. . .

Day: December 3, 2019

ಡಿಸೆಂಬರ್ 9ರ ನಂತರ ಏನಾಗುತ್ತೆ..? ಪಕ್ಷಗಳ ಲೆಕ್ಕಾಚಾರಗಳೇನು..?

84 Views   ಉಪಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗಿದ್ದು ಹಾಗೂ ರಾಜಕೀಯ ನಾಯಕರು ಹೆಚ್ಚು ಮಾತನಾಡಿದ್ದು ಡಿಸೆಂಬರ್‍ 9ರ ನಂತರದ ಬೆಳವಣಿಗೆಯ ಬಗ್ಗೆ. ವಿಶೇಷವಾಗಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‍ ಹಾಗೂ ಜೆಡಿಎಸ್ ಮೈತ್ರಿಯಾಗುತ್ತೆ ಎಂಬ ವಿಚಾರ ಹೆಚ್ಚು ಚಾಲ್ತಿಯಲ್ಲಿತ್ತು. ಜೆಡಿಎಸ್‍ ಹಾಗೂ ಕಾಂಗ್ರೆಸ್‍ ಎರಡೂ ಪಕ್ಷಗಳ ನಾಯಕರು ಈ ವಿಚಾರವನ್ನು ಚುನಾವಣಾ ಪ್ರಚಾರದುದ್ದಕ್ಕೂ ಚಾಲ್ತಿಯಲ್ಲಿಟ್ಟಿದ್ದರು. 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 6 ಸ್ಥಾನ ಗೆದ್ದರೆ ಮಾತ್ರ ಸರ್ಕಾರ ಉಳಿಸಿಕೊಳ್ಳಬಹುದು. ಆದರೆ, ಕಾಂಗ್ರೆಸ್‍ ಹಾಗೂ ಜೆಡಿಎಸ್‍ ಪಕ್ಷಗಳ ನಾಯಕರು ಬಿಜೆಪಿ […]

‘ಭ್ರಷ್ಟಾಚಾರದ ಅಪ್ಪ ಯಡಿಯೂರಪ್ಪ’; ಪ್ರೊ.ಮಹೇಶ್ಚಂದ್ರ ಗುರು

44 Views    ಆಪರೇಷನ್ ಕಮಲ ಎನ್ನುವ ರಾಜಕೀಯ  ಭ್ರಷ್ಟಾಚಾರದ ಅಪ್ಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ಚಂದ್ರ ಗುರು ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಾಂತರ ಮಾಡಿದ ೧೭ ಮಂದಿ ಶಾಸಕರು ದೇಶದ ರಕ್ಷಣೆಗಾಗಿ ರಾಜೀನಾಮೆ ನೀಡಿಲ್ಲ.ಬಲಿದಾನ ಮಾಡಿಲ್ಲ, ಅಭಿವೃದ್ಧಿಗೆ ಕೊಡುಗೆ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.    ಕಷ್ಟಕಾಲದಲ್ಲಿ ಸೇವೆ ಮಾಡುತ್ತಾರೆ ಎಂಬ ನಂಬಿಕೆ ಮೇಲೆ ಜನರು ಇವರನ್ನು ಗೆಲ್ಲಿಸಿದರೆ, ಮುಂಬೈನಲ್ಲಿ ಕುಳಿತು ಶೋಕಿ ಮಾಡುತ್ತಿದ್ದರು. ಇಂತಹ ಪ್ರಜಾಪ್ರಭುತ್ವವನ್ನು ಕಗ್ಗೊಲೆ […]

ಕಲುಷಿತ ಆಹಾರ ಸೇವಿಸಿದ ೪೦ ಮಂದಿ ಅಸ್ವಸ್ಥ

15 Viewsಕುಲುಷಿತ ಆಹಾರ ಸೇವಿಸಿ ೪೦ ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೇಲೂರಿನಲ್ಲಿ ನಡೆದಿದೆ. ಪಟ್ಟಣದ ಚೆನ್ನೇಗೌಡ ಬೀದಿಯ ಪ್ರಮೋದ್ ಎಂಬವರು ತಮ್ಮ ಗೃಹಪ್ರವೇಶಕ್ಕೆ ಕ್ಯಾಟರಿಂಗ್‌ ನೀಡಿ ಆಹಾರ ತರಿಸಿದ್ದರು. ಆಹಾರ ಸೇವಿಸಿದ ಸುಮಾರು ೪೦ ಮಂದಿ ಅಸ್ವಸ್ಥರಾಗಿದ್ದಾರೆ.    ಅಸ್ವಸ್ಥರು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆಹಾರ ಸಂರಕ್ಷಣಾ ಅಧಿಕಾರಿ ನವೀನ್‌ಕುಮಾರ್, ಆಹಾರ ಪದಾರ್ಥಗಳನ್ನು ಪರಿಶೀಲಿಸಿ, ಭಾರದ್ವಾಜ್ ಕೆಟರಿಂಗ್ ಮಾಲೀಕ ಬಿ.ಜಿ.ರಾಘವೇಂದ್ರ ಭಾರದ್ವಾಜ್‌ಗೆ ನೋಟಿಸ್ ಜಾರಿ […]

ಬಹಿರಂಗ ಪ್ರಚಾರ ಅಂತ್ಯ; ಇನ್ನು ಏನು ಮಾಡಬಹುದು, ಏನು ಮಾಡಬಾರದು..?

28 Views    ಕಳೆದ 2 ವಾರಗಳಿಂದ ನಡೆಯುತ್ತಿದ್ದ ಉಪಸಮರ ಕೊನೆಯ ಹಂತಕ್ಕೆ ಬಂದಿದೆ. ಕೆ.ಆರ್‍.ಪೇಟೆ, ಹುಣಸೂರು ಸೇರಿ 15 ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಮತಕ್ಷೇತ್ರಕ್ಕೆ ಸೇರದ ಪ್ರಮಖರು, ರಾಜಕಾರಣಿಗಳು, ಸೆಲೆಬ್ರಿಟಿಗಳನ್ನು ಹೊರಗೆ ಕಳುಹಿಸಲಾಗಿದೆ. ಇಂದು ಸಂಜೆ 6 ಗಂಟೆ ವೇಳೆಗೆ ಎಲ್ಲಾ ಕಡೆ ಧ್ವನಿವರ್ಧಕಗಳು, ರೋಡ್‍ ಶೋಗಳು ಬಂದ್‍ ಆಗಿವೆ. ಡಿಸೆಂಬರ್‍ 5 ರಂದು ಮತದಾನ ನಡೆಯಲಿದ್ದು, ಅಲ್ಲಿಯವರೆಗೆ ಮನೆ ಮನೆಗೂ ಹೋಗಿ ಪ್ರಚಾರ ಮಾಡಬಹುದು. ನಾಳೆ ಸಂಜೆ ವೇಳೆಗೆ ಚುನಾವಣಾ ಸಿಬ್ಬಂದಿ ಅವರಿಗೆ […]

ರಜನಿಕಾಂತ್‍ ರಿಂದ ಅಭಿಮಾನಿಯ ಪಾದ ಸ್ಪರ್ಶ..

70 Views   ಸೂಪರ್‍ ಸ್ಟಾರ್‍ ರಜನಿಕಾಂತ್‍ ಅವರು ಕೇರಳದ ವಿಶಿಷ್ಟ ಅಭಿಮಾನಿಯನ್ನು ಮನೆಗೆ ಕರೆಸಿಕೊಂಡು ಪಾದಸ್ಪರ್ಶ ಮಾಡಿದ್ದಾರೆ. ಕೇರಳದ ಪಾಲ್ಘಾಟ್‍ ನಿವಾಸಿ 21 ವರ್ಷದ ಪ್ರಣವ್‍ ಗೆ ಎರಡೂ ಕೈಗಳಿಲ್ಲ. ಆದರೂ ಚಿತ್ರಕಲೆ ಸೇರಿ ಹಲವು ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಪ್ರಣವ್‍ ಅವರು ರಜನಿಕಾಂತ್‍ ಅವರ ದೊಡ್ಡ ಅಭಿಮಾನಿಯಂತೆ. ಈ ವಿಷಯ ತಿಳಿದ ರಜನಿಕಾಂತ್‍ ಅವರು ಪ್ರಣವ್‍ ಹಾಗೂ ಅವರ ಕುಟುಂಬಕ್ಕೆ ಟಿಕೆಟ್‍ ಬುಕ್‍ ಮಾಡಿಸಿ ಚೆನ್ನೈಗೆ ಕರೆಸಿಕೊಂಡಿದ್ದರು. ಪೋಯಿಸ್‍ ಗಾರ್ಡನ್‍ ನಲ್ಲಿರುವ ನಿವಾಸದಲ್ಲಿ ಭೇಟಿಯಾದ ಪ್ರಣವ್‍, […]

ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು

26 Views   ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್‍.ನಗರ ತಾಲ್ಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಗೌತಮ್‍ (14) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವಿದ್ಯಾರ್ಥಿ.   ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದ ಗೌತಮ್‍ ಬೆಳಗ್ಗೆ ಎದ್ದಿಲ್ಲ. ಇಂದು ಬೆಳಗ್ಗೆ ಇತರ ಸಹಪಾಠಿಗಳು ನೋಡಿದಾಗ ಗೌತಮ್‍ ಸಾವನ್ನಪ್ಪಿರುವುದು ಗೊತ್ತಾಗಿದೆ. ಮೃತ ಗೌತಮ್‍ ಸಾಲೆಕೊಪ್ಪಲು ಗ್ರಾಮದ ಶಿವಣ್ಣ ಮತ್ತು ರೇಖಾವತಿ ದಂಪತಿಯ ಪುತ್ರ. ಗೌತಮ್‍ ಸಾವಿನ ಬಗ್ಗೆ ಪೋಷಕರು ಅನುಮಾನ […]

ನಾಗಾಸಾಧು ವೇಷದಲ್ಲಿ ಮಂಕುಬೂದಿ; ಕೊನೆಗೂ ಸಿಕ್ಕಿಬಿದ್ದ ಖದೀಮರು

25 Views   ಕೆಂಪುಬಣ್ಣದ ಮಂಕುಬೂದಿ ಕೊಟ್ಟು ನಗದು, ದುಬಾರಿ ಮೊಬೈಲ್‍ ಗಳನ್ನು ದೋಚುತ್ತಿದ್ದ ರಾಜಸ್ಥಾನ ಮೂಲದ ನಾಲ್ವರು ನಾಗಾಸಾಧು ವೇಷಧಾರಿಗಳನ್ನುಕೊಡಗು ಜಿಲ್ಲೆ ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.   ರಾಜಸ್ಥಾನ ಮೂಲದ ನಾಗನಾಥ್, ಮಜೂರ್‌ ನಾಥ್, ಸುರಬ್‌ ನಾಥ್ ಮತ್ತು ಉಮೇಶ್‌ ನಾಥ್ ಬಂಧಿತ ಆರೋಪಿಗಳು. ನಾಗಾ ಸಾಧುಗಳ ವೇಷ ಧರಿಸಿ ಇಬ್ಬರು ಉದ್ಯಮಿಗಳನ್ನು ಮರುಳು ಮಾಡಿ ನಗದು ಹಾಗೂ ದುಬಾರಿ ಮೌಲ್ಯದ ಮೊಬೈಲ್‌ಗಳನ್ನು ಎಗರಿಸಿದ್ದರು. ನ.೨೪ರಂದು ಕುಶಾಲನಗರದ ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಅವರಿಗೆ ಕೆಂಪು ಪುಡಿ […]

ಸುಳ್ಳು ಹೇಳದ ರಾಜಕಾರಣಿ ಯಾರಿದ್ದಾರೆ..?: ಸಿದ್ದರಾಮಯ್ಯಗೆ ವಿಶ್ವನಾಥ್‍ ಪ್ರಶ್ನೆ

19 Views  ನಿಮ್ಮನ್ನೂ ಸೇರಿಸಿ ಸುಳ್ಳು ಹೇಳದ ರಾಜಕಾರಣಿ ಯಾರಿದ್ದಾರೆ ಎಂದು ಸಿದ್ದರಾಮಯ್ಯರನ್ನು ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್‍.ವಿಶ್ವನಾಥ್‍ ಪ್ರಶ್ನಿಸಿದ್ದಾರೆ. ವಿಶ್ವನಾಥ್‍ ಸುಳ್ಳು ಹೇಳುತ್ತಾರೆಂದು ಹುಣಸೂರಿನಲ್ಲಿ ಇಂದು ಬೆಳಗ್ಗೆ ಪ್ರಚಾರದ ಮೇಲೆ ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಹುಣಸೂರಿನಲ್ಲಿ ಮತ ಬೇಟೆ ವೇಳೆ ಪ್ರತಿಕ್ರಿಯಿಸಿದ ವಿಶ್ವನಾಥ್‍, ಸುಳ್ಳು ಹೇಳದ ರಾಜಕಾರಣಿ ಯಾರಿದ್ದಾರೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.   ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಹುಣಸೂರಿನಲ್ಲಿ ಅಭ್ಯರ್ಥಿಗಳು ಭರ್ಜರಿ ಮತ ಬೇಟೆ ನಡೆಸಿದರು. ಕಾಂಗ್ರೆಸ್‍ ಅಭ್ಯರ್ಥಿ ಎಚ್‍.ಪಿ.ಮಂಜುನಾಥ್‍ ಪರ […]

LPG ದರ 4 ತಿಂಗಳಲ್ಲಿ 108 ರೂ. ಏರಿಕೆ..!

71 Views   ಈರುಳ್ಳಿ ದರ ಏರಿಕೆ ಬೆನ್ನಲ್ಲೇ ಅಡುಗೆ ಅನಿಲ ದರ ಸತತ ನಾಲ್ಕನೇ ತಿಂಗಳೂ ಏರಿಕೆಯಾಗಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಕರ್ನಾಟಕದಲ್ಲಿ ಕಳೆದ 4 ತಿಂಗಳಿಂದ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‍ ದರ 108 ರೂಪಾಯಿ ಏರಿಕೆಯಾಗಿದೆ. ಡಿಸೆಂಬರ್‍ 1ರಿಂದ 13.30ರೂಪಾಯಿ ಏರಿಕೆಯಾಗಿದ್ದು, ಸದ್ಯ ಬೆಂಗಳೂರು ಮತ್ತು ಮೈಸೂರಿನಲ್ಲಿ LPG ದರ 701 ರೂಪಾಯಿಯಾಗಿದೆ. ಡಿಸೆಂಬರ್‍ 1ರಿಂದಲೇ ಹೊಸ ದರ ಜಾರಿಯಾಗಿದೆ.   ದೇಶದ ವಿವಿಧ ರಾಜ್ಯಗಳಲ್ಲಿ LPG ದರ 13.20 ರೂಪಾಯಿಯಿಂದ 13.45 […]

ವಿಜಯ್ ಶಂಕರ್ ಜೊತೆ ವಾಗ್ವಾದ; ವಿಡಿಯೋ ವೈರಲ್

172 Views    ಹುಣಸೂರು ವಿಧಾನಸಭಾ ಕ್ಷೇತ್ರದ ಮಲ್ಲೇಗೌಡನಕೊಪ್ಪಲಿನಲ್ಲಿ ಪ್ರಚಾರದ ವೇಳೆ ಮಾಜಿ ಸಂಸದ ವಿಜಯ್‍ ಶಂಕರ್‍ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿತ್ತು. ಇದೀಗ ವಾಗ್ವಾದ ವಿಡಿಯೋ ವೈರಲ್‍ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್‍ ಶಂಕರ್‍ ಜೊತೆ ಗ್ರಾಮಸ್ಥರು ನಡೆಸಿದ ವಾಗ್ವಾದದ ದೃಶ್ಯಾವಳಿ ಹರಿದಾಡುತ್ತಿದೆ.    ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ವಿಜಯ್‍ ಶಂಕರ್‍ ಮಲ್ಲೇಗೌಡನ ಕೊಪ್ಪಲಿಗೆ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು ಊರಿನ ಮುಂಭಾಗದಲ್ಲೇ ತಡೆದರು. ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳು ಮಾಡದೇ ಇದ್ದುದರ ಬಗ್ಗೆ […]