You cannot copy content of this page.
. . .

Day: December 8, 2019

ಅಕ್ರಮವಾಗಿ ಶ್ರೀಗಂಧ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ

 ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಬಂಧಿಸಿದೆ.  ಕೇರಳ ಮೂಲದ ಚಂಗಲ ಗ್ರಾಮ ನಿವಾಸಿಗಳಾದ ಶರೀಫ್‍ ಹಾಗೂ ಮೊಹಮ್ಮದ್‍ ಅಶ್ರಫ್‍ ಬಂಧಿತ ಆರೋಪಿಗಳು. ಇವರಿಂದ 10 ಚೀಲದಲ್ಲಿದ್ದ 175 ಕೆ.ಜಿ. ಶ್ರೀಗಂಧದ ತುಂಡುಗಳು, ಎರಡು ಚಿಕ್ಕ ಡಿಜಿಟಲ್ ಸ್ಕೇಲ್ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ಮಾಲಿನ ಮೌಲ್ಯ ಸುಮಾರು 9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.  ಇವರು ಭಾನುವಾರ ಅಕ್ರಮವಾಗಿ ಶ್ರೀಗಂಧ ತುಂಡುಗಳನ್ನು ಆಂಧ್ರಪ್ರದೇಶದ […]

ದಿಢೀರ್ ಕುಸಿದ ಈರುಳ್ಳಿ ಬೆಲೆ! ವಿಜಯಪುರದಲ್ಲಿ ರೈತರಿಂದ ಪ್ರತಿಭಟನೆ

ಈರುಳ್ಳಿ ಬೆಲೆಯಲ್ಲಿ ಏರಿಕೆಗೆ ಗ್ರಾಹಕರಿಂದ ವಿರೋಧ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ, ಈರುಳ್ಳಿ ಬೆಲೆ ದಿಢೀರ್‍ ಕುಸಿತದಿಂದಾಗಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಹೌದು, ಈರುಳ್ಳಿ ಬೆಲೆ ಕುಸಿತದ ಕಾರಣ ವಿಜಯಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಈರುಳ್ಳಿ ಬಿಸಾಡಿ ದಲ್ಲಾಳಿಗಳ ವಿರುದ್ಧ ಕಿಡಿಕಾರಿದ್ದಾರೆ. ವಿಜಯಪುರದ ಎಪಿಎಂಸಿ ಈರುಳ್ಳಿ ಮಾರುಕಟ್ಟೆಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಅನೇಕ ಭಾಗಗಳಿಂದ ರೈತರು ಈರುಳ್ಳಿ ಮಾರಾಟ ಮಾಡಲು ಬಂದಿದ್ದರು. ದಿಢೀರ್ ಈರುಳ್ಳಿ ಬೆಲೆ ಕುಸಿದ ಪರಿಣಾಮ ದಲ್ಲಾಳಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಭಾನುವಾರ […]

ನಾಳೆ ‘ಅರ್ಹ’ತಾ ಪರೀಕ್ಷೆ ರಿಸಲ್ಟ್

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಕಾರ್ಯ ನಾಳೆ (ಸೋಮವಾರ) ನಡೆಯಲಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಕುತೂಹಲ ಕೆರಳಿಸಿರುವ ಈ ಉಪಚುನಾವಣೆ ಫಲಿತಾಂಶದ ಮೇಲೆ ರಾಜ್ಯ ಬಿಜೆಪಿ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ನಿಂತಿದೆ.  ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಸೇಫ್‍ ಆಗಲು 6 ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯ. ಬಿಜೆಪಿ ಅಷ್ಟು ಸ್ಥಾನಗಳನ್ನು ಗೆಲ್ಲದಿದ್ದಲ್ಲಿ, ಕಾಂಗ್ರೆಸ್‍—ಜೆಡಿಎಸ್‍ ಮೈತ್ರಿ ಸರ್ಕಾರ ಮತ್ತೆ ರಚನೆಯಾಗಬಹುದೇ ಎಂಬ ಪ್ರಶ್ನೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಇತ್ತ ರಾಯಚೂರಿನ ಮಸ್ಕಿ […]

ಅತ್ಯಾಚಾರ ಸಂತ್ರಸ್ತೆ ಮೇಲೆ ಆ್ಯಸಿಡ್‍ ದಾಳಿ; ಯುಪಿಯಲ್ಲಿ ಮತ್ತೊಂದು ದೌರ್ಜನ್ಯ ಬೆಳಕಿಗೆ

ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಒಂದಾದ ಮೇಲೊಂದರಂತೆ ಬೆಳಕಿಗೆ ಬರುತ್ತಿವೆ. ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ, ಉನ್ನಾವೊ ಸಂತ್ರಸ್ತೆ ಕೊಲೆ ಪ್ರಕರಣಗಳು ದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಅವು ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ದುರ್ಘಟನೆ ಬೆಳಕಿಗೆ ಬಂದಿದೆ.  ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ದೂರು ಹಿಂಪಡೆಯಲು ನಿರಾಕರಿಸಿದ ಅತ್ಯಾಚಾರ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ ನಡೆದಿದೆ. 30ರ ಹರೆಯದ ಸಂತ್ರಸ್ತೆ ನಾಲ್ಕು ಮಂದಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಅತ್ಯಾಚಾರ ಆರೋಪಿಗಳು ಬುಧವಾರ […]

ಉಪಚುನಾವಣೆ ಫಲಿತಾಂಶದ ನಂತರ ಸಿದ್ದರಾಮಯ್ಯ ವೈಟ್‍ ವಾಶ್- ವಿ.ಶ್ರೀನಿವಾಸ್‍ ಪ್ರಸಾದ್

ಹುಣಸೂರು ಚುನಾವಣೆಯಲ್ಲಿ ವಿಶ್ವನಾಥ್‍ ಸೋತರೆ ಪ್ರಪಂಚ ಏನು ಮುಳುಗಿ ಹೋಗುತ್ತಾ? ಸಿದ್ದರಾಮಯ್ಯ ಎಷ್ಟು ಬಾರಿ ತೊಡೆ ತಟ್ಟಿ ಬಿದ್ದು ಹೋಗಿಲ್ಲ ಹೇಳಿ ಎಂದು ಸಂಸದ ವಿ.ಶ್ರೀನಿವಾಸ್‍ ಪ್ರಸಾದ್ ಟಾಂಗ್ ನೀಡಿದರು. ಎಚ್.ವಿಶ್ವನಾಥ್‍ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀನಿವಾಸ್‍ ಪ್ರಸಾದ್‍ ಅವರು, ಹುಣಸೂರು ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಸೋಲು-ಗೆಲುವಿನ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದು ಹೀಗೆ. ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ಸಮಾನತೆ ಪ್ರಕಾಶನ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲು-ಗೆಲುವಿನ ವಿಚಾರ ಈಗ ಬೇಡ. ಆ […]

ರೈತನ ಮೇಲೆ ಕಾಡಾನೆ ದಾಳಿ

ಡೈರಿಗೆ ಹಾಲು ಹಾಕಲು ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ಹಠಾತ್ ದಾಳಿ ನಡೆಸಿದೆ. ಸರಗೂರು ತಾಲ್ಲೂಕಿನ ಕಲ್ಲಂಬಾಳು ಗ್ರಾಮದಲ್ಲಿ ಘಟನೆ ನಡೆದಿದೆ. ರಾಮಯ್ಯ ಎಂಬುವರೇ (68) ಕಾಡಾನೆ ದಾಳಿಗೆ ಒಳಗಾದವರು. ಆನೆ ದಾಳಿಯಿಂದ ರಾಮಯ್ಯಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಂದಿನಂತೆ ಹಾಲಿನ ಡೈರಿಗೆ ಹಾಲು ಹಾಕಲು ರಾಮಯ್ಯ ತೆರಳುತ್ತಿದ್ದಾಗ, ಹಠಾತ್‍ ಎದುರಾದ ಕಾಡಾನೆಯೊಂದು ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಅವರು ಕೂಗಾಡಿದ್ದಾರೆ. ಹತ್ತಿರದಲ್ಲೇ ಇದ್ದ ಜನರು ಕೂಗಾಟ ಕೇಳಿ […]

ಬಸ್-ಬೈಕ್ ಡಿಕ್ಕಿ; ಅಪ್ಪ, ಮಗ ಸ್ಥಳದಲ್ಲೇ ಸಾವು

ಮೈಸೂರು ತಾಲ್ಲೂಕಿನ ಕೋಟೆಹುಂಡಿ ಸರ್ಕಲ್ ಬಳಿ ಕೆಎಸ್ಆರ್‍ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಅಪ್ಪ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ಇಂದು ಬೆಳಿಗ್ಗೆ ನಡೆದಿದೆ.  ಪ್ರಕಾಶ್ (50), ಸುರೇಶ್ (23) ಮೃತಪಟ್ಟವರು. ಕಟ್ಟೆಹುಣಸೂರು ನಿವಾಸಿಗಳಾದ ಇವರು ಮೈಸೂರಿನ ಜೆ.ಪಿ.ನಗರದ ಮಹದೇವುಪರದಲ್ಲಿ ವಾಸವಿದ್ದರು. ಪ್ರಕಾಶ್ ಮತ್ತು ಸುರೇಶ್ ರೇಷನ್ ಅಕ್ಕಿ ತರಲು ಕಟ್ಟೆಹುಣಸೂರಿಗೆ ಡಿಯೋ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಮೃತ್ಯುಸ್ವರೂಪಿಯಾಗಿ ಬಂದ ಕೆಎಸ್ಆರ್‍ಟಿಸಿ ಬಸ್ ಸ್ಕೂಟರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ […]

ಅಗ್ನಿ ದುರಂತ; ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ- ಕೇಜ್ರಿವಾಲ್

ಭಾರತದ ರಾಜಧಾನಿ ದೆಹಲಿಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ದೆಹಲಿ ಸಿಎಂ ಅರವಿಂದ್‍ ಕೇಜ್ರಿವಾಲ್ ಘೋಷಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಅಗ್ನಿ ದುರಂತದಲ್ಲಿ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿರುವುದಲ್ಲದೇ, ಉಚಿತ ಚಿಕಿತ್ಸೆಗೂ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಅಗ್ನಿ ದುರಂತ; ಸಾವಿನ ಸಂಖ್ಯೆ ೪೩ಕ್ಕೆ ಏರಿಕೆ

ಇಂದು ಬೆಳ್ಳಂಬೆಳಗ್ಗೆ ದೆಹಲಿಯ ರಾಣಿ ಜಾನ್ಸಿ ರಸ್ತೆ ಬಳಿಯ ಅನಾಜ್ ಮಂಡಿ ಪ್ರದೇಶದ ಮೂರು ಮಹಡಿಗಳಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ೪೩ ಮಂದಿ ಬಲಿಯಾಗಿದ್ದಾರೆ. ಮಹಡಿಗಳ ಕಟ್ಟಡದೊಳಗೆ ಇನ್ನೂ ಹಲವರು ಸಿಲುಕಿಕೊಂಡಿದ್ದಾರೆ. ಈವರೆಗೂ ೫೦ಕ್ಕೂ ಹೆಚ್ಚು ಮಂದಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದು, ಕಾರ್ಯಾಚರಣೆ ಮುಂದುವರಿಸಿದ್ದಾರೆ. ಗಾಯಾಳುಗಳನ್ನು ಆರ್‌ಎಂಎಲ್, ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ದೆಹಲಿಯ ಅನಾಜ್ […]