You cannot copy content of this page.
. . .

Day: December 4, 2019

ಮನ್ಮುಲ್ ಮೆಗಾ ಡೇರಿ ಅವ್ಯವಹಾರ; 73.19 ಕೋಟಿ ವಸೂಲಿಗೆ ಆದೇಶ

  ಮೆಗಾ ಡೇರಿ ನಿರ್ಮಾಣದಲ್ಲಿ ಅವ್ಯವಹಾರ ನಡೆಸಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಹಿಂದಿನ ಆಡಳಿತ ಮಂಡಳಿಯಿಂದ 73.19 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡುವಂತೆ ಸಹಕಾರ ಸಂಘಗಳ ನಿಬಂಧಕರು ಆದೇಶ ಹೊರಡಿಸಿದ್ದಾರೆ. ಜೊತೆಗೆ ಅವ್ಯವಹಾರದಲ್ಲಿ ಶಾಮೀಲಾಗಿರುವ ಹಿಂದಿನ ನಿರ್ದೇಶಕರು ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.   ಜಾ.ದಳ-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಆರೋಪದಡಿ ಮನ್ಮುಲ್‍ ನ ಅಂದಿನ ಆಡಳಿತ ಮಂಡಳಿಯನ್ನು ರದ್ದು ಮಾಡಿ  ಆದೇಶ ಹೊರಡಿಸಲಾಗಿತ್ತು. ನಂತರದಲ್ಲಿ ಅದಕ್ಕೆ […]

11 ಗಂಟೆ ತೀರ್ಪು ಬರೆಯಲಿರುವ 30 ಲಕ್ಷ ನ್ಯಾಯಾಧೀಶರು..!

   ಸುಪ್ರೀಂ ಕೋರ್ಟ್‍ ತೀರ್ಪು ಕೊಟ್ಟ ಮೇಲೆ ಅದನ್ನು ಯಾರೂ ಬದಲಾಯಿಸೋದಕ್ಕೆ ಆಗೋದಿಲ್ಲ. ಗಲ್ಲುಶಿಕ್ಷೆ ವಿಧಿಸಿದಾಗ ಅದಕ್ಕೆ ಮುಕ್ತಿ ಕೊಟ್ಟು ಕ್ಷಮಾದಾನ ನೀಡುವ ಅಧಿಕಾರ ರಾಷ್ಟ್ರಪತಿಗಿದೆ. ಅದು ಬಿಟ್ಟರೆ, ಸುಪ್ರಿಂ ತೀರ್ಪನ್ನು ಬದಲಾಯಿಸುವುದಿರಲಿ, ಅದನ್ನು ಪ್ರಶ್ನಿಸುವುದಕ್ಕೂ ಯಾರಿಗೂ ಅಧಿಕಾರವಿಲ್ಲ. ಆದರೆ ಅನರ್ಹ ಶಾಸಕರ ಪ್ರಕರಣದಲ್ಲಿ ಮಾತ್ರ ಸುಪ್ರೀಂ ಕೋರ್ಟ್‍ ತನ್ನ ತೀರ್ಪನ್ನು ಉಳಿಸುವ ಅಥವಾ ಅಳಿಸುವ ಅಧಿಕಾರವನ್ನು ಪ್ರಜಾ ನ್ಯಾಯಾಲಯಕ್ಕೆ ಕೊಟ್ಟಿದೆ. ಹೀಗಾಗಿಯೇ ಶಾಸಕರು ಅನರ್ಹಗೊಂಡಿದ್ದರಿಂದಾಗಿ ನಡೆಯುತ್ತಿರುವ 15 ಕ್ಷೇತ್ರಗಳ ಉಪಚುನಾವಣೆ ಭಾರೀ ಮಹತ್ವ ಪಡೆದುಕೊಂಡಿದೆ.   […]

ಸೂಡಾನ್‍ ನಲ್ಲಿ ಭೀಕರ ದುರಂತ: 18 ಭಾರತೀಯರು ಸೇರಿ 23 ಮಂದಿ ದುರ್ಮರಣ

   ಸೆರಾಮಿಕ್‍ ಫ್ಯಾಕ್ಟರಿ ಬಳಿ ಎಲ್‍ಪಿಜಿ  ಟ್ಯಾಂಕರ್‍ ಸ್ಫೋಟಿಸಿ 18 ಭಾರತೀಯರು ಸೇರಿ 23 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಸೂಡಾನ್‍ ರಾಜಧಾನಿ ಖರ್ತೌಮ್‍ ಬಳಿ ನಡೆದಿದೆ. ದುರಂತದಲ್ಲಿ 130ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.    ಸೆರಾಮಿಕ್‍ ಫ್ಯಾಕ್ಟರಿಯಲ್ಲಿ ತಮಿಳುನಾಡು ಹಾಗೂ ಉತ್ತರ ಭಾರತದ 50ಕ್ಕೂ ಜನ ಕೆಲಸ ಮಾಡುತ್ತಿದ್ದರು. ಇದರಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆಂದು ಗೊತ್ತಾಗಿದೆ. ಮೃತರಲ್ಲಿ ಮೂವರು ತಮಿಳುನಾಡಿನವರು ಎಂದು ತಿಳಿದುಬಂದಿದೆ.

ಗುಂಡ್ಲುಪೇಟೆ ಬಳಿ ಬೈಕ್ ಡಿಕ್ಕಿ; ನವ ವಿವಾಹಿತೆ ಸೇರಿ ಇಬ್ಬರ ಸಾವು

   ಮೈಸೂರು-ಊಟಿ ಮುಖ್ಯ ರಸ್ತೆಯ ಗುಂಡ್ಲುಪೇಟೆ ಬಳಿಯ ನಾಗಮಲೆ ಹೋಟೆಲ್ ಸಮೀಪ KSRTC ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ನವವಿವಾಹಿತೆ ಸೇರಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಬೆಂಡಗಳ್ಳಿ ಗ್ರಾಮದ ನವ ವಿವಾಹಿತೆ ಕಾವ್ಯ(21) ಹಾಗೂ ಮಲ್ಲನಗುಳಿ ಗ್ರಾಮದ ಮಹೇಶ್ (28) ಎಂದು ಗುರುತಿಸಲಾಗಿದೆ. ನವವಿನಾಹಿತ ರಾಜಕುಮಾರ್‍ (29)ಗೆ ಕಾಲು ಮುರಿದಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.  ನವ ವಿವಾಹಿತರಾದ ಕಾವ್ಯ, ರಾಜ್‍ಕುಮಾರ್‍ ಮತ್ತು ರಾಜ್‍ಕುಮಾರ್‍ ಸಹೋದರ ಮಹೇಶ್‍ ಬೈಕ್‍ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಎಸ್‍ ಆರ್‍ ಟಿಸಿ […]

ಕಾಫಿ ತೋಟಗಳಲ್ಲಿ ಉಪಟಳ ಕೊಡುತ್ತಿದ್ದ ಆನೆ ಸೆರೆ

     ಕಾರ್ಮಿಕನೊಬ್ಬನನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಂಚಹಳ್ಳಿಯಲ್ಲಿ ಸೆರೆ ಹಿಡಿಯಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಒಂದು ವಾರದಿಂದ ಕಾಡಾನೆಯನ್ನು ಸೆರೆಹಿಡಿಯಲು ಸತತ ಕಾರ್ಯಾಚರಣೆ ನಡೆಸುತ್ತಿದ್ದರು.  ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಬಲರಾಮ,ಗೋಪಾಲಸ್ವಾಮಿ,ಕೃಷ್ಣ, ಗಣೇಶ್ ಎಂಬ ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಸೆರೆಯಾದ ಆನೆಯನ್ನು ದುಬಾರೆ ಆನೆ ಶಿಬಿರಕ್ಕೆ ರವಾನಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 21 ರಂದು ಕುಟ್ಟದಲ್ಲಿ ಹಾಡಹಗಲೇ ಕಾರ್ಮಿಕನೊಬ್ಬನನ್ನು ಆನೆ ಬಲಿ ಪಡೆದಿತ್ತು. ಆದರೆ ಕಾರ್ಮಿಕನನ್ನು ಕೊಂದ ಆನೆ ಹಾಗೂ […]

ಕೇಂದ್ರ ಸಚಿವ ಸದಾನಂದಗೌಡರ ಅಣ್ಣನ ಮನೆಯ ನಾಯಿ ಕೊಂದ ಚಿರತೆ

ಸುಳ್ಯದಲ್ಲಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಸಹೋದರ ದಿ.ಭಾಸ್ಕರ ದೇವರಗುಂಡ ಅವರ ಮನೆಯ ನಾಯಿಗೂಡಿಗೆ ಚಿರತೆಯೊಂದು ದಾಳಿ‌‌ ಮಾಡಿ ಸಾಕು ನಾಯಿಯನ್ನು ಕೊಂದಿರುವ ಘಟನೆ ನಡೆದಿದೆ. ಭಾಸ್ಕರ ಅವರ ಮಂಡೆಕೋಲಿನ ಮನೆಯ ನಾಯಿಗೂಡಿಗೆ ಚಿರತೆ ರಾತ್ರಿ ವೇಳೆ ದಾಳಿ ನಡೆಸಿದ್ದು, ಮನೆಯಲ್ಲಿದ್ದ ಸಾಕು ನಾಯಿಯೊಂದು ಸತ್ತು ಬಿದ್ದಿರುವ ದೃಶ್ಯ ಕಂಡುಬಂದಿದೆ. ಈ ಬೆಳವಣಿಗೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಹಸಿವಿನಿಂದ ಆಹಾರ ಹುಡುಕುತ್ತಾ ಗ್ರಾಮಕ್ಕೆ ಚಿರತೆ ನುಗ್ಗಿರಬಹುದು ಎಂದು ಊಹಿಸಲಾಗಿದೆ.

ಕಣ್ಣೀರಿಟ್ಟ ಶಿವಾಜಿನಗರ ಕೈ ಅಭ್ಯರ್ಥಿ ರಿಜ್ವಾನ್ ಅರ್ಷದ್..

   ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್‍ ಅಭ್ಯರ್ಥಿ ರಿಜ್ವಾನ್‍ ಅರ್ಷದ್‍ ಮಂಗಳವಾರ ರಾತ್ರಿ ಕಾರ್ಯಕರ್ತರ ಎದುರೇ ಕಣ್ಣೀರಾಕಿದ್ದಾರೆಂದು ಗೊತ್ತಾಗಿದೆ. ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರದೇ ಕಾಂಗ್ರೆಸ್‍ ನ ಹಿರಿಯ ನಾಯಕರು ಅಂತರ ಕಾಯ್ದುಕೊಂಡಿದ್ದರು. ಇದರಿಂದ ಮೊದಲೇ ನೊಂದಿದ್ದ ರಿಜ್ವಾನ್‍ ಅರ್ಷದ್‍ ಗೆ ಮಂಗಳವಾರ ಮತ್ತೊಂದು ಆಘಾತವಾಗಿತ್ತು.   ಇಷ್ಟು ದಿನ ರಿಜ್ವಾನ್‍ ಜೊತೆಗೇ ಇದ್ದು ಪ್ರಚಾರದ ಮುಂದಾಳತ್ವ ವಹಿಸಿದ್ದವರಲ್ಲಿ ಒಬ್ಬರಾಗಿದ್ದ ಸಂಪಂಗಿ ರಾಮನಗರ ವಾರ್ಡ್ ಸದಸ್ಯ ಸಂಪತ್​ಕುಮಾರ್, ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೊನೆ ಕ್ಷಣದಲ್ಲಿ ಸಂಪತ್‍ ಕುಮಾರ್‍ ಕೈಕೊಟ್ಟಿದ್ದರಿಂದ ನೊಂದ […]

85ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ್ ಮೂರ್ತಿ

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ್ ಮೂರ್ತಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನುಬಳಿಗಾರ್ ಈ ಘೋಷಣೆ ಮಾಡಿದ್ದಾರೆ. ಈ ಬಾರಿ 2020ರ ಫೆಬ್ರವರಿ 5,6,7 ರಂದು ಕಲಬುರಗಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕಸಾಪ ಕಾರ್ಯಕಾರಿಣಿಯಲ್ಲಿ ಹಲವು ಹೆಸರುಗಳು ಚರ್ಚೆಗೆ ಬಂದಿದ್ದವು. ಆದರೂ ಒಮ್ಮತದಿಂದ  ಎಚ್.ಎಸ್.ವೆಂಕಟೇಶ್ ಮೂರ್ತಿ ಆಯ್ಕೆಯಾಗಿದ್ದಾರೆ ಎಂದು ಮನುಬಳಿಗಾರ್ ತಿಳಿಸಿದ್ದಾರೆ. ಎಚ್.ಎಸ್.ವೆಂಕಟೇಶಮೂರ್ತಿ ಯವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯಕ್ಕೆ […]

ಮೈಸೂರಲ್ಲಿ ಮೊದಲ ವಿಶೇಷ ಚೇತನರ ಅಧ್ಯಯನ ಕೇಂದ್ರ

    ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ದೆಹಲಿಯ ಉನ್ನತ ಶಿಕ್ಷಣ ಸಂಸ್ಥೆ ವತಿಯಿಂದ ರಾಜ್ಯದಲ್ಲೇ ಮೊದಲ ಬಾರಿಗೆ ವಿಶೇಷಚೇತನ ವಿದ್ಯಾರ್ಥಿಗಳಿಗಾಗಿ ‘ಅಂಗವೈಕಲ್ಯ ಮತ್ತು ಪುನರ್ವಸತಿ ಅಧ್ಯಯನ ಕೇಂದ್ರ’ವನ್ನು ಮೈಸೂರಿನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.    ಇಂದು (ಬುಧವಾರ) ಮೈಸೂರು ವಿವಿಯ ಕ್ರಾಫಡ್ ಭವನದಲ್ಲಿ ನಡೆದ ಸಿಂಡಿಕೇಟ್ 2ನೇ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ವಿವಿಯ ಧನಸಹಾಯ ಆಯೋಗದ ನಿದೇರ್ಶನದಂತೆ ಡೀನ್‍ ಗಳ ಸಮಿತಿ ಸಭೆಯಲ್ಲಿ […]

ಮನೆಗೆ ನುಗ್ಗಿ ಗಲಾಟೆ ಆರೋಪ; ರೇವಣ್ಣ ಪುತ್ರನ ವಿರುದ್ಧ FIR

   ಮಾಜಿ ಸಚಿವ ಎಚ್‍.ಡಿ. ರೇವಣ್ಣ ಪುತ್ರ ಸೂರಜ್ ರೇವಣ್ಣ ವಿರುದ್ಧ ಯುವಕರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸೂರಜ್‍ ರೇವಣ್ಣ ಸೇರಿ ಐದು ಮಂದಿಯ ವಿರುದ್ಧ ಎಫ್‍ ಐ ಆರ್‍ ದಾಖಲಾಗಿದೆ.    ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಸಂತೋಷ್​​ ಎಂಬುವರ ತೋಟದ ಮನೆಯಿಂದ ಕೆ.ಆರ್​.ಪೇಟೆ ಉಪಚುನಾವಣೆಗೆ ಹಣ ಸಾಗಿಸುತ್ತಿದ್ದಾರೆಂದು, ಸೂರಜ್​ ರೇವಣ್ಣ ಹಾಗೂ ಅವರ ಬೆಂಬಲಿಗರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. […]