You cannot copy content of this page.
. . .

Day: December 10, 2019

ಬಂಡೀಪುರ ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಕಳೇಬರ ಪತ್ತೆ

ಎಚ್.ಡಿ.ಕೋಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಎನ್.ಬೇಗೂರು ವಲಯದ ಅರಣ್ಯ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಕಳೇಬರ ಪತ್ತೆಯಾಗಿದೆ. ಇದು ಸುಮಾರು 7-8 ವರ್ಷದ ಗಂಡು ಹುಲಿಯಾಗಿದ್ದು, ಮತ್ತೊಂದು ಪ್ರಬಲವಾದ ಹುಲಿಯೊಡನೆ ಜಗಳವಾಡಿ ಸಾವನಪ್ಪಿರಬಹುದು. ಸಾವನಪ್ಪಿ 6-7 ದಿನಳಾಗಿರಬಹುದು ಎಂದು ಪಶುವೈದ್ಯ ಡಾ.ನಾಗರಾಜು ತಿಳಿಸಿದ್ದಾರೆ. ಸ್ಥಳಕ್ಕೆ ಬಂಡೀಪುರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ, ಮೈಸೂರು ವಿಭಾಗದ ಗೌರವ ವನ್ಯಜೀವಿ ಪರಿಪಾಲಕರು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿ ಕೃತಿಕ ಆಲನಹಳ್ಳಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ […]

ಡೊಳ್ಳು ಕುಣಿತಕ್ಕೆ ರಷ್ಯನ್ನರ ಸಖತ್‍ ಸ್ಟೆಪ್!

ಮೈಸೂರಿನ ಸರಸ್ವತಿಪುರಂನಲ್ಲಿರುವ ಯುತ್ ಹಾಸ್ಟೆಲ್‍ನಲ್ಲಿ ಮಂಗಳವಾರ ನಡೆದ ಇಂಡೋ-ರಷ್ಯಾ ಯುವಜನ ವಿನಿಮಯ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತಕ್ಕೆ ರಷ್ಯಾ ತಂಡದವರು ಕುಣಿದು ಕುಪ್ಪಳಿಸಿದರು. https://youtu.be/u1hklq-VFMI

ಉನ್ನಾವ್‍; ತೀರ್ಪು ಕಾಯ್ದಿರಿಸಿದ ದೆಹಲಿ ಕೋರ್ಟ್

ಬಿಜೆಪಿ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‍ ಮುಖ್ಯ ಆರೋಪಿಯಾಗಿರುವ ಉನ್ನಾವ್‍ ಅತ್ಯಾಚಾರ ಪ್ರಕರಣದ ತೀರ್ಪನ್ನು ದೆಹಲಿ ನ್ಯಾಯಾಲಯ ಕಾಯ್ದಿರಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಲಯ ತನ್ನ ತೀರ್ಪನ್ನು ಡಿ.16ರಂದು ಉಚ್ಚರಿಸಲಿದೆ. 2017ರಲ್ಲಿ ಉನ್ನಾವ್‍ ಬಳಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಬಿಜೆಪಿ ಶಾಸಕ ಕುಲದೀಪ್‍ ಸಿಂಗ್ ಅತ್ಯಾಚಾರದ ಪ್ರಮುಖ ಆರೋಪಿಯಾಗಿದ್ದರು. ಅತ್ಯಾಚಾರಿಗಳ ವಿರುದ್ಧ ಕ್ರಮಜರುಗಿಸುವಂತೆ ಸಂತ್ರಸ್ತೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‍ ಮನೆ ಎದುರು ಆತ್ಯಹತ್ಯೆಗೆ ಯತ್ನಿಸಿದ್ದರು. ಈ ನಡುವೆ ಸಂತ್ರಸ್ತೆ ಮೇಲೆ ಮತ್ತೊಮ್ಮೆ ಅತ್ಯಾಚಾರ […]

ಇದು RESERVU BANK ಕರೆನ್ಸಿ..!: ಹಂಚಿಕೆಯಾಯ್ತಾ ನಕಲಿ ನೋಟು..?

     15 ಕ್ಷೇತ್ರಗಳಿಗೆ ನಡೆ ಉಪಚುನಾವಣೆಯಲ್ಲಿ ಕೋಟಿ ಕೋಟಿ ಹಣ ಹರಿದಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದರಲ್ಲಿ ನಕಲಿ ನೋಟುಗಳೂ ಚಲಾವಣೆಯಾಗಿರುವ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಸಾಕ್ಷಿ ವಿಜಯನಗರ ಕ್ಷೇತ್ರದಲ್ಲಿ ಸಿಕ್ಕಿರುವ 500 ರೂಪಾಯಿಯ ನಕಲಿ ನೋಟು.    RESERVE BANK OF INDIA ಎಂದು ಇರಬೇಕಾದ ಜಾಗದಲ್ಲಿ RESERVU BANK OF INDIA ಎಂದು ನಮೂದಿಸಲಾದ 500 ರೂಪಾಯಿ ಮುಖಬೆಲೆಯ ನೋಟು ಹೊಸಪೇಟೆಯಲ್ಲಿ ಪತ್ತೆಯಾಗಿದೆ. ಮತದಾರರಿಗೆ ಹಂಚಿಕೆಯಾಗಿದ್ದ ಹಣದಲ್ಲೇ ಈ ನೋಟು ಬಂದಿದೆ ಎಂದು ಹೇಳಲಾಗಿದೆ. […]

ಏರ್ಪೋರ್ಟ್‍ನಲ್ಲಿ ಧೋನಿ ಲಗೇಜ್ ಅದಲುಬದಲು!

 ಕೊಲ್ಕತ್ತಾದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಲಗೇಜ್ ‌ಅನ್ನು ಮತ್ತೊಬ್ಬ ಪ್ರಯಾಣಿಕ ತೆಗೆದುಕೊಂಡು ಹೋಗಿರುವ ಘಟನೆ ತಡವಾಗಿ ವರದಿಯಾಗಿದೆ.  ಧೋನಿ ಸೋಮವಾರ ದೆಹಲಿಯಿಂದ ಹೊರಡುವ ಸಂದರ್ಭದಲ್ಲಿ ಅವರು ಸರಕು-ಸಾಗಾಣೆ ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳುವಾಗ ಮತ್ತೊಬ್ಬ ವ್ಯಕ್ತಿ ಅಲ್ಲಿದ್ದರು. ಆಗ ಧೋನಿ ಲಗೇಜ್‌ ಆ ಪ್ರಯಾಣಿಕನ ಹೆಸರಿನಲ್ಲಿ ನೋಂದಣಿಯಾಗಿದೆ. ಆದ್ದರಿಂದ ಈ ಪ್ರಹಸನ ನಡೆದಿದೆ. ಆದರೆ, ಈ ವಿಚಾರ ಕೋಲ್ಕತ್ತಗೆ ಬಂದಿಳಿದ ಬಳಿಕ […]

ದುಬಾರೆಯಲ್ಲಿ ಪ್ರವಾಸಿಗರು-ಅರಣ್ಯ ಸಿಬ್ಬಂದಿ ನಡುವೆ ಮಾರಾಮಾರಿ!

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದುಬಾರೆ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಹಾಗೂ ಅರಣ್ಯ ಸಿಬ್ಬಂದಿ ನಡುವೆ ಮಾರಾಮಾರಿಯಾಗಿದೆ. ಈ ನಡುವೆ ಸಿಬ್ಬಂದಿ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿದ್ದಾರೆ. ಅರಣ್ಯ ಇಲಾಖೆ ದಿನಗೂಲಿ ನೌಕರ ರವಿ ತಮ್ಮಯ್ಯ, ರಮೇಶ್‍ ಎಂಬುವರೇ ಹಲ್ಲೆಗೊಳಗಾದ ಸಿಬ್ಬಂದಿ. ದುಬಾರೆ ಪ್ರವಾಸಿ ತಾಣದ ಆನೆ ಕ್ಯಾಂಪ್ ಗೆ ಬೋಟ್ ನಲ್ಲಿ ತೆರಳುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದೆ ಎನ್ನಲಾಗಿದೆ. ಮಂಗಳೂರಿನಿಂದ ಬಸ್ ನಲ್ಲಿ ಬಂದಿದ್ದ ಪ್ರವಾಸಿಗರು‌ ಬಂದಿದ್ದರು. ಸಮಯ ಮೀರಿದ ಹಿನ್ನೆಲೆಯಲ್ಲಿ ಬೋಟ್ ನಲ್ಲಿ ಕರೆದೊಯ್ಯಲು […]

ಅರ್ಜುನ್‍ ಗುರೂಜಿ ಭೇಟಿ ಮಾಡಿದ ಹುಣಸೂರು ಶಾಸಕ

    ಉಪಚುನಾವಣೆಯಲ್ಲಿ ಗೆದ್ದ ಬಳಿಕ ಹುಣಸೂರು ಕಾಂಗ್ರೆಸ್‍ ವಿಜೇತ ಅಭ್ಯರ್ಥಿ ಎಚ್.ಪಿ‌.ಮಂಜುನಾಥ್ , ಮೈಸೂರಿನ ಅರ್ಜುನ್ ಗುರೂಜಿ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಪತ್ನಿ ಸುಪ್ರಿಯಾ ಜೊತೆ ಎಚ್‍.ಪಿ.ಮಂಜುನಾಥ್‍ ಆಗಮಿಸಿ, ಗುರೂಜಿ ಜೊತೆ ಕೆಲಹೊತ್ತು ಗುಪ್ತವಾಗಿ ಮಾತುಕತೆ ನಡೆಸಿದರು.   ನಂತರ ಮಾತನಾಡಿದ ಎಚ್‍.ಪಿ.ಮಂಜುನಾಥ್‍, ಕೆಲ ಘಟನೆಗಳಿಂದ ಸಿದ್ದರಾಮಯ್ಯ ಅವರಿಗೆ ನೋವಾಗಿರುವುದು ನಿಜ. ಕಾಂಗ್ರೆಸ್‍ ಹಿರಿಯ ನಾಯಕರು ಎಲ್ಲವನ್ನೂ ಸರಿಪಡಿಸುತ್ತಾರೆ ಎಂದರು.

ಸೋಲು ಏಕಾಯ್ತು..? ಎಲ್ಲಾನೂ ಬಿಚ್ಚಿಡ್ತೀನಿ..; ಡಿ.ಕೆ.ಶಿವಕುಮಾರ್

  ಉಪಚುನಾವಣೆಯಲ್ಲಿ ಕಾಂಗ್ರೆಸ್‍ ಹೀನಾಯವಾಗಿ ಸೋಲೋದಕ್ಕೆ ಕಾರಣ ಏನು ಎಂಬುದನ್ನು ಶೀಘ್ರದಲ್ಲೇ ಎಲ್ಲರ ಮುಂದಿಡುತ್ತೇನೆ ಎಂದು ಕಾಂಗ್ರೆಸ್‍ ಡಿ.ಕೆ.ಶಿವಕುಮಾರ್‍ ಹೇಳಿದ್ದಾರೆ.   ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಹೀನಾಯ ಸೋಲಾಗಿದ್ದಕ್ಕೆ ಕಾರಣ ನಾನು ಈಗಲೇ ಹೇಳುವುದಿಲ್ಲ. ಏನಾಯ್ತು, ಹೇಗಾಯ್ತು ಎಲ್ಲದರ ಬಗ್ಗೆ ಹೇಳುತ್ತೇವೆ. ಎಲ್ಲರ ಮುಂದೆ ಎಲ್ಲವನ್ನೂ ಸಂಪೂರ್ಣವಾಗಿ ಹೇಳ್ತೇನೆ ಎಂದರು.

ಕಾವೇರಿ ನದಿಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕು ತಲಕಾಡಿನ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಮಂಗಳವಾರ ನಡೆದಿದೆ. ಬೆಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಗಳಾದ ಆಲ್ಫ್ರೆಡ್‍ ವಿಜಯ್‍ ಹಾಗೂ ಹೇಮಂತ್‍ ನೀರುಪಾಲಾದವರು ಎನ್ನಲಾಗಿದೆ. ಬೆಂಗಳೂರಿನ ಹೆಬ್ಬಾಳ್‍ ಬಳಿಯ ಕಾಲೇಜಿನ ಐವರು ವಿದ್ಯಾರ್ಥಿಗಳು ತಲಕಾಡು ಬಳಿಯ ನಿಸರ್ಗ ಧಾಮಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದರು. ಈ ವೇಳೆ ಐವರೂ ನದಿಯಲ್ಲಿ ಈಜಲು ತೆರಳಿದ್ದಾರೆ. ಆಗ ಈ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ತಲಕಾಡು ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೆರೆಗೆ ಹೊಡಿ ಗೋಲಿ.. ಚಿತ್ರಕ್ಕೆ ಇಡಿ ಕೋಟಿ ಚುಕ್ಕಿ..!

    ಗೆರೆ ಗೀಚದೆ ಚಿತ್ರ ಬಿಡಿಸೋದಕ್ಕೆ ಆಗುತ್ತದಾ..? ಬರೀ ಚುಕ್ಕಿಗಳಲ್ಲೇ ಕಲಾಕೃತಿ ಅರಳುತ್ತಾ..? ಕಲಾವಿದ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು.. ಹೇಗೆ ಬೇಕಾದರೂ ಕಲಾಕೃತಿ ಅರಳಿಸಬಹುದು.. ಚುಕ್ಕಿಗಳಲ್ಲಿ ವಿಧವಿಧವಾದ ರಂಗೋಲಿ ಬಿಡಿಸುತ್ತಾರೆ ಎನ್ನುವುದಾದರೆ, ಅದೇ ಚುಕ್ಕಿಯಲ್ಲಿ ಕಲಾಕೃತಿ ಯಾಕೆ ರಚಿಸಬಾರದು ಅನ್ನೋ ಪ್ರಶ್ನೆ ಮೈಸೂರಿನ ಕಲಾವಿದ ಮೋಹನ್ ವರ್ಣೇಕರ್ ಅವರ ಮನಸಲ್ಲಿ ಮೂಡಿತ್ತು.. ಆ ಪ್ರಶ್ನೆಗೆ ಉತ್ತರವೇ ಈ ಕಲಾಕೃತಿಗಳು..!   ಮೋಹನ್ ವರ್ಣೇಕರ್‍ ಅವರು ವಿಧಾನಸೌಧದಲ್ಲಿ ಅಧಿಲೇಖನಾಧಿಕಾರಿಯಾಗಿದ್ದವರು. ನಿವೃತ್ತಿಯಾದ ಬಳಿಕ ಈಗ ಮೈಸೂರಿನಲ್ಲಿ […]