲಕ್ಷ ರೂ. ನಷ್ಟವಾಗಿದೆ.

ಮತ್ತೆ ಆಸ್ಪತ್ರೆಗೆ ದಾಖಲಾದ ಸಿದ್ದರಾಮಯ್ಯ

ಆರೋಗ್ಯ ತಪಾಸಣೆಗೆಂದು ಇಂದು ಬೆಳಗ್ಗೆ ಆಸ್ಪತ್ರೆಗೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ ಆರೋಗ್ಯದಲ್ಲಿ ಮತ್ತೆ ವ್ಯತ್ಯಯವಾಗಿದೆ. ಹೀಗಾಗಿ ಪುನಃ ಅವರು ಮಲ್ಲೇಶ್ವರಂನ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.   ಅಧಿಕ ರಕ್ತದೊತ್ತಡದಿಂದಾಗಿ ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಗಳು ಬರುತ್ತಿರುವುದನ್ನು ಗಮಸಿದ ಸಿದ್ದರಾಮಯ್ಯ ಅವರು ಟ್ವೀಟ್‍ ಮಾಡಿ, ನಾನು ಆರೋಗ್ಯವಾಗಿದ್ದೇನೆ. ರೊಟೀನ್‍ ಚೆಕಪ್‍ ಗಾಗಿ ಆಸ್ಪತ್ರೆಗೆ ತೆರಳಿದ್ದೆ ಎಂದು ಹೇಳಿದ್ದರು. ಆದರೆ ಮಧ್ಯಾಹ್ನ ಮತ್ತೆ […]

ಬೆಂಕಿಯ ಕೆನ್ನಾಲೆಗೆಗೆ ಪ್ರಾವಿಜನ್ ಸ್ಟೋರ್ ‘ಧಗಧಗ’

 ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆ ಸಮೀಪದ ಕಬ್ಬಿನಕಾಡು ಜಂಕ್ಷನ್‌ನ ಅಂಗಡಿ ಮಳಿಗೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.  ನಂದ ಎಂಬುವರಿಗೆ ಸೇರಿದ ಪ್ರಾವಿಜನ್ ಸ್ಟೋರ್ ಇದಾಗಿದ್ದು, ಸುಮಾರು ೩ ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ ಎಂಬ ಶಂಕಿಸಲಾಗಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ‘ಒಡೆಯ’ನ ಭರ್ಜರಿ ಮೆರವಣಿಗೆ –ವಿಡಿಯೋ ಇದೆ

ನಾಳೆ ಚಾಲೆಂಜಿಂಗ್‍ ಸ್ಟಾರ್‍ ದರ್ಶನ್‍ ಅಭಿನಯದ ಒಡೆಯ ಚಿತ್ರ ನಾಳೆ ರಿಲೀಸ್‍ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇವತ್ತೇ ಸಂಭ್ರಮ ಮುಗಿಲು ಮುಟ್ಟಿದೆ. ದರ್ಶನ್‍ ಅಭಿಮಾನಿಗಳು ಮೆರವಣಿಗೆ ನಡೆಸಿ ಸಂಭ್ರಮಿಸಿದ್ದಾರೆ.  ಮೈಸೂರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಚಿತ್ರ ಬಿಡುಗಡೆಯಾಗುವ ಶಾಂತಲಾ ಚಿತ್ರ ಮಂದಿರದವರೆಗೂ ನೂರಾರು ಆಟೋ, ಜಟಕಾ ಬಂಡಿ ಮತ್ತು ಅಲಂಕರಿಸಿದ ರಥದಲ್ಲಿ ಪೋಸ್ಟರ್ ಗಳ ಮೆರವಣಿಗೆ ನಡೆಯಿತು. ನೂರಾರು ಅಭಿಮಾನಿಗಳು ಜೈಕಾರ ಹಾಕುತ್ತಾ, ತಮಟೆ ಬೀಟ್ ಗೆ ಹೆಜ್ಜೆ ಹಾಕಿ ಸಿನಿಮಾಗೆ […]

ವಿದ್ಯುತ್‍ ಸರ್ಕ್ಯೂಟ್‍ನಿಂದ ಕಬ್ಬು ಗದ್ದೆಗೆ ಬೆಂಕಿ; ಬೆಳೆ ನಾಶ

 ವಿದ್ಯುತ್ ಸರ್ಕ್ಯೂಟ್‍ನಿಂದ ಉಂಟಾದ ಬೆಂಕಿಯಿಂದ ಕಬ್ಬಿನ ಗದ್ದೆ ಸುಟ್ಟು ಕರಕಲಾದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನಡೆದಿದೆ.  ತಾಲ್ಲೂಕು ಚಿಕ್ಕಳಲೆ ಗ್ರಾಮದ ಶಿವಲಿಂಗೆಗೌಡ ಎಂಬುವರ ಜಮೀನಿನಲ್ಲಿ ಉಂಟಾದ ಬೆಂಕಿಯಿಂದ ಒಂದು ಎಕರೆಯಷ್ಟು ಕಬ್ಬು ಬೆಳೆ ನಾಶವಾಗಿದೆ. ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟು ವಿಫಲವಾದರು. ತಡವಾಗಿ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಅಷ್ಟರಲ್ಲೇ ಬೆಂಕಿಗೆ ಕಬ್ಬಿನ ಗದ್ದೆ ಆಹುತಿಯಾಗಿತ್ತು.

ನಾನು & ಸಿದ್ದರಾಮಯ್ಯ ಅಣ್ತಮ್ಮಂದಿರು..!: ಕುತೂಹಲದ ಹೇಳಿಕೆ ಕೊಟ್ಟ ವಿಶ್ವನಾಥ್

   ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ನಾನು ಅಣ್ಣ ತಮ್ಮಂದಿರಿದ್ದ ಹಾಗೆ ಎಂದು ಹುಣಸೂರು ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ವಿಶ್ವನಾಥ್‍ ಅವರು ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.   ಸಿದ್ದರಾಮಯ್ಯ ಹಾಗೂ ನಾನು ಕುರುಬ ಸಮುದಾಯಕ್ಕೆ ಸೇರಿದವರು. ನಮ್ಮದು ಒಂದು ರೀತಿಯಲ್ಲಿ ಸಹೋದರರ ನಡುವಿನ ಕಿತ್ತಾಟ. ಅದು ಬಿಟ್ಟರೆ ನಾವು ಅಣ್ಣ ತಮ್ಮಂದಿರಂತೆ ಎಂದು ಮಾಧ್ಯಮಗಳ ಪ್ರಶ್ನೆಗೆ ವಿಶ್ವನಾಥ್ ಉತ್ತರಿಸಿದ್ದಾರೆ. ಕಾಂಗ್ರೆಸ್‍ ತೊರೆದ ದಿನದಿಂದ ವಿಶ್ವನಾಥ್‍ ಅವರು […]

ಹಾಡಹಗಲೇ ಅಪರಿಚಿತರಿಂದ ಹಸುಳೆಯ ಅಪಹರಣ

 ಹಾಡಹಗಲೇ ಮನೆಯೊಳಗಿದ್ದ ಮಗುವನ್ನು ಅಪರಿಚಿತರು ಅಪಹರಿಸಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.  ಚಿಕ್ಕಪೇಟೆ ನಿವಾಸಿ ನೆಸ್ಲಿ ಪಿಂಟೋ ಅವರ ಲೈನ್ ಮನೆಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಅನ್ವರ್ ಹುಸೇನ್ ಮತ್ತು ಅಬಿಜಾ ಕೌತಮ್ ದಂಪತಿಯ ೧೫ ದಿನಗಳ ಹಸುಗೂಸು ಮುಸ್ತಾಕಿ ಅನ್ವರಿ ಅಪಹರಣವಾದ ಮಗು. ಇರಕೆಬಾರಿ ಉದಲ್ಕುರಿ ತಾಲ್ಲೂಕುವಿನ ರೌಹುತಾ ಜಿಲ್ಲೆ ಅಸ್ಸಾಂ ರಾಜ್ಯದಿಂದ ಕೂಲಿ ಕೆಲಸಕ್ಕಾಗಿ ಈ ದಂಪತಿ ವಿರಾಜಪೇಟೆಗೆ ಬಂದು ನೆಲೆಸಿದ್ದರು.  ಮಗುವನ್ನು ಮಲಗಿಸಿ ತಾಯಿ  ಮನೆಯ ಹಿಂದುಗಡೆ ಬಟ್ಟೆ ಒಗೆಯಲು ಹೋಗಿದ್ದಾರೆ. […]

ರಾಮದಾಸ್ ಗೆ ಸಚಿವಗಿರಿ ನೀಡಲು ಒತ್ತಡ

  ಮಾಜಿ ಸಚಿವ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‍.ಎ.ರಾಮದಾಸ್‍ ಅವರಿಗೆ ಸಚಿವ ಸ್ಥಾನ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಉಪಚುನಾವಣೆಯಲ್ಲಿ ಗೆದ್ದ ವಲಸೆ ಶಾಸಕರಿಗೆ ಸಚಿವ ಗಿರಿ ನೀಡಲು ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ. ಈ ವೇಳೆ ರಾಮದಾಸ್‍ ಅವರಿಗೂ ಸಚಿವ ಸ್ಥಾನ ನೀಡುವಂತೆ ರಾಮದಾಸ್‍ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.   ಉಪಚುನಾವಣೆ ಫಲಿತಾಂಶ ಪ್ರಕಟಗೊಂಡ ದಿನದಿಂದ ಫೇಸ್‍ ಬುಕ್‍, ಟ್ವಟಿರ್‍ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ರಾಮದಾಸ್‍ ಗೆ ಸಚಿವಗಿರಿ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಅವರ ಅಭಿಮಾನಿಗಳು […]

ನೇಣಿಗೆ ಶರಣಾದ ಗರ್ಭಿಣಿ; ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

 ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.  ಎಚ್‍.ಆರ್.ಬಿಂದು ನೇಣಿಗೆ ಶರಣಾದ ಮಹಿಳೆ. ಎಂಟು ತಿಂಗಳ ಹಿಂದಷ್ಟೇ ಸರಗೂರು ತಾಲ್ಲೂಕಿನ ಹಳೆಯೂರು ಗ್ರಾಮದ ಗುರುಸ್ವಾಮಿ ಎಂಬುವರೊಂದಿಗೆ ವಿವಾಹವಾಗಿದ್ದರು. ಆತ್ಮಹತ್ಯೆಗೆ ಶರಣಾದ ಮಹಿಳೆ ಗರ್ಭಿಣಿಯಾಗಿದ್ದರು.  ವರದಕ್ಷಿಣೆಗಾಗಿ ಕೊಲೆ- ಆರೋಪ: ವರದಕ್ಷಿಣೆ ತರಲಿಲ್ಲ ಎಂದು ಗಂಡನ ಮನೆಯವರು ನನ್ನ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಬಿಂದು ಕುಟುಂಬದವರು ಸರಗೂರು ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಸರಗೂರು […]

ವಿಶ್ವನಾಥ್ ಗಾಗಿ ಇವರು ಪರಿಷತ್ ಸ್ಥಾನ ಬಿಟ್ಟುಕೊಡ್ತಾರಾ..?

   ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾದವರ ಪರವಾಗಿ ಸಿಎಂ ಯಡಿಯೂರಪ್ಪ ಗಟ್ಟಿಯಾಗಿ ನಿಂತಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದು ಅರ್ಹರಾಗಿರುವ 11 ಶಾಸಕರನ್ನು ಕೊಟ್ಟ ಮಾತಿನಂತೆ ಮಂತ್ರಿಗಳನ್ನಾಗಿ ಮಾಡುವುದಕ್ಕೆ ಸಿಎಂ ಸಿದ್ಧತೆ ನಡೆಸಿದ್ದಾರೆ. ಈ ನಡುವೆಯೇ ಚುನಾವಣೆಯಲ್ಲಿ ಪರಾಭವಗೊಂಡು ಅನರ್ಹರಾಗಿಯೇ ಉಳಿದಿರುವ ಎಂಟಿಬಿ ನಾಗರಾಜ್‍ ಹಾಗೂ ಅಡಗೂರು ಎಚ್‍.ವಿಶ್ವನಾಥ್‍ ರನ್ನೂ ಕೈಬಿಡದಿರಲು ಸಿಎಂ ನಿರ್ಧರಿಸಿದ್ದಾರೆ. ಇಬ್ಬರು ಹಾಲಿ ವಿಧಾನ ಪರಿಷತ್‍ ಸದಸ್ಯರಿಂದ ರಾಜೀನಾಮೆ ಕೊಡಿಸಿ, ಆ ಸ್ಥಾನಗಳಿಗೆ ಎಂಟಿಬಿ ಹಾಗೂ ವಿಶ್ವನಾಥ್‍ ರನ್ನು ಆಯ್ಕೆ ಮಾಡಿಸಿ, […]