You cannot copy content of this page.
. . .

Day: December 2, 2019

ಸುಳ್ವಾಡಿ ಪ್ರಕರಣ: ಸುಪ್ರೀಂನಲ್ಲೂ ಸಿಗಲಿಲ್ಲ ಜಾಮೀನು

ಚಾಮರಾಜನಗರದ ಸುಳ್ವಾಡಿ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಭಕ್ತರು ಸಾವಿಗೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‍ ವಜಾಗೊಳಿಸಿದೆ. ಚಾಮರಾಜನಗರ ಸ್ಥಳೀಯ, ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಆರೋಪಿ ಸುಪ್ರೀಂ ಕೋರ್ಟ್‍ ಮೆಟ್ಟಿಲೇರಿದ್ದರು. ನವೆಂಬರ್‍ 21ರಂದು ಸುಪ್ರೀಂ ಕೋರ್ಟ್‍‍ಗೆ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‍ನ ತ್ರಿಸದಸ್ಯ ಪೀಠ ವಜಾ ಮಾಡಿದೆ. ಹೀಗಾಗಿ, ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಜೈಲು ಖಾಯಂ ಆಗಿದೆ. ಕಿಚ್ಚುಗುತ್ತಿ […]

ಜೆಡಿಎಸ್ ಜೊತೆ ಮೈತ್ರಿ ಅನಿವಾರ್ಯ: ಹುಣಸೂರಲ್ಲಿ ಮೊಯ್ಲಿ ಹೇಳಿಕೆ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಉಪಚುನಾವಣೆಗೆ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಡಿ.9ರ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗುತ್ತೆ ಎಂದು ಹೇಳುತ್ತಿದ್ದರು. ಇದೀಗ ಕಾಂಗ್ರೆಸ್ ನಾಯಕರೂ ಕೂಡ ಇದೇ ದಾಟಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋಮವಾರ ಹುಣಸೂರಿನಲ್ಲಿ ಪ್ರಚಾರದ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ, ಜೆಡಿಎಸ್‍ ಜೊತೆ ಮೈತ್ರಿ ಅನಿವಾರ್ಯ ಎಂದು ಹೇಳುವ ಮೂಲಕ ಚುನಾವಣೆ ನಂತರದ ಬೆಳವಣಿಗೆ ಕುರಿತು ಕುತೂಹಲ ಮೂಡಿಸಿದ್ದಾರೆ. ಶತ್ರುಗಳ ಶತ್ರು ಯಾವಾಗಲೂ ಮಿತ್ರ ಆಗುತ್ತಾನೆ. ಬಿಜೆಪಿ ನಮ್ಮಿಬ್ಬರಿಗೂ ಶತ್ರುನೇ. ಹೀಗಾಗಿ, ಹಿಂದೆ […]

ಉಪ ಸಮರ: ಡಿ.9ಕ್ಕೆ ಎಲ್ಲೆಲ್ಲಿ ಮತ ಎಣಿಕೆ ನಡೆಯುತ್ತೆ..?

  ಡಿಸೆಂಬರ್‍ 5 ರಂದು ನಡೆಯುವ 15 ಕ್ಷೇತ್ರಗಳ ಉಪಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ. ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಅಭ್ಯರ್ಥಿಗಳು ಮತದಾರರನ್ನು ಒಲಿಸಿಕೊಳ್ಳಲು ಕೊನೆ ಹಂತದ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ ಜಿಲ್ಲಾಡಳಿತಗಳು ಮತದಾನ ಹಾಗೂ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ‍್ಧತೆ ಮಾಡಿಕೊಳ್ಳುತ್ತಿವೆ. ಡಿಸೆಂಬರ್‍ 9 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಎಲ್ಲೆಲ್ಲಿ ಯಾವ ಕ್ಷೇತ್ರದ ಮತ ಎಣಿಕೆ ನಡೆಯಲಿದೆ..? ಇಲ್ಲಿದೆ ಮಾಹಿತಿ.. ಕೃಷ್ಣರಾಜಪೇಟೆ– ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕೆ.ಆರ್ ಪೇಟೆ• ಹುಣಸೂರು […]

ಅನಂತ್ ಕುಮಾರ್ ಹೆಗಡೆ ಹೇಳಿದ್ದು ಬರೀ ಸುಳ್ಳು; ಫಡ್ನವಿಸ್

     40 ಸಾವಿರ ಕೋಟಿ ಹಣ ರೂಪಾಯಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವಾಪಸ್‍ ಕಳುಹಿಸುವುದಕ್ಕಾಗಿ ದೇವೇಂದ್ರ ಫಡ್ನವಿಸ್‍ ಮಹಾರಾಷ್ಟ್ರದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು ಎಂದು ಸಂಸದ ಅನಂತ್‍ ಕುಮಾರ್‍ ಹೆಗಡೆ ಹೇಳಿದ್ದರು. ಇದು ಬರೀ ಸುಳ‍್ಳಾಗಿದ್ದು, ಕೇಂದ್ರ ಸರ್ಕಾರಕ್ಕೆ ಯಾವುದೇ ಹಣ ವಾಪಸ್‍ ನೀಡಿಲ್ಲ ಎಂದು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‍ ಸ್ಪಷ್ಟಪಡಿಸಿದ್ದಾರೆ.     ಕೇಂದ್ರಕ್ಕೆ ಯಾವುದೇ ಹಣ ಕಳಿಸಿಲ್ಲ, ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ […]

ಉಪಚುನಾವಣೆ: ಹುಣಸೂರಲ್ಲಿ ನಿಷೇಧಾಜ್ಞೆ, ಡಿ.5ಕ್ಕೆ ಸರ್ಕಾರಿ ರಜೆ

  ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸುದ್ದಿಗೋಷ್ಠಿ ನಡೆಸಿ ಮತದಾನದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು. ನಾಳೆ ಸಂಜೆ 6ಗಂಟೆಯಿಂದ ಡಿ. 5ರ ಮಧ್ಯರಾತ್ರಿವರೆಗೆ ಅನ್ವಯವಾಗುವಂತೆ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಮತದಾನದ ದಿನದಂದು ಹುಣಸೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದ್ದು, ನಾಳೆ ಸಂಜೆ 6 ಗಂಟೆಯಿಂದ ಡಿ.5ರ ಮಧ್ಯರಾತ್ರಿವರೆಗೆ ಮದ್ಯ ಬಂದ್‍ ಮಾಡಲಾಗುತ್ತದೆ ಎಂದು ಹೇಳಿದರು.   ಡಿಸೆಂಬರ್ 5 ರಂದು […]

‘ಚಾಣಕ್ಯ’ ಪರಿಕಲ್ಪನೆ ಪ್ರಜಾಪ್ರಭುತ್ವಕ್ಕೆ ಮಾರಕ: ಕಣ್ಣನ್‍ ಗೋಪಿನಾಥನ್

ಈಗ ನಿತ್ಯವೂ ಮಾಧ್ಯಮಗಳಲ್ಲಿ ‘ಚಾಣಕ್ಯ’ ಪರಿಕಲ್ಪನೆಯನ್ನು ನೋಡುತ್ತಿದ್ದೇವೆ. ಆದರೆ ಪ್ರಜಾಪ್ರಭುತ್ವಕ್ಕೆ ಚಾಣಕ್ಯ ಎಂಬ ಪರಿಕಲ್ಪನೆ ಮಾರಕ ಎಂದು ಭಾರತೀಯ ಆಡಳಿತ ಸೇವೆಗೆ ರಾಜೀನಾಮೆ ನೀಡಿರುವ ಕಣ್ಣನ್ ಗೋಪಿನಾಥನ್ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಕನ್ಸರ್ನ್ಡ್ ಸಿಟಿಜ಼ನ್ಸ್ ಆಫ್ ಇಂಡಿಯಾ (ಸಿಸಿಐ) ಮೈಸೂರು ಘಟಕದ ವತಿಯಿಂದ ಸೋಮವಾರ ನಡೆದ ‘ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಮುಂದಿರುವ ಸವಾಲುಗಳು’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.ಅವರು ‘ಚಾಣಕ್ಯ’ನೋ, ಇವರು ‘ಚಾಣಕ್ಯ’ನೋ ಎಂದು ಚರ್ಚಿಸುತ್ತಿದ್ದೇವೆ. ಗುಪ್ತರ ಕಾಲದಲ್ಲಿ ರಾಜಪ್ರಭುತ್ವದ ಪೋಷಣೆಗಾಗಿ ಇದ್ದ ವ್ಯಕ್ತಿ […]

ಕರೆಂಟ್‍ ಶಾಕ್: ಮೂವರು ಮಹಿಳೆಯರು ಅಸ್ವಸ್ಥ

ಬಟ್ಟೆ ಒಣಹಾಕುತ್ತಿದ್ದ ವೇಳೆ ವಿದ್ಯುತ್‍ ಪ್ರವಹಿಸಿ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ. ಚಾಮರಾಜನಗರದ ಯಳಂದೂರು ತಾಲ್ಲೂಕಿನ ಕಂದಹಳ್ಳಿಯಲ್ಲಿ ಇಂದು (ಸೋಮವಾರ) ಈ ದಾರುಣ ಘಟನೆ ನಡೆದಿದೆ. ಕುಮಾರಿ, ಸುಮಾ, ನಾಗರತ್ನ ಅಸ್ವಸ್ಥಗೊಂಡ ಮಹಿಳೆಯರು. ತಾಯಿ ಕುಮಾರಿ ಹಾಗೂ ಮಗಳಾದ ಸುಮಾ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಮೂವರು ಮಹಿಳೆಯರು ಬಟ್ಟೆ ಒಗೆದ ನಂತರ ಮನೆಯ ಹಿಂದಿನ ಕೊಟ್ಟಿಗೆಯ ಮುಳ್ಳುತಂತಿಗೆ ಬಟ್ಟೆ ಒಣ ಹಾಕುತ್ತಿದ್ದ ವೇಳೆ ವಿದ್ಯುತ್‍ ಪ್ರವಹಿಸಿದೆ ಎನ್ನಲಾಗಿದೆ. ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಈ […]

ತನ್ವೀರ್ ಪ್ರಕರಣ; ‘ಮುಗ್ಧ’ ಮಾತು.. ಆತ್ಮಹತ್ಯೆ ಬೆದರಿಕೆ

ಮೈಸೂರಿನಲ್ಲಿ ಶಾಸಕ ತನ್ವೀರ್‍ ಸೇಠ್‍ ಕೊಲೆ ಯತ್ನದ ಆರೋಪದಡಿ ಬಂಧನಕ್ಕೊಳಗಾಗಿರುವ ವ್ಯಕ್ತಿಗಳ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ. ‘ನನ್ನ ಪತಿ ಮುಗ್ಧ. ಅವರಿಗೂ ಈ ಕೊಲೆ ಯತ್ನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ, ಅವರನ್ನು ಬಂಧಿಸಲಾಗಿದೆ. ಅವರಿಗೆ ನ್ಯಾಯ ಸಿಗದೆ ಹೋದರೆ ಕಮಿಷನರ್‍ ಕಚೇರಿ ಎದುರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬಂಧಿತ ಆರು ಆರೋಪಿಗಳಲ್ಲಿ ಒಬ್ಬರಾದ ಸಯ್ಯದ್‍ ಮೊಯೀಬ್‍ ಅವರ ಪತ್ನಿ ಹೀನಾ ಕೌಸರ್‍ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. ಸೋಷಿಯಲ್‍ ಡೆಮಾಕ್ರಟಿಕ್ ಪಾರ್ಟಿ […]

ಕ್ಯಾನ್ಸರ್ ಮಾಯ ಮಾಡಿದ ‘ಡಿಯರ್ ಮಾಯಾ’..

  ಕ್ಯಾನ್ಸರ್‍ ಅಂದ್ರೆ ಜೀವಾವಧಿ ಶಿಕ್ಷೆ ಅಂತ ಎಲ್ಲರೂ ಭಾವಿಸಿದ್ದಾರೆ. ಆದರೆ ಕ್ಯಾನ್ಸರ್ ಗೇ ಜೀವಾವಧಿ ಶಿಕ್ಷೆ ಕೊಟ್ಟವರ ಸ್ಟೋರಿ ಇದು.. ಈ ಹಿಂದೆ ಯುವರಾಜ್‍ ಸಿಂಗ್‍ ಆರು ಬಾಲ್‍ ಗೆ ಆರು ಸಿಕ್ಸರ್‍ ಬಾರಿಸಿ ಬೌಲರ್‍ ಬೆವರಿಳಿಸಿದಂತೆ, ಕ್ಯಾನ್ಸರ್‍ ನ ಕೂಡಾ ದಿಕ್ಕಾಪಾಲಾಗಿ ಓಡಿಸಿದ್ದರು. ಇದೀಗ ಬಾಲಿವುಡ್‍ ಸುಂದರಿ ಮನಿಷಾ ಕೊಲಿಯಾರಾಲ ಕೂಡಾ ಕ್ಯಾನ್ಸರ್‍ ಅನ್ನೋ ಮಾರಿಗೆ ಗೇಟ್‍ ಪಾಸ್‍ ಕೊಟ್ಟಿದ್ದಾರೆ.   ಯುವರಾಜ್‍ ಸಿಂಗ್‍ ಗೆ ಕ್ಯಾನ್ಸರ್‍ ಓಡಿಸೋದು ಸಿಕ್ಸರ್‍ ಹೊಡೆದಷ್ಟೇ ಸುಲಭ, ಮನಿಷಾ […]

ತಮಿಳುನಾಡಿನಲ್ಲಿ ಭಾರೀ ಮಳೆ: ಕಾಂಪೌಂಡ್‍ ಗೆ 15 ಬಲಿ

   ಭಾರೀ ಮಳೆಯಿಂದಾಗಿ ನಾಲ್ಕು ಮನೆಗಳ ಮೇಲೆ ಕಾಂಪೌಂಡ್ ಕುಸಿದು 2 ಮಕ್ಕಳು, 10 ಮಹಿಳೆಯರು ಸೇರಿ 15 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ,    ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳಯಂನ ನಾಡೂರ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.    ಭಾನುವಾರ ರಾತ್ರಿಯಿಂದ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ತಿರುವಳ್ಳೂರ್, ವೆಲ್ಲೂರ್, […]