You cannot copy content of this page.
. . .

Day: December 5, 2019

ಚುನಾವಣೋತ್ತರ ಸಮೀಕ್ಷಾ ವರದಿ

ಬಿಜೆಪಿ:09-12 ಕಾಂಗ್ರೆಸ್:03-06 ಜೆಡಿಎಸ್:00-01 ಇತರೆ:00-00 ಸಿ ವೋಟರ್ ಸಂಜೆ 4 ಗಂಟೆವರೆಗಿನ ಸಮೀಕ್ಷೆ ಸಿ-ವೋಟರ್‍ ಪ್ರಕಾರ ಮುನ್ನಡೆಯಲ್ಲಿರುವವರು ಹುಣಸೂರು – ಎಚ್‍.ಪಿ.ಮಂಜುನಾಥ್‍ (ಕಾಂಗ್ರೆಸ್‍) ಕೆ.ಆರ್‍.ಪೇಟೆ – ಬಿಜೆಪಿ, ಜೆಡಿಎಸ್‍ ಸಮಬಲ ಯಲ್ಲಾಪುರ – ಶಿವರಾಮ್ ‍ಹೆಬ್ಬಾರ್‍ (ಬಿಜೆಪಿ) ಹಿರೇಕೆರೂರು – ಬಿ.ಸಿ.ಪಾಟೀಲ್‍  (ಬಿಜೆಪಿ) ಯಶವಂತಪುರ – ಎಸ್‍.ಟಿ.ಸೋಮಶೇಖರ್ (ಬಿಜೆಪಿ) ಮಹಾಲಕ್ಷ್ಮೀ ಲೇಔಟ್‍ – ಗೋಪಾಲಯ್ಯ (ಬಿಜೆಪಿ) ಕೆ.ಆರ್‍.ಪುರಂ – ಭೈರತಿ ಬಸವರಾಜ್‍ (ಬಿಜೆಪಿ) ಗೋಕಾಕ್‍ – ರಮೇಶ್‍ ಜಾರಕಿಹೊಳಿ (ಬಿಜೆಪಿ) ಅಥಣಿ – ಮಹೇಶ್‍ ಕುಮಟಳ್ಳಿ (ಬಿಜೆಪಿ) […]

ಸಂಜೆ 5 ಗಂಟೆಗೆ ಶೇಕಡಾವಾರು ಮತದಾನ

ಕೆ.ಆರ್‍.ಪೇಟೆ – 75.87 ಹುಣಸೂರು – 74.47 ಅಥಣಿ – 70.73 ಕಾಗವಾಡ – 51.41 ಗೋಕಾಕ – 66.64 ಯಲ್ಲಾಪುರ – 72.23 ಹಿರೇಕೆರೂರು – 72.42 ರಾಣೆಬೆನ್ನೂರು – 67.92 ವಿಜಯನಗರ – 58.93 ಚಿಕ್ಕಬಳ್ಳಾಪುರ – 79.80 ಕೆ.ಆರ್‍.ಪುರ – 37.50 ಯಶವಂತಪುರ – 48.34 ಮಹಾಲಕ್ಷ್ಮಿ ಲೇಔಟ್‍ – 40.09 ಶಿವಾಜಿನಗರ – 41.92 ಹೊಸಕೋಟೆ – 76.19

ಲೈಂಗಿಕ ದೌರ್ಜನ್ಯ ಪ್ರಕರಣ; ಬಾಲಕಿ ಮನೆ ಅಧಿಕಾರಗಳ ಭೇಟಿ

ಮೈಸೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ೭ ವರ್ಷದ ಬಾಲಕಿಯ ಮೇಲೆ ವಿವಾಹಿತ ವ್ಯಕ್ತಿಯಿಂದ ಅತ್ಯಾಚಾರ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲಕಿಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.  ಈ ಪ್ರಕರಣದಲ್ಲಿ ವಿವಾಹಿತ ವ್ಯಕ್ತಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ವಿಚಾರ ಗ್ರಾಮದ ಕೆಲವರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಚಾರ ಗೊತ್ತಾಗಿದೆ. ಆದರೂ ಕೂಡ ಅವರುಗಳು ಅಧಿಕೃತವಾಗಿ ದೂರು ಬರಲಿ ಎಂದು ಕಾದು ಕುಳಿತಿದ್ದರು ಎನ್ನಲಾಗಿದೆ. ಹೀಗಾಗಿ ಘಟನೆ ನಡೆದ ೨೦ ದಿನಗಳ ನಂತರ […]

ಕೆ.ಆರ್‍.ಪೇಟೆಯಲ್ಲಿ ಮದುಮಗ ಹಕ್ಕುಚಲಾವಣೆ

  ಕೆ.ಆರ್‍.ಪೇಟೆ ಕ್ಷೇತ್ರದ ಚೌಡೇನಹಳ್ಳಿಯಲ್ಲಿ ಮದುಮಗ ಹಕ್ಕು ಚಲಾಸುವುದನ್ನು ಮರೆಯಲಿಲ್ಲ. ಇಂದು ಮದುವೆ ಮುಹೂರ್ತ ಮುಗಿದ ನಂತರ ಹಾರದೊಂದಿಗೆ ಮತಗಟ್ಟೆಗೆ ಆಗಮಿಸಿದ ವರ ತನ್ನ ಮತವನ್ನು ಚಲಾಯಿಸಿದ್ದಾನೆ.

3 ಗಂಟೆ ವೇಳೆಗೆ ಶೇಕಡಾವಾರು ಮತದಾನ

ಕೆ.ಆರ್‍.ಪೇಟೆ – 59.86 ಹುಣಸೂರು – 57.44 ಅಥಣಿ – 56.05 ಕಾಗವಾಡ – 51.41 ಗೋಕಾಕ – 53.3 ಯಲ್ಲಾಪುರ – 56.21 ಹಿರೇಕೆರೂರು – 56.6 ರಾಣೆಬೆನ್ನೂರು – 53.5 ವಿಜಯನಗರ – 47.38 ಚಿಕ್ಕಬಳ್ಳಾಪುರ – 60.43 ಕೆ.ಆರ್‍.ಪುರ – 29.25 ಯಶವಂತಪುರ – 38.83 ಮಹಾಲಕ್ಷ್ಮಿ ಲೇಔಟ್‍ – 30.73 ಶಿವಾಜಿನಗರ – 32.72 ಹೊಸಕೋಟೆ – 54.12

ನಾಗಮಂಗಲ: ಮೇಕೆ ಹೊತ್ತೊಯ್ದ ಚಿರತೆ

  ನಾಗಮಂಗಲದ ಗಂಗಸಮುದ್ರ ಗ್ರಾಮದಲ್ಲಿ ಚಿರತೆಯೊಂದು ಎರಡು ಮೇಕೆಗಳನ್ನು ತಿಂದು ಮತ್ತೊಂದು ಮೇಕೆಯನ್ನು ಹೊತ್ತೊಯ್ದಿದೆ. ಗಂಗಸಮುದ್ರದ ಶಿವರಾಮು, ಲಿಂಗರಾಜು ಅವರಿಗೆ ಸೇರಿದ ಮೇಕೆಗಳಾಗಿದ್ದು, ಕಳೆದ ರಾತ್ರಿ ಈ ಘಟನೆ ನಡೆದಿದೆ. ಈ ಭಾಗದಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿದ್ದು ಸ್ಥಳೀಯರು ಭಯಭೀಯರಾಗಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಹಿರಿಯುವಂತೆ ಸ್ಥಳೀಯರು ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಗುಪ್ತವಾಗಿ ನಡೆಯಬೇಕಿದ್ದ ಮತದಾನ ಬಹಿರಂಗ..

ಮಂಡ್ಯ : ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಗೆ ಮತ ಹಾಕಿದ ವಿವಿ ಪ್ಯಾಟ್ ಮುದ್ರಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆ.ಆರ್. ಪೇಟೆ ಬಿಜೆಪಿ ಅಭ್ಯರ್ಥಿಯಾಗಿರುವ ನಾರಾಯಣಗೌಡರಿಗೆ ಮತ ಹಾಕಿರುವ ಮತದ ವಿವಿಪ್ಯಾಟ್‍ ಫೋಟೋ ಇದಾಗಿದೆ. ತಾಲ್ಲೂಕಿನ ಕರೋಟಿ ಗ್ರಾಮದ ಅನಿಲ್ ಗೌಡ ಎಂಬ ಯುವಕ ಈ ಫೋಟೋ ತೆಗೆದಿದ್ದಾನೆಂದು ಹೇಳಲಾಗುತ್ತಿದೆ. ಈ ಬಗ್ಗೆ ಜೆಡಿಎಸ್ ನಿಂದ ದೂರು ಕೊಡುವ ಸಾಧ್ಯತೆ ಇದೆ.   ಬೆಳಗ್ಗೆ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲೂ ಇದೇ ರೀತಿ ಆಗಿತ್ತು. ಇದನ್ನು ಗಮನಿಸಿದ […]

ಶಾಸಕ-ಪೊಲೀಸ್ ನಡುವೆ ವಾಗ್ವಾದ: ಮಧ್ಯಪ್ರವೇಶಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಹುಣಸೂರು ಉಪಸಮರ: ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಆಗಮಿಸಿದ್ದ ವೇಳೆ ಎಚ್.ಡಿ.ಕೋಟೆ ಶಾಸಕ ಅನಿಲ್‍ ಚಿಕ್ಕಮಾದು ಮತ್ತು ಪೊಲೀಸ್‍ ಅಧಿಕಾರಿ ನಡುವಿನ ವಾಗ್ವಾದಿಂದ ಉಂಟಾಗಿದ್ದ ಉದ್ವಿಗ್ನ ವಾತಾವರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶದಿಂದ ತಿಳಿಗೊಂಡಿತು. ಶಾಸಕರು ಮತದಾನ ಮಾಡಿ ಹೊರಬಂದು ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದ ವೇಳೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದರು. ಪೊಲೀಸ್‍ ಇನ್‍ಸ್ಪೆಕ್ಟರ್‍ ಸುನಿಲ್‍ ಕುಮಾರ್ ಏಕವಚನದಿಂದ ಮಾತನಾಡಿದ್ದಲ್ಲದೇ ಲಾಠಿ ತೋರಿಸಿದ್ದಾರೆ ಎನ್ನಲಾಗಿತ್ತು. ಇದರಿಂದ ಸ್ಥಳೀಯರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಶಾಸಕ ಮತ್ತು ಪೊಲೀಸರ ನಡುವಿನ ಜಟಾಪಟಿ […]

ಮಲಗಬೇಡಿ ಬಂದು ಮತದಾನ ಮಾಡಿ; 97ರ ಅಜ್ಜಿ ಕರೆ

ಮಹಾಲಕ್ಷ್ಮೀ ಲೇಔಟ್‍ ಕ್ಷೇತ್ರದಲ್ಲಿ 97 ವರ್ಷ ಅಜ್ಜಿ ದ್ವಿಚಕ್ರವಾಹನದಲ್ಲಿ ಬಂದು ಮತದಾನ ಮಾಡಿದ್ದಾರೆ. ತನ್ನ ಮಗನೊಂದಿಗೆ  ಆಗಮಿಸಿ ಮತದಾನ ಮಾಡಿದ ಅಜ್ಜಿ, ಮತದಾದರರಿಗೆ ಸಂದೇಶವನ್ನೂ ಕೊಟ್ಟಿದ್ದಾರೆ. ಯಾರೂ ಸುಮ್ಮನೆ ಮನೆಯಲ್ಲಿ ಮಲಗಬೇಡಿ. ಬಂದು ಮತದಾನ ಮಾಡಿ ಎಂದು ಕರೆಕೊಟ್ಟಿದ್ದಾರೆ.

ಸಿಎಂ ಹುಟ್ಟೂರಲ್ಲಿ ಬಿರುಸಿನ ಮತದಾನ

ಕೆ.ಆರ್.ಪೇಟೆ ಉಪಚುನಾವಣೆ; ಸಿಎಂ ಬಿಎಸ್‌ವೈ ಹುಟ್ಟೂರಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಮೂರು ಮತಗಟ್ಟೆಗಳಿಂದ ಇದುವರೆಗೆ ಶೇ.35ರಷ್ಟು ಮತದಾನವಾಗಿದೆ. ಉತ್ಸಾಹದಿಂದಲೇ ಬೂಕನಕೆರೆ ಮತದಾರರು ಹಕ್ಕು ಚಲಾಯಿಸುತ್ತಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೂರು ಮತಗಟ್ಟೆ ನಿರ್ಮಾಣ ಮಾಡಲಾಗಿದ್ದು, ಸರದಿ ಸಾಲಲ್ಲಿ ನಿಂತು ಜನ ಮತ ಚಲಾಯಿಸುತ್ತಿದ್ದಾರೆ.