You cannot copy content of this page.
. . .

Day: December 6, 2019

ಸೋಮೇಶ್ವರಪುರ ಗ್ರಾಮದಲ್ಲಿ ಮರಿ ಚಿರತೆ ಪ್ರತ್ಯಕ್ಷ

ಮೈಸೂರು ತಾಲ್ಲೂಕಿನ ಸೋಮೇಶ್ವರಪುರ ಗ್ರಾಮದ ಕೋಳಿ ಫಾರ್ಮ್ ಹೌಸ್‌ನಲ್ಲಿ ಶುಕ್ರವಾರ ಮರಿ ಚಿರತೆಯೊಂದು ಸೆರೆಯಾಗಿದೆ. ಒಂದು ತಿಂಗಳ ಹಿಂದೆ ಚಿರತೆಯೊಂದು ಪ್ರತ್ಯಕ್ಷವಾಗಿ ಸೋಮೇಶ್ವರಪುರ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಆಗ ಅರಣ್ಯ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿದಿದ್ದರು. ಈಗ ಚಿರತೆ ಮರಿಯೊಂದು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಚಿರತೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಸುಳ್ಳು ದೂರು ನೀಡಿದ ವ್ಯಕ್ತಿಗೆ ೩೦ ಸಾವಿರ ದಂಡ

ಇಬ್ಬರ ವಿರುದ್ಧ ಸುಳ್ಳು ದೂರು ನೀಡಿದ ವ್ಯಕ್ತಿಗೆ ಮಳವಳ್ಳಿ ನ್ಯಾಯಾಯಲಯ ದಂಡ ವಿಧಿಸಿ ಎಚ್ಚರಿಕೆಯ ಸಂದೇಶ ನೀಡಿದೆ.ಬಾಡಿಗೆದಾರರು ಬಾಡಿಗೆ ಪಾವತಿಸಿಲ್ಲ ಎಂದು ಆರೋಪಿಸಿ ಸುಳ್ಳು ದೂರು ನೀಡಿದ್ದ ವ್ಯಕ್ತಿಗೆ ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ಎಂ.ಬಾಲಕೃಷ್ಣ ಅವರು ೫೦ ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.  ಬೆಳಕವಾಡಿ ಗ್ರಾಮದ ನಿವಾಸಿ ಅಕ್ರಂಪಾಷ ದಂಡದ ಶಿಕ್ಷೆಗೆ ಒಳಗಾದವರು. ಇದೇ ಗ್ರಾಮದ ನಾಗರತ್ನಮ್ಮ ಮತ್ತು ಮಹದೇವಸ್ವಾಮಿ ಅವರು ನನ್ನ ಮನೆಯಲ್ಲಿ ಬಾಡಿಗೆಗೆ ಇದ್ದಾರೆ. ಅವರು ಬಾಡಿಗೆ ನೀಡುತ್ತಿಲ್ಲ ಎಂದು ಅಕ್ರಂಪಾಷಾ ೨೦೧೯ರ […]

EXCLUSIVE: ಚಾಕುವಿನಿಂದ ಇರಿದು 5 ಲಕ್ಷ ರೂಪಾಯಿ ದರೋಡೆ..!

 ಮೂವರು ಅಪರಿಚಿತರು ಬೈಕ್‍ ಅಡ್ಡಗಟ್ಟಿ ಸವಾರನಿಗೆ ಚಾಕುವಿನಿಂದ ಇರಿದು 5 ಲಕ್ಷ ರೂಪಾಯಿ ನಗದು ಹಾಗೂ 65 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಪಾಂಡವಪುರ ತಾಲ್ಲೂಕಿನ ಶಂಭೂನಹಳ್ಳಿ ಗ್ರಾಮದಲ್ಲಿ ನಡೆದಿದೆ.  ಪಾಂಡವಪುರ ಟೌನ್ ನಿವಾಸಿ ಜಂಬೂ ಜೈನ್ ಎಂಬುವವರೇ ಹಣ ಕಳೆದುಕೊಂಡವರು. ಚಿನಕುರಳಿಯಲ್ಲಿ ಚಿನ್ನ ವ್ಯಾಪಾರಿಯಾಗಿರುವ ಜಂಬೂ ಜೈನ್ ಎಂದಿನಂತೆ ವ್ಯಾಪಾರ ಮುಗಿಸಿ ಸಂಜೆ 6 ಗಂಟೆಗೆ ಪಲ್ಸರ್ ಬೈಕ್ ನಲ್ಲಿ ಪಾಂಡವಪುರಕ್ಕೆ  ಬರುತ್ತಿದ್ದರು. ಈ ವೇಳೆ ಮೂವರು ಅಪರಿಚಿತರು ಬೈಕ್ ಅಡ್ಡಗಟ್ಟಿದ್ದಾರೆ. ನಂತರ ಜಂಬೂ […]

ನಮ್ಮ ದೇಶದ ಕಾನೂನು ಹಾಗೂ ಪ್ರಕರಣವೊಂದರ ಮೆಲುಕು..!

   ನೂರು ಮಂದಿ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೂ ಶಿಕ್ಷೆಯಾಗಬಾರದು ಎಂಬುದು ನಮ್ಮ ಕಾನೂನಿನ ಉದ್ದೇಶ. ಈ ಕಾರಣದಿಂದಾನೇ ನಮ್ಮ ದೇಶದಲ್ಲಿ ವಿಚಾರಣೆಗಳು ದೀರ್ಘವಾಗಿ ನಡೆಯುತ್ತವೆ. ಪ್ರಬಲ ಸಾಕ್ಷ್ಯಗಳು ಸಿಕ್ಕಿ, ಆರೋಪ ದೃಢಪಟ್ಟರೆ ಮಾತ್ರ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಅತ್ಯಾಚಾರದಂತಹ ಪೈಶಾಚಿಕ ಕೃತ್ಯಗಳು ನಡೆದಾಗ ಶೀಘ್ರ ವಿಚಾರಣೆ ನಡೆದು ಶಿಕ್ಷೆಯಾಗಬೇಕೆಂಬ ಆಗ್ರಹಗಳು ಮೊದಲಿನಿಂದಲೂ ಕೇಳಿಬರುತ್ತಲೇ ಇವೆ. ಇದಕ್ಕಾಗಿ ಜಿಲ್ಲೆಗೊಂದರಂತೆ ಶೀಘ್ರಗತಿ ನ್ಯಾಯಾಲಯಗಳ ಸ್ಥಾಪನೆ ಮಾಡಬೇಕೆಂಬ ಕೂಗು ಕೂಡಾ ಇದೆ. ಇದಾಗದಿದ್ದಾಗ ಹೈದರಾಬಾದ್‍ ನಲ್ಲಿ ನಡೆದ ಎನ್‍ […]

ಸಮಾಧಿಗೆ ಪುಷ್ಪ ನಮನ.. ಸ್ಮಶಾನದಲ್ಲಿ ಪುಸ್ತಕ ಬಿಡುಗಡೆ..!

  ಸ್ಮಶಾನದಲ್ಲಿ ಬಿಡುಗಡೆಯಾಯ್ತು ಪುಸ್ತಕ… ಸಮಾಧಿಗೆ ಸಲ್ಲಿಕೆಯಾಯ್ತು ಪುಷ್ಪ ನಮನ… ಹೌದು, ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಅಶೋಕಪುರಂ ರುದ್ರಭೂಮಿ ಇಂತಹದ್ದೊಂದು ವಿಶಿಷ್ಠ ಸಂದೇಶ ಸಾರುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಆಶೋಕಪುರಂ ಅಭಿಮಾನಿಗಳ ಬಳಗ, ದಲಿತ ವೆಲ್‌ಫೇರ್ ಟ್ರಸ್ಟ್ ಹಾಗೂ ಪ್ರಗತಿಪರ ಸಂಘಟನೆಗಳಿಂದ ಅಂಬೇಡ್ಕರ್‌ ಗೆ ಪುಷ್ಪ ನಮನ ಹಾಗೂ ಗತಿಸಿದ ಹಿರಿಯರ ಸಮಾಧಿಗೆ ಪುಷ್ಪಾರ್ಚನೆ, ದೀಪಗಳ ನಮನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು.   ಇದೇ ವೇಳೆ ಸಿದ್ದಸ್ವಾಮಿಯವರು ರಚಿಸಿದ ‘ಮೈಸೂರು ಆದಿಕರ್ನಾಟಕ ಪುರ’ ಪುಸ್ತಕವನ್ನು ಪ್ರೊ.ಕೆ.ಎಸ್ ಭಗವಾನ್ […]

ಪೊಲೀಸರ ಬಳಿಯ ಶಸ್ತ್ರಾಸ್ತ್ರಗಳು ಶೋಪೀಸ್‍ ಗಳಲ್ಲ; ಸಂಸದೆ ಮೀನಾಕ್ಷಿ ಲೇಖಿ

  ಪೊಲೀಸರಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟಿರುವ ಶೋಪೀಸ್‍ ಗಳಾಗಿ ಇಟ್ಟುಕೊಳ್ಳುವುದಕ್ಕಲ್ಲ. ಕಾನೂನು ಪ್ರಕಾರ ಅವುಗಳನ್ನು ಬಳಸಬೇಕಾಗುತ್ತದೆ. ಅದನ್ನು ಪೊಲೀಸರು ಮಾಡಿದ್ದಾರೆ ಎಂದು ಸಂಸದೆ ಮೀನಾಕ್ಷಿ ಲೇಖಿ ಹೇಳಿದ್ದಾರೆ. ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆ ವೇಳೆ ಮೀನಾಕ್ಷಿ ಲೇಖಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.    ಸಂಸತ್ತಿನ ಕಲಾಪದಲ್ಲೂ ಹೈದರಾಬಾದ್‍ ಎನ್‍ ಕೌಂಟರ್‍ ಪ್ರಕರಣದ ಬಗ್ಗೆಯೇ ಇವತ್ತು ಚರ್ಚೆ ನಡೆದಿದೆ. ಬಹುತೇಕ ಸಂಸದರು ಪೊಲೀಸರ ಕ್ರಮವನ್ನು ಸ್ವಾಗತಿಸಿದ್ದಾರೆ. ಆದರೆ ಕೆಲ ಸಂಸದರು ಎನ್‍ ಕೌಂಟರ್‍ ಮಾಡುವ ಬದಲು ಇಂತಹ ಪ್ರಕರಣಗಳು ಬೇಗ ವಿಚಾರಣೆ […]

ಮನೇಕಾಗಾಂಧಿ ಹೇಳಿಕೆಗೆ ಅಪ್ಪಚ್ಚುರಂಜನ್‍ ಆಕ್ರೋಶ..!

   ಹೈದರಾಬಾದ್‍ ಪಶುವೈದ್ಯೆಯ ಅತ್ಯಾಚಾರಿಗಳ ಎನ್‍ ಕೌಂಟರ್‍ ಸಂಬಂಧ ಬಿಜೆಪಿ ನಾಯಕಿ ಮನೇಕಾಗಾಂಧಿ ನೀಡಿದ್ದ ಹೇಳಿಕೆಗೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‍ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ಮನೇಕಾ ಗಾಂಧಿ, ಏನೇ ಆಗಿರಲಿ ಇದು ಅಪಾಯಕಾರಿ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಪ್ಪಚ್ಚು ರಂಜನ್‍, ಮೇನಕಾ ಗಾಂಧಿ ಸಂಬಂಧಿಕರಿಗೆ ಈ ರೀತಿ ಅಗಿದ್ದರೆ ನೋವು ಗೊತ್ತಾಗುತ್ತಿತ್ತು. ಯಾರಿಗೋ ಆಗಿರುವುದಕ್ಕೆ ಅವರಿಗೆ ನೋವು ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಆರೋಪಿಗಳಿಗೆ […]

ಪಶುವೈದ್ಯೆಯ ಮೊಬೈಲ್ ಮುಚ್ಚಿಟ್ಟಿದ್ದ ಆರೋಪಿಗಳು; ಪೊಲೀಸ್‍ ಆಯುಕ್ತ ವಿಶ್ವನಾಥ್

ಹೈದರಾಬಾದ್‍ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ ಕೌಂಟರ್‍ ಮಾಡಿದ್ದಕ್ಕೆ ಸೈಬರಾಬಾದ್‍ ಪೊಲೀಸ್‍ ಆಯುಕ್ತ ವಿಶ್ವನಾಥ್‍ ಸಜ್ಜನರ್‍ ಕಾರಣ ನೀಡಿದ್ದಾರೆ.   ಘಟನೆ ನಡೆದ ಸ್ಥಳದಲ್ಲೇ ಸುದ್ದಿಗೋಷ್ಠಿ ನಡೆಸಿದ ವಿಶ್ವನಾಥ್‍, ಮೊದಲ ದಿನದ ವಿಚಾರಣೆಯಲ್ಲೇ ಪ್ರಮುಖ ಸಾಕ್ಷ್ಯ ಸಿಕ್ಕಿತ್ತು. ಆರೋಪಿಗಳು ಹತ್ಯೆಯಾದ ಪಶು ವೈದ್ಯೆಯ ಮೊಬೈಲ್‍ ಫೋನ್, ವಾಚ್‍, ಪವರ್‍ ಬ್ಯಾಂಕ್ ಬಚ್ಚಿಟ್ಟಿದ್ದರು. ಅದನ್ನು ವಶಕ್ಕೆ ಪಡೆಯಲು ಸ್ಥಳಕ್ಕೆ ಹೋಗಿದ್ದೆವು. ವಸ್ತುಗಳನ್ನು ವಶಪಡಿಸಿಕೊಂಡ ಮೇಲೆ ಆರೋಪಿಗಳುಪೊಲೀಸರ ಮೇಲೆ ಹಲ್ಲೆಗೆ ಮುಂದಾದರು. ಕಲ್ಲು ತೂರಿ ಪರಾರಿಯಾಗಲು […]

ಪ್ರೀತಿ ನಿರಾಕರಿಸಿದ ಯುವತಿಗೆ ರೇಜರ್ ನಿಂದ ಇರಿತ

  ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಯುವಕನನ್ನು ವಿ.ವಿ.ಪುರಂ ಪೋಲಿಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.     ಪಿರಿಯಾಪಟ್ಟಣದ ಮಂಚೇಗೌಡನ ಕೊಪ್ಪಲಿನ ನಿವಾಸಿ ಅಮೃತ್ (೨೧) ಎಂಬಾತನೇ ಬಂಧಿತ ಆರೋಪಿ. ಈತ ಪ್ರೀತಿ ಮಾಡು ಎಂದು ಹೆಬ್ಬಾಳದ ಯುವತಿಯೊಬ್ಬಳನ್ನು ಪೀಡಿಸುತ್ತಿದ್ದ. ಆದರೆ ಯುವತಿ ಅದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಅಮೃತ್ ತನ್ನ ಸ್ನೇಹಿತರನ್ನು ಕರೆದುಕೊಂದು ಹೋಗಿ, ರೇಜರ್‌ನಿಂದ ಹಲ್ಲೆ ಮಾಡಿಸಿದ್ದಾನೆ. ಹಲ್ಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ.     ಹಲ್ಲೆ ಬಗ್ಗೆ ವಿಚಾರಣೆ […]

ಶಾಸಕ ಪ್ರೀತಂ ಗೌಡ ವಿರುದ್ಧ ಎಫ್ಐಆರ್

    ಜೆಡಿಎಸ್ ಕಾರ್ಯಕರ್ತರಿಗೆ ಪ್ರಾಣ ಬೆದರಿಕೆ ಹಾಕಿದ ಆರೋಪದ ಮೇಲೆ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.    ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಣ ಹಂಚಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಪ್ರಾಣ ಬೆದರಿಕೆ ಒಡ್ಡಿರುವ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಆರ್.ಪೇಟೆ ಉಪಚುನಾವಣೆ ಹಿನ್ನಲೆಯಲ್ಲಿ ಹಲವು ಗ್ರಾಮಗಳಲ್ಲಿ ಮತದಾರರಿಗೆ ಹಣ ಹಂಚಿರುವ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬುಧವಾರ ರಾತ್ರಿ ಶಾಸಕ ಪ್ರೀತಂ ಗೌಡ, […]