You cannot copy content of this page.
. . .

Day: December 7, 2019

ಜೀಪ್-ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸಾವು

ಜೀಪ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.ತಾಲ್ಲೂಕಿನ ಅಗ್ರಹಾರ ಗ್ರಾಮದ ವೈರಮುಡಿ ಪುತ್ರ ನಾಗರಾಜ್ (೨೨) ಮೃತಪಟ್ಟವರು. ನಗರದ ಬೈಪಾಸ್ ರಸ್ತೆಯ ಕೋರ್ಟ್ ವೃತ್ತದ ಬಳಿ ಮಡಿಕೇರಿಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಜೀಪ್ ಎದುರಿನಿಂದ ಬಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಟ್ಟೆಮಳಲವಾಡಿ ಬಳಿಯ ಅಗ್ರಹಾರ ಗ್ರಾಮದ ವೈರಮುಡಿ ಪುತ್ರ ನಾಗರಾಜ್ ಸಾವನ್ನಪ್ಪಿದರೆ, ಹಿಂಬದಿಯ ಸವಾರನಿಗೆ ತೀವ್ರ ಪೆಟ್ಟು ಬಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ತಿಗಾಗಿ ತಮ್ಮನ ಹೆಂಡತಿ ಕೊಲೆ

ಆಸ್ತಿ ವಿಚಾರವಾಗಿ ವ್ಯಕ್ತಿಯೊಬ್ಬ ತನ್ನ ತಮ್ಮನ ಹೆಂಡತಿಯನ್ನೇ ಬಡಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕುಶಾಲನಗರ ಸಮೀಪದ ರಂಗಸಮುದ್ರದಲ್ಲಿ ನಡೆದಿದೆ. ರಂಗಸಮುದ್ರದ ಬಿಪಿನ್ ಎಂಬಾತನೇ ಬಂಧಿತ ಆರೋಪಿ. ತಮ್ಮನ ಹೆಂಡತಿ ಜಲಜಾಕ್ಷಿ (೪೨) ಕೊಲೆಯಾದ ಮಹಿಳೆ. ಎಂದಿನಂತೆ ಅಮ್ಮತಿಯಿಂದ ರಂಗಸಮುದ್ರದ ತಮ್ಮ ಕಾಪಿ ತೋಟದಲ್ಲಿ ಕೆಲಸ ಮಾಡಲು ಬಂದಿದ್ದ ಜಲಜಾಕ್ಷಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ತಿಗಾಗಿ ಅಣ್ಣ-ತಮ್ಮನ ನಡುವೆ ಹಲವು ದಿನಗಳಿಂದ ಕಲಹ ನಡೆಯುತ್ತಿತ್ತು. ಇದೇ ವಿಚಾರದಲ್ಲಿ ಕೊಲೆ […]

ಬಸ್‌ನಿಂದ ಆಯಾತಪ್ಪಿ ಬಿದ್ದು ಮಹಿಳೆ ಸಾವು

ಬಸ್ ಇಳಿಯುವಾಗ ಆಯಾತಪ್ಪಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ವಸತಿ ಶಾಲೆಯಲ್ಲಿ ಇದ್ದ ಮಗಳನ್ನು ನೋಡಲು ಬಂದ ತಾಯಿ, ನಂಜನಗೂಡು ತಾಲ್ಲೂಕಿನ ಮುದ್ದಹಳ್ಳಿಯ ಕಡುಬಿನ ಕಟ್ಟೆ ಗೇಟ್ ಬಳಿ ಬಸ್ ಇಳಿಯುವಾಗ ಆಯಾತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಮೊರಾರ್ಜಿ ಶಾಲೆಯಲ್ಲಿ ಓದುತ್ತಿರುವ ತಮ್ಮ ಮಗಳನ್ನು ನೋಡಲು ಚನ್ನಪಟ್ಟಣ ಗ್ರಾಮದಿಂದ ಮಹಿಳೆ ಭಾಗ್ಯಮ್ಮ (೩೦) ಶನಿವಾರ ಮಧ್ಯಾಹ್ನ ಆಗಮಿಸಿದ್ದರು. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದ ಇವರು ಮುದ್ದಹಳ್ಳಿ ಕಡುಬಿನ ಕಟ್ಟೆ ಗೇಟ್‌ನಲ್ಲಿ ಬಸ್ ಇಳಿಯುವಾಗ ಅವರು ಇಳಿಯುವ ಮುನ್ನವೇ ಬಸ್ […]

ಯುವಕರ ಮೇಲೆ ಹಲ್ಲೆ ಆರೋಪ; ಪುರಸಭೆ ಸದಸ್ಯನ ಬಂಧನ

  ಯುವಕರಿಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಕೆ.ಆರ್‍.ನಗರದ ಪುರಸಭೆಯ ೧೯ನೇ ವಾರ್ಡಿನ ಕಾಂಗ್ರೆಸ್  ಸದಸ್ಯ ಸೈಯದ್ ಸಿದ್ದಿಖ್ ಅವರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.   ನ.೧೨ರಂದು ತಾಲ್ಲೂಕಿನ ಮಂಚನಹಳ್ಳಿ ಗ್ರಾಮದ ಮಹದೇವ ಮತ್ತು ಮಹದೇಶ ಎಂಬವರ ಮೇಲೆ ಪಟ್ಟಣದ ರಸ್ತೆ ಸಾರಿಗೆ ನಿಗಮದ ಘಟಕದ ಮುಂದೆ ಸೈಯದ್ ಸಿದ್ದಿಖ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಹಲ್ಲೆಗೊಳಗಾದ ಯುವಕರ ಸ್ನೇಹಿತ ಬೀರೇಶ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೊಲೆ ಯತ್ನದಡಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು […]

ಯುವತಿಯರ ಅಶ್ಲೀಲ ಫೋಟೊ ಹಾಕಿ ಬ್ಲಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿ ಬಂಧನ

ಹಾಸನ: ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಅಶ್ಲೀಲ ಘೋಟೊಗಳನ್ನು ಹಾಕಿ ಬ್ಲಾಕ್ಮೇಲ್ ಮಾಡಿ ಹಣ ವಸೂಲು ಮಾಡುತ್ತಿರುವ ಜಾಲವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಫೇಸ್‌ಬುಕ್‌ನಲ್ಲಿ ಕದ್ದ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಹಣ ನೀಡುವಂತೆ ಅಮಾಯಕ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಜಾಲವನ್ನು ಭೇದಿಸಿ ಆರೋಪಿಯೊಬ್ಬನನ್ನು ಹಾಸನದ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.  ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಕೇಡಿಗೆ ಗ್ರಾಮದ, ಕಾರು ಚಾಲಕ ಪ್ರಶಾಂತ್ ರಾಜಶೇಖರ್ ವಾಮ (೨೪) ಎಂಬಾತನೇ ಬಂಧಿತ ಆರೋಪಿ. ಕೃತ್ಯದಲ್ಲಿ ಭಾಗಿಯಾಗಿರುವ […]

ರೈತನ ಖಾತೆಗೆ ಕನ್ನಾ; ಏರ್ಟೆಲ್ ಸಂಸ್ಥೆಗೆ ದಂಡ

ಮೈಸೂರು: ರೈತನ ಖಾತೆಗೆ ಕನ್ನ ಹಾಕಿದ ಏರ್‌ಟೆಲ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ದಂಡ ವಿಧಿಸಿದೆ. ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ ರಾಜನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ಈಚೆಗೆ ಗ್ರಾಹಕರನ್ನು ಸಣ್ಣ ಮಾರುಕಟ್ಟೆಗಳಿಂದ ಹಿಡಿದು, ದೊಡ್ಡ ಕಂಪನಿಗಳು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ವೇಳೆಯಲ್ಲಿ ನೆಟ್‌ವರ್ಕ್ ಸಂಸ್ಥೆಯ ವಿರುದ್ಧವೇ ಪ್ರಕರಣ ಹೂಡಿ ಹಣ ಪೀಕಿಸಿರುವ ಅಂಶ ಬಲು ಅಪರೂಪವಾಗಿದೆ. ಹೌದು, […]

ಏನಿದು ಉನ್ನಾವೊ ಪ್ರಕರಣ..?; 2 ವರ್ಷದಲ್ಲಿ ನಡೆದ ದಾಳಿಗಳೆಷ್ಟು..?

   ಪಶುವೈದ್ಯೆ ಮೇಲೆ ನಡೆದ ಕ್ರೂರ ದೌರ್ಜನ್ಯದ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ಕ್ರೂರ ಘಟನೆ ದೇಶವನ್ನು ಬೆಚ್ಚಿ ಬೀಳಿಸಿದೆ. ಇದರಿಂದ ಮಹಿಳೆಯರು ಸಮಾಜದಲ್ಲಿ ನಿರ್ಭೀತಿಯಿಂದ ಓಡಾಡಲು ಹೆದರುತ್ತಿದ್ದಾರೆ. ಈ ಹಿಂದೆಯೇ ಅತ್ಯಾಚಾರಕ್ಕೆ ಒಳಗಾಗಿ ಕೊಲೆ ಸಂಚಿಗೂ ಗುರಿಯಾಗಿ, ಬೆಂಕಿಯಲ್ಲಿ ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದ ಉನ್ನಾವ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯು ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು.  2017ರ ಡಿಸೆಂಬರ್ ನಲ್ಲಿ ಈ ಯುವತಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು. ಬಿಜೆಪಿ ಉಚ್ಛಾಟಿತ ಶಾಸಕ […]

ನ್ಯಾಯವನ್ನು ಪ್ರತಿಕಾರದ ರೂಪದಲ್ಲಿ ಪಡೆಯಬಾರದು; ಸಿಜೆಐ ಬೋಬಡೆ

ನ್ಯಾಯವನ್ನು ಪ್ರತಿಕಾರದ ರೂಪದಲ್ಲಿ ಪಡೆಯಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬಡೆ ಪ್ರತಿಕ್ರಿಯಿಸಿದ್ದಾರೆ. ಹೈದರಾಬಾದ್ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳ ಎನ್ಕೌಂಟರ್ ಕುರಿತು ಮಾತನಾಡಿರುವ ಅವರು, ನ್ಯಾಯವನ್ನು ಪ್ರತಿಕಾರದ ರೂಪದಲ್ಲಿ ಪಡೆಯಬಾರದು. ಒಂದು ವೇಳೆ ಪ್ರತಿಕಾರದ ರೂಪದಲ್ಲಿ ನ್ಯಾಯವನ್ನು ಪಡೆದುಕೊಂಡಿದ್ದೇ ಅದರೆ, ಅದು ನ್ಯಾಯದ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಕಾರು ಡಿಕ್ಕಿ; ಬೈಕ್ ಸವಾರ ಸಾವು

ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಸಮೀಪದ ಹೊನ್ನೇನಹಳ್ಳಿ ಬಳಿ ನಡೆದಿದೆ.ಮೂಲತಃ ಪಿರಿಯಾಪಟ್ಟಣ ತಾಲ್ಲೂಕಿನ ಹುಣಸವಾಡಿಯ ಹನುಮಂತನಾಯಕ ಮತ್ತು ಚೆಲುವಮ್ಮ ದಂಪತಿ ಪುತ್ರ ಎಚ್.ಎಚ್.ರಘು (೩೦) ಮೃತಪಟ್ಟವರು.ಇವರು ಹುಣಸೂರಿನ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಂಪನಿಯ ಕೆಲಸದ ನಿಮಿತ್ತ ಶುಕ್ರವಾರ ಹನಗೋಡು ಬಳಿಯ ವಡ್ಡಂಬಾಳು ಗ್ರಾಮಕ್ಕೆ ತೆರಳಿದ್ದ ರಘು ಕೆಲಸ ಮುಗಿಸಿಕೊಂಡು ನಗರಕ್ಕೆ ವಾಪಸ್ ಬರುವ ವೇಳೆ ಹಿಂಬದಿಯಿಂದ ಅತಿ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ.ದಾರಿ ಹೋಕರು […]

ಹೈದರಾಬಾದ್ ಎನ್ ಕೌಂಟರ್; ಪೊಲೀಸರ ಟೀಕೆ ಸರಿಯಲ್ಲ-ಯದುವೀರ್

ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ ಕೌಂಟರ್‍ ಮಾಡಿರುವ ಪೊಲೀಸರ ಕ್ರಮವನ್ನು ಟೀಕಿಸುವುದು ಸರಿಯಲ್ಲ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಹೇಳಿದರು.    ಮೈಸೂರಿನಲ್ಲಿ ಶನಿವಾರ ಮಾತನಾಡಿದ ಅವರು, ಇಂತಹ ಘಟನೆಗಳಿಂದ ಯಾರಿಗೂ ಸಂತೋಷವಾಗಿಲ್ಲ, ಸಮಾಧಾನ ಉಂಟಾಗಿದೆ. ಹೈದರಾಬಾದ್ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ ಎಂದರು.ಪ್ರಕರಣ ಮಹಜರು ವೇಳೆ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಲು ಅವರು ಎನ್‌ಕೌಂಟರ್ ಮಾಡಿದ್ದಾರೆ ಎನ್ನಲಾಗಿದೆ. ನಮ್ಮೆಲ್ಲರಿಗೂ ಕಾನೂನಿನ ಮೂಲಕವೇ ಎಲ್ಲವೂ ಬಗೆಹರಿಯಬೇಕು ಎಂಬ ಆಸೆ ಇದೆ. […]