You cannot copy content of this page.
. . .

Day: December 9, 2019

ಕಾಂಗ್ರೆಸ್—ಜೆಡಿಎಸ್‍ ಟೀಕೆ ಮಾಡಲ್ಲ, ಅಭಿವೃದ್ಧಿಯೇ ಗುರಿ; ಬಿಎಸ್‍ವೈ

 ಕಾಂಗ್ರೆಸ್‍—ಜೆಡಿಎಸ್‍ ಟೀಕೆಯಿಂದ ಯಾವುದೇ ಸಾಧನೆ ಸಾಧ್ಯವಿಲ್ಲ. ಅವರು ದೈನೇಸಿ ಸ್ಥಿತಿಯಲ್ಲಿದ್ದಾರೆ. ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿಯಾಗಿದ್ದು, ದೇಶದಲ್ಲೇ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸುವ ಕಡೆ ಗಮನಹರಿಸಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.  ಫಲಿತಾಂಶ ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟನೆ  ಉಪಯೋಗಿಸಿಕೊಂಡು ಶ್ರಮವಹಿಸಿದ ಪರಿಣಾಮ ನಾವು 12 ಸ್ಥಾನ ಗೆದ್ದಿದ್ದೇವೆ. ವಿಧಾನಸಭೆ ಹಂತದಲ್ಲಿ 40-50 ಸಾವಿರ ಲೀಡ್‍ನಲ್ಲಿ ಗೆದ್ದಿದ್ದೇವೆ. ಇದು ಸಾಧನೆ ಇದರಿಂದ ಕಾಂಗ್ರೆಸ್‍—ಜೆಡಿಎಸ್‍ ಸ್ಥಿತಿ ಏನಾಗಬಹುದು ಊಹಿಸಿ. ಕಾಂಗ್ರೆಸ್‌, ಜೆಡಿಎಸ್‌ ಬಗ್ಗೆ ಟೀಕೆ ಮಾಡುವುದರಿಂದ ನಮಗೆ ಲಾಭವಿಲ್ಲ. […]

ಅನರ್ಹರಿಗೆ ಮಣೆ ಹಾಕಿದ್ದೀರಿ, ‘ಮಾಡಿದ್ದುಣ್ಣೋ ಮಾರಾಯಾ’- ಪ್ರಕಾಶ್‍ ರಾಜ್

 ಅತ್ತ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಿಂದ ಬಹುಮತ ಸಾಧಿಸಿದರೆ, ಇತ್ತ ಫಲಿತಾಂಶ ಕುರಿತು ಪ್ರಮುಖ ವ್ಯಕ್ತಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.  ಚಲನಚಿತ್ರ ನಟ ಪ್ರಕಾಶ್‍ ರಾಜ್‍ ಫಲಿತಾಂಶದ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ‘ಕರ್ನಾಟಕಕ್ಕೆ ಶುಭವಾಗಲಿ. ಬೆನ್ನಿಗೆ ಚೂರಿ ಹಾಕುವವರು ಮತ್ತೆ ಮುನ್ನಲೆಗೆ ಬಂದಿದ್ದಾರೆ. ಅವರು ಮತ್ತೆ ನಿಮಗೆ ಮೋಸ ಮಾಡಲಾರರು ಎಂದು ಭಾವಿಸಿದ್ದೇನೆ. ಅನರ್ಹರಿಗೆ ಮಣೆ ಹಾಕಿದ್ದೀರಿ.. ಒಳಿತಾಗಲಿ.. ‘ಮಾಡಿದ್ದುಣ್ಣೋ ಮಾರಾಯ’ ಈ ಮಾತು ಯಾರಿಗೆ ಅನ್ವಯಿಸುತ್ತೊ ಕಾದು ನೋಡೋಣ’ ಎಂದು ಜನರ ತೀರ್ಮಾನವನ್ನು ವ್ಯಂಗ್ಯ ಮಾಡಿ […]

‘ಸ್ವಾಭಿಮಾನ’ಕ್ಕೆ ಸೋಲೇ ಇಲ್ಲವೇ..?

     ಹಣದ ಮುಂದೆ ಏನೂ ನಡೆಯೋದಿಲ್ಲ ಅಂತಾರೆ. ಅದರಲ್ಲೂ ಚುನಾವಣೆಗಳಲ್ಲಿ ಯಾರು ಹೆಚ್ಚು ಹಣ ಖರ್ಚು ಮಾಡುತ್ತಾರೋ ಅವರಿಗೆ ಬಹುತೇಕ ಜಯ ಸಿಗುತ್ತದೆ. ಆದರೆ ರಾಜ್ಯದಲ್ಲಿ ನಡೆದ ಹಲವು ಚುನಾವಣೆಗಳನ್ನು ಗಮನಿಸಿದರೆ ಹಣಕ್ಕಿಂತ ಒಂದು ಪಟ್ಟು ಹೆಚ್ಚೇ ಸ್ವಾಭಿಮಾನ ವರ್ಕೌಟ್‍ ಆಗಿದೆ. ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ ಬಹುತೇಕರು ದಿಗ್ವಿಜಯ ಸಾಧಿಸುತ್ತಾ ಬಂದಿದ್ದಾರೆ. ಈ ಬಾರಿಯ ಉಪಚುನಾವಣೆಯಲ್ಲಿ ಸ್ವಾಭಿಮಾನಿಗೆ ಜಯ ಸಿಕ್ಕಿದೆ. ಸ್ವಾಭಿಮಾನದ ಹೆಸರಲ್ಲಿ ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರನಾಗಿ ಕಣಕ್ಕಿಳಿದಿದ್ದ ಶರತ್‍ ಬಚ್ಚೇಗೌಡ ಗೆಲುವಿನ ನಗೆ ಬೀರಿದ್ದಾರೆ. […]

ಹೆಚ್ ಡಿಕೆ ಟ್ವೀಟ್ ಗೆ ಶ್ರೀರಾಮುಲು ಗರಂ

   ಉಪಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಜೆಡಿಎಸ್‍ ನಾಯಕ ಎಚ್‍.ಡಿ.ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆ. ಅದೇ ಬೇಸರದಲ್ಲಿ ಟ್ವೀಟ್‍ ಮಾಡಿದ್ದು, ಮತದಾರರನ್ನೇ ಗೇಲಿ ಮಾಡುವ ರೀತಿಯಲ್ಲಿ ಅದರಲ್ಲಿ ಬರೆಯಲಾಗಿದೆ. ಇದಕ್ಕೆ ಸಚಿವ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‍ ಮಾಡಿರುವ ಶ್ರೀರಾಮುಲು, ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.    ಟ್ವೀಟ್‍ ವಾರ್‍ ಹೇಗಿದೆ ಇಲ್ಲಿದೆ ನೋಡಿ.. ಇದೊಂದು “ಅಸಹ್ಯ” ಸರ್ಕಾರ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮೂದಲಿಸಿದ್ದ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ರಾಜ್ಯದ 15 ಕ್ಷೇತ್ರಗಳ ಪ್ರಜ್ಞಾವಂತ ಮತದಾರರು ‘ಪವಿತ್ರ’ ಮತ್ತು […]

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‍ ಗುಂಡೂರಾವ್‍ ರಾಜೀನಾಮೆ

 ಉಪಚುನಾವಣೆಯಲ್ಲಿ ಕಾಂಗ್ರೆಸ್‍ ಸೋಲಿನ ಕುರಿತು ಹತಾಶರಾಗಿರುವ ದಿನೇಶ್‍ ಗುಂಡೂರಾವ್‍ ಅವರು ಸೋಮವಾರ ತಮ್ಮ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಗುಂಡೂರಾವ್‍ ಅವರೂ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ. ‘ಪ್ರಜೆಗಳು ಬಯಸುವುದೇ ಅಂತಿಮ ತೀರ್ಮಾನ. ಅದನ್ನು ನಾವು ಸ್ವೀಕರಿಸಿ ಮಾನ್ಯತೆ ನೀಡುತ್ತೇವೆ. ಅವರ ತೀರ್ಪನ್ನು ಗೌರವಿಸುತ್ತೇವೆ. ಅದನ್ನು ಎಂದೂ ತಪ್ಪಾಗಿ ಗ್ರಹಿಸಲ್ಲ. ಫಲಿತಾಂಶದಿಂದ ಮನಸ್ಸಿನಲ್ಲಿ ನೋವಿರುತ್ತದೆ. ನಮ್ಮ ಪಕ್ಷದಲ್ಲಿ ಇದ್ದು ಹೋದವರು. ಎಲ್ಲವೂ ರಾಜ್ಯದ […]

ಸೋನಿಯಾ ಹುಟ್ಟುಹಬ್ಬದಂದೇ ಕಾಂಗ್ರೆಸ್ ಗೆ ಮುಖಭಂಗ..

  ಕಾಂಗ್ರೆಸ್‍ ಅಧಿನಾಯಕಿ ಸೋನಿಯಾಗಾಂಧಿ ಇವತ್ತು 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ದಿನದಂದೇ ಸೋನಿಯಾ ಅವರಿಗೆ ರಾಜ್ಯ ಕಾಂಗ್ರೆಸ್‍ ನಾಯಕರು ನಿರಾಸೆ ತರಿಸಿದ್ದಾರೆ. ಉಪಚುನಾವಣೆಯಲ್ಲಿ ಗೆಲುವಿನ ಉಡುಗೊರೆ ನೀಡಿ, ಸೋನಿಯಾ ಅವರಿಗೆ ಶುಭಾಶಯ ಕೋರಬೇಕಿದ್ದ ಕಾಂಗ್ರೆಸ್‍ ನಾಯಕರು ತಮ್ಮ ಅಧಿನಾಯಕಿಗೆ ಮುಖ ತೋರಿಸಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ.  ಬೆಳಗ್ಗೆಯಷ್ಟೇ ಸಿದ್ದರಾಮಯ್ಯ ಅವರು ಸೋನಿಯಾಯವರಿಗೆ ಶುಭಾಶಯ ಕೋರಿ ಟ್ವಿಟರ್‍ ನಲ್ಲಿ ಪೋಸ್ಟ್‍ ಹಾಕಿಕೊಂಡಿದ್ದರು. ನಂತರ ಉಪಚುನಾವಣೆಯ ಗೆಲುವಿನ ಉಡುಗೊರೆ ನೀಡುವ ಉತ್ಸಾಹದಲ್ಲಿದ್ದರು. ಆದರೆ ಅವರ ಉತ್ಸಾಹ ಈಗ ತಣ್ಣಗಾಗಿದೆ.

ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಕ್ಕೆ ಸೋಲಾಯಿತು; ಎಚ್.ವಿಶ್ವನಾಥ್

 ಉಪಚುನಾವಣೆಯಲ್ಲಿ ಎಲ್ಲೆಡೆ ಬಿಜೆಪಿ ಪಕ್ಷ ವಿಜಯ ಪತಾಕೆ ಹಾರಿಸುತ್ತಿದ್ದರೆ, ಇತ್ತ ಭಾರಿ ಕುತೂಹಲ ಮೂಡಿಸಿದ್ದ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಡಗೂರು ಎಚ್.ವಿಶ್ವನಾಥ್‍ ಸೋಲನುಭವಿಸಿದರು.  ತಮ್ಮ ಸೋಲಿನ ಕುರಿತು ಪ್ರತಿಕ್ರಿಯಿಸಿದ ಅವರು, ಜನತೆ ಕೊಟ್ಟ ತೀರ್ಪಿಗೆ ತಲೆಬಾಗುವೆ. ಮೈತ್ರಿ ಸರ್ಕಾರವನ್ನು ಬೀಳಿಸಿದ್ದಕ್ಕೆ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಹೀಗಾಗಿ ಸೋಲಾಯಿತು. ಜಿ.ಟಿ.ದೇವೆಗೌಡರ ನಡೆ ಕೂಡ ನನ್ನ ಸೋಲಿಗೆ ಕಾರಣ. ಅಧಿಕಾರ ಇಲ್ಲದಿದ್ದರೂ ನಾನು ಜನ ಸೇವೆ ಮಾಡುತ್ತೇನೆ. ನನ್ನ ಬೆಂಬಲಕ್ಕೆ ಬಿ.ಎಸ್.ಯಡಿಯೂರಪ್ಪ ಇದ್ದಾರೆ. ಎದೆಗುಂದದಂತೆ ಧೈರ್ಯ ಹೇಳಿದ್ದಾರೆ. […]

CLP & ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

  ಉಪಚುನಾವಣೆಯಲ್ಲಿ ಕಾಂಗ್ರೆಸ್‍ ಹೀನಾಯ ಸೋಲುಂಡಿರುವ ಕಾರಣ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಕಾಂಗ್ರೆಸ್‍ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಹಾಗೂ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.   ಈ ಬಗ್ಗೆ ಟ್ವೀಟ್‍ ಮಾಡಿರುವ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ವಿಪಕ್ಷ ನಾಯಕ ಸ್ಥಾನ ಹಾಗೂ ಕಾಂಗ್ರೆಸ್‍ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ನಾನು ಮತದಾರರು ಬಿಜೆಪಿ ಪಾಠ ಕಲಿಸುತ್ತಾರೆಂದು ತಿಳಿದಿದ್ದೆ […]

ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಿದ ಕರ್ನಾಟಕದ ಜನತೆ; ಮೋದಿ

 ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿಜಯೋತ್ಸವಕ್ಕೆ ಪ್ರಧಾನಿ ಮೋದಿ ಖುಷಿ ವ್ಯಕ್ತಪಡಿಸಿದ್ದಾರೆ. ಜಾರ್ಖಂಡ್‌ನ ಬರ್ಹಿಯಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆಯಲ್ಲಿ, ಉಪಚುಣಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಸೇಫ್‍ ಮಾಡಿದ ಕರ್ನಾಟಕದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.  ಕರ್ನಾಟಕದಲ್ಲಿ ಕಾಂಗ್ರೆಸ್‍ ಮತ್ತು ಅದರ ಮಿತ್ರ ಪಕ್ಷಗಳು ಜನಾದೇಶವನ್ನು ಧಿಕ್ಕರಿಸಿ ಸರ್ಕಾರ ರಚಿಸಿದ್ದವು. ಆದರೆ, ಈಗ ನೆಲಕಚ್ಚಿವೆ. ಕರ್ನಾಟಕದಲ್ಲಿ ಜನಾದೇಶವನ್ನು ಹಿಂಬಾಗಿಲಿನ ಮೂಲಕ ಕಳವು ಮಾಡಿದ್ದ ಕಾಂಗ್ರೆಸ್‌ಗೆ ಮತದಾರರು ಉಪಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ಕಾಂಗ್ರೆಸ್‌ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಅಜೆಂಡಾವನ್ನೇ […]

ಸರ್ಕಾರ ಸೇಫ್‍; ಮೈಸೂರಿನಲ್ಲಿ ಬಿಜೆಪಿಯಿಂದ ವಿಜಯೋತ್ಸವ

 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ, ಸರ್ಕಾರ ಸೇಫ್‍ ಎಂಬ ಫಲಿತಾಂಶ ಹೊರಬೀಳುತ್ತಿದ್ದಂತೆ ಎಲ್ಲೆಡೆ ಬಿಜೆಪಿ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಂತೆಯೇ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿಕೊಂಡು ವಿಜಯೋತ್ಸವ ಆಚರಿಸಿದರು.